ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪಬ್‌ಜಿ ಸಹಿತ ಆನ್‌ಲೈನ್ ಗೇಮ್‌ಗಳಿಗೆ ಭಾರತದಲ್ಲಿ ಮತ್ತಷ್ಟು ಕಂಟಕ

Another trouble looming for PUBG and other E games in India

ಭಾರತದಲ್ಲಿ ಪಬ್‌ಜಿ ಆನ್‌ಲೈನ್ ಗೇಮ್ ಈಗಾಗಲೇ ನಿಷೇಧವಾಗಿದೆ. ಆದರೆ ಕಾನೂನಾತ್ಮಕ ತೊಡಕುಗಳನ್ನು ಪೂರೈಸಿಕೊಂಡು ಪಬ್‌ಜಿ ಭಾರತದಲ್ಲಿ ಮತ್ತೆ ಕಾಲಿಡಲು ಸಜ್ಜಾಗುತ್ತಿದೆ. ಈ ಮಧ್ಯೆ ಪಬ್‌ಜಿ ಸೇರಿದಂತೆ ಎಲ್ಲಾ ಆನ್‌ಲೈನ್‌ ಗೇಮ್‌ಗಳಿಗೆ ಮತ್ತಷ್ಟು ಕಂಟಕ ಎದುರಾಗಿದೆ. ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ ಕಡಿವಾಣ ಹಾಕಲು ಸರ್ಕಾರಗಳು ನಿರ್ಧರಿಸಿದೆ.

ಸದ್ಯಕ್ಕೆ ಆನ್‌ಲೈನ್ ಗೇಮ್ಸ್‌ಗಳಲ್ಲಿ ಪ್ರಮುಖ ಕಡಿವಾಣ ಹಾಕಲು ಮುಂದಾಗಿರುವುದು ಪಕ್ಕದ ರಾಜ್ಯ ತಮಿಳುನಾಡು. ಆನ್‌ಲೈನ್ ಆಟದಲ್ಲಿ ಹಣಕೊಟ್ಟು ಪಡೆಯುವ ಯಾವುದೇ ರೀತಿಯ ಆಡ್‌-ಆನ್ ಸೇವೆಗಳನ್ನು ನಿಷೇಧಿಸಿದೆ ತಮಿಳುನಾಡು ಸರ್ಕಾರ. ಇದೇ ನಿರ್ಧಾರಗಳನ್ನು ಇತರ ರಾಜ್ಯಗಳು ಕೂಡ ಶೀಘ್ರದಲ್ಲೇ ತೆಗೆದುಕೊಳ್ಳುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

30 ವರ್ಷಗಳ ವೃತ್ತಿ ಬದುಕಿಗೆ ವಿದಾಯ ಹೇಳಿದ WWE ಸ್ಟಾರ್ ‌ಟೇಕರ್30 ವರ್ಷಗಳ ವೃತ್ತಿ ಬದುಕಿಗೆ ವಿದಾಯ ಹೇಳಿದ WWE ಸ್ಟಾರ್ ‌ಟೇಕರ್

ಕಳೆದ ಶುಕ್ರವಾರ ತಮಿಳುನಾಡು ಸರ್ಕಾರ ತನ್ನ ರಾಜ್ಯದಲ್ಲಿ ಎಲ್ಲಾ ರೀತಿಯ ಆನ್‌ಲೈನ್ ಬೆಟ್ಟಿಂಗ್ ಹಾಗೂ ಗೇಮಿಂಗ್‌ಗಳನ್ನು ನಿಷೇಧಿಸಿತು. ಹೊಸ ಕಾನೂನಿನ ಪ್ರಕಾರ ತಮಿಳುನಾಡಿನಲ್ಲಿ ಇನ್ನು ಯಾವುದೇ ರೀತಿಯ ಜೂಜು ಅಥವಾ ಆನ್‌ಲೈನ್ ಜೂಜುಗಳನ್ನು ಕಂಪ್ಯೂಟರ್ ಅಥವಾ ಯಾವುದೇ ಸಾಧನಗಳನ್ನು ಬಳಸಿ ಆಡುವಂತಿಲ್ಲ. ಇದೇ ರೀತಿಯ ಕಾನೂನನ್ನು ಕರ್ನಾಟಕ ಸರ್ಕಾರ ಕೂಡ ತರುವುದಾಗಿ ಹೇಳಿಕೊಂಡಿದೆ.

ಪ್ಲೇಯರ್ ಅನ್‌ನೋನ್ ಬ್ಯಾಟಲ್‌ಗ್ರೌಂಡ್, ಡಿಫೆನ್ಸ್ ಆಪ್‌ದಿ ಎನ್ಸಿಯೆಂಟ್, ಕೌಂಟರ್ ಸ್ಟ್ರೈಕ್‌ ತರದ ಆನ್‌ಲೈನ್ ಆಟಗಳು ಬಹುತೇಕ ಉಚಿತವಾಗಿರುತ್ತದೆ. ಆದರೆ ಆಟದಲ್ಲಿನ ರೋಚಕತೆ ಹೆಚ್ಚಿಸಲು ಹೆಚ್ಚುವರಿ ಸಾಮಾಗ್ರಿಗಳನ್ನು ಪಡೆಯಬೇಕಿದ್ದರೆ ಆಟಗಾರರು ಹಣವನ್ನು ಪಾವತಿಸಿ ಬಳಸಿಕೊಳ್ಳಬೇಕಿರುತ್ತದೆ. ಈ ರೀತಿಯ ಆಡ್‌ಆನ್ ಸೇವೆಗಳನ್ನು ಪಡೆಯಲು ಹಣ ಪಾವತಿಸುವುದಕ್ಕೂ ತಮಿಳುನಾಡು ಸರ್ಕಾರ ಹೊರಡಿಸಿದ ಕಾನೂನಿನಲ್ಲಿ ನಿರ್ಬಂಧಗಳನ್ನು ಹೇರಲಾಗಿದೆ.

ಟರ್ಕಿ ಗೆದ್ದು ಹ್ಯಾಮಿಲ್ಟನ್ ಈಗ ವಿಶ್ವ ಚಾಂಪಿಯನ್, ಶೂಮಿ ದಾಖಲೆ ಸಮಟರ್ಕಿ ಗೆದ್ದು ಹ್ಯಾಮಿಲ್ಟನ್ ಈಗ ವಿಶ್ವ ಚಾಂಪಿಯನ್, ಶೂಮಿ ದಾಖಲೆ ಸಮ

ಭವಿಷ್ಯದಲ್ಲಿ ತಮಿಳುನಾಡು ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಇತರೆ ರಾಜ್ಯಗಳು ಕೂಡ ತೆಗೆದುಕೊಂಡರೆ ಅಚ್ಚರಿಯಿಲ್ಲ. ಆಡ್‌ಆನ್‌ ಸೇವೆಗಳ ಮೂಲಕ ಕೋಟ್ಯಂತರ ರೂಪಾಯಿ ಲಾಭಮಾಡಿಕೊಳ್ಳುತ್ತಿದ್ದ ಆನ್‌ಲೈನ್ ಗೇಮ್ಸ್ ಕಂಪನಿಗಳಿಗೆ ಈ ನಿರ್ಧಾರ ಕಗ್ಗಂಟಾಗಿದೆ. ಆದರೆ ಸರ್ಕಾರ ನಿಯಮವನ್ನು ತಂದರೂ ಅದನ್ನು ಯಾವ ರೀತಿಯಲ್ಲಿ ಜಾರಿಗೆ ತರಲಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

Story first published: Monday, November 23, 2020, 18:01 [IST]
Other articles published on Nov 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X