ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಶೂಟಿಂಗ್‌ ವಿಶ್ವಕಪ್‌: ಚಿನ್ನಕ್ಕೆ ಗುರಿಯಿಟ್ಟ ಅಪೂರ್ವಿ ಚಾಂಡೇಲಾ

Apurvi Chandela wins 10m air rifle gold at Munich World Cup

ಮ್ಯೂನಿಚ್‌, ಮೇ 26: ಭಾರತದ ಅನುಭವಿ ಶೂಟರ್‌ ಅಪೂರ್ವಿ ಚಾಂಡೇಲಾ, ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನ ಮಹಿಳೆಯರ 10 ಮೀ ಏರ್‌ ರೈಫಲ್‌ ವಿಭಾಗದಲ್ಲಿ ಬಂಗಾರದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್‌ ಗೆಲ್ಲುತ್ತೆ ಎಂದ ಇಂಜಮಾಮ್‌!ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್‌ ಗೆಲ್ಲುತ್ತೆ ಎಂದ ಇಂಜಮಾಮ್‌!

26 ವರ್ಷದ ಚಾಂಪಿಯನ್‌ ಶೂಟರ್‌ ಫೈನಲ್‌ ಸ್ಪರ್ಧೆಯಲ್ಲಿ ಒಟ್ಟಾರೆ 251 ಅಂಕಗಳನ್ನು ಗಳಿಸುವ ಮೂಲಕ ಸ್ವರ್ಣ ಪದಕ ತಮ್ಮದಾಗಿಸಿಕೊಂಡರು. ಚೀನಾದ ಶೂಟರ್‌ 250.8 ಅಂಕಗಳಲ್ಲಿ ಕೂದಲೆಳೆಯ ಅಂತರದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಡುವಂತಾಯಿತು. ಅಪೂರ್ವಿ ಈ ವರ್ಷ ಗೆದ್ದ ಎರಡನೇ ಚಿನ್ನದ ಪದಕ ಇದಾಗಿದೆ. ಇದಕ್ಕೂ ಮುನ್ನ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನಕ್ಕೆ ಗುರಿಯಿಟ್ಟಿದ್ದರು.

ವಿಶ್ವಕಪ್‌ನಲ್ಲಿ ನೈಜ ಸವಾಲೇನೆಂಬುದನ್ನು ಬಾಯ್ಬಿಟ್ಟ ಟ್ರೆಂಟ್‌ ಬೌಲ್ಟ್‌!ವಿಶ್ವಕಪ್‌ನಲ್ಲಿ ನೈಜ ಸವಾಲೇನೆಂಬುದನ್ನು ಬಾಯ್ಬಿಟ್ಟ ಟ್ರೆಂಟ್‌ ಬೌಲ್ಟ್‌!

ಇದೇ ಸ್ಪರ್ಧಿಯಲ್ಲಿ ಭಾರತದ ಮತ್ತೊಬ್ಬ ಶೂಟರ್‌ ಎಲವೆನಿಲ್‌ ವಲಾರಿವನ್‌ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಪದಕ ವಂಚಿತರಾದರೆ, ಚೀನಾದ ಕ್ಸು ಹಾಂಗ್‌ ಕಂಚಿನ ಪದಕ ತಮ್ಮದಾಗಿಸಿಕೊಂಡರು. 19 ವರ್ಷದ ಶೂಟರ್‌ ಎಲಾವೆನಿಲ್‌, 2018ರಲ್ಲಿ ಸಿಡ್ನಿಯಲ್ಲಿ ನಡೆದ ಜೂನಿಯರ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಆದರೆ, 208.3 ಅಂಕಗಳನ್ನು ಗಳಿಸಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. 229.4 ಅಂಕಗಳನ್ನು ಗಳಿಸಿದ ಚೀನಾದ ಶೂಟರ್‌ ಕನಿಷ್ಠ ಪದಕ ಗೆದ್ದ ನಿಟ್ಟುಸಿರು ಬಿಟ್ಟರು.

ವಿಶ್ವಕಪ್‌: ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಕೊಹ್ಲಿ ಹೇಳಿದ್ದಿದುವಿಶ್ವಕಪ್‌: ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಕೊಹ್ಲಿ ಹೇಳಿದ್ದಿದು

ಅಂದಹಾಗೆ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಲಭ್ಯವಿರುವ 17ರಲ್ಲಿನ 12 ಕೋಟಾಗಳಿಗಾಗಿ ಭಾರತೀಯ ಶೂಟರ್‌ಗಳು ಪೈಪೋಟಿ ನಡೆಸುತ್ತಿದ್ದಾರೆ. ಇದರಲ್ಲಿ ಈಗಾಗಲೇ ರೈಫಲ್‌ ಮತ್ತು ಪಿಸ್ತೂಲ್‌ ವಿಭಾಗಗಳಲ್ಲಿ ಭಾರತೀಯ ಶೂಟರ್‌ಗಳು 5 ಸ್ಥಾನವನ್ನು ಖಚಿತ ಪಡಿಸಿಕೊಂಡಿದ್ದಾರೆ.

ಅಲೆಕ್ಸಾಂಡರ್‌ ಜ್ವೆರೆವ್‌ ಮುಡಿಗೆ ಜಿನೆವಾ ಓಪನ್‌ ಗರಿಅಲೆಕ್ಸಾಂಡರ್‌ ಜ್ವೆರೆವ್‌ ಮುಡಿಗೆ ಜಿನೆವಾ ಓಪನ್‌ ಗರಿ

ಚಾಂಡೇಲಾ ಮತ್ತು ಅಂಜುಮ್‌ ಮುದ್ಗಿಲ್‌ ಒಲಿಂಪಿಕ್ಸ್‌ಗೆ ಭಾರತೀಯರ ಕೋಟಾ ಗಿಟ್ಟಿಸಿದ ಮೊದಲ ಶೂಟರ್‌ಗಳಾದರೆ, ಬಳಿಕ ಸೌರಭ್‌ ಚೌಧರಿ, ದಿವ್ಯಾನ್ಷ್‌ ಸಿಂಗ್‌ ಪನ್ವರ್‌ ಮತ್ತು ಅಭಿಶೇಕ್‌ ವರ್ಮಾ ಕೋಟಾ ಪಡೆಯುವಲ್ಲಿ ಯಸಸ್ವಿಯಾದರು.

Story first published: Sunday, May 26, 2019, 22:47 [IST]
Other articles published on May 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X