ಆರ್ಚರಿ ವಿಶ್ವಕಪ್: ಫೈನಲ್‌ಗೇರಿದ ಭಾರತ ಪುರುಷರ ತಂಡ: ಕಂಚು ಗೆದ್ದ ಮಹಿಳೆಯರು

Archery World Cup: Indian Mens Compound Team stuns South Korea to reach the final: women win bronze
Photo Credit: twitter

ದಕ್ಷಿಣ ಕೊರಿಯಾದ ಗ್ವಾಂಗ್ಜುನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ 2022ರಲ್ಲಿ ಭಾರತೀಯ ಪುರುಷರ ತಂಡ ಮಹತ್ವದ ಸಾಧನೆ ಮಾಡಿದೆ. ಆರ್ಚರಿ ವಿಶ್ವಕಪ್‌ನಲ್ಲಿ ಭಾರತ ಪುರುಷರ ತಂಡ ಸ್ಟೇಜ್ 2ರಲ್ಲಿ ಫೈನಲ್ ಹಂತಕ್ಕೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಆತಿಥೇಯ ದಕ್ಷಿಣ ಕೊರಿಯಾ ತಂಡಕ್ಕೆ ಆಘಾತ ನೀಡಿದ ಭಾರತ ತಂಡ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದೆ.

ಪಂದ್ಯದ ಆರಂಭದಲ್ಲಿ ದಕ್ಷಿಣ ಕೊರಿಯಾ ತಂಡ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿತ್ತು. ಆದರೆ ಸೆಮಿಫೈನಲ್‌ನಲ್ಲಿ ಭಾರತ ತಂಡದ ಆರ್ಚರ್‌ಗಳು ಅದಕ್ಕೆ ಅವಕಾಶವನ್ನು ನೀಡಲಿಲ್ಲ. ಅಭಿಷೇಕ್ ವರ್ಮಾ, ಅಮನ್ ಸೈನಿ ಮತ್ತು ರಜತ್ ಚೌಹಾನ್ ದಕ್ಷಿಣ ಕೊರಿಯಾ ವಿರುದ್ಧ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಇನ್ನು ಈ ಸೆಣೆಸಾಟದಲ್ಲಿ ಸೋಲು ಅನುಭವಿಸಿದ ದಕ್ಷಿಣ ಕೊರೊಯಾ ನಂತರ ಕಂಚಿನ ಪದಕಕ್ಕಾಗಿ ಹೋರಾಡಿ ಗೆಲುವು ಸಾಧಿಸಿದೆ. ಈ ಮುಖಾಮುಖಿಯಲ್ಲಿ ದಕ್ಷಿಣ ಕೊರಿಯಾ ಡೆನ್ಮಾರ್ಕ್ ತಂಡದ ವಿರುದ್ಧ 238-229 ಅಂತರದಿಂದ ಗೆಲುವು ಸಾಧಿಸಿದೆ.

ಡೋಪಿಂಗ್ ಉಲ್ಲಂಘನೆ; ಐಸಿಸಿಯಿಂದ 9 ತಿಂಗಳು ಅಮಾನತಾದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ಡೋಪಿಂಗ್ ಉಲ್ಲಂಘನೆ; ಐಸಿಸಿಯಿಂದ 9 ತಿಂಗಳು ಅಮಾನತಾದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್

ಈ ಮಧ್ಯೆ ಭಾರತದ ಮಹಿಳಾ ತಂಡ ಕೂಡ ದೊಡ್ಡ ಸಾಧನೆಯನ್ನು ಮಾಡುವಲ್ಲಿ ಯಶಸ್ವಿಯಾಗಿದೆ. ಅವನೀತ್ ಕೌರ್, ಮುಸ್ಕಾನ್ ಕಿರಾರ್ ಮತ್ತು ಪ್ರಿಯಾ ಗುರ್ಜರ್ ಅವರನ್ನೊಳಗೊಂಡ ಭಾರತದ ಮಹಿಳಾ ಕಾಂಪೌಂಡ್ ತಂಡವು ಕಂಚಿನ ಪದಕವನ್ನು ಗೆದ್ದುಕೊಂಡಿದೆ. ಕಂಚಿನ ಪದಕಕ್ಕಾಗಿ ಟರ್ಕಿ ತಂಡದ ವಿರುದ್ಧ ರೋಚಕ ಸ್ಪರ್ಧೆ ಎದುರಾಯಿತು. ಅಂತಿಮ ಹಂತದಲ್ಲಿ ತಿರುಗಿಬಿದ್ದ ಭಾರತೀಯ ಆರ್ಚರ್‌ಗಳು 232-231 ಅಂತರದಿಂದ ಗೆದ್ದು ಪದಕಕ್ಕೆ ಮುತ್ತಿಟ್ಟರು.

ಚಿನ್ನದ ಪದಕಕ್ಕಾಗಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತದ ಪುರುಷರ ತಂಡ ಫ್ರಾನ್ಸ್ ವಿರುದ್ಧ ಸೆಣೆಸಲಿದೆ. ಈ ಪಂದ್ಯ ಮುಂದಿನ ಶನಿವಾರ ನಡೆಯಲಿದೆ. ಟರ್ಕಿ ಮೀಟ್‌ನಲ್ಲಿ ಕೂಡ ಈ ಎರಡು ತಂಡಗಳ ಮುಖಾಮುಖಿಯಲ್ಲಿ ಭಾರತ 232-230 ಅಂತರದಲ್ಲಿ ಜಯ ಸಾಧಿಸಿತ್ತು.

For Quick Alerts
ALLOW NOTIFICATIONS
For Daily Alerts
Story first published: Wednesday, May 18, 2022, 21:24 [IST]
Other articles published on May 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X