ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನಲ್ಲಿ ಭಾರತ ದಾಖಲೆಯ ಪದಕ ಬೇಟೆ!

Asian Games 2018: India match best-ever gold tally

ಜಕಾರ್ತಾ, ಸೆಪ್ಟೆಂಬರ್ 2: ಇಂಡೋನೇಷ್ಯಾದ ಜಕಾರ್ತಾ ಮತ್ತು ಪಾಲೆಂಬಂಗ್ ನಲ್ಲಿ ನಡೆದ 18ನೇ ಏಷ್ಯಾನ್ ಗೇಮ್ಸ್ ನಲ್ಲಿ ಭಾರತ ದಾಖಲೆ ಸಂಖ್ಯೆಯ ಪದಕಗಳನ್ನು ಗೆದ್ದಿದೆ. ಈ ಗೇಮ್ಸ್ ನಲ್ಲಿ ಭಾರತ ಒಟ್ಟು 69 ಪದಕಗಳನ್ನು ಗೆದ್ದಿತ್ತು. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪದಕ ಗೆದ್ದಿದ್ದು ಇದೇ ಮೊದಲಸಾರಿ!

ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ

ಆಗಸ್ಟ್ 18ರಿಂದ ಆರಂಭವಾಗಿ ಸೆಪ್ಟೆಂಬರ್ 2ರಂದು ಕೊನೆಗೊಳ್ಳುತ್ತಿರುವ 2018ರ ಇಂಡೋನೇಷ್ಯ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಒಟ್ಟು 69 ಪದಕಗಳನ್ನು ಗೆದ್ದಿತ್ತು. ಇದರಲ್ಲಿ 15 ಚಿನ್ನ, 24 ಬೆಳ್ಳಿ ಮತ್ತು 30 ಕಂಚಿನ ಪದಕಗಳು ಸೇರಿದ್ದವು. ಭಾರತ ಪದಕ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದುಕೊಂಡಿತ್ತು.

ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಪದಕ ಗೆದ್ದ ಎಲ್ಲರ ಸಂಕ್ಷಿಪ್ತ ವಿವರಏಷ್ಯನ್ ಗೇಮ್ಸ್ 2018: ಭಾರತಕ್ಕೆ ಪದಕ ಗೆದ್ದ ಎಲ್ಲರ ಸಂಕ್ಷಿಪ್ತ ವಿವರ

ಈ ಬಾರಿಯ ಏಷ್ಯಾನ್ ಗೇಮ್ಸ್ ನಲ್ಲಿ ಭಾರತ ಅಪೂರ್ವ ದಾಖಲೆಗಳೊಂದಿಗೆ ಸಾಧನೆ ಮೆರದಿದ್ದನ್ನು ನಾವು ನೋಡಿದ್ದೇವೆ. ಏಷ್ಯನ್ ಗೇಮ್ಸ್ ದಾರಿಯಲ್ಲಿ ಭಾರತದ ಸಾಧನೆ ಹೆಜ್ಜೆಗಳನ್ನು ಒಮ್ಮೆ ಮೆಲುಕು ಹಾಕೋಣ..

ಮೊದಲು ಪಾಲ್ಗೊಂಡಿದ್ದು ಭಾರತದಲ್ಲೇ

ಮೊದಲು ಪಾಲ್ಗೊಂಡಿದ್ದು ಭಾರತದಲ್ಲೇ

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಮೊದಲಬಾರಿಗೆ ಪಾಲ್ಗೊಂಡಿದ್ದು 1951ರಲ್ಲಿ. ಮೊದಲ ಈ ಕ್ರೀಡಾಕೂಟ ನಡೆದಿದ್ದೂ ಭಾರತದಲ್ಲೇ ಅನ್ನೋದು ವಿಶೇಷ. ದೇಶದ ರಾಜಧಾನಿ ನವದೆಹಲಿಯಲ್ಲಿ ಈ ಕ್ರೀಡಾಕೂಟ ನಡೆದಿತ್ತು. ಈ ವೇಳೆ ಭಾರತ 15 ಚಿನ್ನ, 16 ಬೆಳ್ಳಿ, 20 ಕಂಚಿನೊಂದಿಗೆ 51 ಪದಕಗಳನ್ನು ಗೆದ್ದಿತ್ತು. ಭಾರತ ಅಂಕಪಟ್ಟಿಯಲ್ಲಿ ಅಗ್ರ 2ನೇ ಸ್ಥಾನ ಪಡೆದಿದ್ದು ದಾಖಲೆಯಾಗಿದೆ.

ಪದಕಗಳ ಹಿಂದಿನ ದಾಖಲೆ

ಪದಕಗಳ ಹಿಂದಿನ ದಾಖಲೆ

ಭಾರತ ಹೆಚ್ಚು ಪದಕಗಳನ್ನು ಗೆದ್ದು ಗಮನಸೆಳೆದಿದ್ದು 2010ರಲ್ಲಿ ಚೀನಾದ ಗುವಾಂಗ್ಝೌ ನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ನಲ್ಲಿ. ಭಾರತ ಇದರಲ್ಲಿ 14 ಚಿನ್ನ, 17 ಬೆಳ್ಳಿ, 34 ಕಂಚಿನೊಂದಿಗೆ ಒಟ್ಟು 65 ಪದಕಗಳನ್ನು ಗೆದ್ದಿತ್ತು. ಪದಕ ಪಟ್ಟಿಯಲ್ಲಿ 6ನೇ ಸ್ಥಾನ ಗಳಿಸಿತ್ತು.

ಕಳೆದಸಾರಿ 57 ಪದಕ

ಕಳೆದಸಾರಿ 57 ಪದಕ

ಸೌತ್ ಕೊರಿಯಾದ ಇಂಚಿಯಾನ್ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಒಟ್ಟು 57 ಪದಕಗಳನ್ನು ಗೆದ್ದಿತ್ತು. ಇದರಲ್ಲಿ 11 ಬಂಗಾರ, 10 ಬೆಳ್ಳಿ ಮತ್ತು 36 ಕಂಚಿನ ಪದಕದೊಂದಿಗೆ ಪದಕ ಪಟ್ಟಿಯಲ್ಲಿ 8ನೇ ಸ್ಥಾನ ಗಳಿಸಿತ್ತು. ಈ ಬಾರಿಯೂ ಭಾರತ 8ನೇ ಸ್ಥಾನದಲ್ಲಿದೆಯಾದರೂ ಪದಕಗಳ ಸಂಖ್ಯೆ ಏರಿದೆ.

ಏರಡುಸಾರಿ ಏಷ್ಯಾನ್ ಆತಿಥ್ಯ

ಏರಡುಸಾರಿ ಏಷ್ಯಾನ್ ಆತಿಥ್ಯ

ಪ್ರತಿಷ್ಠಿತ ಕ್ರೀಡಾಕೂಟದ ಆತಿಥ್ಯ ವಹಿಸೋದು ಸುಲಭದ ಮಾತಲ್ಲ. ಕ್ರೀಡಾಸ್ಪರ್ಧೆಗಳಲ್ಲಿ ಹಿಂದಿನಿಂದಲೂ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ಭಾರತ ಈವರೆಗೆ 2 ಸಾರಿ ಏಷ್ಯಾನ್ ಗೇಮ್ಸ್ ಕ್ರೀಡಾಕೂಟದ ಆತಿಥ್ಯ ವಹಿಸಿದೆ. 1951ರ ಮೊದಲ ಏಷ್ಯನ್ ಗೇಮ್ ಮತ್ತು 1982ರ 9ನೇ ಏಷ್ಯನ್ ಗೇಮ್ಸ್ ಭಾರತದಲ್ಲಿ, ದೆಹಲಿಯಲ್ಲಿ ನಡೆದಿತ್ತು. ಚಿತ್ರದಲ್ಲಿ ಎಷ್ಯನ್ ಬಂಗಾರ ಗೆದ್ದ ಭಾರತದ ಮಹಿಳಾ ಹಾಕಿ ತಂಡ ಕೋಚ್ ಅನ್ನು ಎತ್ತಿ ಸಂಭ್ರಮಿಸುತ್ತಿರುವುದು.

ಒಟ್ಟು 153 ಬಂಗಾರ

ಒಟ್ಟು 153 ಬಂಗಾರ

ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತ ಈವರೆಗೆ ಒಟ್ಟು 153 ಚಿನ್ನ, 202 ಬೆಳ್ಳಿ ಮತ್ತು 312 ಕಂಚಿನ ಪದಕಗಳೊಂದಿಗೆ 667 ಪದಕಗಳನ್ನು ಗೆದ್ದಿರುವ ಸಾಧನೆ ಮೆರೆದಿದೆ. ಏಷ್ಯನ್ ಗೇಮ್ಸ್ ಓವರಾಲ್ ರ್ಯಾಂಕಿಂಗ್ ನಲ್ಲಿ ಭಾರತ 5ನೇ ಸ್ಥಾನದಲ್ಲಿದೆ.

ಏಷ್ಯನ್ ಗೇಮ್ಸ್ ಹಾದಿಯ ಚಿತ್ರಣವನ್ನು ಬಿಡಿಸಿಡುವ ಚಾರ್ಟ್ ಕೆಳಗಿದೆ..

Asian Games 2018: India match best-ever gold tally

Story first published: Wednesday, September 5, 2018, 15:08 [IST]
Other articles published on Sep 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X