ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಪದಕ ಗೆದ್ದ ಎಲ್ಲರ ಸಂಕ್ಷಿಪ್ತ ವಿವರ

Asian Games 2018: indian medal tally complete detail

ಜಕಾರ್ತಾ, ಆಗಸ್ಟ್ 21: ಇಂಡೋನೇಷ್ಯಾದ ಜಕಾರ್ತಾ ಮತ್ತು ಪಾಲೆಂಬಂಗ್ ನಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತ ವಿಶ್ವದ ಗಮನ ಸೆಳೆಯುತ್ತಿದೆ. ಶೂಟಿಂಗ್ ವಿಭಾಗದಲ್ಲಿ ಅಪೂರ್ವಿ ಚಾಂದೇಲ ಮತ್ತು ರವಿಕುಮಾರ್ ಜೋಡಿ 10 ಮೀ. ಏರ್ ರೈಫಲ್ ನಲ್ಲಿ ಕಂಚಿನೊಂದಿಗೆ ಭಾರತದ ಪದಕ ಖಾತೆ ತೆರೆದಿದ್ದರು.

ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ

ಕ್ರೀಡಾ ಸ್ಪರ್ಧೆಗಳು ಆರಂಭಗೊಂಡ (ಆಗಸ್ಟ್ 19) ದಿನದಿಂದ ಹಿಡಿದು ಭಾರತ ಸಾಲು ಸಾಲು ಪದಕ ಗೆಲ್ಲುತ್ತಲೇ ಸಾಗಿತ್ತು. ಭಾರತದ ಬಜರಂಗ್ ಪೂನಿಯಾ ಅವರು ಪುರುಷರ 65 ಕೆಜಿ ಕುಸ್ತಿ ಫ್ರೀ ಸ್ಟೈಲ್ ನಲ್ಲಿ ಬಂಗಾರ ಗೆದ್ದು ಭಾರತಕ್ಕೆ ಚಿನ್ನದ ನಗು ಹಂಚಿದ್ದರು. ಅನಂತರವೂ ಭಾರತ ಪದಕ ಬೇಟೆ ಮುಂದುವರೆಸಿತ್ತು.

ಸ್ಪರ್ಧೆ ಆರಂಭದ ದಿನ ಬಜರಂಗ್, ಮರುದಿನ ಕುಸ್ತಿಪಟು ವಿನೇಶ್ ಫೋಗಟ್, ಮೂರನೇ ದಿನ ಶೂಟರ್ ಸೌರಭ್ ಚೌಧರಿ ಚಿನ್ನ ಗೆದ್ದು ಭಾರತ ಮಿಂಚುವಂತೆ ನೋಡಿಕೊಂಡಿದ್ದರು. ಆಗಸ್ಟ್ 18ರಿಂದ ಆರಂಭಗೊಂಡು ಸೆಪ್ಟೆಂಬರ್ 2ರ ವರೆಗೆ ನಡೆಯಲಿರುವ ಈ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಪಟ್ಟಿ ಬೆಳೆಸಿದವರ ಸಂಪೂರ್ಣ ವಿವರವಿದೆ. ಪದಕ ಸೇರ್ಪಡೆಗೊಂಡಂತೆ ಅಪ್ ಡೇಟ್ ಮಾಡುತ್ತಿದ್ದೇವೆ.

1. ಅಪೂರ್ವಿ ಚಂದೇಲಾ ಮತ್ತು ರವಿಕುಮಾರ್

1. ಅಪೂರ್ವಿ ಚಂದೇಲಾ ಮತ್ತು ರವಿಕುಮಾರ್

ಮಿಕ್ಸ್ಡ ಟೀಮ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಅಪೂರ್ವಿ ಚಂದೇಲಾ ಮತ್ತು ರವಿಕುಮಾರ್ ಜೋಡಿಗೆ ಕಂಚು ಒಲಿದಿತ್ತು. ಇದು ಭಾರತಕ್ಕೆ ಏಷ್ಯನ್ ಗೇಮ್ಸ್ 2018ರಲ್ಲಿ ಲಭಿಸಿದ ಮೊದಲ ಪದಕ. 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಜೋಡಿ ಕಂಚು ಗೆದ್ದಿತ್ತು.

2. ಬಜರಂಗ್ ಪೂನಿಯಾ

2. ಬಜರಂಗ್ ಪೂನಿಯಾ

ಕುಸ್ತಿಪಟು ಬಜರಂಗ್ ಪೂನಿಯಾ ಅವರು ಭಾರತ ಪರ ಮೊದಲ ಚಿನ್ನ ಗೆದ್ದಿದ್ದರು. ಪುರುಷರ 65 ಕೆಜಿ ಕುಸ್ತಿ ಫ್ರೀ ಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಚೀನಾದ ತಕಾತನಿ ಡೈಚಿ ಅವರನ್ನು ಮಣಿಸಿ ಚಿನ್ನಕ್ಕೆ ಕೊರಳೊಡ್ಡಿದರು.

3. ದೀಪಕ್ ಕುಮಾರ್

3. ದೀಪಕ್ ಕುಮಾರ್

ಏಷ್ಯನ್ ಗೇಮ್ಸ್ ನ 10 ಮೀ.ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ದೀಪಕ್ ಕುಮಾರ್ ರಜತ ಪದಕ ಗೆದ್ದಿದ್ದಾರೆ. ಫೈನಲ್ ಸ್ಪರ್ಧೆಯಲ್ಲಿ 247.7 ಅಂಕ ಪಡೆಯುವ ಮೂಲಕ ದೀಪಕ್ ರಜತ ಪದಕ ಜಯಿಸಿದ್ದರು.

4. ವಿನೇಶ್ ಫೋಗಟ್

4. ವಿನೇಶ್ ಫೋಗಟ್

ಏಷ್ಯನ್ ಗೇಮ್ಸ್ ಮಹಿಳಾ 50 ಕೆಜಿ ಕುಸ್ತಿ ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ವಿನೇಶ್ ಫೋಗಟ್ ಭಾರತಕ್ಕೆ ಚಿನ್ನ ಗೆದ್ದಿದ್ದರು. ಜಪಾನ್ ಕುಸ್ತಿಪಟು ಸನ್ ಯಾನನ್ ಎದುರು ವಿನೇಶ್ ಚಿನ್ನ ಗೆಲ್ಲುವ ಮೂಲಕ ಭಾರತ ಪರ ಏಷ್ಯನ್ ಗೇಮ್ಸ್ ರಸ್ಲಿಂಗ್ ನಲ್ಲಿ ಚಿನ್ನ ಗೆದ್ದ ಮೊದಲ ಮಹಿಳೆಯಾಗಿ ಇತಿಹಾಸ ನಿರ್ಮಿಸಿದ್ದಾರೆ.

5. ಲಕ್ಷಯ್ ಶಿಯೊರಾನ್

5. ಲಕ್ಷಯ್ ಶಿಯೊರಾನ್

ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಲಭಿಸಿದ್ದು ಲಕ್ಷಯ್ ಅವರಿಂದ. ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಲಕ್ಷಯ್ ಶಿಯೊರಾನ್ ಬೆಳ್ಳಿ ಗೆಲ್ಲುವ ಮೂಲಕ ಭಾರತದ ಪದಕ ಪಟ್ಟಿ ಬೆಳೆಸಿದ್ದರು.

6. ಸೌರಭ್ ಚೌಧರಿ ಮತ್ತು ಅಭಿಷೇಕ್ ವರ್ಮಾ

6. ಸೌರಭ್ ಚೌಧರಿ ಮತ್ತು ಅಭಿಷೇಕ್ ವರ್ಮಾ

10 ಮೀ.ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಸೌರಭ್ ಚೌಧರಿ ಚಿನ್ನ ಗೆದ್ದಿದ್ದರು. 16ರ ಹರೆಯದ ಸೌರಭ್ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಪರ ಚಿನ್ನ ಗೆದ್ದು ದಾಖಲೆ ನಿರ್ಮಿಸಿದ್ದರು. ಇದೇ ವಿಭಾಗದಲ್ಲಿ ಭಾರತದ ಅಭಿಷೇಕ್ ವರ್ಮಾ ಅವರಿಗೆ ಕಂಚಿನ ಪದಕ ಲಭಿಸಿತ್ತು.

7. ಸಂಜೀವ್ ರಜಪೂತ್

7. ಸಂಜೀವ್ ರಜಪೂತ್

ಶೂಟರ್ ಸಂಜೀವ್ ರಜಪೂತ್ ಅವರು ಬೆಳ್ಳಿ ಪದಕ ಗೆದ್ದಿದ್ದರು. ಪುರುಷರ 50 ಮೀಟರ್ 3 ಪೊಸಿಷನ್ ರೈಫಲ್ ಶೂಟಿಂಗ್ ವಿಭಾಗದಲ್ಲಿ ಭಾಗವಹಿಸಿದ್ದ ಸಂಜೀವ್ ಅವರು ಕೇವಲ 0.4 ಮಿಮೀ ಅಂತರದಲ್ಲಿ ಚಿನ್ನದ ಪದಕ ವಂಚಿತರಾಗಿದ್ದರು.

8. ಪುರುಷರ ಸೆಪಕ್ ಟಾಕ್ರಾ ತಂಡ

8. ಪುರುಷರ ಸೆಪಕ್ ಟಾಕ್ರಾ ತಂಡ

ಕಿಕ್ ವಾಲಿಬಾಲ್ ಎಂದು ಕರೆಯಲಾಗುವ ಸೆಪಕ್ ಟಾಕ್ರಾದಲ್ಲಿ ಭಾರತ ಮೊಟ್ಟ ಮೊದಲ ಪದಕ ಕಂಚು ಜಯಿಸಿತ್ತು. ಪುರುಷರ ಟೀಮ್ ರೆಗು ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಥಾಯ್ಲೆಂಡ್ ವಿರುದ್ಧ 0-2 ರಿಂದ ಸೋಲು ಅನುಭವಿಸಿ ಕಂಚಿನ ಪದಕಕ್ಕೆ ತೃಪ್ತಿ ಪಡೆದುಕೊಂಡಿತ್ತು.

9. ದಿವ್ಯಾ ಕಕ್ರನ್

9. ದಿವ್ಯಾ ಕಕ್ರನ್

ಮಹಿಳಾ ಕುಸ್ತಿಪಟು ದಿವ್ಯಾ ಕಕ್ರನ್ ಅವರು 68 ಕೆಜಿ ಫ್ರೀ-ಸ್ಟೈಲ್ ಕುಸ್ತಿಯಲ್ಲಿ ಕಂಚು ಜಯಿಸಿದ್ದರು. ಕಂಚಿನ ಪದಕಕ್ಕಾಗಿ ನಡೆದ ಟೆಕ್ನಿಕಲ್ ಸುಪೀರಿಯರ್ ಕುಸ್ತಿ ಸ್ಪರ್ಧೆಯಲ್ಲಿ ದಿವ್ಯಾ ಅವರು ಚೈನೀಸ್ ತೈಪೆಯ ಚೆನ್ ವೆನ್ಲಿಂಗ್ ಅವರನ್ನು 10-0ಯಿಂದ ಕೆಡವಿ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದರು.

10. ರಾಹಿ ಸರ್ನೊಬಾತ್

10. ರಾಹಿ ಸರ್ನೊಬಾತ್

ಆಗಸ್ಟ್ 22ರ ಬುಧವಾರ ರಾಹಿ ಸರ್ನೊಬಾತ್ ಅವರು ಮಹಿಳಾ ವಿಭಾಗದ ಶೂಟಿಂಗ್ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ 4ನೇ ಚಿನ್ನದ ಕೊಡುಗೆ ನೀಡಿದ್ದರು. ಇದರೊಂದಿಗೆ ರಾಹಿ ಅವರು ಏಷ್ಯನ್ ಗೇಮ್ಸ್ ನ ಶೂಟಿಂಗ್ ನಲ್ಲಿ ಬಂಗಾರ ಗೆದ್ದ ಭಾರತದ ಮೊದಲ ಮಹಿಳೆಯಾಗಿಯೂ ಇತಿಹಾಸ ನಿರ್ಮಿಸಿದ್ದಾರೆ.

11. 'ವುಶು'ವಿನಲ್ಲಿ ಬರೋಬ್ಬರಿ 4 ಕಂಚು

11. 'ವುಶು'ವಿನಲ್ಲಿ ಬರೋಬ್ಬರಿ 4 ಕಂಚು

ಮಾರ್ಷಲ್ ಆರ್ಟ್ಸ್ ರೀತಿಯ ವುಶು ಸ್ಪರ್ಧೆಯಲ್ಲಿ ಭಾರತ 4 ಪದಕ ಗೆದ್ದು ಗಮನ ಸೆಳೆದಿದ್ದು ಇದೇ ಮೊದಲ ಸಾರಿ. ಸಂತೋಷ್ ಕುಮಾರ್ (56 ಕೆಜಿ), ಸೂರ್ಯ ಭಾನು ಪ್ರತಾಪ್ (60 ಕೆಜಿ), ರೋಶಿಬಿನಾ ದೇವಿ (60 ಕೆಜಿ) ಮತ್ತು ನರೇಂದರ್ ಗ್ರೇವಲ್ (65 ಕೆಜಿ) ಭಾರತಕ್ಕೆ ಕಂಚು ಗೆದ್ದು ಭಾರತದ ಪದಕ ಪಟ್ಟಿ ಏರಿಸಿದ್ದರು.

12. ಅಂಕಿತಾ ರೈನಾ

12. ಅಂಕಿತಾ ರೈನಾ

ಭಾರತದ ನಂ. 1 ಮಹಿಳಾ ಟೆನಿಸ್ ಸಿಂಗಲ್ಸ್‌ ಆಟಗಾರ್ತಿ ಅಂಕಿತಾ ರೈನಾ ಅವರು ಕಂಚಿನ ಪದಕ ಗೆದ್ದಿದ್ದರು. ಸೆಮಿಫೈನಲ್ಸ್‌ ಸೋತು ಅಂಕಿತಾ ಕಂಚಿಗೆ ತೃಪ್ತಿಪಟ್ಟುಕೊಂಡಿದ್ದರು. ಚೀನಾದ ಶುಯಿ ಜಾಂಗ್ ಅವರೊಂದಿಗೆ ಸೆಮಿಫೈನಲ್‌ನಲ್ಲಿ ಕಾದಾಟ ನಡೆಸಿದ ಅಂಕಿತಾ, 4-6, 6-7 ರ ನೇರ ಸೆಟ್‌ಗಳಲ್ಲಿ ಹಿನ್ನಡೆ ಅನುಭವಿಸಿದ್ದರು.

13. ಶಾರ್ದೂಲ್ ವಿಹಾನ್

13. ಶಾರ್ದೂಲ್ ವಿಹಾನ್

ಆಗಸ್ಟ್ 23ರ ಗುರುವಾರ ನಡೆದ ಇಂಡೋನೇಷ್ಯಾ ಏಷ್ಯಾನ್ ಗೇಮ್ಸ್ ಸ್ಪರ್ಧೆಯಲ್ಲಿ ಭಾರತದ 15ರ ಹರೆಯದ ಕಿರಿಯ ಶೂಟರ್ ಶಾರ್ದೂಲ್ ವಿಹಾನ್ ಭಾರತಕ್ಕೆ ಬೆಳ್ಳಿ ಪದಕ ತಂದಿದ್ದರು. ಶೂಟಿಂಗ್ ನ ಡಬಲ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಶಾರ್ದೂಲ್ ಗೆ ಬೆಳ್ಳಿ ಒಲಿದಿತ್ತು.

14. ಪುರುಷರ ಕಬಡ್ಡಿ ತಂಡಕ್ಕೆ ಆಘಾತ

14. ಪುರುಷರ ಕಬಡ್ಡಿ ತಂಡಕ್ಕೆ ಆಘಾತ

ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪುರುಷರ ಕಬಡ್ಡಿ ತಂಡಕ್ಕೆ ಆಘಾತವಾಗಿತ್ತು. ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇರಾನ್ ಎದುರು ಸೋತು ಕಂಚಿಗೆ ತೃಪ್ತಿ ಪಟ್ಟುಕೊಂಡಿತ್ತು. ಇರಾನ್ ಎದುರು ಭಾರತ 27-18ರ ಅಂತರದಿಂದ ಸೋತಿತು. ಭಾರತ ಏಷ್ಯನ್ ಕಬಡ್ಡಿಯಲ್ಲಿ ಫೈನಲ್ ಪ್ರವೇಸದೆ ಉಳಿದಿದ್ದು ಇದೇ ಮೊದಲ ಸಾರಿ!

15. ರಾವಿಂಗ್ ಸ್ಪರ್ಧೆಯಲ್ಲಿ ಕಂಚು

15. ರಾವಿಂಗ್ ಸ್ಪರ್ಧೆಯಲ್ಲಿ ಕಂಚು

ಲೈಟ್ ವೇಟ್ ಡಬಲ್ ಸ್ಕಲ್ಸ್ ರಾವಿಂಗ್ ಸ್ಪರ್ಧೆಯಲ್ಲಿ ಭಾರತದ ರೋಹಿತ್ ಕುಮಾರ್ ಮತ್ತು ಭಗವಾನ್ ದಾಸ್ ಕಂಚಿನ ಪದಕ ಗೆದ್ದ ಸಾಧನೆ ಮಾಡಿದರು. ಪುರುಷರ ಲೈಟ್ ವೇಟ್ ಸ್ಕಲ್ಸ್ ರಾವಿಂಗ್ ಸಿಂಗಲ್ಸ್ ಸ್ಪರ್ಧೆಯಲ್ಲಿ ದುಶ್ಯಂತ್ ಕಂಚಿನ ಪದಕ ಪಡೆಯುವ ಮೂಲಕ ಭಾರತದ ಪದಕ ಪಟ್ಟಿಯಲ್ಲಿ ಮತ್ತೊಂದು ಕಂಚಿನ ಪದಕ ಪೇರಿಸಿದರು.

16. ರಾವಿಂಗ್ ತಂಡಕ್ಕೆ ಚಿನ್ನ

16. ರಾವಿಂಗ್ ತಂಡಕ್ಕೆ ಚಿನ್ನ

18 ನೇ ಏಷ್ಯನ್ ಗೇಮ್ಸ್ ನ ಆರನೇ ದಿನ ಆಗಸ್ಟ್ 24ರಂದು ಭಾರತದ ಪುರುಷರ ಕ್ವಾಡ್ರಪಲ್(4 ಜನರ ತಂಡ) ತಂಡ ಸ್ಕಲ್ಸ್ ರಾವಿಂಗ್ ನಲ್ಲಿ ಚಿನ್ನದ ಪದಕ ಪಡೆಯಿತು. ರಾವಿಂಗ್ ನಲ್ಲಿ ಭಾರತ ಚಿನ್ನದೊಂದಿಗೆ ಮಿನುಗಿದ ಸಾಧನೆಗೆ ಭಾರತ ತಂಡ ಪಾತ್ರವಾಗಿತ್ತು.

17. ಬಂಗಾರದ ನಗು ನಕ್ಕ ಬೋಪಣ್ಣ-ಶರಣ್ ಜೋಡಿ

17. ಬಂಗಾರದ ನಗು ನಕ್ಕ ಬೋಪಣ್ಣ-ಶರಣ್ ಜೋಡಿ

ಪುರಷರ ಟೆನಿಸ್ ಡಬಲ್ಸ್ ಫೈನಲ್ ನಲ್ಲಿ ಭಾರತದ ಬೋಪಣ್ಣ-ಶರಣ್ ಜೋಡಿ ಕಜಕಿಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್-ಡೆನಿಸ್ ಯೆವ್ಸೇವ್ ಜೋಡಿಯನ್ನು 6-3, 6-4ರ ನೇರ ಸೆಟ್ ನಿಂದ ಸೋಲಿಸಿ ಬಂಗಾರದ ನಗೆ ಬೀರಿತ್ತು. ಇದು ಈ ಜೋಡಿಗೆ ಲಭಿಸಿದ ಏಷ್ಯನ್ ಗೇಮ್ಸ್ ಮೊದಲ ಬಂಗಾರ.

18. ಹೀನಾ ಸಿಧು

18. ಹೀನಾ ಸಿಧು

ಮಹಿಳಾ ವಿಭಾಗದ ಶೂಟಿಂಗ್ 10ಮೀ. ಏರ್ ಪಿಸ್ತೂಲ್ ನಲ್ಲಿ ಹೀನಾ ಸಿಧು ಕಂಚಿನ ಪದಕ ತನ್ನದಾಗಿಸಿಕೊಂಡರು. ಹೀನಾ ಅವರು ಒಟ್ಟು 219.2 ಅಂಕಗಳನ್ನು ಪಡೆಯುವುದರೊಂದಿಗೆ ಕಂಚು ಗೆದ್ದರು.

19. ಚಿನ್ನದ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ನಿರಾಸೆ

19. ಚಿನ್ನದ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ನಿರಾಸೆ

ಏಷ್ಯನ್ ಗೇಮ್ಸ್ ಕಬಡ್ಡಿ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳೆಯರು ಇರಾನ್ ವಿರುದ್ಧ 27-24 ಅಂತರದ ಸೋಲನುಭವಿಸಿದರು. ಹೀಗಾಗಿ ಚಿನ್ನದ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ನಿರಾಸೆಯಾಗಿತ್ತು. ಆದರೂ ಬೆಳ್ಳಿಯಾದರೂ ಒಲಿದಿದ್ದಕ್ಕೆ ತೃಪ್ತಿ ಪಡುವಂತಾಗಿತ್ತು.

20. ಪ್ರಜ್ಞೇಶ್ ಗುಣೇಶ್ವರನ್

20. ಪ್ರಜ್ಞೇಶ್ ಗುಣೇಶ್ವರನ್

ಪುರುಷರ ಟೆನಿಸ್ ಸಿಂಗಲ್ಸ್ ಸೆಮಿಫೈನಲ್ಸ್ ನಲ್ಲಿ ಪ್ರಜ್ಞೇಶ್ ಗುಣೇಶ್ವರನ್ ಸೋತರು. ಉಜ್ಬೇಕಿಸ್ತಾನದ ಆಟಗಾರ ಡೆನಿಸ್ ಇಸ್ಟೊಮಿನ್ ಅವರು 6-2, 6-2ರ ನೇರ ಸೆಟ್ ನಿಂದ ಪ್ರಜ್ಞೇಶ್ ಅವರನ್ನು ಸೋಲಿಸಿ ಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡರು. ಇಲ್ಲಿಗೆ ಭಾರತ ಕಂಚು ತನ್ನದಾಗಿಸಿಕೊಂಡಿತ್ತು.

21. ದೀಪಿಕಾ ಪಳ್ಳಿಕಲ್

21. ದೀಪಿಕಾ ಪಳ್ಳಿಕಲ್

ಏಷ್ಯಾನ್ ಗೇಮ್ಸ್ ಮಹಿಳಾ ಸಿಂಗಲ್ಸ್ ಸ್ಕ್ವ್ಯಾಷ್ ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಕಂಚು ಜಯಿಸಿದ್ದಾರೆ. ಆಗಸ್ಟ್ 25ರ ಶನಿವಾರ ನಡೆದ ಸೆಮಿಫೈನಲ್ ನಲ್ಲಿ ಅವರು ಸೋತಿದ್ದರಿಂದ ಕಂಚಿಗೆ ತೃಪ್ತಿಪಟ್ಟುಕೊಳ್ಳುವಂತಾಯ್ತು. ಮತ್ತೊಂದು ಮಹಿಳಾ ಸಿಂಗಲ್ಸ್ ಸ್ಪರ್ಧೆಯಲ್ಲಿ ಜೋಶ್ನಾ ಚಿನ್ನಪ್ಪ ಅವರೂ ಕಂಚು ಗೆದ್ದರೆ, ಪುರುಷರ ಸಿಂಗಲ್ಸ್ ನಲ್ಲಿ ಸೌರವ್ ಘೋಷಾಲ್ ಗೂ ಕಂಚು ಒಲಿದಿತ್ತು.

22. ತೇಜೀಂದರ್ ಪಾಲ್ ಸಿಂಗ್

22. ತೇಜೀಂದರ್ ಪಾಲ್ ಸಿಂಗ್

ಆಗಸ್ಟ್ 25ರ ಶನಿವಾರ ನಡೆದ ಪುರುಷರ ಶಾಟ್ ಪುಟ್ ಫೈನಲ್ ನಲ್ಲಿ ತೇಜೀಂದರ್ ಪಾಲ್ ಸಿಂಗ್ ಅವರು ಆರಂಭಿಕ ಪ್ರಯತ್ನದಲ್ಲೇ 19.96 ಮೀ. ದೂರ ಗುಂಡೆಸೆದರು. ಮತ್ತೆ 20.75 ಮೀ. ಸಾಧನೆಯೊಂದಿಗೆ ಬಂಗಾರ ಗೆದ್ದು ಏಷ್ಯಾನ್ ಗೇಮ್ಸ್ ಹೊಸ ಕೂಟ ದಾಖಲೆ ಬರೆದರು. ತೇಜೀಂದರ್ ಸಾಧನೆ ಚೀನಾದ ಲಿಯು ಯಾಂಗ್ (19.42 ಮೀ.) ಮತ್ತು ಕೊರಿಯಾದ ಇಲ್ ವೂ ಜಂಗ್ (19.15 ಮೀ.) ಸಾಧನೆಯನ್ನು ಸರಿಗಟ್ಟಿತು.

23. ಈಕ್ವೆಸ್ಟ್ರಿಯನ್ ಬೆಳ್ಳಿ ಸಂಭ್ರಮ

23. ಈಕ್ವೆಸ್ಟ್ರಿಯನ್ ಬೆಳ್ಳಿ ಸಂಭ್ರಮ

ಆಗಸ್ಟ್ 26ರ ಭಾನುವಾರ ನಡೆದ ಪುರುಷರ ಈಕ್ವೆಸ್ಟ್ರಿಯನ್ ತಂಡ ಸ್ಪರ್ಧೆಯಲ್ಲಿ ಭಾರತ ಬೆಳ್ಳಿಯ ಕದಕವನ್ನು ಸಂಭ್ರಮಿಸಿತು. ಮಿರ್ಜಾ ಫೌದ್, ರಾಕೇಶ್ ಕುಮಾರ್, ಆಶೀಷ್ ಮಲಿಕ್ ಮತ್ತು ಜಿತೇಂದರ್ ಸಿಂಗ್ ಅವರನ್ನೊಳಗೊಂಡ ತಂಡಕ್ಕೆ ಬೆಳ್ಳಿ ಲಭಿಸಿತು. ಭಾನುವಾರವೇ ನಡೆದಿದ್ದ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಫೌದ್ ಬೆಳ್ಳಿ ಜಯಿಸಿದ್ದರು.

24. ರೇಸ್ ಟ್ರ್ಯಾಕಿನಲ್ಲಿ ಹಿಮಾ, ಅನಾಸ್ ಬೆಳ್ಳಿ ಮಿಂಚು

24. ರೇಸ್ ಟ್ರ್ಯಾಕಿನಲ್ಲಿ ಹಿಮಾ, ಅನಾಸ್ ಬೆಳ್ಳಿ ಮಿಂಚು

ಏಷ್ಯನ್ ಗೇಮ್ಸ್ ನ ಅಥ್ಲೆಟಿಕ್ಸ್ ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಮಹಿಳಾ ವಿಭಾಗದ 400 ಮೀ. ಓಟವನ್ನು ಹಿಮಾ 50.79 ಸೆಕೆಂಡ್ ಕಾಲಾವಧಿಯಲ್ಲಿ ಮುಗಿಸಿ ಬೆಳ್ಳಿಗೆ ಕೊರಳೊಡ್ಡಿದರು. ಪುರುಷರ 400 ಮೀ. ಓಟದ ಫೈನಲ್ ನಲ್ಲಿ ಬೆಳ್ಳಿ ಪದಕ ಮೊಹಮ್ಮದ್ ಅನಾಸ್ ಯಾಹಿಯ ಪಾಲಾಯಿತು.

25. ಬ್ರಿಡ್ಜ್‌ ನಲ್ಲಿ ಐತಿಹಾಸಿಕ ಕಂಚು

25. ಬ್ರಿಡ್ಜ್‌ ನಲ್ಲಿ ಐತಿಹಾಸಿಕ ಕಂಚು

ಬ್ರಿಡ್ಜ್‌ ಸ್ಪರ್ಧೆಯಲ್ಲಿ ಭಾರತದ ಪುರುಷರ ತಂಡಕ್ಕೆ ಮತ್ತು ಮಿಶ್ರ ತಂಡಕ್ಕೆ ಕಂಚಿನ ಗೌರವ ಲಭಿಸಿತ್ತು. ಭಾನುವಾರ (ಆಗಸ್ಟ್ 26) ನಡೆದ ಸೆಮಿಫೈನಲ್ ನಲ್ಲಿ ಭಾರತ ಸೋತ ಕಾರಣ ಕಂಚಿಗೆ ತೃಪ್ತಿ ಪಟ್ಟುಕೊಳ್ಳುವಂತಾಯ್ತು. ಅಂತೂ ಇದೇ ಮೊಲದ ಬಾರಿಗೆ ಬ್ರಿಡ್ಜ್‌ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚು ಒಲಿದಿತ್ತು.

26. ಬೆಳ್ಳಿಯೊಂದಿಗೆ ಮಿನುಗಿದ ದ್ಯುತಿ

26. ಬೆಳ್ಳಿಯೊಂದಿಗೆ ಮಿನುಗಿದ ದ್ಯುತಿ

ಆಗಸ್ಟ್ 26ರ ಭಾನುವಾರ ನಡೆದ ಮಹಿಳಾ ವಿಭಾಗದ 100 ಮೀ. ಓಟದಲ್ಲಿ ದ್ಯುತೀ ಬೆಳ್ಳಿಯೊಂದಿಗೆ ಮಿನುಗಿದರು. ಚಂದ್ ಅವರು 11.32 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದರು. ಆಗಸ್ಟ್ 28ರ ಬುಧವಾರ ನಡೆದ ಮಹಿಳಾ ವಿಭಾಗದ 200 ಮೀ. ಫೈನಲ್ ಸ್ಪರ್ಧೆಯಲ್ಲೂ ದ್ಯುತೀ ದ್ವಿತೀಯ ಸ್ಥಾನಿಗರಾಗುವ ಮೂಲಕ ಬೆಳ್ಳಿಗೆ ಮುತ್ತಿಕ್ಕಿದ್ದರು.

27. ಸೈನಾ ನೆಹ್ವಾಲ್

27. ಸೈನಾ ನೆಹ್ವಾಲ್

ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ನಂಬರ್‌ ಒನ್ ಶ್ರೇಯಾಂಕಿತೆ ತೈವಾನ್‌ನ ತಾಯ್ ತ್ಸು ಯಿಂಗ್ ವಿರುದ್ಧ 21-17, 21-14 ನೇರ ಸೆಟ್‌ಗಳಿಂದ ಸೈನಾ ಪರಾಭವಗೊಂಡರು. ಆದರೆ 36 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್ ನಲ್ಲಿ ವೈಯಕ್ತಿಕ ಪದಕ ಗೆದ್ದ ಹಿರಿಮೆಗೆ ಸೈನಾ ಪಾತ್ರರಾದರು.

28. ಧರುಣ್ ಅಯ್ಯಸಾಮಿ

28. ಧರುಣ್ ಅಯ್ಯಸಾಮಿ

ಆಗಸ್ಟ್ 27ರ ಸೋಮವಾರ ನಡೆದ ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ಪುರುಷರ 400 ಮೀ. ಹರ್ಡಲ್ಸ್ ಫೈನಲ್ ನಲ್ಲಿ ಧರುಣ್ ಅಯ್ಯಸಾಮಿ 48.96 ಸೆಕೆಂಟ್ ಗಳಲ್ಲಿ ಗುರಿ ತಲುಪುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

29. ಸುಧಾ ಸಿಂಗ್

29. ಸುಧಾ ಸಿಂಗ್

ಮಹಿಳಾ 3,000 ಮೀ. ಸ್ಟೀಪಲ್ ಚೇಸ್ ಫೈನಲ್ ನಲ್ಲಿ ಸುಧಾ ಸಿಂಗ್ ಬೆಳ್ಳಿ ಪದಕ ತನ್ನದಾಗಿಸಿಕೊಂಡರು. 9:40.03 ಸೆಕೆಂಡ್ ಗಳಲ್ಲಿ ಸುಧಾ ಓಟ ಮುಗಿಸಿ ಬೆಳ್ಳಿಗೆ ಮುತ್ತಿಕ್ಕಿದರು.

30. ನೀನಾ ವರಾಕಿಲ್

30. ನೀನಾ ವರಾಕಿಲ್

ಮಹಿಳಾ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಭಾರತದ ನೀನಾ ವರಾಕಿಲ್ ಬೆಳ್ಳಿ ಪದಕ ಜಯಿಸಿದರು. ಫೈನಲ್ ನಲ್ಲಿ ನೀನಾ 6.51 ಮೀ. ದೂರ ಜಿಗಿದು ಬೆಳ್ಳಿ ಪದಕ ತನ್ನದಾಗಿಸಿಕೊಂಡರು. ಇದು ಭಾರತಕ್ಕೆ ಲಭಿಸಿದ 39ನೇ ಪದಕ.

31. ಚಿನ್ನದ ಕುವರ ನೀರಜ್ ಚೋಪ್ರಾ

31. ಚಿನ್ನದ ಕುವರ ನೀರಜ್ ಚೋಪ್ರಾ

ಪುರುಷರ ವಿಭಾಗದ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ದಾಖಲೆಯೊಂದಿಗೆ ಚಿನ್ನ ಬಾಚಿಕೊಂಡರು. ನೀರಜ್ ಸ್ಪರ್ಧೆಯೊಂದರಲ್ಲಿ ಪಾಲ್ಗೊಳ್ಳುತ್ತಿದ್ದರೆ ಅಲ್ಲಿ ಪದಕ ಗ್ಯಾರಂಟಿ ಅನ್ನೋದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು. ಏಷ್ಯನ್ ಗೇಮ್ಸ್ ಜಾವೆಲಿನ್ ನಲ್ಲಿ ಭಾರತಕ್ಕೆ ಚಿನ್ನ ಗೆದ್ದ ಮೊದಲಿಗ ಹಿರಿಮೆಗೂ ನೀರಜ್ ಪಾತ್ರರಾಗಿದ್ದರು.

32. ಅರ್ಚರಿಯಲ್ಲಿ ಎರಡು ಬೆಳ್ಳಿ

32. ಅರ್ಚರಿಯಲ್ಲಿ ಎರಡು ಬೆಳ್ಳಿ

ಭಾರತದ ಮಹಿಳಾ ಬಿಲ್ಲು ತಂಡ ಆರ್ಚರಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿತ್ತು. ಮಸ್ಕನ್ ಕಿರಾರ್, ಮಧುಮಿತಾ ಮತ್ತು ಜ್ಯೋತಿ ಅವರನ್ನು ಒಳಗೊಂಡ ತಂಡ ಕಾಂಪೌಂಡ್ ವಿಮೆನ್ಸ್ ಆರ್ಚರಿಯಲ್ಲಿ ದಕ್ಷಿಣ ಕೊರಿಯಾ ವಿರುದ್ಧ 228-231 ಸೋಲು ಅನುಭವಿಸಿ ಬೆಳ್ಳಿಗೆ ತೃಪ್ತಿ ಪಟ್ಟಿತ್ತು. ಪುರುಷರ ಕಾಂಪೌಂಡ್ ಆರ್ಚರಿಯಲ್ಲೂ ಭಾರತಕ್ಕೆ ಬೆಳ್ಳಿ ಪದಕ ಒಲಿದಿತ್ತು. ದಕ್ಷಿಣ ಕೊರಿಯಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಶೂಟೌಟ್‌ನಲ್ಲಿ ಸೋಲು ಕಂಡಿತು. ರಜತ್, ಅಭಿಷೇಕ್ ಮತ್ತು ಅಮನ್ ಅವರು ತೀವ್ರ ಪೈಪೋಟಿಯ ನಡುವೆಯೂ ಚಿನ್ನ ಗೆಲ್ಲುವ ಅವಕಾಶವನ್ನು ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡರು.

33. ಸಿಂಧುಗೆ ಐತಿಹಾಸಿಕ ರಜತ

33. ಸಿಂಧುಗೆ ಐತಿಹಾಸಿಕ ರಜತ

ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಪಿ.ವಿ. ಸಿಂಧು ಚೈನೀಸ್ ತೈಪೆಯ ತಾಯ್ ತ್ಸು ಯಿಂಗ್ ವಿರುದ್ಧ ಸೋತು ಬೆಳ್ಳಿ ತನ್ನದಾಗಿಸಿಕೊಂಡಿದ್ದರು. ಆದರೆ 36 ವರ್ಷಗಳ ಬಳಿಕ ಏಷ್ಯನ್ ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ ಲಭಿಸಿದ ಚೊಚ್ಚಲ ಬೆಳ್ಳಿಯಿದು.

34. ಟೇಬಲ್ ಟೆನಿಸ್

34. ಟೇಬಲ್ ಟೆನಿಸ್

ಆಗಸ್ಟ್ 28ರ ಬುಧವಾರ ನಡೆದ ಟೇಬಲ್ ಟೆನಿಸ್ ಮಿಶ್ರ ಡಬಲ್ಸ್ ನಲ್ಲಿ ಭಾರತದ ಅಚಂತ ಶರತ್ ಕಮಲ್-ಮಣಿಕಾ ಬಾತ್ರಾ ಜೋಡಿ ಕಂಚು ಜಯಿಸಿದ್ದರು. ಸೆಮಿ ಫೈನಲ್ ನಲ್ಲಿ ಭಾರತದ ಜೋಡಿ ಚೀನಾ ಜೋಡಿಯ ಎದುರು 1-4ರ ಹಿನ್ನಡೆ ಅನುಭವಿಸಿತು. ಹೀಗಾಗಿ ಕಂಚು ಭಾರತದ ಪಾಲಾಗಿತ್ತು. ಟೇಬಲ್ ಟೆನಿಸ್‌ನಲ್ಲಿ ಭಾರತದ ಪುರುಷರ ತಂಡ ಮೊದಲ ಪದಕ ಜಯಿಸಿತ್ತು. ದಕ್ಷಿಣ ಕೊರಿಯಾ ವಿರುದ್ಧ ನಡೆದ ಸೆಮಿಫೈನಲ್ಸ್‌ನಲ್ಲಿ 0-3 ಅಂತರದಿಂದ ಭಾರತದ ತಂಡ ಸೋಲು ಅನುಭವಿಸಿದ್ದರಿಂದ ಕಂಚು ಭಾರತದ ಪಾಲಾಗಿತ್ತು.

35. ಕುರಷ್ ನಲ್ಲಿ ಬೆಳ್ಳಿ, ಕಂಚು

35. ಕುರಷ್ ನಲ್ಲಿ ಬೆಳ್ಳಿ, ಕಂಚು

ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಕುರಷ್ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳು ಭಾರತದ ಪಾಲಾಗಿವೆ. ಮಹಿಳಾ ವಿಭಾಗದಲ್ಲಿ ಪಿಂಕಿ ಬಲ್ಹರಾ ಭಾರತಕ್ಕೆ ಬೆಳ್ಳಿ ತಂದರೆ, ಕನ್ನಡತಿ ಬೆಳಗಾವಿಯ ಮಲಪ್ರಭಾ ಜಾಧವ್ ಕಂಚಿನ ಪದಕ ಗೆದ್ದಿದ್ದರು.

36. ಮನ್ಜೀತ್, ಜಿನ್ಸನ್ ಮಿಂಚು

36. ಮನ್ಜೀತ್, ಜಿನ್ಸನ್ ಮಿಂಚು

ಈ ಬಾರಿಯ ಏಷ್ಯನ್ ಗೇಮ್ಸ್ ಒಂದರ್ಥದಲ್ಲಿ ಭಾರತದ ಅಥ್ಲೆಟಿಕ್ಸ್ ವಿಭಾಗಕ್ಕೆ ಬಂಗಾರದ ಕ್ರೀಡಾಕೂಟವಾಗಿ ಪರಿಣಮಿಸಿತ್ತು. ಪುರುಷರ 800 ಮೀ. ಓಟದ ಸ್ಪರ್ಧೆಯಲ್ಲಿ ಭಾರತದ ಮನ್ಜೀತ್ ಸಿಂಗ್ ಗೆ ಬಂಗಾರ ಒಲಿದರೆ, ಜಿನ್ಸನ್ ಜಾನ್ಸನ್ ಗೆ ಬೆಳ್ಳಿಯ ಪದಕ ದೊರೆತಿದೆ. ಆದರೆ ಪುರುಷರ 1500 ಮೀ ನಲ್ಲಿ ಜಿನ್ಸನ್ ಗೆ ಬಂಗಾರ, ಮನ್ಜೀತ್ ನಾಲ್ಕನೇ ಸ್ಥಾನಿಗರಾಗಿದ್ದರು.

37. ಮಿಶ್ರ ರಿಲೇ ತಂಡ

37. ಮಿಶ್ರ ರಿಲೇ ತಂಡ

ಏಷ್ಯನ್ ಗೇಮ್ಸ್ ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿದ್ದ 4X400 ಮೀಟರ್ ಮಿಶ್ರ ರಿಲೇ ಸ್ಪರ್ಧೆಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿತು. ಇಬ್ಬರು ಪುರುಷರು ಮತ್ತಿಬ್ಬರು ಮಹಿಳೆಯರನ್ನೊಳಗೊಂಡ ದೇಸಿ ತಂಡ 400 ಮೀಟರನ್ನು ನಾಲ್ಕನೇ ಸುತ್ತಿಗೆ 3:15.71 ಸೆಕೆಂಡ್ ಗಳಲ್ಲಿ ಮುಗಿಸಿ ಬೆಳ್ಳಿ ತನ್ನದಾಗಿಸಿಕೊಂಡಿತು. ಈ ಸ್ಪರ್ಧೆಯನ್ನು 3:11.89 ಸೆಕೆಂಡ್ ಗಳಲ್ಲಿ ಮುಗಿಸಿದ ಬಹ್ರೇನ್ ಚಿನ್ನ ಬಾಚಿಕೊಂಡಿತು.

38. ಅರ್ಪೀಂದರ್ ಸಿಂಗ್

38. ಅರ್ಪೀಂದರ್ ಸಿಂಗ್

ಪುರುಷರ ತ್ರಿವಿಧ ಜಿಗಿತ ಫೈನಲ್ ಸ್ಪರ್ಧೆಯಲ್ಲಿ ಅರ್ಪೀಂದರ್ ಸಿಂಗ್ ಗೆ 16.77 ಮೀ. ದೂರ ಜಿಗಿದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್ ನ ತ್ರಿವಿಧ ಜಿಗಿತದಲ್ಲಿ ಭಾರತ ಚಿನ್ನ ಗೆದ್ದ ಅಪರೂಪದ ಸಾಧನೆಯಿದು.

39. ಸ್ವಪ್ನಾ ಬರ್ಮನ್

39. ಸ್ವಪ್ನಾ ಬರ್ಮನ್

ಮಹಿಳಾ ಹೆಪ್ಟಾಥ್ಲಾನ್ ನಲ್ಲಿ ಭಾರತದ ಸ್ವಪ್ನಾ ಬರ್ಮನ್ ಒಟ್ಟು 6024 ಪಾಯಿಂಟ್ ಗಳನ್ನು ಸಂಪಾದಿಸುವುದರೊಂದಿಗೆ ಚಿನ್ನದ ನಗು ಬೀರಿದ್ದರು. ಹೆಪ್ಟಾಥ್ಲಾನ್ ಎಂದರೆ ಏಳು ಬಗೆಯ ವಿವಿಧ ಈವೆಂಟ್ ಗಳನ್ನೊಳಗೊಂಡ ಕ್ಲಿಷ್ಟಕರ ಸ್ಪರ್ಧೆ.

40. ಸೀಮಾ ಪೂನಿಯಾ

40. ಸೀಮಾ ಪೂನಿಯಾ

ಆಗಸ್ಟ್ 30ರ ಗುರುವಾರ ನಡೆದ ಮಹಿಳಾ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಸೀಮಾ ಪೂನಿಯಾ 62.26 ಮೀ. ಸಾಧನೆಯೊಂದಿಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಇಂಚಿಯಾನ್ ಗೇಮ್ಸ್ ನಲ್ಲಿ ಪೂನಿಯಾ ಬಂಗಾರ ಗೆದ್ದಿದ್ದರು.

41. 1500 ಮೀ.ನಲ್ಲಿ 3 ಪದಕ

41. 1500 ಮೀ.ನಲ್ಲಿ 3 ಪದಕ

ಏಷ್ಯನ್ ಗೇಮ್ಸ್ ಮಹಿಳಾ ವಿಭಾಗದ 1500 ಮೀಟರ್ ಓಟದಲ್ಲಿ ಭಾರತದ ಪಿಯು ಚಿತ್ರಾ ಅವರು ಕಂಚಿನ ಪದಕ ಗೆದ್ದಿದ್ದರು. ಪುರುಷರ ವಿಭಾಗದಲ್ಲಿ ಪುರುಷರ 1500 ಮೀ. ಓಟದಲ್ಲಿ ಜಿನ್ಸನ್ ಜಾನ್ಸನ್ ಚಾಂಪಿಯನ್ ಆಗಿ ಮೂಡಿ ಬಂದರು. ಮತ್ತೊಬ್ಬ ಸ್ಪರ್ಧಿ ಮನ್ಜೀತ್ ಸಿಂಗ್ ನಾಲ್ಕನೇ ಸ್ಥಾನಿಗರಾಗಿ ಓಟ ಮುಗಿಸಿದ್ದರು.

42. ರಿಲೇ ತಂಡಕ್ಕೆ ಬಂಗಾರ, ಬೆಳ್ಳಿ

42. ರಿಲೇ ತಂಡಕ್ಕೆ ಬಂಗಾರ, ಬೆಳ್ಳಿ

ಸ್ಟಾರ್ ಓಟಗಾರ್ತಿ ಹಿಮಾ ದಾಸ್, ಕನ್ನಡತಿ ಎಂಆರ್ ಪೂವಮ್ಮ, ಸರಿತಾ ಬೆನ್ ಗಾಯಕ್ವಾಡ್, ವಿಸ್ಮಯ ಅವರನ್ನೊಳಗೊಂಡ ತಂಡ ಮಹಿಳಾ ವಿಭಾಗದ 4x400 ಮೀ. ರಿಲೇ ಓಟದಲ್ಲಿ ಬಂಗಾರ ತನ್ನದಾಗಿಸಿಕೊಂಡಿತು. ಭಾರತ ತಂಡ 3:28.72 ಸೆಕೆಂಡ್ ಗಳಲ್ಲಿ 400ರ ನಾಲ್ಕು ಸುತ್ತನ್ನು ಮುಗಿಸಿತ್ತು. ಪುರುಷರ ವಿಭಾಗದಲ್ಲಿ ಮೊಹಮ್ಮದ್ ಅನಾಸ್, ಕುನ್ಹು ಮುಹಮ್ಮದ್ ಪುತನ್ಪುಕ್ಕಲ್, ಅರೋಕಿಯ ರಾಜೀವ್ ಮತ್ತು ಧರುಣ್ ಅಯ್ಯಸಾಮಿ ಅವರನ್ನೊಳಗೊಂಡ ತಂಡಕ್ಕೆ ಬೆಳ್ಳಿ ಪದಕ ದೊರೆತಿತ್ತು.

43. ವಿಕಾಸ್ ಕೃಷ್ಣನ್

43. ವಿಕಾಸ್ ಕೃಷ್ಣನ್

ಭಾರತದ ಬಾಕ್ಸರ್ ವಿಕಾಸ್ ಕೃಷ್ಣನ್ ಅವರು ಏಷ್ಯನ್ ಗೇಮ್ಸ್ ಪುರುಷರ ಬಾಕ್ಸಿಂಗ್ ಸೆಮಿಫೈನಲ್ ನಿಂದ ವೈದ್ಯಕೀಯವಾಗಿ ಅನರ್ಹರಾಗಿ (ಮೆಡಿಕಲಿ ಅನ್ ಫಿಟ್) ಪಂದ್ಯದಿಂದ ಹೊರ ನಡೆದರು. ಆದರೆ ಭಾರತದ ಪ್ರತಿಭಾನ್ವಿತ ಬಾಕ್ಸರ್ ಗೆ ಕಂಚಿನ ಗೌರವ ದೊರೆತಿತ್ತು. ಮೂಲವೊಂದರ ಪ್ರಕಾರ ವಿಕಾಸ್ ಅವರು ಮೆಡಿಕಲಿ ಅನ್ ಫಿಟ್ ಎಂದು ಘೋಷಿಸಲು ಕಾರಣ ಎಡಗಣ್ಣು ಗುಡ್ಡೆಯ ಮೇಲಾಗಿದ್ದ ಗಾಯ. ಏಷ್ಯನ್ ಗೇಮ್ಸ್ ನ ಹಿಂದಿನ ಪಂದ್ಯಗಳಲ್ಲಿ ಪಾಲ್ಗೊಳ್ಳುವಾಗ ವಿಕಾಸ್ ಕಣ್ಣಿಗೆ ಗಾಯವಾಗಿತ್ತು.

44. ಸೇಲಿಂಗ್ ನಲ್ಲಿ ಬೆಳ್ಳಿ, 2 ಕಂಚು

44. ಸೇಲಿಂಗ್ ನಲ್ಲಿ ಬೆಳ್ಳಿ, 2 ಕಂಚು

ಸೇಲಿಂಗ್ (ನೌಕಾಯಾನ) ವಿಭಾಗದಲ್ಲಿ ಭಾರತದ ಮಹಿಳೆಯರಿಗೆ ಬೆಳ್ಳಿ ಪದಕ ಲಭಿಸಿತ್ತು. ವರ್ಷಾ ಗೌತಮ್ ಮತ್ತು ಶ್ವೇತಾ ಶೇರ್ವಗರ್ ಬೆಳ್ಳಿಯ ಪದಕ ಜಯಿಸಿದ್ದರು. ಸೇಲಿಂಗ್ ಮಿಶ್ರ ಓಪನ್ ನಲ್ಲಿ ಹರ್ಷಿತಾ ತೋಮರ್ ಭಾರತಕ್ಕೆ ಮತ್ತೊಂದು ಕಂಚಿನ ಪದಕ ಸೇರಿಸಿದ್ದರು. ಜೊತೆಗೆ ವರುಣ್ ಠಾಕರ್ ಮತ್ತು ಗಣಪತಿ ಚೆಂಗಪ್ಪ ಜೋಡಿ ಸೇಲಿಂಗ್ ತಂಡ ವಿಭಾಗದಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡಿತ್ತು.

45. ಪುರುಷರ ಸ್ಕ್ವ್ಯಾಷ್ ತಂಡ

45. ಪುರುಷರ ಸ್ಕ್ವ್ಯಾಷ್ ತಂಡ

ಪುರುಷರ ಸ್ಕ್ವ್ಯಾಷ್ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಭಾರತದ ಪಾಲಾಗಿದೆ. ಶುಕ್ರವಾರ (ಆಗಸ್ಟ್ 31) ನಡೆದ ಸೆಮಿಫೈನಲ್ ನಲ್ಲಿ ಭಾರತ ಹಾಂಕಾಂಗ್ ಎದುರು ಸೋತಿದ್ದರಿಂದ ಕಂಚು ದಕ್ಕಿತ್ತು. ತಂಡದಲ್ಲಿ ಸೌರವ್ ಘೋಷಾಲ್ ಮತ್ತು ಪಾಲ್ ಸಂಧು ಪಾಲ್ಗೊಂಡಿದ್ದರು.

46. ಮಹಿಳಾ ಹಾಕಿ ತಂಡಕ್ಕೆ ಬೆಳ್ಳಿ

46. ಮಹಿಳಾ ಹಾಕಿ ತಂಡಕ್ಕೆ ಬೆಳ್ಳಿ

ಅಗಸ್ಟ್ 31ರ ಶುಕ್ರವಾರ ನಡೆದ ಮಹಿಳಾ ಹಾಕಿ ಫೈನಲ್ ನಲ್ಲಿ ಜಪಾನ್ ಮತ್ತು ಭಾರತ ಮುಖಾಮುಖಿಯಾಗಿದ್ದವು. ಇದರಲ್ಲಿ ಭಾರತ 1-2ರ ಹಿನ್ನಡೆ ಅನುಭವಿಸಿತು. 2014ರ ಇಂಚಿಯಾನ್ ಏಷ್ಯನ್ ಗೇಮ್ಸ್ ಹಾಕಿಯಲ್ಲಿ ಭಾರತಕ್ಕೆ ಕಂಚಿನ ಪದಕ ಲಭಿಸಿತ್ತು.

47. ಅಮಿತ್ ಪಂಘಲ್

47. ಅಮಿತ್ ಪಂಘಲ್

ಬಾಕ್ಸರ್‌ ಅಮಿತ್ ಪಂಘಲ್ ಅವರು ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಪುರುಷರ 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಫೈನಲ್‌ನಲ್ಲಿ ಉಜ್ಬೇಕಿಸ್ತಾನದ ದುಸ್ಮಾಟೋವ್ ಅವರನ್ನು ಸೋಲಿಸಿ ದೇಶಕ್ಕೆ ಬಂಗಾರವನ್ನು ತಂದಿದ್ದರು.

48. ಪ್ರಣಬ್ ಮತ್ತು ಶಿಬ್ನಾತ್

48. ಪ್ರಣಬ್ ಮತ್ತು ಶಿಬ್ನಾತ್

ಸೆಪ್ಟಂಬರ್ 1ರ ಶನಿವಾರ ನಡೆದ ಬ್ರಿಡ್ಜ್ ಪೇರ್ ಫೈನಲ್ ಸ್ಪರ್ಧೆಯಲ್ಲಿ ಬ್ರಿಡ್ಜ್‌ ಸ್ಪರ್ಧೆಯಲ್ಲಿ ಭಾರತದ ಪ್ರಣಬ್ ಬರ್ಧನ್ ಮತ್ತು ಶಿಬ್ನಾತ್ ದೈಶೇಖರ್ ಜೋಡಿ ಚಿನ್ನ ಜಯಿಸಿತ್ತು. ಬ್ರಿಡ್ಜ್‌ ಇದೊಂದು ಇಸ್ಪೀಟ್ ರೀತಿಯ ಟ್ರಿಕ್ಕಿ ಗೇಮ್. 52 ಇಸ್ಪೀಟ್ ಕಾರ್ಡ್ ಗಳನ್ನು ಬಳಸಿ ಆಡುತ್ತಾರೆ. ಆಟದ ಮೂಲ ಮಾದರಿಯಲ್ಲಿ ಇಬ್ಬಿಬ್ಬರು ಜೋಡಿಯಂತೆ ಒಟ್ಟು ನಾಲ್ಕು ಮಂದಿ ಈ ಆಟವನ್ನು ಆಡುತ್ತಾರೆ.

49. ಮಹಿಳಾ ಸ್ಕ್ವ್ಯಾಷ್ ತಂಡಕ್ಕೆ ಬೆಳ್ಳಿ

49. ಮಹಿಳಾ ಸ್ಕ್ವ್ಯಾಷ್ ತಂಡಕ್ಕೆ ಬೆಳ್ಳಿ

ಸ್ಕ್ವ್ಯಾಷ್ ತಂಡ ಫೈನಲ್ ಸ್ಪರ್ಧೆಯಲ್ಲಿ ಭಾರತ, ಹಾಂಕಾಂಗ್ ಎದುರು ಸೋಲುವುದರೊಂದಿಗೆ ಬೆಳ್ಳಿಗೆ ತೃಪ್ತಿಪಟ್ಟಿತು. ಜೋಶ್ನಾ ಚಿನ್ನಪ್ಪ, ಸುನನ್ಯಾ ಕುರುವಿಲ್ಲ ಮತ್ತು ದೀಪಿಕಾ ಪಳ್ಳಿಕಲ್ ಅವರನ್ನು ತಂಡ ಒಳಗೊಂಡಿತ್ತು.

50. ಪುರುಷರ ಹಾಕಿ ತಂಡ

50. ಪುರುಷರ ಹಾಕಿ ತಂಡ

ಏಷ್ಯನ್ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಭಾರತ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ 2-1 ಗೋಲ್ ಗಳಿಂದ ಭಾರತ ಕಂಚು ತನ್ನದಾಗಿಸಿಕೊಂಡಿತು. ಭಾರತದ ಪರ ಆಕಾಶ್ ದೀಪ್ ಸಿಂಗ್ ಮತ್ತು ಹರ್ಮನ್ ಪ್ರೀತ್ ಸಿಂಗ್ ಗೋಲ್ ಸಿಡಿಸಿದ್ದು ಪಾಕಿಸ್ತಾನದ ವಿರುದ್ಧ ಗೆಲುವನ್ನಾಚರಿಸಲು ನೆರವಾಯಿತು.

Story first published: Saturday, September 1, 2018, 18:47 [IST]
Other articles published on Sep 1, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X