ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್: ಟೇಬಲ್‌ ಟೆನ್ನಿಸ್‌ನಲ್ಲಿ ಮೊದಲ ಕಂಚು

Asian Games 2018: indian mens table tennis team won bronze

ಜಕಾರ್ತಾ, ಆಗಸ್ಟ್ 28: ಏಷ್ಯನ್ ಗೇಮ್ಸ್‌ನ ಟೇಬಲ್ ಟೆನ್ನಿಸ್‌ನಲ್ಲಿ ಭಾರತದ ಪುರುಷರ ತಂಡ ಮೊದಲ ಪದಕ ಜಯಿಸಿದೆ.

ದಕ್ಷಿಣ ಕೊರಿಯಾ ವಿರುದ್ಧ ನಡೆದ ಸೆಮಿಫೈನಲ್ಸ್‌ನಲ್ಲಿ 0-3 ಅಂತರದಿಂದ ಭಾರತದ ತಂಡ ಸೋಲು ಅನುಭವಿಸಿತು.

ಸತ್ಯನ್ ಜ್ಞಾನಶೇಖರನ್, ಶರತ್ ಕಮಲ್, ಹರ್ಮೀತ್ ದೇಸಾಯಿ, ಮನ್ ಥಕ್ಕರ್ ಮತ್ತು ಆಂಥೋನಿ ಅಮಲ್ ರಾಜ್ ಅವರನ್ನು ಒಳಗೊಂಡ ತಂಡ ಕಂಚಿನ ಪದಕ ತಂದುಕೊಟ್ಟಿತು.

ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್: ಸಿಂಧು ಚಿನ್ನದ ಕನಸು ಭಗ್ನ ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್: ಸಿಂಧು ಚಿನ್ನದ ಕನಸು ಭಗ್ನ

ಕ್ವಾರ್ಟರ್ ಫೈನಲ್ಸ್‌ನಲ್ಲಿ ಜಪಾನ್ ತಂಡಕ್ಕೆ ಆಘಾತ ನೀಡಿದ್ದ ಭಾರತ, ಸೆಮಿಫೈನಲ್ಸ್ ಪ್ರವೇಶಿಸಿತ್ತು.

ಜಪಾನ್ ವಿರುದ್ಧ ಭಾರತ 1-3ರಿಂದ ಭರ್ಜರಿ ಜಯಗಳಿಸಿತ್ತು. ವಿಶ್ವದ ನಂ 28ನೇ ಶ್ರೇಯಾಂಕದ ಜಿನ್ ಯುಯೆದಾ ಅವರನ್ನು ಭಾರತದ ಸತ್ಯನ್ ಜ್ಞಾನಶೇಖರನ್ ನೇರ ಸೆಟ್‌ಗಳಲ್ಲಿ ಸೋಲಿಸಿ ಭಾರತಕ್ಕೆ ಗೆಲುವಿನ ಹಾದಿ ಹಾಕಿಕೊಟ್ಟಿದ್ದರು.

ಏಷ್ಯನ್ ಗೇಮ್ಸ್: ಪುರುಷರ ಆರ್ಚರಿ ಸ್ಪರ್ಧೆ: ಭಾರತಕ್ಕೆ ಬೆಳ್ಳಿ ಪದಕ ಏಷ್ಯನ್ ಗೇಮ್ಸ್: ಪುರುಷರ ಆರ್ಚರಿ ಸ್ಪರ್ಧೆ: ಭಾರತಕ್ಕೆ ಬೆಳ್ಳಿ ಪದಕ

ಬಳಿಕ ನಡೆದ ಪಂದ್ಯದಲ್ಲಿ ಶರತ್ ಕಮಲ್ ಅವರು ಕೆಂಟಾ ಮತ್ಸುದಾಯಿರಾ ಅವರನ್ನು ನೇರ ಸೆಟ್‌ಗಳಲ್ಲಿ ಮಣಿಸಿದರು.

ಜಪಾನ್‌ನ 57ನೇ ಶ್ರೇಯಾಂಕದ ಮಸಕಿ ಯೋಷಿದಾ ಭಾರತದ ಹರ್ಮೀತ್ ಅವರನ್ನು 9-11, 14-12, 8-11, 11-8, 11-4 ಅಂಕಗಳಿಂದ ಸೋಲಿಸಿ ಜಪಾನ್‌ಗೆ ಒಂದು ಸೆಟ್ ಜಯಿಸಿಕೊಟ್ಟರು.

ಏಷ್ಯನ್ ಗೇಮ್ಸ್: ಆರ್ಚರಿಯಲ್ಲಿ ಬೆಳ್ಳಿ ಗೆದ್ದ ಭಾರತದ ವನಿತೆಯರುಏಷ್ಯನ್ ಗೇಮ್ಸ್: ಆರ್ಚರಿಯಲ್ಲಿ ಬೆಳ್ಳಿ ಗೆದ್ದ ಭಾರತದ ವನಿತೆಯರು

ಆದರೆ, ಸತ್ಯನ್, ಮತ್ಸುದಾಯಿರಾ ಅವರನ್ನು 12-10, 6-11, 11-7, 11-4 ಸೆಟ್‌ಗಳಿಂದ ಮಣಿಸಿ ತಂಡವನ್ನು ಮೊದಲ ಬಾರಿಗೆ ಸೆಮಿಫೈನಲ್‌ಗೆ ಕರೆದೊಯ್ಯುವಲ್ಲಿ ಯಶಸ್ವಿಯಾದರು.

Story first published: Tuesday, August 28, 2018, 14:04 [IST]
Other articles published on Aug 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X