ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸಿಡುಕಿನ ಹುಡುಗಿ ದೀಪಾ ಪದಕ ಗೆದ್ದೇ ಗೆಲ್ಲುತ್ತಾಳೆ: ಕೋಚ್ ಬಿಶ್ವೇಶ್ವರ್

Asian Games: Dipa Karmakars First Target-Final

ನವದೆಹಲಿ, ಆಗಸ್ಟ್ 16: ಝಿದ್, ಗುಸ್ಸಾ. ಮತ್ಲಬ್ ಝಿದ್ ಔರ್ ಗುಸ್ಸಾ ತೊ ಏಕ್ ಹಿ ಚೀಝ್ ಹೋತೀ ಹೆ' (ಮೊಂಡುತನ, ಕೋಪ. ಅಂದರೆ ಮೊಂಡುತನ ಮತ್ತು ಕೋಪ ಎರಡೂ ಒಂದೇ ವಿಚಾರವಾಗುತ್ತದೆ) ಎಂದು ದೀಪಾ ಕರ್ಮಾಕರ್ ಅವರ ಏಷ್ಯಾನ್ ಗೇಮ್ಸ್ ತಯಾರಿ ಬಗ್ಗೆ ಅವರ ಕೋಚ್ ಬಿಶ್ವೇಶ್ವರ್ ನಂದಿ ಪ್ರತಿಕ್ರಿಯಿಸಿದರು.

ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನೈಜೀರಿಯಾ ಆಟಗಾರ ಮೋಸಸ್ ನಿವೃತ್ತಿಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನೈಜೀರಿಯಾ ಆಟಗಾರ ಮೋಸಸ್ ನಿವೃತ್ತಿ

ನಂದಿ ಅವರ ಮಾತಿನ ತಿರುಳಿಷ್ಟೇ, ಸಕಾರಾತ್ಮಕ ಸಿಡುಕಿನ ಹುಡುಗಿ ದೀಪಾ ಏಷ್ಯನ್ ಗೇಮ್ಸ್ ಪದಕ ಗೆಲ್ಲುವ ಛಲದಲ್ಲಿದ್ದಾರೆ. ಮುಂಬರಲಿರುವ ಜಕಾರ್ತಾ ಗೇಮ್ಸ್ ನಲ್ಲಿ ಫೈನಲ್ ಪ್ರವೇಶಿಸುವ ಮೊದಲ ಗುರಿಯನ್ನು ಜಿಮ್ನಾಸ್ಟ್ ಕರ್ಮಾಕರ್ ಇಟ್ಟುಕೊಂಡಿದ್ದಾರೆ.

ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಬಿಶ್ವೇಶ್ವರ್ ಅವರಲ್ಲಿ ದೀಪಾ ಅಭ್ಯಾಸದ ಬಗ್ಗೆ ಮಾತನಾಡಿಸಿದಾಗ ಅವರು, ಇತರ ಜಿಮ್ನಾಸ್ಟ್ ಗಳಿಗೆ ಹೋಲಿಸಿದರೆ ದೀಪಾಳ ಮೇಲೆ ಹೆಚ್ಚು ಭರವಸೆ ಮೂಡುತ್ತದೆ. ಯಾಕೆಂದರೆ ಅವಳೊಬ್ಬಳು ಮೊಂಡುತನದ, ಸಿಡುಕಿನ ಹುಡುಗಿ ಎಂದು ತಣ್ಣಗೆ ಹೇಳಿದರು.

'ಚೀನಾ, ಜಪಾನ್, ಸೌತ್ ಕೊರಿಯಾ, ನಾರ್ತ್ ಕೊರಿಯಾ ಮತ್ತು ಉಜ್ಬೇಕಿಸ್ತಾನ್ ನಂತ ಬಲಾಡ್ಯ ದೇಶಗಳು (ಮುಖ್ಯವಾಗಿ ಜಿಮ್ನಾಸ್ಟಿಕ್ ನಲ್ಲಿ) ಸ್ಪರ್ಧಿಸುವುದರಿಂದ ಏಷ್ಯನ್ ಗೇಮ್ಸ್ ನಮಗೊಂದುರೀತಿಯಲ್ಲಿ ಎರಡನೇ ಒಲಿಂಪಿಕ್ಸ್ ಇದ್ದಂತೆ. ಹಾಗಂತ ನಾವು ಬಿಟ್ಟುಕೊಡುವಂತಿಲ್ಲ, ಇದನ್ನು ನಾವು ಸವಾಲಾಗಿ ಸ್ವೀಕರಿಸಿದ್ದೇವೆ' ಎಂದು ನಂದಿ ಭರವಸೆ ವ್ಯಕ್ತಪಡಿಸಿದ್ದಾರೆ.

Story first published: Thursday, August 16, 2018, 13:19 [IST]
Other articles published on Aug 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X