ಪಿಟಿ ಉಷಾ ದಾಖಲೆ ಮುರಿದ ನಮ್ಮ ಶರತ್

By Mahesh

ಬೆಂಗಳೂರು, ಅ.27: ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಬೆಂಗಳೂರು ಮೂಲದ ವಿಕಲ ಚೇತನ ಈಜುಗಾರ ಶರತ್ ಗಾಯಕ್ವಾಡ್ ಆರು ಪದಕ ಗೆಲ್ಲುವ ಮೂಲಕ ಖ್ಯಾತ ಓಟಗಾರ್ತಿ ಪಿಟಿ ಉಷಾ ಅವರ ದಾಖಲೆ ಮುರಿದಿದ್ದಾರೆ.

ಪಯೋಲಿ ಎಕ್ಸ್ ಪ್ರೆಸ್ ಓಟದ ರಾಣಿ ಪಿಟಿ ಉಷಾ ಅವರು 1986ರ ಏಷ್ಯಾ ಕ್ರೀಡಾಕೂಟದಲ್ಲಿ ಐದು ಪದಕ ಗೆದ್ದು ಹೊಸ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ವಿಕಲಚೇತನ ಕ್ರೀಡಾಪಟು ಶರತ್ ಅವರು ಆರು ಪದಕ ಗೆಲ್ಲುವ ಮೂಲಕ ಮುರಿದಿದ್ದಾರೆ. [ಪಿಟಿ ಉಷಾಗೆ ಬಸವಶ್ರೀ ಪ್ರಶಸ್ತಿ]

ಶರತ್ ಅವರು 200 ಮೀ ದೂರದ ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು 100 ಮೀ ಬಟರ್ ಫ್ಲೈ, 100ಮೀ ಬ್ರೆಸ್ಟ್ ಸ್ಟ್ರೋಕ್, 100ಮೀ ಬ್ಯಾಕ್ ಸ್ಟ್ರೋಕ್ ಹಾಗೂ 50 ಮೀ ಫ್ರೀ ಸ್ಟೈಲ್ ನಲ್ಲಿ ಕಂಚು ಗೆದ್ದಿದ್ದಾರೆ ಜೊತೆಗೆ ತಮ್ಮ ತಂಡದ ಪ್ರಸನ್ನ ಕರ್ಮಾಕರ್, ಸ್ವಪ್ನಿಲ್ ಪಾಟೀಲ್, ನಿರಂಜನ್ ಮುಕುಂದನ್ ಜೊತೆಗೂಡಿ 4X100 ಮೆಡ್ಲೆ ರಿಲೇಯಲ್ಲಿ ಕಂಚಿನ ಪದಕ ಸೇರಿದಂತೆ ಒಟ್ಟಾರೆ 6 ಪದಕ ಕೊರಳಿಗೇರಿಸಿಕೊಂಡಿದ್ದಾರೆ. [ದೇಶದ ಗೌರವ ಹೆಚ್ಚಿಸಿದವರ ಜೊತೆ ಮೋದಿ]

ತಮ್ಮ ಈ ಸಾಧನೆಗೆ ಪೋಷಕರು ಸತತ ಆರು ತಿಂಗಳ ಪರಿಶ್ರಮ ಕಾರಣ ಎಂದಿದ್ದಾರೆ. ಮುಖ್ಯವಾಗಿ ಕೋಚ್ ಜಾನ್(ಕ್ರಿಸ್ಟೋಫರ್) ಅವರ ಮಾರ್ಗದರ್ಶನ ನೆರವಾಯಿತು. ಗೋ ಸ್ಫೋರ್ಟ್ಸ್ ಫೌಂಡೇಷನ್ ಅಗತ್ಯ ನೆರವು ನೀಡಿತು ಎಂದಿದ್ದಾರೆ.

ಶರತ್ ಅವರು ಕತ್ತಿನ ಭಾಗದಲ್ಲಿ ಗಂಭೀರ ಗಾಯವಾಗಿದ್ದರೂ ದೇಶಕ್ಕಾಗಿ ದೈಹಿಕ ನೋವು ಲೆಕ್ಕಿಸದೆ ಸ್ಪರ್ಧಿಸಿ ಪದಕ ಗೆದ್ದಿರುವುದು ಹೆಮ್ಮೆಯ ವಿಚಾರ. ಈತನ ಸಾಧನೆ ಇತರರಿಗೆ ಮಾದರಿ ಎಂದಿದ್ದಾರೆ. ಟೂರ್ನಿಯಲ್ಲಿ ನಾಲ್ಕನೇ ಸ್ಥಾನ ಪಡೆದ ಮತ್ತೊಬ್ಬ ಈಜುಪಟು ನಿರಂಜನ್ ಮುಕುಂದನ್ ಸಾಧನೆಯನ್ನು ಪ್ರಶಂಸಿಸಿದ್ದಾರೆ. (ಪಿಟಿಐ)

For Quick Alerts
ALLOW NOTIFICATIONS
For Daily Alerts
Story first published: Monday, October 27, 2014, 18:57 [IST]
Other articles published on Oct 27, 2014
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X