ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಕಂಚಿಗೆ ವಿನೇಶ್‌ ಫೋಗಾಟ್‌ ತೃಪ್ತಿ

Asian Wrestling Championships: Vinesh Phogat settles for bronze

ಕ್ಸಿಯಾನ್‌ (ಚೀನಾ), ಏಪ್ರಿಲ್‌ 26: ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ವಿನೇಶ್‌ ಫೋಗಾಟ್‌, ಇಲ್ಲಿ ನಡೆಯುತ್ತಿರುವ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

 ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಬಜರಂಗ್‌, ಸಾಕ್ಷಿಗೆ ಭಾರತದ ಸಾರಥ್ಯ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಬಜರಂಗ್‌, ಸಾಕ್ಷಿಗೆ ಭಾರತದ ಸಾರಥ್ಯ

ಈ ಮೊದಲು 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ 24 ವರ್ಷದ ಚಾಂಪಿಯನ್‌ ಕುಸ್ತಿಪಟು ವಿನೇಶ್‌, ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಕಳೆದ ವರ್ಷ ಜಕಾರ್ತದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಮಹಿಳೆಯರ 50 ಕೆಜಿ ವಿಭಾಗದಲ್ಲಿ ವಿನೇಶ್‌ ಸ್ವರ್ಣ ಸಾಧನೆ ಮಾಡಿದ್ದರು.

ಶೂಟಿಂಗ್‌: ದಿವ್ಯಾನ್ಷ್‌ ಸಿಂಗ್‌ ಪನ್ವರ್‌ಗೆ ಒಲಿಂಪಿಕ್‌ ಟಿಕೆಟ್‌ಶೂಟಿಂಗ್‌: ದಿವ್ಯಾನ್ಷ್‌ ಸಿಂಗ್‌ ಪನ್ವರ್‌ಗೆ ಒಲಿಂಪಿಕ್‌ ಟಿಕೆಟ್‌

ಆದರೆ, ಏಷ್ಯನ್‌ ಚಾಂಪಿಯನ್‌ಷಿಪ್‌ನ 53 ಕೆಜಿ ವಿಭಾಗದಲ್ಲಿ ಅಂಥದ್ದೇ ಪ್ರದರ್ಶನ ನೀಡಲು ವಿನೇಶ್‌ ವಿಫಲರಾಗಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 50 ಕೆಜಿ ವಿಭಾಗವನ್ನು ತೆಗೆದು ಹಾಕಿರುವ ಕಾರಣ ವಿನೇಶ್‌ 53 ಕೆಜಿ ವಿಭಾಗದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಇತ್ತೀಚೆಗೆ ಬಲ್ಗೇರಿಯಾದಲ್ಲಿ ನಡೆದ ಡ್ಯಾನ್‌ ಕೊಲೊವ್‌ ನಿಕೊಲಾ ಪೆಟ್ರೋವ್‌ ಕುಸ್ತಿ ಚಾಂಪಿಯನ್‌ಷಿಪ್‌ನ 53 ಕೆಜಿ ವಿಭಾಗದಲ್ಲಿ ವಿನೇಶ್‌ ಬೆಳ್ಳಿ ಗೆದ್ದಿದ್ದರು.

 ನೆಝಾದ್ ಸೋಲಿಸಿ ಏಷ್ಯನ್ ಸ್ನೂಕರ್ ಟೂರ್ ಪ್ರಶಸ್ತಿ ಜಯಿಸಿದ ಪಂಕಜ್ ಆಡ್ವಾಣಿ ನೆಝಾದ್ ಸೋಲಿಸಿ ಏಷ್ಯನ್ ಸ್ನೂಕರ್ ಟೂರ್ ಪ್ರಶಸ್ತಿ ಜಯಿಸಿದ ಪಂಕಜ್ ಆಡ್ವಾಣಿ

ಇನ್ನು ಏಷ್ಯನ್‌ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲೇ ನಿರಾಸೆ ಅನುಭವಿಸಿದ ವಿನೇಶ್‌, ಜಪಾನ್‌ನ ಎದುರಾಳಿ ಮಾಯು ಮುಕಾದಿಯಾ ಎದುರು ಸೋಲನುಭವಿಸಿದರು. ಅರ್ಹತಾ ಸುತ್ತಿನಿಂದ ಪ್ರಧಾನ ಸುತ್ತು ತಲುಪಿದ್ದ ಜಪಾನ್‌ನ ಕುಸ್ತಿಪಟು ವಿನೇಶ್‌ ಎದುರು 10-0 ಅಂಕಗಳ ತಾಂತ್ರಿಕ ಮೇಲುಗೈನೊಂದಿಗೆ ಅಧಿಕಾರಯುತ ಜಯ ದಕ್ಕಿಸಿಕೊಂಡಿದ್ದರು.

 ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಅಮಿತ್‌ಗೆ ಬೆಳ್ಳಿ, ರಾಹುಲ್‌ಗೆ ಕಂಚು ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಅಮಿತ್‌ಗೆ ಬೆಳ್ಳಿ, ರಾಹುಲ್‌ಗೆ ಕಂಚು

ಬಳಿಕ ಮಾಯು ಮುಕಾದಿಯಾ ಫೈನಲ್‌ ಪ್ರವೇಶಿಸಿದರಿಂದ ರೆಪೆಚೇಜ್‌ ಮೂಲಕ ಕಂಚಿನ ಪದಕಕ್ಕಾಗಿ ಸೆಣಸುವ ಅವಕಾಶ ವಿನೇಶ್‌ಗೆ ಲಭ್ಯವಾಯಿತು. ಭಾರತೀಯ ರೆಸ್ಲರ್‌ ಮೊದಲಿಗೆ 6-0 ಅಂಕಗಳಿಂದ ತೈಪೆಯ ಜೋ ಚಿನ್‌ ಚಿಯೂ ವಿರುದ್ಧ ಜಯ ದಾಖಲಿಸಿ, ನಂತರದ ಚೀನಾದ ಕಿಯಾನ್ಯು ಪ್ಯಾಂಗ್‌ ಅವರನ್ನು 8-1 ಅಂಕಗಳಿಂದ ಮಣಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

 ಏಷ್ಯನ್‌ ಅಥ್ಲೆಟಿಕ್ಸ್‌: ಶಾಟ್‌ ಪುಟ್‌ನಲ್ಲಿ ತೂರ್‌ಗೆ ಚಿನ್ನ ಏಷ್ಯನ್‌ ಅಥ್ಲೆಟಿಕ್ಸ್‌: ಶಾಟ್‌ ಪುಟ್‌ನಲ್ಲಿ ತೂರ್‌ಗೆ ಚಿನ್ನ

ಇದೇ ವೇಳೆ ಮಹಿಳೆಯರ 72 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್ಸ್‌ನಲ್ಲಿ ಭಾರತದ ಕಿರಣ್‌ 4-7 ಅಂಕಗಳ ಅಂತರದಲ್ಲಿ ಕಜಕಸ್ತಾನದ ಬಾಕ್‌ಬ್ರೆಗ್ನೊವಾ ವಿರುದ್ಧ ಸೋತು ಸ್ಪರ್ಧೆಯಿಂದ ನಿರ್ಗಮಿಸಿದ್ದಾರೆ.

Story first published: Friday, April 26, 2019, 18:51 [IST]
Other articles published on Apr 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X