ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಡಿಎಸ್‌ಪಿ ಹುದ್ದೆಗೆ ನೇಮಕವಾದ ಭಾರತದ ಅಥ್ಲೆಟಿಕ್ ತಾರೆ ಹಿಮಾದಾಸ್

Athlete Hima Das appointed Deputy Superintendent of Police in Assam

ಭಾರತದ ಆಥ್ಲೆಟಿಕ್ ತಾರೆ ಹಿಮಾದಾಸ್ ಅವರನ್ನು ಅಸ್ಸಾಂ ಸರ್ಕಾರ ಉಪ ಪೋಲೀಸ್ ವರಿಷ್ಠಾಧಿಕಾರಿಯನ್ನಾಗಿ ಶುಕ್ರವಾರ ನೇಮಕ ಮಾಡಿದೆ. ಈ ತಿಂಗಳ ಆರಂಭದಲ್ಲಿ ಹಿಮಾದಾಸ್ ಅವರನ್ನು DSP ಆಗಿ ನೇಮಕ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಹೀಗಾಗಿ ಇಂದು ಹಿಮಾದಾಸ್‌ಗೆ ಅಧಿಕೃತವಾಗಿ ನೇಮಕಗೊಳಿಸಿದೆ.

ಅಸ್ಸಾಂ ಪೊಲೀಸ್‌ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಇದರಲ್ಲಿ ಅಸ್ಸಾಂ ಪೊಲೀಸ್‌ನ ಡಿಜಿಪಿ ಆಗಿರುವ ಭಾಸ್ಕರ್ ಜ್ಯೋತಿ ಮಹಾಂತ ಹೀಮಾದಾಸ್ ಅವರನ್ನು ಗೌರವಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಸ್ಸಾಂ ಮುಖ್ಯ ಮಂತ್ರಿ ಸರ್ಬಾನಂದ ಸೋನೋವಾಲ್ ಕೂಡ ಹಾಜರಿದ್ದರು.

ಟೀಮ್ ಇಂಡಿಯಾದ ಆಲ್‌ರೌಂಡರ್ ಯೂಸುಫ್ ಪಠಾಣ್ ನಿವೃತ್ತಿ ಘೋಷಣೆಟೀಮ್ ಇಂಡಿಯಾದ ಆಲ್‌ರೌಂಡರ್ ಯೂಸುಫ್ ಪಠಾಣ್ ನಿವೃತ್ತಿ ಘೋಷಣೆ

ಈ ಬಗ್ಗೆ ಅಸ್ಸಾಂ ಸಿಎಂ ಟ್ವೀಟ್ ಮಾಡಿದ್ದು, "ಇದು ರಾಜ್ಯಕ್ಕೆ ಮತ್ತು ಹಿಮಾದಾಸ್ ಅವರಿಗೆ ಹೆಮ್ಮೆಯ ದಿನವಾಗಿದೆ. ಹಿಮಾ ದಾಸ್ ಅವರ ನೇಮಕವು ದೇಶದ ಯುವಜನರಿಗೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ಉತ್ತೇಜನ ನೀಡುತ್ತದೆ" ಎಂದು ಹೇಳಿದ್ದಾರೆ.

ಮಾಜಿ ಕೇಂದ್ರ ಕ್ರೀಡಾ ಸಚಿವರೂ ಆಗಿರುವ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ "ಯುವ ಪೀಳಿಗೆಗೆ ಕ್ರೀಡೆಗಳನ್ನು ಭರವಸೆಯ ವೃತ್ತಿಜೀವನವನ್ನಾಗಿ ಮಾಡಲು ರಾಜ್ಯ ಸರ್ಕಾರ ಸಮಗ್ರ ಕ್ರೀಡಾ ನೀತಿಯನ್ನು ಅಳವಡಿಸಿಕೊಂಡಿದೆ. ರಾಜ್ಯ ಸರ್ಕಾರವು ಸ್ಪ್ರಿಂಟರ್ ಹಿಮಾ ದಾಸ್ ಅವರನ್ನು ಅಸ್ಸಾಂ ಪೊಲೀಸರಲ್ಲಿ ಡಿಎಸ್ಪಿಯಾಗಿ ನೇಮಕ ಮಾಡಿದೆ, ಏಕೆಂದರೆ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾ ರಂಗದಲ್ಲಿ ತಮ್ಮ ಸಾಧನೆಗಳಿಂದ ರಾಜ್ಯವನ್ನು ಹೆಮ್ಮೆಪಡುತ್ತಾರೆ" ಎಂದು ಅವರು ಹೇಳಿದರು.

ಪಿಚ್ ಚೆನ್ನಾಗಿತ್ತು, ಬ್ಯಾಟಿಂಗ್‌ ಗುಣಮಟ್ಟ ಚೆನ್ನಾಗಿರಲಿಲ್ಲ: ವಿರಾಟ್ ಕೊಹ್ಲಿಪಿಚ್ ಚೆನ್ನಾಗಿತ್ತು, ಬ್ಯಾಟಿಂಗ್‌ ಗುಣಮಟ್ಟ ಚೆನ್ನಾಗಿರಲಿಲ್ಲ: ವಿರಾಟ್ ಕೊಹ್ಲಿ

ಇನ್ನು ಈ ಬಗ್ಗೆ ಹಿಮಾದಾಸ್ ಕೂಡ ಟ್ವಿಟ್ಟರ್ ಖಾತೆಯಲ್ಲಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ. "ನನ್ನ ಜೀವನದ ಅತ್ಯಂತ ದೊಡ್ಡ ಕನಸೊಂದು ಇಂದು ನನಸಾಗೊರುವುದಕ್ಕೆ ನಾನು ತುಂಬಾ ಸಂತಸಗೊಂಡಿದ್ದೇನೆ. ಅಸ್ಸಾಂ ಪೋಲೀಸ್‌ನಲ್ಲಿ ಡಿಎಸ್‌ಪಿ ಆಗಿರಲು ನಾನು ಹೆಮ್ಮೆ ಪಡುತ್ತೇನೆ. ಈ ಗೌರವವನ್ನು ನಾನು ಹೆಮ್ಮೆಯಿಂದಲೇ ಸ್ವೀಕರಿಸುತ್ತೇನೆ" ಎಂದು ಟ್ವಿಟ್‌ ಮೂಲಕ ತಿಳಿಸಿದ್ದಾರೆ.

Story first published: Saturday, February 27, 2021, 7:41 [IST]
Other articles published on Feb 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X