ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

2022 ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್: ರಾಜತಾಂತ್ರಿಕ ಬಹಿಷ್ಕಾರಕ್ಕೆ ಆಸ್ಟ್ರೇಲಿಯಾ ನಿರ್ಧಾರ

Australia PM Announced diplomatic boycott to Beijing Winter Olympics

ಚೀನಾದಲ್ಲಿ ಮುಂದಿನ ಫೆಬ್ರವರಿಯಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್ ಈಗ ವಿಶ್ವಮಟ್ಟದ ರಾಜಕಾರಣದ ಕೇಂದ್ರಬಿಂದುವಾಗಿದೆ. ಈ ಕ್ರೀಡಾಕೂಟಕ್ಕೆ ಅಮೆಲರಿಕಾ ರಾಜತಾಂತ್ರಿಕ ಬಹಿಷ್ಕಾರ ಹಾಕಿದ ಬೆನ್ನಲ್ಲೇ ಆಸ್ಟ್ರೇಲಿಯಾ ಕೂಡ ಅದೇ ಹಾದಿ ಹಿಡಿದಿದೆ. ಈ ಬಗ್ಗೆ ಆಸ್ಟ್ರೇಲಿಯಾದ ಪ್ರಧಾನ ಸ್ಕಾಟ್ ಮಾರಿಸನ್ ಮಾಹಿತಿ ನೀಡಿದ್ದು ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ಆಸ್ಟ್ರೇಲಿಯಾ ಅಧಿಕಾರಿಗಳನ್ನು ಕಳುಹಿಸುವುದಿಲ್ಲ ಎಂದಿದ್ದಾರೆ. ಈ ಮೂಲಕ ಯುಎಸ್‌ಎ ನಿರ್ಧಾರಕ್ಕೆ ಆಸ್ಟ್ರೇಲಿಯಾ ಕೂಡ ಸಾಥ್ ನೀಡಿದೆ.

ಕೊರೊನಾವೈರಸ್ ಜಾಗತಿಕ ಮಟ್ಟದಲ್ಲಿ ಆಘಾತ ನೀಡಲು ಆರಂಭಿಸಿದ ಬಳಿಕ ಆಸ್ಟ್ರೇಲಿಯಾ ಹಾಗೂ ಚೀನಾ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ. ಇತ್ತೀಚೆಗೆ ಅದು ಮತ್ತಷ್ಟು ಹಾಳಾಗಿದೆ. ಈ ಹಿನ್ನೆಲೆಯಲ್ಲಿ ಚೀನಾದಲ್ಲಿ ಮುಂದಿನ ಫೆಬ್ರವರಿಯಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ನಿಂದ ರಾಜತಾಂತ್ರಿಕ ಬಹಿಷ್ಕಾರ ಹಾಕಲು ನಿರ್ಧರಿಸಿರುವುದಾಗಿ ಆಸ್ಟ್ರೇಲಿಯಾ ಪ್ರಧಾನಿ ತಿಳಿಸಿದ್ದಾರೆ.

ಆದರೆ ಆಸ್ಟ್ರೇಲಿಯಾದ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂಬುದಾಗಿಯೂ ಆಸ್ಟ್ರೇಲಿಯಾ ಪ್ರಧಾನಿ ತಿಳಿಸಿದ್ದಾರೆ. "ನಾವು ರಾಜತಾಂತ್ರಿಕ ಬಹಿಷ್ಕಾರವನ್ನು ಮಾತ್ರವೇ ಹೇರುತ್ತಿದ್ದೇವೆ, ಆಸ್ಟ್ರೇಲಿಯಾ ಒಂದು ಕ್ರೀಡಾದೇಶವಾಗಿರುವ ಕಾರಣ ಇಲ್ಲಿನ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಖಂಡಿತವಾಗಿಯೂ ಭಾಗವಹಿಸಲಿದ್ದಾರೆ. ನಾನು ಕ್ರೀಡೆ ಹಾಗೂ ರಾಜಕೀಯ ಸಮಸ್ಯೆಯನ್ನು ಪ್ರತ್ಯೇಕವಾಗಿ ನೋಡಲು ಬಯಸುತ್ತೇನೆ. ಇದು ಎರಡು ಸರ್ಕಾರಗಳ ನಡುವಿನ ಸಮಸ್ಯೆಯಾಗಿದ್ದು ಅವುಗಳ ಪರಿಹಾರಕ್ಕೆ ನಾನು ಬಯಸುತ್ತೇನೆ" ಎಂದು ಸ್ಕಾಟ್ ಮಾರಿಸನ್ ಹೇಳಿದ್ದಾರೆ.

ಇನ್ನು ಆಸ್ಟ್ರೇಲಿಯಾ ಸರ್ಕಾರದ ಈ ನಿರ್ಧಾರಕ್ಕೆ ಆಸ್ಟ್ರೇಲಿಯಾ ಒಲಿಂಪಿಕ್ಸ್ ಸಮಿತಿ ಪ್ರತಿಕ್ರಿಯಿಸಿದೆ. "ಸರ್ಕಾರದ ನಿರ್ಧಾರವನ್ನು AOC ಗೌರವಿಸುತ್ತದೆ. ಈ ನಿರ್ಧಾರದಿಂದಾಗಿ ಆಸ್ಟ್ರೇಲಿಯಾ ಕ್ರೀಡಾಪಟುಗಳ ಸಿದ್ಧತೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕೋವಿಡ್ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸುರಕ್ಷಿತವಾಗಿ ಚೀನಾಗೆ ಕ್ರೀಡಾಪಟುಗಳನ್ನು ಕಳುಹಿಸಿಕೊಡುವತ್ತ ಎಒಸಿ ಗಮನಹರಿಸಲಿದೆ" ಎಂದು ತಿಳಿಸಿದೆ.

"ಆಸ್ಟ್ರೇಲಿಯಾದ ಕ್ರೀಡಾಪಟುಗಳನ್ನು ಚೀನಾಗೆ ಸುರಕ್ಷಿತವಾಗಿ ಕಳುಹಿಸುವುದು, ಸುರಕ್ಷಿತವಾಗಿ ಕ್ರೀಡಾಕೂಟದಲ್ಲಿ ಸ್ಪರ್ಧಿಸುವುದು ಹಾಗೂ ಸುರಕ್ಷಿತವಾಗಿ ವಾಪಾಸ್ ಕರೆತರುವುದು ಈಗ ನಮ್ಮ ಮುಂದಿರುವ ದೊಡ್ಡ ಸವಾಲು" ಎಂದು ಆಸ್ಟ್ರೇಲಿಯಾ ಒಲಿಂಪಿಕ್ಸ್ ಸಮಿತಿ ಮಾಹಿತಿ ನೀಡಿದೆ.

ಚೀನಾದ ಕ್ಸಿಜಿಯಾಂಗ್ ಪ್ರಾಂತ್ಯದಲ್ಲಿ ಉಗರ್ ಮುಸ್ಲಿಮರ ಮೇಲೆ ಚೀನಾ ನಡೆಸುತ್ತಿರುವ ಹಾಗೂ ದಬ್ಬಾಳಿಕೆ ಹಾಗೂ ದೌರ್ಜನ್ಯಗಳು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಕಾರಣಗಳಿಂದಾಗಿ ನಾವು ಚೀನಾದ ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ನಾವು ಬಹಿಷ್ಕಾರ ಹಾಕುವುದಾಗಿ ಅಮೆರಿಕಾ ತಿಳಿಸಿತ್ತು. ರಾಜತಾಂತ್ರಿಕ ಬಹಿಷ್ಕಾರದ ನಿರ್ಧಾರವನ್ನು ತಿಳಿಸುವ ಸಂದರ್ಭದಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಮಾರಿಸನ್ ಕೂಡ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಉಗರ್ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯುವಂತೆ ಆಸ್ಟ್ರೇಲಿಯಾ ಸರ್ಕಾರ ಒತ್ತಾಯಿಸಿದರೂ ಈ ಬಗ್ಗೆ ಚೀನಾ ಕ್ರಮವನ್ನು ಕೈಗೊಳ್ಳಲಿಲ್ಲ. ಆಸ್ಟ್ರೇಲಿಯಾ ಸರ್ಕಾರದ ಈ ರಾಜತಾಂತ್ರಿಕ ಬಹಿಷ್ಕಾರಕ್ಕೆ ಇದು ಕೂಡ ಒಂದು ಕಾರಣವಾಗಿದೆ ಎಂದು ಸ್ಕಾಟ್ ಮಾರಿಸನ್ ತಿಳಿಸಿದ್ದಾರೆ.

Story first published: Wednesday, December 8, 2021, 11:08 [IST]
Other articles published on Dec 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X