ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಬಜರಂಗ್‌, ಸಾಕ್ಷಿಗೆ ಭಾರತದ ಸಾರಥ್ಯ

Bajrang, Sakshi to lead Indias challenge at Asian Wrestling Cships

ಕ್ಸಿನಾ (ಚೀನಾ), ಏಪ್ರಿಲ್‌ 23: ಭಾರತದ ಸ್ಟಾರ್‌ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್‌ ಮತ್ತು ವಿಶ್ವದ ನಂ.1 ಕುಸ್ತಿಪಟು ಬಜರಂಗ್‌ ಫೂನಿಯಾ, ಇಂದಿನಿಂದ ಆರಂಭವಾಗಲಿರುವ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸಾರಥ್ಯ ವಹಿಸಲಿದ್ದಾರೆ.

ಸಾಕ್ಷಿ ಹೊರತಾಗಿ ಬಜರಂಗ್‌ ಹೊರತಾಗಿ ಪ್ರತಿಭಾನ್ವಿತ ಕುಸ್ತಿಪಟು ವಿನೇಶ್‌ ಫೋಗಟ್‌ ಕೂಡ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಭರವಸೆಯಾಗಿದ್ದಾರೆ. ಮಹಿಳೆಯರ 53 ಕೆಜಿ ವಿಭಾಗದಲ್ಲಿ ಪದಕ ಗೆಲ್ಲುವ ವಿಶ್ವಾಸದಲ್ಲಿರುವ ವಿನೇಶ್‌, ಇದೇ ಮೊದಲ ಬಾರಿ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಈ ತೂಕ ವಿಭಾಗದಲ್ಲಿ ಕಣಕ್ಕಿಳಿಯುತ್ತಿದ್ದಾರೆ.

ಇದಕ್ಕೂ ಮೊದಲು ಬಲ್ಗೇರಿಯಾದಲ್ಲಿ ನಡೆದ ಡ್ಯಾನ್‌ ಕೊಲೊವ್‌-ನಿಕೊಲಾ ಪೆಟ್ರೋವ್‌ ಕುಸ್ತಿ ಟೂರ್ನಿಯಲ್ಲಿ 53 ಕೆಜಿ ವಿಭಾಗದಲ್ಲಿ ಸ್ಪರ್ಧೆಗಿಳಿದಿದ್ದ ವಿನೇಶ್‌ ಬೆಳ್ಳಿ ಪದಕ ಗೆದ್ದಿದ್ದರು. ಇದೇ ಟೂರ್ನಿಯ ಪುರುಷರ 65ಕೆಜಿ ವಿಭಾಗದಲ್ಲಿ ಬಜರಂಗ್‌ ಸ್ವರ್ಣ ಸಾಧನೆ ಮೆರೆದಿದ್ದರು. ಇನ್ನು ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಮಲಿಕ್‌ ಬೆಳ್ಳಿಗೆ ಕೊರಳೊಡ್ಡಿದ್ದರು.

62ಕೆಜಿ ವಿಭಾಗದಲ್ಲಿ ಸಾಕ್ಷಿ ಕಣ್ಕಕೆ

62ಕೆಜಿ ವಿಭಾಗದಲ್ಲಿ ಸಾಕ್ಷಿ ಕಣ್ಕಕೆ

ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಸಾಕ್ಷಿ 62 ಕೆಜಿ ವಿಭಾಗದಲ್ಲಿ, ನವಜೋತ್‌ ಕೌರ್‌ 65ಕೆಜಿ ವಿಭಾಗದಲ್ಲಿ, ಪೂಜಾ ದಂಡಾ 57ಕೆಜಿ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಸಾಧನೆ ಮೆರೆದ ದಿವ್ಯಾ ಕಾಕ್ರನ್‌ ಗಾಯದ ಸಮಸ್ಯೆಯಿಂದ ಚೇತರಿಸಿದ್ದು 68 ಕೆಜಿ ವಿಭಾಗದಲ್ಲಿ ಸ್ಪರ್ಧೆಗಿಳಿಯಲಿದ್ದಾರೆ.

 ಪುರುಷರ ಫ್ರೀಸ್ಟೈಲ್‌ ವಿಭಾಗ

ಪುರುಷರ ಫ್ರೀಸ್ಟೈಲ್‌ ವಿಭಾಗ

ರವಿ ಕುಮಾರ್‌ (57 ಕೆಜಿ), ರಾಹುಲ್‌ ಆವರೆ (61 ಕೆಜಿ), ಬಜರಂಗ್‌ ಪೂನಿಯಾ (65 ಕೆಜಿ), ರಜನೀಶ್‌ (70 ಕೆಜಿ), ಅಮಿತ್‌ ಧಾಂಕರ್‌ (74 ಕೆಜಿ), ಪ್ರವೀಣ್‌ ರಾಣಾ (79 ಕೆಜಿ), ದೀಪಕ್‌ ಪೂನಿಯಾ (86 ಕೆಜಿ), ವಿಕಿ (92 ಕೆಜಿ), ಸತ್ಯವ್ರತ್‌ ಕದಿಯಾನ್‌ (97 ಕೆಜಿ), ಸುಮಿತ್‌ (125 ಕೆಜಿ).

ಮಹಿಳಾ ಫ್ರೀಸ್ಟೈಲ್‌ ವಿಭಾಗ

ಮಹಿಳಾ ಫ್ರೀಸ್ಟೈಲ್‌ ವಿಭಾಗ

ಸೀಮಾ (50 ಕೆಜಿ), ವಿನೇಶ್‌ ಫೋಗಟ್‌ (53 ಕೆಜಿ), ಲಲಿತ್‌ ಸೆಹ್ರಾವತ್‌ (55 ಕೆಜಿ), ಪೂಜಾ ಧಂಡಾ (57 ಕೆಜಿ), ಮಂಜು (59 ಕೆಜಿ), ಸಾಕ್ಷಿ ಮಲಿಕ್‌ (62 ಕೆಜಿ), ನವಜೋತ್‌ ಕೌರ್‌ (65 ಕೆಜಿ), ದಿವ್ಯಾ ಕಾಕ್ರನ್‌ (68 ಕೆಜಿ), ಕಿರಣ್‌ (72 ಕೆಜಿ), ಪೂಜಾ (76 ಕೆಜಿ).

ಗ್ರೀಕೋ ರೋಮನ್‌ ಸ್ಟೈಲ್‌

ಗ್ರೀಕೋ ರೋಮನ್‌ ಸ್ಟೈಲ್‌

ಮಂಜೀತ್‌ (55 ಕೆಜಿ), ಗ್ಯಾನೇಂದರ್‌ (60 ಕೆಜಿ), ವಿಕ್ರಮ್‌ ಕುಮಾರ್‌ (63 ಕೆಜಿ), ರವಿಂದರ್‌ (67 ಕೆಜಿ), ಯೋಗೇಶ್‌ (72ಕೆಜಿ), ಗುರುಪ್ರೀತ್‌ ಸಿಂಗ್‌ (77 ಕೆಜಿ), ಹರಪ್ರೀತ್‌ ಸಿಂಗ್‌ (82 ಕೆಜಿ), ಸುನಿಲ್‌ ಕುಮಾರ್‌ (87 ಕೆಜಿ), ಹರದೀಪ್‌ ಸಿಂಗ್‌ (97 ಕೆಜಿ), ಪ್ರೇಮ್‌ ಕುಮಾರ್‌ (130 ಕೆಜಿ).

Story first published: Tuesday, April 23, 2019, 10:48 [IST]
Other articles published on Apr 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X