ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹೆಲಿಕಾಪ್ಟರ್ ಅಪಘಾತ: ಬಾಸ್ಕೆಟ್‌ಬಾಲ್ ದಂತಕಥೆ ಬ್ರ್ಯಾಂಟ್ ದುರ್ಮರಣ

ಬಾಸ್ಕೆಟ್‌ಬಾಲ್ ದಂತಕಥೆ ಬ್ರ್ಯಾಂಟ್ ದುರ್ಮರಣ | Oneindia Kannada
 Basketball Legend Kobe Bryant Died In Helicopter Crash

ಕ್ಯಾಲಿಫೋರ್ನಿಯಾ, ಜನವರಿ 27: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಬಾಸ್ಕೆಟ್ ಬಾಲ್ ಕ್ರೀಡೆಯ ದಂತಕಥೆ ಕೋಬ್ ಬ್ರ್ಯಾಂಟ್ ಮತ್ತು ಅವರ ಮಗಳು ಗಿಯಾನ್ನಾ ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ.

ಕ್ಯಾಲಿಫೋರ್ನಿಯಾದ ಕಾಲಬಾಸಾಸ್ ಎಂಬ ಬೆಟ್ಟಕ್ಕೆ ಭಾನುವಾರ ಬೆಳಿಗ್ಗೆ ಹೆಲಿಕಾಪ್ಟರ್ ಅಪ್ಪಳಿಸಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಬಾಸ್ಕೆಟ್‌ಬಾಲ್ ಲೋಕದ ದಿಗ್ಗಜ ಬ್ರ್ಯಾಂಟ್ (41) ಮತ್ತು ಅವರ 13 ವರ್ಷದ ಮಗಳು ಗಿಯಾನ್ನಾ ಮಾರಿಯಾ ಒನೋರ್ ಬ್ರ್ಯಾಂಟ್ ಜೀವ ಕಳೆದುಕೊಂಡಿದ್ದಾರೆ.

ಇಬ್ಬರೂ ಭಾನುವಾರ ತೌಂಸಾಂಡ್ ಓಕಾಸ್‌ನ ಮಂಬಾ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಬೇಕಿದ್ದ ಬಾಸ್ಕೆಟ್‌ಬಾಲ್ ಪಂದ್ಯವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಈ ಪಂದ್ಯದಲ್ಲಿ ಗಿಯಾನ್ನಾ ಆಡಬೇಕಿತ್ತು. ಮಗಳು ಆಡುತ್ತಿದ್ದ ತಂಡಕ್ಕೆ ಬ್ರ್ಯಾಂಟ್ ತರಬೇತುದಾರರಾಗಿ ಭಾಗವಹಿಸಬೇಕಿತ್ತು.

ಅಪಘಾತದಿಂದ ಕಾಳ್ಗಿಚ್ಚು

ಅಪಘಾತದಿಂದ ಕಾಳ್ಗಿಚ್ಚು

ಲಾಸ್ ಏಂಜಲಿಸ್‌ನ ಸುಮಾರು 30 ಮೈಲು ದೂರದ ವಾಯವ್ಯ ಪಟ್ಟಣದ ಸಮೀಪ ಈ ಹೆಲಿಕಾಪ್ಟರ್ ಅಪಘಾತ ಸಂಭವಿಸಿದ್ದು, ಇದರಿಂದ ಬೆಂಕಿ ಹತ್ತಿಕೊಂಡು ಕಾಳ್ಗಿಚ್ಚಿಗೆ ಕಾರಣವಾಗಿದೆ ಎಂದು ಲಾಸ್ ಏಂಜಲಿಸ್ ಕೌಂಟಿಯ ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ. ಪೈಲಟ್ ಸೇರಿದಂತೆ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲಾ ಒಂಬತ್ತು ಮಂದಿ ಬಲಿಯಾಗಿದ್ದಾರೆ.

ಕೋಚ್, ಪತ್ನಿ, ಮಗಳು ಸಾವು

ಕೋಚ್, ಪತ್ನಿ, ಮಗಳು ಸಾವು

ಆರೇಂಜ್ ಕೋಸ್ಟ್ ಕಾಲೇಜ್ ಬಾಸ್ಕೆಟ್ ಬಾಲ್ ತರಬೇತುದಾರ ಜಾನ್ ಅಲ್ಟೋಬೆಲ್, ಅವರ ಮಗಳು ಅಲಿಸ್ಸಾ ಮತ್ತು ಪತ್ನಿ ಕೇರಿ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಲಿಸ್ಸಾ ಮತ್ತು ಗಿಯಾನ್ನಾ ಒಂದೇ ತಂಡದಲ್ಲಿ ಆಡುತ್ತಿದ್ದರು ಎಂದು ಜಾನ್ ಅಲ್ಟೋಬೆಲ್ ಸಹೋದರ ಟೋನಿ ಅಲ್ಟೋಬೆಲ್ ತಿಳಿಸಿದ್ದಾರೆ.

ಬೆಟ್ಟಕ್ಕೆ ಅಪ್ಪಳಿಸಿದ ಹೆಲಿಕಾಪ್ಟರ್

ಬೆಟ್ಟಕ್ಕೆ ಅಪ್ಪಳಿಸಿದ ಹೆಲಿಕಾಪ್ಟರ್

ಹೆಲಿಕಾಪ್ಟರ್ ದುರಂತಕ್ಕೆ ನೈಜ ಕಾರಣ ಇನ್ನೂ ತಿಳಿದುಬಂದಿಲ್ಲ. ಮಧ್ಯಮ ವೇಗದಲ್ಲಿ ಹಾರುತ್ತಿದ್ದ ಹೆಲಿಕಾಪ್ಟರ್, ಇದ್ದಕ್ಕಿದ್ದಂತೆ ಕೆಳಗೆ ಬಂದು ಬೆಟ್ಟಕ್ಕೆ ಅಪ್ಪಳಿಸಿದ್ದನ್ನು ಕೆಲವರು ನೋಡಿದ್ದಾರೆ. ಈ ಹೆಲಿಕಾಪ್ಟರ್‌ಅನ್ನು 1991ರಲ್ಲಿ ನಿರ್ಮಿಸಲಾಗಿತ್ತು. ಹಳೆಯದಾಗಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷಗಳಿಂದ ಈ ಅಪಘಾತ ಉಂಟಾಗಿರಬಹುದು ಎನ್ನಲಾಗಿದೆ.

ಅತಿ ಕಿರಿಯ ಎನ್‌ಬಿಎ ಕ್ರೀಡಾಪಟು

ಅತಿ ಕಿರಿಯ ಎನ್‌ಬಿಎ ಕ್ರೀಡಾಪಟು

ಫಿಲಡೆಲ್ಫಿಯಾದಲ್ಲಿ ಜನಿಸಿದ್ದ ಬ್ರ್ಯಾಂಟ್, ಮೂರನೇ ವರ್ಷದವರಾಗಿದ್ದಾಗಿನಿಂದಲೇ ಬಾಸ್ಕೆಟ್‌ಬಾಲ್ ಆಡಲು ಪ್ರಾರಂಭಿಸಿದ್ದರು. ಬಳಿಕ ಪ್ರತಿಷ್ಠಿತ ಎನ್‌ಬಿಎ (ನ್ಯಾಷನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಷನ್) ಮಹಾನ್ ಚಾಂಪಿಯನ್‌ಗಳಲ್ಲಿ ಒಬ್ಬರೆಂಬ ಕೀರ್ತಿ ಪಡೆದರು. 1996ರಲ್ಲಿ ಎನ್‌ಬಿಎ ಸೇರಿದಾಗ ಅವರಿಗೆ 18 ವರ್ಷ, 2 ತಿಂಗಳು ಮತ್ತು 11 ದಿನ. ಎನ್‌ಬಿಎ ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಅವರದು.

ಐದು ಬಾರಿ ಚಾಂಪಿಯನ್

ಐದು ಬಾರಿ ಚಾಂಪಿಯನ್

ಲಾಸ್ ಏಂಜಲಿಸ್ ಲೇಕರ್ಸ್ ತಂಡದಲ್ಲಿ ತಮ್ಮ ಸಂಪೂರ್ಣ ವೃತ್ತಿ ಬದುಕನ್ನು ಕಳೆದ ಅವರು, ಐದು ಬಾರಿ ಎನ್‌ಬಿಎ ಚಾಂಪಿಯನ್ ಆಗಿದ್ದರು. ಪುರುಷರ ಬಾಸ್ಕೆಟ್‌ಬಾಲ್‌ನಲ್ಲಿ ಎರಡು ಬಾರಿ ಒಲಿಂಪಿಕ್ ಚಿನ್ನದ ಪದಕ ಪಡೆದಿದ್ದರು. ತಮ್ಮ ಕೊನೆಯ ಪಂದ್ಯದಲ್ಲಿ 60 ಅಂಕಗಳನ್ನು ಗಳಿಸಿದ್ದ ಅವರು 2016ರ ಏಪ್ರಿಲ್‌ನಲ್ಲಿ ನಿವೃತ್ತರಾಗಿದ್ದರು. 'ಯಾವಾಗ ವಿದಾಯ ಹೇಳಬೇಕು ಎನ್ನುವುದು ದೇಹಕ್ಕೆ ತಿಳಿದಿದೆ' ಎಂಬುದಾಗಿ ನಿವೃತ್ತಿ ವೇಳೆ ಅವರು ಹೇಳಿದ್ದರು. ಆದರೆ ಅವರು ಯಾರಿಗೂ ಸೂಚನೆ ನೀಡದೆಯೇ ಬದುಕಿಗೂ ವಿದಾಯ ಹೇಳಿದ್ದಾರೆ.

Story first published: Monday, January 27, 2020, 7:30 [IST]
Other articles published on Jan 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X