ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಿಂದ 27 ಮಂದಿಗೆ ಕೊರೊನಾ: ಬೆಂಗಳೂರಿಗೆ ಮತ್ತೊಮ್ಮೆ ಕೋವಿಡ್ ಆತಂಕ

Because of a Badminton Tournament 27 people are infected in Bengaluru

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಬ್ಯಾಡ್ಮಿಂಟನ್ ಟೂರ್ನಿಯೊಂದು ಇಡೀ ರಾಜಧಾನಿಯಲ್ಲಿ ಕೊರೊನಾವೈರಸ್‌ನ ಆತಂಕಕ್ಕೆ ಕಾರಣವಾಗಿದೆ. ಅಪಾರ್ಟ್‌ಮೆಂಟ್‌ವೊಂದರಲ್ಲಿ ಆಯೋಜಿಸಿದ್ದ ಈ ಟೂರ್ನಮೆಂಟ್‌ನಿಂದ ಕೊರೊನಾವೈರಸ್ ಹರಡಿದೆ ಎನ್ನಲಾಗಿದ್ದು ಈ ಟೂರ್ನಿಯಲ್ಲಿ ಭಾಗಿಯಾಗಿದ್ದ ಸುಮಾರು 27 ಮಂದಿಗೆ ಕೊರೊನಾವೈರಸ್ ದೃಢಪಟ್ಟಿದೆ. ಈಗ ಈ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ಅನ್ನು ಕೋವಿಡ್ ಕ್ಲಸ್ಟರ್ ಎಂದು ಘೋಷಿಸಲಾಗಿದೆ.

ಆರಂಭದಲ್ಲಿ ಕೆಲ ಪ್ರಕರಣಗಳು ಪತ್ತೆಯಾದ ಬಳಿಕ ಆರೋಗ್ಯಾಧಿಕಾರಿಗಳು ಈ ಟೂರ್ನಿಯಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುವ ನಿರ್ಧಾರವನ್ನು ಮಾಡಿದರು. ಹೀಗಾಗಿ ಈ ಪರೀಕ್ಷೆಯಲ್ಲಿ ಟೂರ್ನಮೆಂಟ್‌ನಲ್ಲಿ ಭಾಗಿಯಾಗಿದ್ದ ಸುಮಾರು 27 ಮಂದಿಗೆ ಕೊರೊನಾವೈರಸ್ ದೃಢಪಟ್ಟಿದೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಅಪಾರ್ಟ್‌ಮೆಂಟ್‌ನ 14 ಮನೆಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿದ್ದು ಮೂರು ಮಹಡಿಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ಧೋನಿ ದಾಖಲೆ ಮುರಿದ ರಿಷಭ್ ಪಂತ್: ವೇಗವಾಗಿ 100 ವಿಕೆಟ್ ಬಲಿ ಪಡೆದ ಭಾರತದ ವಿಕೆಟ್ ಕೀಪರ್ಧೋನಿ ದಾಖಲೆ ಮುರಿದ ರಿಷಭ್ ಪಂತ್: ವೇಗವಾಗಿ 100 ವಿಕೆಟ್ ಬಲಿ ಪಡೆದ ಭಾರತದ ವಿಕೆಟ್ ಕೀಪರ್

ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಬಾಲಸುಂದರ್ ನೀಡಿದ ಮಾಹಿತಿಯ ಪ್ರಕಾರ ಎರಡು ಟವರ್‌ಗಳ ಈ ಅಪಾರ್ಟ್‌ಮೆಂಟ್‌ನ ಮಹಡಿಗಳಲ್ಲಿ ವಾಸವಿರುವವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸ್ಥಳೀಯಾಡಳಿತ ಈಗ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಕ್ರಮಗಳನ್ನು ಕೂಡ ಕೈಗೊಂಡಿದೆ ಎಂದಿದ್ದಾರೆ.

ಇದೇಡಿಸೆಂಬರ್ 19 ರಂದು ಈ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಬ್ಯಾಡ್ಮಿಂಟನ್ ಟೂರ್ನಿಯೊಂದನ್ನು ಆಯೋಜನೆ ಮಾಡಿದ್ದರು. ಇದಾದ ಎರಡ್ಮೂರು ದಿನಗಳ ನಂತರ ಅಪಾರ್ಟ್​ಮೆಂಟ್​ನ ಕೆಲ ನಿವಾಸಿಗಳಲ್ಲಿ ಕೋವಿಡ್ ಸೋಂಕಿನ ಲಕ್ಷಣಗಳು ಕಾಣಿಸಿದ್ದು ಅವರು ಸ್ವಯಂಪ್ರೇರಿತವಾಗಿ ಪರೀಕ್ಷೆಗೆ ಒಳಪಟ್ಟಿದ್ದರು. ಈ ಸಂದರ್ಭದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಬಳಿಕ ಟೂರ್ನಮೆಂಟ್​ನಲ್ಲಿ ಭಾಗವಹಿಸಿದವರನ್ನು ಟೆಸ್ಟ್ ಮಾಡಲಾಗಿದೆ. ಒಟ್ಟು 27 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇನ್ನು ಆರೋಗ್ಯಾಧಿಕಾರಿಗಳು ನೀಡುವ ಮಾಹಿತಿಯ ಪ್ರಕಾರ ಎಲ್ಲರ ಟ್ರಾವೆಲ್ ಹಿಸ್ಟರಿಯನ್ನು ಪತ್ತೆಹಚ್ಚಲಾಗುತ್ತಿದ್ದು ಕೆಲ ನಿವಾಸಿಗಳು ಟ್ರಾವೆಲ್ ಹಿಸ್ಟರಿಯನ್ನು ಹೊಂದಿದ್ದಾರೆ. ಆದರೆ ಯಾರು ಕೂಡ ಹೈ ರಿಸ್ಕ್ ದೇಶಗಳಿಂದ ಪ್ರಯಾಣಿಸಿದ ಟ್ರಾವೆಲ್ ಹಿಸ್ಟರಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಂಗ್ಲೆಂಡ್‌ಗೆ ಹೀನಾಯ ಸೋಲು: ''ತುಂಬಾ ಮುಜುಗರ ಆಗಿದೆ'' ಎಂದ ಮೈಕಲ್ ವಾನ್!ಇಂಗ್ಲೆಂಡ್‌ಗೆ ಹೀನಾಯ ಸೋಲು: ''ತುಂಬಾ ಮುಜುಗರ ಆಗಿದೆ'' ಎಂದ ಮೈಕಲ್ ವಾನ್!

ವಿಶ್ವಾದ್ಯಂತ ಒಮಿಕ್ರಾನ್ ರೂಪಾಂತರಿಯ ಹಾವಳಿ ಹೆಚ್ಚಾಗಿದ್ದು ಭಾರತದಲ್ಲಿಯೂ ಮೂರನೇ ಅಲೆಯ ಆತಂಕ ಮನೆಮಾಡಿದೆ. ಈ ಆತಂಕದಲ್ಲಿ ಮಧ್ಯೆಯೇ ದೆಹಲಿ ಹಾಗೂ ಮುಂಬೈ ನಗರಗಳಲ್ಲಿ ಮಂಗಳವಾರ ಭಾರೀ ಪ್ರಮಾಣದಲ್ಲಿ ಕೊರೊನಾಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಇಂತಾ ಸಂದರ್ಭದಲ್ಲಿ ಬೆಂಗಳೂರಿನಲ್ಲಿಯೂ ಮತ್ತೊಮ್ಮೆ ಕೊರೊನಾವೈರಸ್ ಅಟ್ಟಹಾಸಗೈಯುವ ಆತಂಕ ಮೂಡಿಸಿದೆ. ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮಂಗಳವಾರದಿಂದ ನೈಟ್ ಕರ್ಫ್ಯೂ ಹೇರಲಾಗಿದೆ.

Story first published: Thursday, December 30, 2021, 9:31 [IST]
Other articles published on Dec 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X