ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನಲ್ಲಿ ಮತ್ತೆ ವಿಶ್ವ ದರ್ಜೆ ಗಾಲ್ಫ್ ಟೇಕ್ ಸಲ್ಯೂಷನ್ಸ್ ಮಾಸ್ಟರ್ಸ್

By Mahesh
Bengaluru: golf tournament Asian Tour event Take Solutions Masters

ಬೆಂಗಳೂರು, ಜುಲೈ 06: ಕಳೆದ ವರ್ಷದ ಉದ್ಘಾಟನಾ ಟೇಕ್ ಸಲ್ಯೂಷನ್ಸ್ ಮಾಸ್ಟರ್ಸ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಇದೀಗ 350,000 ಅಮೆರಿಕನ್ ಡಾಲರ್ ಪ್ರಶಸ್ತಿ ಮೊತ್ತ ಹೆಚ್ಚಳದೊಂದಿಗೆ ಮತ್ತೆ ಪ್ರಸಕ್ತ ವರ್ಷ ಆಗಸ್ಟ್ 9ರಿಂದ 12ರವರೆಗೆ ಬೆಂಗಳೂರಿನ ಕರ್ನಾಟಕ ಗಾಲ್ಫ್ ಸಂಸ್ಥೆಯಲ್ಲಿ ಟೇಕ್ ಸಲ್ಯೂಷನ್ಸ್ ಮಾಸ್ಟರ್ಸ್ ನಡೆಯಲಿದೆ.

ಏಷ್ಯನ್ ಟೂರ್‌ನ ಅತ್ಯಾಕರ್ಷಕ ಮತ್ತು ಇಂಡಿಯನ್ ಗಾಲ್ಫ್‌ನ ಪ್ರತಿಭಾನ್ವಿತ ಗಾಲ್ಫರ್‌ಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಟೂರ್ನಿಯನ್ನು ಬಹಳ ರೋಮಾಂಚನಗೊಳಿಸುತ್ತಿದೆ.

ಆರು ಬಾರಿಯ ಏಷ್ಯನ್ ಟೂರ್ ಮತ್ತು ನಾಲ್ಕು ಬಾರಿಯ ಯುರೋಪಿಯನ್ ಟೂರ್ ವಿಜೇತ ಎಸ್‌ಎಸ್‌ಪಿ ಚವ್ರಾಸಿಯಾ, ಖಾಲಿನ್ ಜೋಶಿಯೊಂದಿಗೆ ಟೇಕ್ ರಾಯಭಾರಿ ಯಾಗಿದ್ದಾರೆ, ಕಳೆದ ವರ್ಷ ತವರಿನಲ್ಲಿ ನಡೆದ ಟೂರ್ನಿಯಲ್ಲಿ ಭಾರತೀಯರ ಪೈಕಿ ಅಗ್ರಸ್ಥಾನ ಗಳಿಸಿದ್ದ ಮತ್ತು 2015 ರ ಪ್ಯಾನಾಸಾನಿಕ್ ಓಪನ್ ಇಂಡಿಯಾ ವಿಜೇತ ಚಿರಾಗ್ ಕುಮಾರ್‌ರವರು ಎಸ್.ಚಿಕ್ಕರಂಗಪ್ಪ ಅವರೊಂದಿಗೆ ಸೇರಿಕೊಳ್ಳಲಿದ್ದಾರೆ.

ಏಷ್ಯನ್ ಟೂರ್‌ನ ಪ್ರತಿಭಾನ್ವಿತ ಸ್ಟಾರ್‌ಗಳೊಂದಿಗೆ ಭಾರತದ ಅಸಾಧಾರಣ ಪ್ರತಿಭೆಗಳು, ಟೇಕ್ ಸಲ್ಯೂಷನ್ಸ್ ಮಾಸ್ಟರ್ಸ್‌ನಲ್ಲಿ ಪಾಲ್ಗೊಳ್ಳಲು ಸಜ್ಜುಗೊಂಡಿದ್ದಾರೆ.

ಭಾರತೀಯ ವೃತ್ತಿಪರ ಗಾಲ್ಫ್ ಟೂರ್‌ನ ಅಗ್ರಾಮಾನ್ಯ ಆಟಗಾರರಿಗೆ ಈ ಟೂರ್ನಿ ವಿಶ್ವ ದರ್ಜೆ ಫೀಲ್ಡ್ ವಿರುದ್ಧದ ಪರೀಕ್ಷೆಗೆ ಸೂಕ್ತ ವೇದಿಕೆ ಎನಿಸಿದೆ. ಏಷ್ಯನ್ ಟೂರ್ ಮತ್ತು ಪಿಜಿಟಿಐ ಸಹ ಅನುಮೋದನೆ ಪಡೆದಿರುವ ಈ ಟೂರ್ನಿಯನ್ನು ಏಷ್ಯನ್ ಟೂರ್ ಹ್ಯಾಬಿಟೆಟ್ ಆಗಿ ಹ್ಯುಮಾನಿಟಿ ಸ್ಟ್ಯಾಂಡಿಗ್ ಮತ್ತು ಪಿಜಿಟಿಐ ಆರ್ಡರ್ ಆಫ್ ಮೆರಿಟ್‌ಗೆ ಪರಿಗಣಿಸಲಾಗುತ್ತದೆ. ಇದಲ್ಲದೆ ಅಧಿಕೃತ ವಿಶ್ವ ಗಾಲ್ಫ್ ರ್‍ಯಾಂಕಿಂಗ್‌ಗೆ ಈ ಟೂರ್ನಿಯ ಅಂಕಗಳನ್ನು ಪರಿಗಣಿಸಲಾಗುತ್ತದೆ.

ಥಾಯ್ಲೆಂಡ್‌ನ ಉದಯೋನ್ಮುಖ ಸ್ಟಾರ್ ಗಾಲ್ಫರ್ ಪೂಮ್ ಸಕ್ಸನ್ಸಿನ್ ಕಳೆದ ವರ್ಷ ನಡೆದ ಟೇಕ್ ಸಲ್ಯೂಷನ್ಸ್ ಮಾಸ್ಟರ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.

ಜತೆಗೆ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಭಾರತೀಯರ ನಾಲ್ಕು ವರ್ಷಗಳ ಪ್ರಾಬಲ್ಯವನ್ನು ಮೆಟ್ಟಿನಿಂತಿದ್ದರು. ಈ ವರ್ಷದ ವಿಜೇತರ ರಾಷ್ಟ್ರೀಯತೆ ಏನೇ ಇರಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದಿಟ್ಟ ಸವಾಲು ಒಡ್ಡಲಿದ್ದು, ನಾಲ್ಕು ದಿನಗಳ ಉನ್ನತಮಟ್ಟದ ಗಾಲ್ಫ್ ಟೂರ್ನಿಗೆ ಇದು ವೇದಿಕೆ ಕಲ್ಪಿಸಲಿದೆ.

ಟೇಕ್ ಸಲ್ಯೂಷನ್ಸ್ ಜಾಗತಿಕವಾಗಿ ಮಾನ್ಯತೆ ಪಡೆದಿದ್ದು, ಜಾಗತಿಕ ಭೂಪಟದಲ್ಲಿ ಭಾರತದ ಗಾಲ್ಫ್ ಮತ್ತು ಆಟಗಾರರನ್ನು ಪ್ರಚಾರ ಮಾಡುವ ಬದ್ಧತೆಯನ್ನು ಹೊಂದಿದೆ. ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಟಗಾರರಿಗೆ ಉತ್ತಮ ಮೂಲಭೂತ ಸೌಕರ್ಯ ಮತ್ತು ಅತ್ಯುತ್ತಮ ಆಟದ ಅವಕಾಶಗಳನ್ನು ಸೃಷ್ಟಿಸಲು ಮುಂದಿನ 15 ವರ್ಷಗಳಿಗೆ ಗಾಲ್ಫ್ ಜತೆ ಟೇಕ್ ಸಲ್ಯೂಷನ್ಸ್ ಒಪ್ಪಂದ ಮಾಡಿಕೊಂಡಿದೆ.

ಈ ಕುರಿತು ಪ್ರತಿಕ್ರಿಯಿಸಿದ ಟೇಕ್ ಸಲ್ಯೂಷನ್ಸ್‌ನ ಉಪ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ಎಚ್.ಆರ್, ಅಂತಾರಾಷ್ಟ್ರೀಯ ಅವಕಾಶಗಳನ್ನು ಪಡೆದುಕೊಳ್ಳಲು ಭಾರತದ ಗಾಲ್ಫ್‌ನ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ನಾವು ಎಲ್ಲಾ ಅವಕಾಶಗಳನ್ನು ಪಡೆಯಲು ಬದ್ಧವಾಗಿದ್ದೇವೆ ಮತ್ತು ಇಂಥ ಸಾಧನೆ ಮಾಡಲು ಟೇಕ್ ಸಲ್ಯೂಷನ್ಸ್ ಅತ್ಯಾದ್ಭುತ ಮಾರ್ಗವಾಗಿದೆ.

ಕಳೆದ ವರ್ಷದ ಟೂರ್ನಿ ಯಶಸ್ಸಿನಿಂದ ಬಹುಮಾನ ಮೊತ್ತ ಹೆಚ್ಚಳದೊಂದಿಗೆ ಮತ್ತೆ ಬೆಂಗಳೂರಿಗೆ ಆಗಮಿಸಿದೆ," ಎಂದರು.

ಏಷ್ಯನ್ ಟೂರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೊ ಮಿನ್ ಥಾಂಟ್, ಭಾರತ ಮತ್ತು ದೇಶದ ಎಲ್ಲಡೆ ಈ ಕ್ರೀಡೆಯ ಬೆಳವಣಿಗೆಗಿನ ನಿಮ್ಮ ದೃಷ್ಟಿಕೋನಕ್ಕೆ ಟೇಕ್ ಸಲ್ಯೂಷನ್ಸ್‌ಗೆ ನಾವು ಅಭಿನಂದನೆ ಹೇಳಲು ಬಯಸುತ್ತೇವೆ.ಇದೊಂದು ಅತ್ಯಾದ್ಭುತ ವರದಿಯಾಗಿದೆ. ಜತೆಗೆ ಈ ವರ್ಷದ ಟೂರ್ನಿಯಲ್ಲಿ ಬಹುಮಾನ ಮೊತ್ತವನ್ನು ಕಳೆದ ವರ್ಷ ನೀಡಲಾಗಿದ್ದ 300,000 ಅಮೆರಿಕನ್ ಡಾಲರ್ ಮೊತ್ತಕ್ಕಿಂತ ಈ ಬಾರಿ 350,000 ಅಮೆರಿಕನ್ ಡಾಲರ್ ಗೆ ಹೆಚ್ಚಿಸಲಾಗಿದೆ," ಎಂದರು.

ಏಷ್ಯನ್ ಟೂರ್ ಮತ್ತು ಏಷ್ಯಾದಲ್ಲಿ ಗಾಲ್ಫ್ ಅಭಿವೃದ್ಧಿಗೆ ತಮ್ಮ ಬೆಂಬಲ ಮುಂದುವರಿಸಿರುವ ಎಚ್.ಆರ್. ಶ್ರೀನಿವಾಸನ್‌ಗೆ ನಿಜವಾಗಿಯೂ ನಾವು ಅಭಿನಂದನೆ ಸಲ್ಲಿಸಬೇಕಿದೆ. ಇದರಿಂದ ಮತ್ತಷ್ಟು ಭಾರತೀಯ ಆಟಗಾರರನ್ನು ಏಷ್ಯನ್ ಟೂರ್ ನಲ್ಲಿ ಕಾಣಲು ಅವಕಾಶ ದೊರೆಯಲಿದೆ.

ಶುಭಾಂಕರ್ ಶರ್ಮಾ, ಗಗನ್ ಜೀತ್ ಭುಲ್ಲಾರ್ ,ಅಜೀತೇಶ್ ಸಂಧು, ಎಸ್.ಎಸ್.ಪಿ. ಚವ್ರಾಸಿಯಾ ಮತ್ತು ಶಿವ್ ಕಪೂರ್ ಸೇರಿದಂತೆ ಎಲ್ಲರು ಟೂರ್ ಪ್ರಶಸ್ತಿಯನ್ನು ಕಳೆದ ವರ್ಷ ಗೆದ್ದುಕೊಂಡಿದ್ದಾರೆ. ಇದು ನಿಜವಾಗಿಯೂ ಗಾಲ್ಫ್ ಬದ್ಧತೆಯನ್ನು ತೆಗೆದುಕೊಳ್ಳಲು ಪೂರಾವೆ ಎನಿಸಿದೆ," ಎಂದು ಥಾಂಟ್ ಅಭಿಪ್ರಾಯಪಟ್ಟರು.

ಪಿಜಿಟಿಐನ ಮುಖ್ಯ ಸಿಇಒ ಉತ್ತಮ್ ಸಿಂಗ್ ಮುಂಡೆ, ಟೇಕ್ ಸಲ್ಯೂಷನ್ಸ್ ಮಾಸ್ಟರ್ಸ್ ನಮ್ಮ ಭಾರತದ ಆಟಗಾರರಿಗೆ ಏಷ್ಯದ ಅತ್ಯುತ್ತಮ ಮತ್ತು ಅನಭವಿಗಳೊಂದಿಗೆ ಸ್ಪರ್ಧಿಸುವ ಉತ್ತಮ ಅವಕಾಶ ಕಲ್ಪಿಸಿದೆ. ನಿಜವಾಗಿಯೂ ಇದು ವಿಶ್ವ ದರ್ಜೆಯ ಟೂರ್ನಿಯಾಗಿದ್ದು, ದೇಶದ ಶ್ರೇಷ್ಠ ಗಾಲ್ಫ್ ಟೂರ್ನಿಗಳಲ್ಲಿ ಇದು ಸಹ ಒಂದಾಗಿದೆ," ಎಂದು ಹೇಳಿದರು.

ಕಳೆದ ವರ್ಷ ಟೂರ್ನಿ ಯಶಸ್ವಿಯಾಗಲು ಶ್ರಮಿಸಿದ್ದ ಹಾಗೂ ಮುಂಬರುವ ವರ್ಷಗಳಲ್ಲಿ ಏಷ್ಯನ್ ಟೂರ್ನಿಯಲ್ಲಿಯೇ ಇದನ್ನು ಮುಂಚೂಣಿ ಟೂರ್ನಿಯಾಗಿ ಅಭಿವೃದ್ಧಿಪಡಿಸಲು ಎಲ್ಲಾ ಪಾಲುದಾರರನ್ನು ಎದುರು ನೋಡುತ್ತಿರುವ ಕ್ರೀಡಾ ಈವೆಂಟ್ಸ್ ಈ ಟೂರ್ನಿಯ ಪ್ರಚಾರ ಮತ್ತು ನಿರ್ವಹಣೆ ಮಾಡುತ್ತಿದೆ.

ಕರ್ನಾಟಕದಲ್ಲಿ ಈ ಬಾರಿ ಗಾಲ್ಫ್ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದ್ದು, ಬೆಂಗಳೂರಿನ ಕೆಜಿಎ ಕೋರ್ಸ್‌ನಲ್ಲಿ ನಡೆಯಲಿರುವ ವಿಶ್ವ ದರ್ಜೆಯ ಗಾಲ್ಫ್ ವೀಕ್ಷಿಸಲು ಮತ್ತಷ್ಟು ಪ್ರೇಕ್ಷಕರನ್ನು ಸೆಳೆಯಲು ಹೆಚ್ಚಿನ ಆದ್ಯತೆ ನೀಡಲಾಗಿದೆ.

Story first published: Friday, July 6, 2018, 20:53 [IST]
Other articles published on Jul 6, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X