ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬೆಂಗಳೂರು ಮ್ಯಾರಥಾನ್: ಬಿಜಯ್ ದೇಕಾ, ಲಕ್ಷ್ಮೀ ಚಾಂಪಿಯನ್

Bengaluru Marathon: Bijay and Lakshmi were the fastest Man and Woman

ಬೆಂಗಳೂರು, ಅಕ್ಟೋಬರ್ 14: ಕಂಠೀರವ ಸ್ಟೇಡಿಯಂನಲ್ಲಿ ಭಾನುವಾರ (ಅಕ್ಟೋಬರ್ 13) ನಡೆದ ಬೆಂಗಳೂರು ಮ್ಯಾರಥಾನ್ ಸ್ಪರ್ಧೆಯ ಫುಲ್ ಮ್ಯಾರಥಾನ್ (42 ಕಿಮೀ) ವಿಭಾಗದಲ್ಲಿ ಅಸ್ಸಾಂನ ಬಿಜಯ್ ದೇಕಾ ಮತ್ತು ಉತ್ತರಖಂಡದ ಲಕ್ಷ್ಮೀ ಕ್ರಮವಾಗಿ ಪುರುಷರ, ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಯುಪಿ ಯೋಧ ಕೆಡವಿ ಸೆಮಿಫೈನಲ್‌ಗೆ ಪ್ರವೇಶಿಸಿದ ಬೆಂಗಳೂರು ಬುಲ್ಸ್ಯುಪಿ ಯೋಧ ಕೆಡವಿ ಸೆಮಿಫೈನಲ್‌ಗೆ ಪ್ರವೇಶಿಸಿದ ಬೆಂಗಳೂರು ಬುಲ್ಸ್

ಬಿಜಯ್, 2 ಗಂಟೆ 35.27 ನಿಮಿಷಗಳಲ್ಲಿ ಓಟ ಮುಗಿಸಿ ಬಂಗಾರ ಗೆದ್ದರೆ, 35 ವರ್ಷದ ಜಪಾನ್ ಓಟಗಾರ ಕೊಜಿ ತನಕಾ (2ಗಂಟೆ 40.47ನಿ) ಹಾಗು ಇಥಿಯೋಪಿಯಾದ ಯೆಮತಾ ಲೆಮ್ಲೆಮು (2 ಗಂಟೆ 45.08ನಿ) ಕ್ರಮವಾಗಿ ಬೆಳ್ಳಿ, ಕಂಚಿಗೆ ಕೊರಳೊಡ್ಡಿದರು.

ಮಹಿಳಾ ವಿಭಾಗದ ಫುಲ್ ಮ್ಯಾರಥಾನ್ ನಲ್ಲಿ ಉತ್ತರಾಖಂಡದ ಲಕ್ಷ್ಮೀ, 3 ಗಂಟೆ 24.09 ನಿಮಿಷಗಳಲ್ಲಿ ಗುರಿ ಮುಟ್ಟಿ ಪ್ರಥಮ ಸ್ಥಾನ ಪಡೆದರೆ, ಶ್ರೇಯಾ ದೀಪಕ್ (3 ಗಂಟೆ, 36.38ನಿ) ಹಾಗೂ ಶಿಲ್ಪಿ ಸಾಹು (3ಗಂಟೆ 40.46ನಿ) ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

Bengaluru Marathon: Bijay and Lakshmi were the fastest Man and Woman

ಇನ್ನು ಹಾಫ್‌ ಮ್ಯಾರಥಾನ್‌ನಲ್ಲಿ ಕೀನ್ಯಾದ ಇಸಾಕ್ ಕೆಂಬೋಲ್ ಹೆಮುಐ ಮತ್ತು ಭಾರತದ ಪ್ರೀನು ಯಾದವ್ ಬಂಗಾರ ಗೆದ್ದಿದ್ದಾರೆ. ಬೆಳಗ್ಗೆ 4 ಗಂಟೆಗೆ ಫುಲ್ ಮ್ಯಾರಥಾನ್‌ಗೆ ಚಾಲನೆ ನೀಡಲಾಯ್ತು. ಸುಮಾರು 2,500 ಮಂದಿ ಈ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಶ್ರೀರಾಮ್ ಪ್ರಾಪರ್ಟೀಸ್ ಸಿಎಂಡಿ ಎನ್ ಮುರಳಿ ಈ ವಿಭಾಗದ ಸ್ಪರ್ಧೆಗೆ ಚಾಲನೆ ನೀಡಿದರು.

ಹಾಫ್ ಮ್ಯಾರಥಾನ್ ಪುರುಷರ ವಿಭಾಗ: 1. ಇಸಾಕ್ ಕೆಂಬೋಲ್ ಹೆಮುಐ (1 ಗಂಟೆ 13.04 ನಿಮಿಷ), 2. ಅಂಬು ಕುಮಾರ್ (1 ಗಂಟೆ 13.10ನಿ), 3. ಧನೇಶ್ ಎಂಡಿ (1 ಗಂಟೆ 13.23 ನಿ), ಮಹಿಳಾ ವಿಭಾಗ: ಪ್ರೀನು ಯಾದವ್ (1 ಗಂಟೆ 28.56 ನಿ), ಆಶಾ ಟಿಪಿ (1 ಗಂಟೆ 29.28 ನಿ) ಹಾಗೂ ಸ್ಮಿತಾ ಡಿಆರ್ (1 ಗಂಟೆ 33.46ನಿ).

Story first published: Monday, October 14, 2019, 22:15 [IST]
Other articles published on Oct 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X