ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫ್ರೆಂಚ್ ಫಾರ್ಮುಲಾ 4 ರೇಸ್: ಬೆಂಗಳೂರಿನ ಹುಡ್ಗ ಯಶ್ ಆರಾಧ್ಯ ಸಜ್ಜು

Bengaluru’s Yash Aradhya all set to race at the French Formula 4 Championship

ಬೆಂಗಳೂರು, ಸೆಪ್ಟೆಂಬರ್ 29: ಹಲವು ಬಾರಿಯ ರಾಷ್ಟ್ರೀಯ ಗೋ ಕಾರ್ಟಿಂಗ್ ಹಾಗೂ ಫಾರ್ಮುಲಾ-4 ಚಾಂಪಿಯನ್ ನಮ್ಮ ಬೆಂಗಳೂರಿನ ಹುಡುಗ ಯಶ್ ಆರಾಧ್ಯ ಇದೀಗ ಎಫ್‍ಐಎ ಎಫ್‍ಎಫ್‍ಎಸ್‍ಎ ಫ್ರೆಂಚ್ ಫಾರ್ಮುಲಾ 4-2020ಯಲ್ಲಿ ರೇಸಿಂಗ್‍ಗೆ ಸಜ್ಜಾಗಿದ್ದಾರೆ.

ಎಫ್‍ಐಎ ಫಾರ್ಮುಲಾ- 4 ಫ್ರೆಂಚ್ ಕೂಟವನ್ನು ಫ್ರೆಂಚ್ ಫೆಡರೇಷನ್ ಆಫ್ ಮೋಟರ್ ಸ್ಪೋರ್ಟ್ಸ್ ಆಟೋ ಸ್ಪೋರ್ಟ್ಸ್ ಅಕಾಡೆಮಿ (ಎಫ್‍ಎಫ್‍ಎಸ್‍ಎ ಅಕಾಡೆಮಿ), ವಿಶ್ವಮಟ್ಟದ ಮೋಟರ್ ಕ್ರೀಡೆಗಳ ವ್ಯವಸ್ಥಾಪನಾ ಸಂಸ್ಥೆಯಾಗಿರುವ ಫೆಡರೇಷನ್ ಇಂಟರ್ ನ್ಯಾಷನಲ್ ಡೆಲ್ ಆಟೊಬೊಬೈಲ್ (ಎಫ್‍ಐಎ) ಸಹಯೋಗದಲ್ಲಿ ಆಯೋಜಿಸಿದೆ.

ಅಂತಾರಾಷ್ಟ್ರೀಯ F-4 ರೇಸಿಂಗಿಗೆ ನಮ್ಮ ಬೆಂಗಳೂರಿನ ಹುಡುಗ ಯಶ್ ಎಂಟ್ರಿಅಂತಾರಾಷ್ಟ್ರೀಯ F-4 ರೇಸಿಂಗಿಗೆ ನಮ್ಮ ಬೆಂಗಳೂರಿನ ಹುಡುಗ ಯಶ್ ಎಂಟ್ರಿ

ಈ ಸರಣಿಯಲ್ಲಿ ಭಾಗವಹಿಸುತ್ತಿರುವ ಏಕೈಕ ಭಾರತೀಯ ಪ್ರತಿಭೆ ಎನಿಸಿದ ಯಶ್, ಫ್ರಾನ್ಸಿನ ಕ್ಯಾಸ್ಟೆಲೆಟ್‍ನಲ್ಲಿರುವ ಪಾಲ್ ರಿಚರ್ಡ್ ಸರ್ಕ್ಯೂಟ್ ನಲ್ಲಿ ನಡೆಯುವ ಎಫ್‍ಐಎ ಫಾರ್ಮುಲಾ 4 ಫ್ರೆಂಚ್ ಟೂರ್ನಿಯ ಮುಕ್ತ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ.

ಬೆಂಗಳೂರಿನ ಯಶ್- ಫಾರ್ಮುಲಾ ಜ್ಯೂ. ಸೀರಿಸ್‍ ನಲ್ಲಿ ನಂ.2ಬೆಂಗಳೂರಿನ ಯಶ್- ಫಾರ್ಮುಲಾ ಜ್ಯೂ. ಸೀರಿಸ್‍ ನಲ್ಲಿ ನಂ.2

ವಿಶ್ವಾದ್ಯಂತ ವ್ಯಾಪಿಸಿರುವ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಚಾಂಪಿಯನ್‍ಶಿಪ್ ವೇಳಾಪಟ್ಟಿಯನ್ನು ಹಲವು ಬಾರಿ ಬದಲಿಸಲಾಗಿದ್ದು, ಅಂತಿಮವಾಗಿ 2020ರ ಆಗಸ್ಟ್ ನಲ್ಲಿ ಚಾಲನೆ ಪಡೆದಿತ್ತು. ವೀಸಾ ಸಂಬಂಧಿತ ವಿಳಂಬದಿಂದಾಗಿ ಮೊದಲ ಮೂರು ಸುತ್ತುಗಳಲ್ಲಿ ಸ್ಪರ್ಧಿಸಲು ಯಶ್ ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ ಉಳಿದ ನಾಲ್ಕು ಸುತ್ತುಗಳಲ್ಲಿ ಭಾಗವಹಿಸಲು ಇದೀಗ ಸಜ್ಜಾಗಿದ್ದಾರೆ. ಈ ಮೂಲಕ ಮುಂದಿನ ವರ್ಷ ಯೂರೋಪ್‍ನಲ್ಲಿ ಪ್ರಬಲ ಹೆಜ್ಜೆಯೂರಲು ಸರ್ವಸನ್ನದ್ಧರಾಗಿದ್ದಾರೆ.

ಅಂತಿಮವಾಗಿ ಕಾಯುವಿಕೆ ಕೊನೆಗೊಂಡಿದೆ

ಅಂತಿಮವಾಗಿ ಕಾಯುವಿಕೆ ಕೊನೆಗೊಂಡಿದೆ

ಈ ವಾರಾಂತ್ಯವನ್ನು ಎದುರು ನೋಡುತ್ತಿರುವ ಯಶ್, "ಅಂತಿಮವಾಗಿ ಕಾಯುವಿಕೆ ಕೊನೆಗೊಂಡಿದೆ. ಎಲ್ಲ ಪ್ರತಿಕೂಲಗಳ ನಡುವೆಯೂ ನನ್ನ ಬೆಂಬಲಕ್ಕೆ ನಿಂತು ಇದನ್ನು ಸಾಧ್ಯವಾಗಿಸಿದ ಪ್ರಾಯೋಜಕರಿಗೆ ನಾನು ಧನ್ಯವಾದ ಹೇಳುತ್ತಿದ್ದೇನೆ. ಮೊಟ್ಟಮೊದಲ ಬಾರಿಗೆ ಈ ಟ್ರ್ಯಾಕ್‍ಗಳಲ್ಲಿ ರೇಸಿಂಗ್ ನಡೆಸಲು ರೋಮಾಂಚನವಾಗುತ್ತಿದೆ. ನಾನು ಟ್ರ್ಯಾಕ್‍ಗಳ ಮೇಲೆ ಗಮನ ಹರಿಸಿ ಕಲಿಕೆಗೆ ಹಾಗೂ ಕಾರನ್ನು ಸಾಧ್ಯವಾದಷ್ಟು ಬೇಗ ಹೊಂದಿಸಿಕೊಳ್ಳಲು ಮುಂದಾಗುತ್ತೇನೆ. ಅವರಿಗೆ ಹಾಗೂ ದೇಶಕ್ಕೆ ಹೆಮ್ಮೆ ತರಬಲ್ಲೆ ಎಂಬ ವಿಶ್ವಾಸ ನನಗಿದೆ" ಎಂದು ಹೇಳಿದರು.

ಅಕ್ಟೋಬರ್ 2ರಿಂದ 4ರವರೆಗೆ ಮೊದಲ ರೇಸ್

ಅಕ್ಟೋಬರ್ 2ರಿಂದ 4ರವರೆಗೆ ಮೊದಲ ರೇಸ್

ಅಕ್ಟೋಬರ್ 2ರಿಂದ 4ರವರೆಗೆ ಮೊದಲ ರೇಸ್‍ನಲ್ಲಿ ಯಶ್ ಪಾಲ್ಗೊಳ್ಳಲಿದ್ದಾರೆ. ಬಳಿಕ ಅಕ್ಟೋಬರ್ 16 ರಿಂದ 18, ನವೆಂಬರ್ 6ರಿಂದ 8 ಮತ್ತು ನವೆಂಬರ್ 13 ರಿಂದ 18ರಂದು ಫ್ರಾನ್ಸ್‍ನಲ್ಲಿ ನಡೆಯುವ ನಂತರದ ರೇಸ್‍ಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಯಶ್ ಆರಾಧ್ಯ ವಿದ್ಯಾರ್ಥಿಯಾಗಿದ್ದಾಗಿನಿಂದ ರೇಸಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಧಾನಮಂತ್ರಿ ಬಾಲ ಶಕ್ತಿ ಪುರಸ್ಕಾರಕ್ಕೆ 2020ರ ಜನವರಿಯಲ್ಲಿ ಭಾಜನರಾಗಿದ್ದ ಯಶ್, ಈ ಸಾಧನೆ ಮಾಡಿದ ಮೊದಲ ಭಾರತೀಯ ಮೋಟರ್ ಸ್ಪೋರ್ಟ್ಸ್ ಪ್ರತಿಭೆ ಎನಿಸಿಕೊಂಡಿದ್ದಾರೆ.

ಜೆ.ಕೆ.ಟೈರ್ ಮೋಟರ್ ಸ್ಫೋರ್ಟ್ಸ್ ಸಂಜಯ್ ಶರ್ಮಾ

ಜೆ.ಕೆ.ಟೈರ್ ಮೋಟರ್ ಸ್ಫೋರ್ಟ್ಸ್ ಸಂಜಯ್ ಶರ್ಮಾ

ಜೆ.ಕೆ.ಟೈರ್ ಮೋಟರ್ ಸ್ಫೋರ್ಟ್ಸ್ ವಿಭಾಗದ ಮುಖ್ಯಸ್ಥ ಸಂಜಯ್ ಶರ್ಮಾ ಮಾತನಾಡಿ, "ಇಡೀ ವಿಶ್ವ ಭೀಕರ ಸಾಂಕ್ರಾಮಿಕದಿಂದಾಗಿ ಕುಂಟುತ್ತಿದ್ದರೂ, ಈ ಪ್ರತಿಕೂಲದ ನಡುವೆಯೇ ಅವಕಾಶಗಳನ್ನು ಕಂಡುಕೊಳ್ಳುವುದು ಮುಖ್ಯ. ಚಾಂಪಿಯನ್ನರು ರೂಪುಗೊಳ್ಳುವುದು ಹೀಗೆ. ಆದಾಗ್ಯೂ ಜಗತ್ತು ಮತ್ತು ಕ್ರೀಡಾಕೂಟಗಳೂ ನಿಧಾನವಾಗಿ ಸುಸ್ಥಿತಿಯತ್ತ ಮರಳುತ್ತಿವೆ. ಭಾರತದ ನಮ್ಮ ಹುಡುಗರು ಜಾಗತಿಕ ವೇದಿಕೆಯಲ್ಲಿ ಮುದ್ರೆಯೊತ್ತಲು ಸಜ್ಜಾಗಿರುವುದು ಸಂತಸದ ವಿಚಾರ. ಯಶ್ ದೇಶೀಯ ಹಾಗೂ ಅಂತರರಾಷ್ಟ್ರೀಯ ರೇಸಿಂಗ್‍ನಲ್ಲಿ ಮತ್ತೆ ಮತ್ತೆ ತಮ್ಮ ಪ್ರತಿಭೆಯನ್ನು ನಿರೂಪಿಸಿದ್ದಾರೆ. ಈ ಬಾರಿಯ ಚಾಂಪಿಯನ್‍ಶಿಪ್‍ಗೂ ಯಶಸ್ಸು ಬಯಸುತ್ತೇವೆ" ಎಂದು ಹೇಳಿದ್ದಾರೆ.

ಅಕ್ಬರ್ ಇಬ್ರಾಹಿಂ ಮಾರ್ಗದರ್ಶನ

ಜೆಕೆ ಟೈರ್ಸ್ ಸಹಯೋಗದಲ್ಲಿ, ಅಕ್ಬರ್ ಇಬ್ರಾಹಿಂ ಮಾರ್ಗದರ್ಶನದಲ್ಲಿ ತನ್ನ 9ನೇ ವರ್ಷಕ್ಕೆ ಜೆಕೆ ಟೈರ್ ಎಂಎಂಎಸ್ ರೋಟಾಕ್ಸ್ ಮ್ಯಾಕ್ಸ್ ಕಾರ್ಟಿಂಗ್ ಚಾಂಪಿಯನ್‍ಷಿಪ್ ಇಂಡಿಯಾದಲ್ಲಿ ಭಾಗವಹಿಸುವ ಮೂಲಕ ಯಶ್‍ರ ಮೋಟಾರ್ ಸ್ಪೋರ್ಟ್ಸ್ ಜೀವನ ಆರಂಭವಾಗಿತ್ತು. ಆ ಟೂರ್ನಿಯ ಮೈಕ್ರೋ ವಿಭಾಗದಲ್ಲಿ ವೈಸ್ ಚಾಂಪಿಯನ್ ರೂಕಿ ಪ್ರಶಸ್ತಿ ಗೆದ್ದಿದ್ದ ಯಶ್, ಆ ಬಳಿಕ ಹಲವು ಬಾರಿ ಈ ಚಾಂಪಿಯನ್‍ಷಿಪ್‍ಅನ್ನು ಜಯಿಸಿದರು. ತನ್ನ 7 ವರ್ಷದ ಮೋಟಾರ್ ಸ್ಫೋರ್ಟ್ಸ್ ಜೀವನದಲ್ಲಿ ಯಶ್ 59 ಬಾರಿ ರೇಸ್‍ನ ಪದಕ ವೇದಿಕೆ ಏರಿದ್ದಲ್ಲದೆ, 16ನೇ ವರ್ಷದ ವೇಳೆಗೆ 13 ಬಾರಿ ರಾಷ್ಟ್ರೀಯ ಚಾಂಪಿಯನ್ ಎನಿಸಿಕೊಂಡಿದ್ದಾರೆ.

Story first published: Wednesday, September 30, 2020, 10:02 [IST]
Other articles published on Sep 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X