ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬೆಳ್ಳಿ ತೆರೆಯಲ್ಲಿ ಮಿನುಗಲಿದ್ದಾರೆ ಹಾಕಿ ದಂತಕತೆ ಧ್ಯಾನ್ ಚಂದ್

Biopic on hockey legend Dhyan Chand announced

ನವದೆಹಲಿ: ಭಾರತದ ಹಾಕಿ ದಂತಕತೆ ಧ್ಯಾನ್ ಚಂದ್ ಜೀವನಾಧರಿತ ಸಿನಿಮಾ ಬರಲಿದೆ. ಬಾಲಿವುಡ್ ಸಿನಿಮಾ 'ಸೊಂಚಿರಿಯಾ'ದ ನಿರ್ದೇಶಕ ಅಭಿಷೇಕ್ ಚೌಬೆ ಮತ್ತು ನಿರ್ಮಾಪಕ ರೋನಿ ಸ್ಕ್ರೂವಾಲಾ ಈ ಸಿನಿಮಾದ ಮೂಲಕ ಮತ್ತೆ ಒಂದಾಗಲಿದ್ದಾರೆ. ರೋನಿ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಸಂಪೂರ್ಣ ಫಿಟ್ ಆಗಿರೋ ಬೂಮ್ರಾ ಭಾರತದ ಪ್ರಮುಖ ಅಸ್ತ್ರ: ಬಾರ್ಡರ್ಸಂಪೂರ್ಣ ಫಿಟ್ ಆಗಿರೋ ಬೂಮ್ರಾ ಭಾರತದ ಪ್ರಮುಖ ಅಸ್ತ್ರ: ಬಾರ್ಡರ್

ಹಾಕಿ ಕ್ರೀಡೆಯಲ್ಲಿ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದವರು ಧ್ಯಾನ್ ಚಂದ್. ಧ್ಯಾನ್ ಜನ್ಮ ದಿನವಾದ ಆಗಸ್ಟ್ 29ನ್ನು ಭಾರತದಲ್ಲಿ ಕ್ರೀಡಾ ದಿನವಾಗಿ ಆಚರಿಸಲಾಗುತ್ತದೆ. ಹಾಕಿ ದಿಗ್ಗಜನ ಜೀವನಾಧಾರಿತ ಈ ಸಿನಿಮಾಕ್ಕೆ ಸಹ ನಿರ್ಮಾಪಕರಾಗಿ ಪ್ರೇಮನಾಥ್ ರಾಜ್‌ಗೋಪಾಲನ್ ಜವಾಬ್ದಾರಿ ಹೊರಲಿದ್ದಾರೆ.

ಧ್ಯಾನ್ ಚಂದ್ ಅವರು 1925ರಿಂದ 1949ರ ವರೆಗೆ ಹಾಕಿ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 185 ಪಂದ್ಯಗಳನ್ನಾಡಿರುವ ಚಂದ್, 1500ಕ್ಕೂ ಹೆಚ್ಚು ಗೋಲ್‌ಗಳನ್ನು ಬಾರಿಸಿದ್ದಾರೆ. ಇವರ ಕಾಲದಲ್ಲಿ ಹಾಕಿಯಲ್ಲಿ ಭಾರತ ಪಾರಮ್ಯ ಮೆರೆದಿತ್ತು. 1979 ಡಿಸೆಂಬರ್ 3ರಂದು ಧ್ಯಾನ್‌ಚಂದ್ ಸಾವನ್ನಪ್ಪಿದ್ದರು.

ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೆ ಜಿಗಿದ ವಿರಾಟ್ ಕೊಹ್ಲಿಟೆಸ್ಟ್ ರ್‍ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೆ ಜಿಗಿದ ವಿರಾಟ್ ಕೊಹ್ಲಿ

1928, 1932 ಮತ್ತು 1936ರಲ್ಲಿ ಧ್ಯಾನ್ ಚಂದ್ ಅವರಿದ್ದ ಭಾರತ ತಂಡ ಒಲಿಂಪಿಕ್ ಬಂಗಾರದ ಪದಕಗಳನ್ನು ಗೆದ್ದಿತ್ತು. ಧ್ಯಾನ್‌ ಚಂದ್‌ಗೆ ಪದ್ಮಭೂಷಣ ಪ್ರಶಸ್ತಿ ದೊರೆತಿದೆ. ಧ್ಯಾನ್ ಚಂದ್ ಜೀವನಾಧಾರಿತ ಸಿನಿಮಾಕ್ಕೆ ನಟ ಯಾರೆಂದು ಇನ್ನೂ ಅಂತಿಮಗೊಂಡಿಲ್ಲ. 2021ಕ್ಕೆ ಸಿನಿಮಾ ಚಿತ್ರೀಕರಣ ನಡೆದರೆ, 2022ಕ್ಕೆ ಸಿನಿಮಾ ತೆರೆ ಕಾಣುವ ನಿರೀಕ್ಷೆಯಿದೆ.

Story first published: Wednesday, December 16, 2020, 10:22 [IST]
Other articles published on Dec 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X