ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಬಾಕ್ಸರ್ ಮನೀಶ್ ಕೌಶಿಕ್ ಪದಕದಾಸೆ ಭಗ್ನ

Boxer Manish Kaushik crashes out of his maiden Olympics after losing in 1st round

ಟೋಕಿಯೋ: ಭಾರತದ ಬಾಕ್ಸರ್ ಮನೀಶ್ ಕೌಶಿಕ್ (57-63 ಕೆಜಿ) ಟೋಕಿಯೋ ಒಲಿಂಪಿಕ್ಸ್ ಪುರುಷರ ಬಾಕ್ಸಿಂಗ್‌ನ ಆರಂಭಿಕ ಸುತ್ತಿನಲ್ಲಿ ಹೊರ ಬಿದ್ದಿದ್ದಾರೆ. ಗ್ರೇಟ್‌ ಬ್ರಿಟನ್‌ನ ಲ್ಯೂಕ್ ಮೆಕ್‌ಕಾರ್ಮಾಕ್ ಎದುರು ಕೌಶಿಕ್ 1-4ರ ಸೋಲನುಭವಿಸಿದ್ದಾರೆ. ಶನಿವಾರ ಭಾರತದ ಮತ್ತೊಬ್ಬ ಬಾಕ್ಸರ್ ವಿಕಾಸ್ ಕ್ರಿಶನ್ ಕೂಡ ಸೋತು ಹೊರ ನಡೆದಿದ್ದರು.

ಭಾರತ vs ಶ್ರೀಲಂಕಾ 1st ಟಿ20: ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯುವ ಸೂಚನೆ ನೀಡಿದ ಧವನ್ಭಾರತ vs ಶ್ರೀಲಂಕಾ 1st ಟಿ20: ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯುವ ಸೂಚನೆ ನೀಡಿದ ಧವನ್

ಭಾನುವಾರ ನಡೆದ ಪುರುಷರ 63 ಕೆಜಿ ವಿಭಾಗದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಮನೀಶ್ ಕೌಶಿಕ್ ಪರಾಭವಗೊಂಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಇದೇ ಚೊಚ್ಚಲ ಬಾರಿಗೆ ಸ್ಪರ್ಧಿಸಿದ್ದ ಮನೀಶ್ ಪದಕ ನಿರೀಕ್ಷೆಯಲ್ಲಿದ್ದರು. ಆದರೆ ಮನೀಶ್‌ಗೆ ನಿರಾಸೆಯಾಗಿದೆ.

ಕೌಶಿಕ್ ಮತ್ತು ಲ್ಯೂಕ್ ಮೆಕ್‌ಕಾರ್ಮಾಕ್ ಮಧ್ಯೆ ಜಿದ್ದಾಜಿದ್ದಿಯ ಕಾಳಗ ನಡೆಯಿತಾದರೂ ಅಂತಿಮ ಫಲಿತಾಂಶ ಬ್ರಿಟನ್ ಬಾಕ್ಸರ್ ಪರವಾಯ್ತು. ಭಾನುವಾರ ಇದಕ್ಕೂ ಮೊದಲು ನಡೆದ ಮಹಿಳಾ ಬಾಕ್ಸಿಂಗ್‌ನಲ್ಲಿ ಭಾರತದ ಖ್ಯಾತ ಬಾಕ್ಸರ್ ಮೇರಿ ಕೋಮ್ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.

ಟೇಬಲ್ ಟೆನಿಸ್: ಭರ್ಜರಿ ಗೆಲುವಿನೊಂದಿಗೆ ಮೂರನೇ ಸುತ್ತಿಗೆ ಮನಿಕಾ ಬಾತ್ರಾಟೇಬಲ್ ಟೆನಿಸ್: ಭರ್ಜರಿ ಗೆಲುವಿನೊಂದಿಗೆ ಮೂರನೇ ಸುತ್ತಿಗೆ ಮನಿಕಾ ಬಾತ್ರಾ

3ನೇ ದಿನ ಸಂಜೆ 6 PM ಹೊತ್ತಿಗೆ ಭಾರತದ ಪದಕ ಖಾತೆಯಲ್ಲಿ ಒಂದು ಪದಕ ಮಾತ್ರವಿತ್ತು. ಅದು ಆರಂಭಿಕ ದಿನ ಮಹಿಳಾ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಗೆದ್ದಿರುವ ಬೆಳ್ಳಿ ಪದಕ. ಅದು ಬಿಟ್ಟರೆ ಬೇರೆ ಪದಕ ಲಭಿಸಿರಲಿಲ್ಲ.

Story first published: Sunday, July 25, 2021, 18:17 [IST]
Other articles published on Jul 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X