ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

6 ಬಾರಿ ಎಫ್1 ಚಾಂಪಿಯನ್ ಹ್ಯಾಮಿಲ್ಟನ್ ಗೆ ಥ್ಯಾಂಕ್ಸ್ ಎಂದ ಆಸೀಸ್

Broken-hearted Hamilton pledges $500,000 to Australian bushfire cause

ಲಂಡನ್, ಜನವರಿ 10: ಆರು ಬಾರಿ ಎಫ್ 1 ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಮಾಡಿರುವ ದೇಣಿಗೆ ಕಾರ್ಯಕ್ಕೆ ಆಸ್ಟ್ರೇಲಿಯಾ ಥ್ಯಾಂಕ್ಸ್ ಎಂದಿದೆ. ಆಸ್ಟ್ರೇಲಿಯಾದ ಕಾಡ್ಗಿಚ್ಚಿಗೆ ಕೋಟ್ಯಂತರ ಜೀವಿಗಳನ್ನು ಬಲಿಯಾಗಿದೆ. ಅಪಾರ ಪ್ರಮಾಣದ ಕಾಡು ನಾಶವಾಗಿದೆ. ನಾಶವಾಗಿರುವ ಅರಣ್ಯ, ಪುನರ್ ನಿರ್ಮಾಣಕ್ಕಾಗಿ, ಗಾಯಾಳು ಪ್ರಾಣಿ, ಪಕ್ಷಿಗಳ ಸಂರಕ್ಷಣೆ ಅಪಾರ ಪ್ರಮಾಣದ ಮೊತ್ತ ಅಗತ್ಯವಿದೆ. ವಿಶ್ವದೆಲ್ಲೆಡೆಯಿಂದ ವಿವಿಧ ಕ್ಷೇತ್ರಕ್ಕೆ ಸೇರಿದ ಗಣ್ಯರು, ಕ್ರೀಡಾಪಟುಗಳು ದೇಣಿಗೆ ನೀಡುತ್ತಿದ್ದಾರೆ.

35ವರ್ಷ ವಯಸ್ಸಿನ ಎಫ್ 1 ಚಾಲಕ ಹ್ಯಾಮಿಲ್ಟನ್ ಅವರು 500,000 ಡಾಲರ್ ದೇಣಿಗೆ ನೀಡಿದ್ದಾರೆ. ಪ್ರಾಣಿಗಳ ಬಗ್ಗೆ ನನಗಿರುವ ಪ್ರೀತಿಯ ಬಗ್ಗೆ ನಿಮಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ, ಆಸ್ಟ್ರೇಲಿಯಾದ ಈ ಬೆಂಕಿ ನನಗೆ ಆಘಾತ ತಂದಿದೆ. ವಿನಾಶದ ಅಂಚಿನಲ್ಲಿರುವ ಜೀವಿಗಳು ಈ ದುರ್ಘಟನೆಯಲ್ಲಿ ನಾಶವಾಗಿವೆ. ನಾನು ಆಗಾಗ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿ ಅಲ್ಲಿನ ಜೀವ ಸಂಪತ್ತನ್ನು ನೋಡಿ ಮೆಚ್ಚಿದ್ದೇನೆ. ಈಗ ನನ್ನ ಕೈಲಾದ ನೆರವನ್ನು ನೀಡುತ್ತಿದ್ದೇನೆ. ನನ್ನ ಇನ್ಸ್ಟಾ ಹಿಂಬಾಲಕರು ಈ ನಿಟ್ಟಿನಲ್ಲಿ ನೆರವಾದರೆ ಒಳ್ಳೆಯದು ಎಂದು ಇನ್ಸ್ಟ್ರಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದಾರೆ.

ಸುಮಾರು 26 ಮಂದಿ ಅಸುನೀಗಿದಿದ್ದು, 2000 ಮನೆ ನಾಶವಾಗಿದ್ದು, 80000 ಚದರ ಕಿಲೋಮೀಟರ್ ನಷ್ಟು ಅರಣ್ಯ ನಾಶವಾಗಿದೆ. ನಾಶವಾಗಿರುವ ಕೋಟ್ಯಂತರ ಜೀವಿಗಳ ಪೈಕಿ ಸಸ್ತನಿ, ಪಕ್ಷಿಗಳು ಅಧಿಕವಾಗಿವೆ. ಆಸ್ಟ್ರೇಲಿಯಾದ ಕ್ರಿಕೆಟರ್ಸ್, ಟೆನಿಸ್ ಆಟಗಾರರು ಸೇರಿದಂತೆ ಹಲವು ಕ್ರೀಡಾಪಟುಗಳು ಪ್ರಾಣಿ, ಪಕ್ಷಿಗಳ ಸಂರಕ್ಷಣೆಗೆ ನೆರವಾಗಿದ್ದಾರೆ.

Story first published: Friday, January 10, 2020, 16:52 [IST]
Other articles published on Jan 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X