ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬಾಕ್ಸಿಂಗ್ ರಿಂಗ್‌ನಲ್ಲೊಂದು ರೋಚಕ ಕದನ: ಕಾಲಮ್ ಸ್ಮಿತ್ ವಿರುದ್ಧ ಗೆದ್ದು ಬೀಗಿದ ಅಲ್ವರೇಜ್

Callum Smith vs Saul Canelo Alvarez: Alvarez dominates British fighter Callum Smith

ಮೆಕ್ಸಿಕನ್ ಪೌಂಡ್ ಫೊರ್ ಪೌಂಡ್ ಚಾಂಪಿಯನ್ ಸಾಲ್ ಕ್ಯಾನೆಲೋ ಅಲ್ವೆರೆಜ್ ಅವರ ವೃತ್ತಿ ಜೀವನದ ಸುದೀರ್ಘವಿರಾಮದ ಬಳಿಕ ನಡೆದ ಕಾದಾಟದಲ್ಲಿ ಗೆದ್ದು ಬೀಗಿದ್ದಾರೆ. ಎರಡು ಸೂಪರ್ ಮಿಡಲ್‌ವೈಟ್ ಪ್ರಶಸ್ತಿಗಳನ್ನು ವಶಕ್ಕೆ ಪಡೆಯಲು ನಡೆದ ಕಾದಾಟದಲ್ಲಿ ದೀರ್ಘ ಕಾಲದಿಂದ ಅಜೇಯವಾಗುಳಿದಿದ್ದ ಕಾಲಮ್ ಸ್ಮಿತ್ ಅವರನ್ನು ಮಣಿಸುವಲ್ಲಿ ಸಾಲ್ ಕ್ಯಾನೆಲೋ ಅಲ್ವೆರೆಜ್ ಯಶಸ್ವಿಯಾಗಿದ್ದಾರೆ. ಈ ಮೂಲಕ 2020 ವರ್ಷವನ್ನು ಸ್ಮರಣೀಯವಾಗಿಸಿದ್ದಾರೆ.

ಕೊರೊನಾ ವೈರಸ್‌ನ ಕಾರಣದಿಂದಾಗಿ ಸೀಮಿತ ಪ್ರೇಕ್ಷಕರ ಉಪಸ್ಥಿತಿಯಲ್ಲಿ ನಡೆದ ಈ ಮಹತ್ವದ ಬಾಕ್ಸಿಂಗ್ ಪಂದ್ಯದಲ್ಲಿ ಅಲ್ವೇರೆಜ್ WBC ಪ್ರಶಸ್ತಿ ಹಾಗೂ ಬ್ರಿಟನ್ ಮೂಲದ ಸ್ಮಿತ್ ಬಳಿಯಿದ್ದ 168 ಪೌಂಡ್ ವಿಭಾಗದ WBA ಬೆಲ್ಟ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ 168 ಪಂಡ್ ವಿಭಾಗದ ನಾಲ್ಕು ಪ್ರಮುಖ ಪ್ರಶಸ್ತಿಗಳಲ್ಲಿ ಎರಡನ್ನು ತಮ್ಮ ಬಳಿಯಿರಿಸಿಕೊಂಡಿದ್ದಾರೆ.

ಕತಾರ್ ಫುಟ್ಬಾಲ್ ವಿಶ್ವಕಪ್ 2022: ಅದ್ಧೂರಿಯಾಗಿ ಅನಾವರಣಗೊಂಡ ಅಹ್ಮದ್ ಬಿನ್ ಅಲಿ ಸ್ಟೇಡಿಯಮ್ಕತಾರ್ ಫುಟ್ಬಾಲ್ ವಿಶ್ವಕಪ್ 2022: ಅದ್ಧೂರಿಯಾಗಿ ಅನಾವರಣಗೊಂಡ ಅಹ್ಮದ್ ಬಿನ್ ಅಲಿ ಸ್ಟೇಡಿಯಮ್

ಈ ರೋಚಕ ಬಾಕ್ಸಿಂಗ್ ಪಂದ್ಯವನ್ನು ಗೆದ್ದ ಬಳಿಕ ಮೆಕ್ಸಿಕನ್ ಆಟಗಾರ ಅಲ್ವೇರೆಜ್ ಪ್ರತಿಕ್ರಿಯಿಸಿದ್ದು "ಇದನ್ನು ಗೆದ್ದುಕೊಂಡಿದ್ದಕ್ಕೆ ನಾನು ಹೆಮ್ಮೆ ಪಡುತ್ತೇನೆ" ಎಂದಿದ್ದಾರೆ. "ನಾನು ಬಾಕ್ಸಿಂಗ್ ಜಗತ್ತನ್ನು ಮಾತ್ರವೇ ಪ್ರತಿನಿಧಿಸುತ್ತಿಲ್ಲ ನಮ್ಮ ದೇಶವನ್ನು ಕೂಡ ಪ್ರತಿನಿಧಿಸುತ್ತಿದ್ದೇನೆ. 13 ತಿಂಗಳ ವಿರಾಮದ ಬಳಿಕ ನಾನು ಶ್ರೇಷ್ಠವಾಗಿದ್ದನ್ನು ಸಾಧಿಸಿದ್ದೇನೆ" ಎಂದು ಅಲ್ವೇರೆಜ್ ಹೇಳಿದ್ದಾರೆ.

"ನಾನು ಗೆಲುವಿಗಾಗಿ ಇಲ್ಲಿ ಬಂದಿದ್ದೆ, ಆದರೆ ನಾನೀಗ ಕುಸಿದುಬಿದ್ದಿದ್ದೇನೆ. ಯಾವುದೇ ಕ್ಷಮೆಯಿಲ್ಲ, ಆತ ಅದ್ಭುತವಾಗಿ ಪ್ರದರ್ಶನ ನೀಡಿದ್ದಾನೆ" ಎಂದು ಪಂದ್ಯವನ್ನು ಸೋತ ಬಳಿಕ ಕಾಲಮ್ ಸ್ಮಿತ್ ಹೇಳಿಕೆಯನ್ನು ನೀಡಿದ್ದಾರೆ. "ಇದು ನನ್ನ ಅತ್ಯುತ್ತಮ ಆವೃತ್ತಿಯಾಗಿರಬಹುದಾಗಿತ್ತು. ಆದರೆ ಆತ ತುಂಬಾ ಬುದ್ದಿವಂತ ಹಾಗೂ ಚಾಣಾಕ್ಷ" ಎಂದು ಎದುರಾಳಿ ಅಲ್ವೇರೆಕ್ ಅವರನ್ನು ಕಾಲಮ್ ಸ್ಮಿತ್ ಪ್ರಶಂಸಿಸಿದ್ದಾರೆ.

ಫ್ಲ್ಯಾಶ್‌ಬ್ಯಾಕ್‌ 2020: 143 ವರ್ಷಗಳಲ್ಲಿ ಮೊದಲ ಬಾರಿಗೆ ನಡೆಯಿತು ಪ್ರೇಕ್ಷಕರಿಲ್ಲದೆ ಟೆಸ್ಟ್ ಪಂದ್ಯಫ್ಲ್ಯಾಶ್‌ಬ್ಯಾಕ್‌ 2020: 143 ವರ್ಷಗಳಲ್ಲಿ ಮೊದಲ ಬಾರಿಗೆ ನಡೆಯಿತು ಪ್ರೇಕ್ಷಕರಿಲ್ಲದೆ ಟೆಸ್ಟ್ ಪಂದ್ಯ

2018ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ 6 ತಿಂಗಳ ಕಾಲ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಬಳಿಕ ಐದನೇ ಗೆಲುವನ್ನು ಅಲ್ವೇರೆಜ್ ಸಾಧಿಸಿದಂತಾಗಿದೆ. ಕಳೆದ 15 ವರ್ಷಗಳಲ್ಲಿ ಅಲ್ವೆರೆಜ್ ಏಕೈಕ ಸೋಲು ಕಂಡಿದ್ದು 2013ರಲ್ಲಿ ಫ್ಲಾಯ್ಡ್ ಮೆವೇದರ್ ವಿರುದ್ಧವಾಗಿದೆ. ಆದರೆ ಸದ್ಯ ಅಲ್ವೇಜರ್ ಹೊಂದಿರುವ ಫಾರ್ಮ್ ವಿಶ್ವದ ಅತಿ ಹೆಚ್ಚು ಗಳಿಕೆಯ ಆಟಗಾರ ಯಾಕಾಗಿದ್ದಾರೆ ಎಂಬುದಕ್ಕೆ ಕೈಗನ್ನಡಿಯಾಗಿದೆ.

Story first published: Sunday, December 20, 2020, 20:20 [IST]
Other articles published on Dec 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X