ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮತ್ತೆ ಚಾಂಪಿಯನ್ ಆಗುವೆ: ವಿಶ್ವನಾಥನ್ ಆನಂದ್

By Mahesh

ಸೋಚಿ(ರಷ್ಯಾ),ನ.24: ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ತಮ್ಮ ವಿಶ್ವಚಾಂಪಿಯನ್ ಪಟ್ಟವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಭಾರತದ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ರನ್ನು 11ನೇ ಗೇಮ್ ನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಮಣಿಸಿದ್ದಾರೆ.

ವಿಶ್ವ ಚಾಂಪಿಯನ್ ಪಟ್ಟ ಕಸಿದುಕೊಳ್ಳಲು ಆಗದ ಗ್ರ್ಯಾಂಡ್ ಮಾಸ್ಟರ್ ಆನಂದ್ ಅವರು ತಮ್ಮ ಸೋಲಿನ ಬಗ್ಗೆ ಪ್ರತಿಕ್ರಿಯಿಸಿ, ಮತ್ತೆ ಚಾಂಪಿಯನ್ ಆಗಲು ಸಿದ್ದವಾಗುತ್ತೇನೆ. ಮತ್ತೊಮ್ಮೆ ನನ್ನ ಪ್ರಯತ್ನ ಮೊದಲಿನಿಂದ ಆರಂಭಿಸುತ್ತೇನೆ ಎಂದು ಹೇಳಿದ್ದಾರೆ.

ರಷ್ಯಾದ ಸೋಚಿಯಲ್ಲಿ ನಡೆಯುತ್ತಿರುವ ಚೆಸ್ ಚಾಂಪಿಯನ್ ಶಿಪ್ ನ 11ನೇ ಸುತ್ತಿನಲ್ಲಿ ವಿಶ್ವನಾಥನ್ ಆನಂದ್ ಸೋಲೊಪ್ಪಿಕೊಂಡಿದ್ದಾರೆ. 6.5-4.5 ಅಂಕಗಳೊಂದಿಗೆ ಆನಂದ್ ರನ್ನು ಮಣಿಸಿ ಕಾರ್ಲ್ಸನ್ ಮತ್ತೆ ಚಾಂಪಿಯನ್ ಎನಿಸಿಕೊಂಡಿದ್ದಾರೆ.

Viswanathan Anand loses 11th game, Carlsen crowned World Champion

ಸತತ ನಾಲ್ಕು ಡ್ರಾ ನಂತರ ನಾರ್ವೆಯ ಚತುರ ಮೊದಲ ಗೆಲುವು ದಾಖಲಿಸಿ ಚಾಂಪಿಯನ್ ಪಟ್ಟಕ್ಕೇರಿದರು. 11ನೇ ಗೇಮ್ ನ 24 ಹಾಗೂ 45ನೇ ನಡೆ ಆನಂದ್ ಗೆ ಮಾರಕವಾಯಿತು. ಕಾರ್ಲ್ಸನ್ ಬಿಷಪ್ ಗಾಗಿ ರೂಕ್ ಬಲಿ ಕೊಟ್ಟ ಆನಂದ್ ಆಟದಲ್ಲಿ ಹಿಡಿತ ಸಾಧಿಸಲು ಆಗಲಿಲ್ಲ. ರೂ ಲೊಪೆಜ್-ಬರ್ಲಿನ್ ಡಿಫೆನ್ಸ್ ಮೂಲಕ ಅಟ ಮುಂದುವರೆಸಿದ ಕಾರ್ಲ್ಸನ್ ಬಿಳಿಕಾಯಿಗಳನ್ನು ಹೊಂದಿದ್ದು ಕಾರ್ಲ್ಸನ್ ಗೆ ಬಲ ತಂದಿತು.

ಅಂತಿಮ ಸ್ಕೋರ್: ಕಾರ್ಲ್ಸನ್ 6.5- ಆನಂದ್ 4.5
1. ಡ್ರಾ
2. ಕಾರ್ಲ್ಸನ್ ಗೆಲುವು
3. ಆನಂದ್ ಗೆಲುವು
4. ಡ್ರಾ
5. ಡ್ರಾ
6. ಕಾರ್ಲ್ಸನ್
7. ಡ್ರಾ
8. ಡ್ರಾ
9. ಡ್ರಾ
10.ಡ್ರಾ
11. ಕಾರ್ಲ್ಸನ್

ಈ ಮೂಲಕ ಈ ವರ್ಷವೂ ಕಾರ್ಲ್ಸನ್ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಂಡರು. ನಾರ್ವೆಯ ಕಾರ್ಲ್ಸನ್ ಸತತ 2ನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X