ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

Chess Olympiad 2022: ಸ್ಪರ್ಧೆಯಲ್ಲಿ ಭಾಗವಹಿಸಿ ಕ್ರೀಡಾಸ್ಪೂರ್ತಿ ಮೆರೆದ ತುಂಬು ಗರ್ಭಿಣಿ ಹರಿಕಾ

Chess Olympiad 2022: 9 months pregnant Harika Dronavalli participating in Chess Olympiad

ಜುಲೈ 28ರಿಂದ ಆರಂಭವಾಗಿರುವ 44ನೇ ಚೆಸ್ ಒಲಿಂಪಿಯಾಡ್ ಸ್ಪರ್ಧೆಯೊಂದರಲ್ಲಿ ಹರಿಕಾ ದ್ರೋಣವಲ್ಲಿ ಎಂಬ ಚಾಂಪಿಯನ್ ಗ್ರ್ಯಾಂಡ್ ಮಾಸ್ಟರ್ ಭಾಗವಹಿಸಿ ಕ್ರೀಡಾ ಸ್ಫೂರ್ತಿ ಮೆರೆದಿದ್ದಾರೆ. 9 ತಿಂಗಳ ತುಂಬು ಗರ್ಭಿಣಿಯಾಗಿರುವ ಹರಿಕಾ ದ್ರೋಣವಲ್ಲಿ ಇಂತಹ ಸಮಯದಲ್ಲಿಯೂ ಟೂರ್ನಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವುದಕ್ಕೆ ಸದ್ಯ ಸಾಮಾಜಿಕ ಜಾಲ ತಾಣದ ತುಂಬಾ ದೊಡ್ಡ ಮಟ್ಟದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಚೆನ್ನೈನ ಮಾಮಲಾಪುರಂನಲ್ಲಿ ನಡೆಯುತ್ತಿರುವ ಈ ಚೆಸ್ ಒಲಿಂಪಿಯಾಡ್ ಭಾರತದಲ್ಲಿ ನಡೆಯುತ್ತಿರುವ ಚೊಚ್ಚಲ ಚೆಸ್ ಒಲಿಂಪಿಯಾಡ್ ಆಗಿದ್ದು, ಇಲ್ಲಿ ಜುಲೈ 31ರ ಭಾನುವಾರದಂದು ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ 6 ತಂಡಗಳು ತಮ್ಮ ಎದುರಾಳಿಗಳನ್ನು ಸೋಲಿಸಿ ಹ್ಯಾಟ್ರಿಕ್ ಜಯ ಸಾಧಿಸಿವೆ.

ತಮಿಳುನಾಡು ಪ್ರೀಮಿಯರ್‌ ಲೀಗ್ 2022: ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದ ಎರಡೂ ತಂಡಗಳು ಚಾಂಪಿಯನ್ಸ್!ತಮಿಳುನಾಡು ಪ್ರೀಮಿಯರ್‌ ಲೀಗ್ 2022: ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದ ಎರಡೂ ತಂಡಗಳು ಚಾಂಪಿಯನ್ಸ್!

ಭಾರತ ಎ ತಂಡ ತನ್ನ ಎದುರಾಳಿ ಗ್ರೀಸ್ ತಂಡವನ್ನು 3-1 ಅಂತರದಿಂದ ಸೋಲಿಸಿದರೆ, ಭಾರತ ಬಿ ತಂಡ ಸ್ವಿಡ್ಜರ್ ಲ್ಯಾಂಡ್ ವಿರುದ್ಧ 4-0 ಅಂತರದಲ್ಲಿ ಜಯವನ್ನು ಸಾಧಿಸಿತು ಹಾಗೂ ಭಾರತ ಸಿ ತಂಡ ಐಸ್ ಲ್ಯಾಂಡ್ ವಿರುದ್ಧ 3-1 ಅಂತರದ ಜಯಭೇರಿ ಬಾರಿಸಿತು. ಇನ್ನು ಭಾರತ ವನಿತೆಯರು ಮೂರನೇ ಸುತ್ತಿನ ಪಂದ್ಯಗಳಲ್ಲಿ ಜಯ ಸಾಧಿಸಿದರು. ಭಾರತ ಎ ತಂಡ ಇಂಗ್ಲೆಂಡ್ ವಿರುದ್ಧ 3-1 ಅಂತರದಲ್ಲಿ ಜಯ ಸಾಧಿಸಿದರೆ, ಭಾರತ ಬಿ ತಂಡ ಇಂಡೋನೇಷ್ಯಾ ವಿರುದ್ಧ 3-1 ಅಂತರದಲ್ಲಿ ಗೆದ್ದಿದೆ ಹಾಗೂ ಭಾರತ ಸಿ ತಂಡ ಆಸ್ಟ್ರೇಲಿಯಾ ತಂಡವನ್ನು 2.5 - 1.5 ಅಂತರದಲ್ಲಿ ಸೋಲಿಸಿದೆ.

ಕಾಮನ್‍ವೆಲ್ತ್ 2022: ಚಿನ್ನ ಗೆದ್ದ ವೇಟ್‌ಲಿಫ್ಟರ್ ಅಚಿಂತಾ ಶೆಯುಲಿ; ಭಾರತ ಗೆದ್ದ ಒಟ್ಟು ಪದಕಗಳೆಷ್ಟು?ಕಾಮನ್‍ವೆಲ್ತ್ 2022: ಚಿನ್ನ ಗೆದ್ದ ವೇಟ್‌ಲಿಫ್ಟರ್ ಅಚಿಂತಾ ಶೆಯುಲಿ; ಭಾರತ ಗೆದ್ದ ಒಟ್ಟು ಪದಕಗಳೆಷ್ಟು?

ಇನ್ನು ತುಂಬು ಗರ್ಭಿಣಿಯಾಗಿರುವ ಹರಿಕಾ ದ್ರೋಣವಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಗೋರಂಟ್ಲ ಮೂಲದವರಾಗಿದ್ದು, 2015ರಲ್ಲಿ ಸೋಚಿಯಲ್ಲಿ ನಡೆದಿದ್ದ ವಿಶ್ವ ಚೆಸ್ ಚಾಂಪಿಯನ್‍ಶಿಪ್ ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ ಹಾಗೂ 2010ರಲ್ಲಿ ಗುವಾಂಗ್ಝಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಗೆದ್ದ ಸಾಧನೆ ಮಾಡಿದ್ದಾರೆ.

ಇನ್ನು ಈ ಬಾರಿಯ ಚೆಸ್ ಒಲಿಂಪಿಯಾಡ್ ಆರಂಭವಾಗುವುದಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಹರಿಕಾ ದ್ರೋಣವಲ್ಲಿ ತಾನು ತುಂಬು ಗರ್ಭಿಣಿಯಾಗಿದ್ದರೂ ಸಹ ಸ್ಪರ್ಧೆಯಲ್ಲಿ ಭಾಗವಹಿಸುತ್ತೇನೆ ಎಂಬ ಹೇಳಿಕೆಯನ್ನು ನೀಡಿದ್ದರು. ಅದರಂತೆ ಇದೀಗ ಸ್ಪರ್ಧೆಯಲ್ಲಿ ಭಾಗವಹಿಸಿ ಇತರರಿಗೆ ಮಾದರಿಯಾಗಿದ್ದಾರೆ.

Story first published: Tuesday, August 2, 2022, 10:07 [IST]
Other articles published on Aug 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X