ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

Chess Olympiad 2022: ಚೆನ್ನೈ ಹೊಟೇಲ್ ಆತಿಥ್ಯಕ್ಕೆ ಮನಸೋತ ಸ್ಪ್ಯಾನಿಷ್ ಚೆಸ್ ಗ್ರ್ಯಾಂಡ್‌ಮಾಸ್ಟರ್

Chess Olympiad 2022: Francisco Vallejo Pons hails chennais arrangements for 44th Chess Olympiad

ನಾಳೆಯಿಂದ ( ಜುಲೈ 28 ) 44ನೇ ಚೆಸ್ ಒಲಿಂಪಿಯಾಡ್ ಆರಂಭಗೊಳ್ಳುತ್ತಿದ್ದು, ಈ ಬಾರಿ ಭಾರತದಲ್ಲಿ ಈ ಚೆಸ್ ಒಲಿಂಪಿಯಾಡ್ ಆಯೋಜನೆಗೊಂಡಿದೆ. ತಮಿಳುನಾಡಿನ ಚೆನ್ನೈನ ಮಮ್ಮಲ್ಲಪುರಂನಲ್ಲಿ ಈ ಬಾರಿಯ ಚೆಸ್ ಒಲಿಂಪಿಯಾಡ್‌ನ್ನು ಫೆಡರೇಶನ್ ಇಂಟರ್ನ್ಯಾಷನಲ್ ಡೆಸ್ ಎಚೆಕ್ಸ್ ಆಯೋಜಿಸಿದೆ. 1924ರಿಂದ ನಡೆಯುತ್ತಿರುವ ಈ ಚೆಸ್ ಒಲಿಂಪಿಯಾಡ್ ಇದೇ ಮೊದಲ ಬಾರಿಗೆ ಭಾರತದಲ್ಲಿ ಆಯೋಜನೆಯಾಗಿದ್ದು, ವಿಶ್ವದ ಮೂಲೆ ಮೂಲೆಗಳಿಂದ ಹಲವಾರು ಹೆಸರಾಂತ ಚೆಸ್ ಆಟಗಾರರು ಭಾಗವಹಿಸುತ್ತಿದ್ದಾರೆ.

ಈ ಬಾರಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತವನ್ನು ಈ ತಂಡ ಸೋಲಿಸಿ ಚಾಂಪಿಯನ್ ಆಗಲಿದೆ ಎಂದ ಪಾಂಟಿಂಗ್ಈ ಬಾರಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತವನ್ನು ಈ ತಂಡ ಸೋಲಿಸಿ ಚಾಂಪಿಯನ್ ಆಗಲಿದೆ ಎಂದ ಪಾಂಟಿಂಗ್

ಇನ್ನು ಚೆನ್ನೈನಲ್ಲಿ ಒಲಿಂಪಿಯಾಡ್ ಆಯೋಜನೆಯಾದಾಗ ಅಲ್ಲಿನ ಆತಿಥ್ಯ ಯಾವ ರೀತಿ ಇರುತ್ತೋ, ವಿದೇಶಿ ಆಟಗಾರರಿಗೆ ಆ ಸ್ಥಳ ಹೊಂದಿಕೊಳ್ಳುತ್ತಾ ಎಂಬ ಪ್ರಶ್ನೆಗಳು ಮೂಡಿದ್ದವು. ಆದರೆ ಇದೀಗ ಒಲಿಂಪಿಯಾಡ್ ಆರಂಭಕ್ಕೂ ಮುನ್ನವೇ ಚೆನ್ನೈ ಆತಿಥ್ಯಕ್ಕೆ ಮನಸೋತಿರುವ ಸ್ಪ್ಯಾನಿಷ್ ಚೆಸ್ ಗ್ರ್ಯಾಂಡ್‌ಮಾಸ್ಟರ್ ಫ್ರಾನ್ಸಿಸ್ಕೊ ​​ವ್ಯಾಲೆಜೊ ಪೊನ್ಸ್ ಆತಿಥ್ಯವನ್ನು ಮೆಚ್ಚಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

ಚೆನ್ನೈ ಆತಿಥ್ಯಕ್ಕೆ ಮನಸೋತ ಫ್ರಾನ್ಸಿಸ್ಕೊ ​​ವ್ಯಾಲೆಜೊ ಪೊನ್ಸ್

'ಈಗಷ್ಟೇ ಚೆನ್ನೈನ ಹೋಟೆಲ್‌ಗೆ ಬಂದೆ. ಬೆಳಗ್ಗೆ 5 ಗಂಟೆ. ಬಹುಶಃ ನಾನು ದೂರು ನೀಡಲು ಏನನ್ನಾದರೂ ಕಂಡುಕೊಳ್ಳುತ್ತೇನೆ, ಆದರೆ ಇಲ್ಲಿಯವರೆಗೆ, ಎಲ್ಲವೂ ಸಂಪೂರ್ಣವಾಗಿ ಅದ್ಭುತವಾಗಿದೆ. ಎಲ್ಲಾ ಸ್ವಯಂಸೇವಕರು ಮತ್ತು ಸಿಬ್ಬಂದಿಯಿಂದ ನಂಬಲಾಗದಷ್ಟು ಆತ್ಮೀಯ ಸ್ವಾಗತ, ಒಲಿಂಪಿಯಾಡ್‌ಗಾಗಿ ವೇಗದ ಇಮಿಗ್ರೇಷನ್, ಇಷ್ಟು ಅತಿವೇಗದ ಹೊಟೇಲ್ ಚೆಕ್‌ಇನ್ ನಾನು ಎಲ್ಲಿಯೂ ನೋಡಿಲ್ಲ ಎಂದು ಬರೆದುಕೊಳ್ಳುವುದರ ಮೂಲಕ ಚೆನ್ನೈನ ಆತಿಥ್ಯವನ್ನು ಮೆಚ್ಚಿಕೊಂಡಿದ್ದಾರೆ.

ಚೆಸ್ ಹಾಲ್ ಕುರಿತು ಸಹ ಮೆಚ್ಚುಗೆ

ಚೆಸ್ ಹಾಲ್ ಕುರಿತು ಸಹ ಮೆಚ್ಚುಗೆ

ಚೆನ್ನೈ ಹೊಟೇಲ್ ಮತ್ತು ಆತಿಥ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಸ್ಪ್ಯಾನಿಷ್ ಚೆಸ್ ಗ್ರ್ಯಾಂಡ್‌ಮಾಸ್ಟರ್ ಫ್ರಾನ್ಸಿಸ್ಕೊ ​​ವ್ಯಾಲೆಜೊ ಪೊನ್ಸ್ ಮತ್ತೊಂದು ಟ್ವೀಟ್ ಮಾಡಿದ್ದು, ಚೆಸ್ ಒಲಿಂಪಿಯಾಡ್‌ಗಾಗಿ ಸಿದ್ಧಪಡಿಸಿರುವ ಚೆಸ್ ಹಾಲ್‌ನ ಫೋಟೋವನ್ನು ಹಂಚಿಕೊಂಡು ಇಂಥಹ ಒಲಿಂಪಿಯಾಡ್ ಹಾಲ್‌ನ್ನು ಯಾವತ್ತೂ ನೋಡಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಹೀಗೆ ಫ್ರಾನ್ಸಿಸ್ಕೊ ​​ವ್ಯಾಲೆಜೊ ಪೊನ್ಸ್ ಮಾಡಿರುವ ಮೆಚ್ಚುಗೆಯ ಟ್ವೀಟ್ ಕುರಿತು ಭಾರತದ ನೆಟ್ಟಿಗರು ಕಾಮೆಂಟ್ ಮಾಡಿದ್ದು ಸಂತಸ ವ್ಯಕ್ತಪಡಿಸಿ ಹೆಮ್ಮೆ ಪಡುತಿದ್ದಾರೆ.

ಚೆಸ್ ಬೋರ್ಡ್ ಸೃಷ್ಟಿಸಿದ ವಿದ್ಯಾರ್ಥಿಗಳು

ಇನ್ನು ಚೆನ್ನೈನ ವಿದ್ಯಾರ್ಥಿಗಳು ಈ ಬಾರಿಯ ಚೆಸ್ ಒಲಿಂಪಿಯಾಡ್‌ಗಾಗಿ ಬೃಹತ್ ಚೆಸ್ ಬೋರ್ಡ್ ನಿರ್ಮಿಸಿ ತಾವೇ ಕಾಯಿಗಳ ರೀತಿ ವಸ್ತ್ರ ಧರಿಸಿ ಚೆಸ್ ಆಡುವ ಮೂಲಕ ಗಮನ ಸೆಳೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಫ್ರಾನ್ಸಿಸ್ಕೊ ​​ವ್ಯಾಲೆಜೊ ಪೊನ್ಸ್ ಪದಕ ಪಟ್ಟಿ ಮತ್ತು ಒಲಿಂಪಿಯಾಡ್ ಕಿರುಪರಿಚಯ

ಫ್ರಾನ್ಸಿಸ್ಕೊ ​​ವ್ಯಾಲೆಜೊ ಪೊನ್ಸ್ ಪದಕ ಪಟ್ಟಿ ಮತ್ತು ಒಲಿಂಪಿಯಾಡ್ ಕಿರುಪರಿಚಯ

ಚೆಸ್ ಒಲಿಂಪಿಯಾಡ್‌ಗಾಗಿ ಚೆನ್ನೈನಲ್ಲಿ ಮಾಡಲಾಗಿರುವ ಸಿದ್ಧತೆಯನ್ನು ಕೊಂಡಾಡಿರುವ ಫ್ರಾನ್ಸಿಸ್ಕೊ ​​ವ್ಯಾಲೆಜೊ ಪೊನ್ಸ್ ಮೂಲತಃ ಸ್ಪೇನ್ ದೇಶದ ಚೆಸ್ ಆಟಗಾರನಾಗಿದ್ದು, ತಮಗೆ 16 ವರ್ಷ 9 ತಿಂಗಳ ಪ್ರಾಯ ಆಗಿರುವಾಗಲೇ ತಮ್ಮ ಮೊದಲ ಚೆಸ್ ಗ್ರ್ಯಾಂಡ್ ಮಾಸ್ಟರ್ ಟೈಟಲ್‌ನ್ನು ಗೆದ್ದಿದ್ದರು. ಸದ್ಯ ಸಕ್ರಿಯ ಚೆಸ್ ಪ್ಲೇಯರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ 33ನೇ ಸ್ಥಾನದಲ್ಲಿದ್ದಾರೆ. 2000ದಲ್ಲಿ ನಡೆದಿದ್ದ ಅಂಡರ್ 18 ವರ್ಲ್ಡ್ ಚೆಸ್ ಯೂರ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಫ್ರಾನ್ಸಿಸ್ಕೊ ​​ವ್ಯಾಲೆಜೊ ಪೊನ್ಸ್ ಐದು ಬಾರಿ ಸ್ಪ್ಯಾನಿಷ್ ಚೆಸ್ ಚಾಂಪಿಯನ್ ಆಗಿದ್ದಾರೆ.

ಚೆಸ್ ಒಲಿಂಪಿಯಾಡ್ ವಿಶ್ವ ಚೆಸ್ ಆಟಗಾರರ ನಡುವೆ ನಡೆಯುವ ಚೆಸ್ ಹಣಾಹಣಿಯಾಗಿದ್ದು, ಇಲ್ಲಿಯೂ ಸಹ ವಿವಿಧ ಚೆಸ್ ಹಣಾಹಣಿಯಲ್ಲಿ ಗೆಲ್ಲುವ ವಿಜೇತರಿಗೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕದ ವಿತರಣೆ ಇರಲಿದೆ. ಕೊರೊನಾ ಕಾರಣದಿಂದಾಗಿ ಕಳೆದೆರಡು ವರ್ಷಗಳ ಚೆಸ್ ಒಲಿಂಪಿಯಾಡ್‌ನ್ನು ಆನ್‌ಲೈನ್ ಮೂಲಕ ಆಯೋಜಿಸಲಾಗಿತ್ತು. ಆದರೆ, ಈ ಬಾರಿ ಈ ಹಿಂದಿನಂತೆ ಚೆಸ್ ಹಾಲ್ ನಿರ್ಮಿಸಿ ಒಲಿಂಪಿಯಾಡ್‌ನ್ನು ನಡೆಸಲಾಗುತ್ತಿದೆ. ಇನ್ನು ಇಲ್ಲಿಯವರೆಗೂ ನಡೆದಿರುವ 43 ಚೆಸ್ ಒಲಿಂಪಿಯಾಡ್‌ನಲ್ಲಿ ಸೋವಿಯಟ್ ರಾಷ್ಟ್ರಗಳು ಅಧಿಕ ಬಾರಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿವೆ.

Story first published: Wednesday, July 27, 2022, 13:08 [IST]
Other articles published on Jul 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X