ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಚೀನಾದ ಸ್ವಿಮ್ಮರ್ ಸನ್ ಯಾಂಗ್ ಮೇಲಿನ 8 ವರ್ಷಗಳ ನಿಷೇಧ ರದ್ದು

Chinese swimmer Sun Yangs 8-year doping ban overturned

ಜಿನೇವಾ: ಚೀನಾದ ಸ್ಟಾರ್ ಸ್ಮಿಮ್ಮರ್, 3 ಬಾರಿ ಒಲಿಂಪಿಕ್ ಚಾಂಪಿಯನ್ ಎನಿಸಿರುವ ಸನ್ ಯಾಂಗ್ ಮೇಲಿನ 8 ವರ್ಷಗಳ ನಿಷೇಧ ರದ್ದಾಗಿದೆ. ಟೋಕಿಯೋ ಒಲಿಂಪಿಕ್ಸ್‌ಗೆ ಇನ್ನು ಸುಮಾರು 7 ತಿಂಗಳು ಬಾಕಿಯಿರುವಾಗಲೇ ಯಾಂಗ್‌ಗೆ ಶುಭಸುದ್ದಿ ಕೇಳಿಬಂದಿದೆ. ಉದ್ದೀಪನ ಸೇವನೆ ಆರೋಪದಡಿಯಲ್ಲಿ ಯಾಂಗ್‌ಗೆ ನಿಷೇಧ ವಿಧಿಸಲಾಗಿತ್ತು.

ದೆಹಲಿಯಲ್ಲಿ 1 ರೂ.ಗೆ ಊಟದ ಕ್ಯಾಂಟೀನ್ ಆರಂಭಿಸಲಿದ್ದಾರೆ ಗಂಭೀರ್ದೆಹಲಿಯಲ್ಲಿ 1 ರೂ.ಗೆ ಊಟದ ಕ್ಯಾಂಟೀನ್ ಆರಂಭಿಸಲಿದ್ದಾರೆ ಗಂಭೀರ್

ಚೀನಾ ಪರ ಒಲಿಂಪಿಕ್ ಚೊಚ್ಚಲ ಚಿನ್ನದ ಪದಕ ಗೆದ್ದಿರುವ ದಾಖಲೆ 29ರ ಹರೆಯದ ಯಾಂಗ್ ಅವರದ್ದು. ಸ್ವಿಟ್ಜರ್‌ಲ್ಯಾಂಡ್‌ನ ಪ್ರಮುಖ ಕೋರ್ಟ್, ಸನ್ ಯಾಂಗ್ ಮೇಲಿನ 8 ವರ್ಷಗಳ ನಿಷೇಧವನ್ನು ರದ್ದು ಮಾಡಿದೆ. ಹೀಗಾಗಿ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ (ಸಿಎಎಸ್) ನಲ್ಲಿ ಎರಡನೇ ವಿಚಾರಣೆಯಲ್ಲಿ ತನ್ನ ಪ್ರಕರಣವನ್ನು ಮುಂದಿಡಲು ಯಾಂಗ್‌ಗೆ ಈಗ ಅವಕಾಶವಿದೆ.

ರಷ್ಯಾ ಬ್ಯಾಡ್ಮಿಂಟನ್ ಆಟಗಾರ ನಿಕಿತಾ ಖಾಕಿಮೋವ್‌ಗೆ 5 ವರ್ಷಗಳ ನಿಷೇಧರಷ್ಯಾ ಬ್ಯಾಡ್ಮಿಂಟನ್ ಆಟಗಾರ ನಿಕಿತಾ ಖಾಕಿಮೋವ್‌ಗೆ 5 ವರ್ಷಗಳ ನಿಷೇಧ

ಮತ್ತೊಮ್ಮೆ ವಿಚಾರಣೆ ನಡೆದು ತೀರ್ಪು ಬರುವವರೆಗೂ ಸನ್ ಯಾಂಗ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬಹುದಾಗಿದೆ. ಇದರರ್ಥ ಸನ್ ಯಾಂಗ್ ಅವರು ಮುಂಬರುವ ಒಲಿಂಪಿಕ್‌ನಲ್ಲಿ 200 ಮೀಟರ್ ಈಜಿನಲ್ಲಿ ಚಿನ್ನದ ಪದಕವನ್ನು ತನ್ನನ್ನೇ ಉಳಿಸಿಕೊಳ್ಳಲು ಅವಕಾಶವಿದೆ. ಕೊರೊನಾವೈರಸ್ ಕಾರಣದಿಂದಾಗಿ ಟೋಕಿಯೋ ಒಲಿಂಪಿಕ್ಸ್ ಮುಂದೂಡಲ್ಪಟ್ಟಿರುವುದು ಯಾಂಗ್‌ಗೆ ವರದಾನವಾಗಿದೆ.

Story first published: Thursday, December 24, 2020, 23:29 [IST]
Other articles published on Dec 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X