ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಜಾರ್ಜ್ ಫ್ಲಾಯ್ಡ್ ಹತ್ಯೆಗೆ ಒಂದಾದ ಕ್ರೀಡಾಲೋಕ : ಕ್ರಿಕೆಟ್‌ನ ವರ್ಣಭೇದ ನೀತಿ ಬಗ್ಗೆ ಗೇಲ್ ಪ್ರಸ್ತಾಪ

Chris Gayle opens up after death of George Floyd

ಜಾರ್ಜ್ ಫ್ಲಾಯ್ಡ್ ಎಂಬ ಆಫ್ರಿಕನ್-ಅಮೆರಿಕನ್ ವ್ಯಕ್ತಿಯ ಅಮಾನುಷ ಹತ್ಯೆ ಅಮೆರಿಕಾವನ್ನು ಮಾತ್ರವಲ್ಲ ಇಡೀ ವಿಶ್ವವನ್ನು ನಡುಗಿಸಿದೆ. ಪೊಲೀಸ್ ಅಧಿಕಾರಿಯೋರ್ವ ಖೋಟಾನೋಟು ಚಲಾವಣೆ ಆರೋಪದಲ್ಲಿ ಬಂಧಿಸಿದ್ದ ಈ ವ್ಯಕ್ತಿಯನ್ನು ಬೂಟಿನಲ್ಲಿ ಕತ್ತು ಅದುಮಿ ಹತ್ಯೆ ಮಾಡಿದ್ದ. ಈ ಘಟನೆಯ ವಿರುದ್ಧ ಅಮೆರಿಕಾದಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ.

ಕಪ್ಪು ವರ್ಣೀಯ ಎಂಬ ಕಾರಣಕ್ಕೆ ಪೊಲೀಸರು ಜಾರ್ಜ್ ಫ್ಲಾಯ್ಡ್‌ನನ್ನು ನೆಲಕ್ಕೆ ತಳ್ಳಿ ಕಾಲನ್ನು ಕತ್ತಿನ ಮೇಲೆ ಕಾಲಿಟ್ಟು ಉಸಿರು ಕಟ್ಟುವಂತೆ ಮಾಡಿದ್ದರು. ಹಲವು ನಿಮಿಷಗಳ ನಂತರ ಜಾರ್ಜ್ ಪ್ಲಾಯ್ಡ್ ಅಲ್ಲೇ ಪ್ರಾಣವನ್ನು ಕಳೆದುಕೊಂಡಿದ್ದರು. ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಪೊಲೀಸರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಏಷ್ಯನ್ ಚಿನ್ನ ಗೆದ್ದ ಬಾಕ್ಸರ್ ಡಿಂಗ್ಕೊಗೆ ಕ್ಯಾನ್ಸರ್‌ ಜೊತೆಗೆ ಕೊರೊನಾ ಬರೆ!ಏಷ್ಯನ್ ಚಿನ್ನ ಗೆದ್ದ ಬಾಕ್ಸರ್ ಡಿಂಗ್ಕೊಗೆ ಕ್ಯಾನ್ಸರ್‌ ಜೊತೆಗೆ ಕೊರೊನಾ ಬರೆ!

ಈ ಅಮಾನುಷ ಕೃತ್ಯ ಈಗ ಹಲವಾರು ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತಿದೆ. ಕ್ರೀಡಾಲೋಕದಲ್ಲೂ ಆಳವಾಗಿ ಬೇರೂರಿರುವ ವರ್ಣಬೇಧ ನೀತಿಯ ಕರಾಳ ಮುಖವನ್ನು ಜಗತ್ತಿನ ಮುಂದೆ ಬಹಿರಂಗ ಪಡಿಸುತ್ತಿದೆ.

ಜಗತ್ತಿನಾದ್ಯಂತ ನಡೆಯುತ್ತಿದೆ ಪ್ರತಿಭಟನೆ

ಜಗತ್ತಿನಾದ್ಯಂತ ನಡೆಯುತ್ತಿದೆ ಪ್ರತಿಭಟನೆ

ಜಾರ್ಜ್ ಫ್ಲಾಯ್ಡ್ ಹತ್ಯೆಯನ್ನು ಇಡೀ ಜಗತ್ತು ಖಂಡಿಸುತ್ತಿದೆ. ವರ್ಣಬೇಧದ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ಇದು ನಾಂದಿಯಾಗಿದೆ. ಜಗತ್ತಿನಾದ್ಯಂತ ಹಲವಾರು ಪ್ರತಿಭಟನೆಗಳು ನಡೆಯುತ್ತಿದೆ. ಕ್ರೀಡಾ ಲೋಕದಲ್ಲೂ ಇದಕ್ಕೆ ದೊಡ್ಡ ಸ್ಪಂದನೆ ಸಿಕ್ಕಿದೆ. ಅದರಲ್ಲೂ ಅನೇಕ ಫುಟ್ಬಾಲ್ ಆಟಗಾರರು ತಮಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಆರಂಭಿಸಿದ್ದಾರೆ.

ಒಂದಾದ ಫುಟ್ಬಾಲ್ ಲೋಕ

ಒಂದಾದ ಫುಟ್ಬಾಲ್ ಲೋಕ

ಜಾರ್ಜ್ ಫ್ಲಾಯ್ಡ್ ಹತ್ಯೆಯ ವಿರುದ್ಧ ಫುಟ್ಬಾಲ್ ಜಗತ್ತಿನಲ್ಲಿ ದೊಡ್ಡ ಧ್ವನಿ ಕೇಳಲು ಆರಂಭಿಸಿದೆ. ಆಟಗಾರರು ಈ ಸಂದರ್ಭದಲ್ಲಿ ತಮಗಾದ ಅನ್ಯಾಯಗಳನ್ನು ಬಹಿರಂಗಗೊಳಿಸುತ್ತಿದ್ದಾರೆ. ಫುಟ್ಬಾಲ್‌ನ ಖ್ಯಾತ ಲೀಗ್ ತಂಡವಾದ ಜ್ಯಾಡನ್ ಸ್ಯಾನ್ಕೋ ಆಟದ ಮಧ್ಯೆದಲ್ಲಿಯೇ ಒಳ ಅಂಗಿಯಲ್ಲಿ ಬರೆದುಕೊಂಡಿದ್ದ "ಜಸ್ಟಿಸ್ ಫೋರ್ ಜಾರ್ಜ್ ಫ್ಲಾಯ್ಡ್" ಎಂಬ ಕೈ ಬರಹವನ್ನು ತೋರಿಸುವ ಮೂಲಕ ಈ ಪ್ರತಿಭಟನೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅನೇಕ ಫುಟ್ಬಾಲ್ ಕ್ಲಬ್‌ಗಳು ಆಟಗಾರರು ಮತ್ತು ಕೋಚ್‌ಗಳು ಘಟನೆಯ ಬಗ್ಗೆ ಖಂಡಿಸಿ ತಮ್ಮದೇ ರೀತಿಯ ಪ್ರತಿಭಟನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

"ವರ್ಣಬೇಧ ಆಳವಾಗಿ ಬೇರೂರಿದೆ"

ಉತ್ತರ ಅಮೆರಿಕಾದ ಪ್ರಖ್ಯಾತ ಫುಟ್ಬಾಲ್ ಲೀಗ್ ನ್ಯಾಶನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಶನ್‌(ಎನ್‌ಬಿಎ)ನ ಐಕಾನ್ ಅಗಿರುವ ಮೈಕಲ್ ಜಾರ್ಡನ್ ಈ ಘಟನೆಯ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಭಾನುವಾರ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು ಅಮೆರಿಕಾದಲ್ಲಿ ವರ್ಣಬೇಧ ನೀತಿ ಆಳವಾಗಿ ಬೇರೂರಿದೆ ಎಂದು ಘೋಷಿಸಿದ್ದಾರೆ. ನಾನು ತುಂಬಾ ದುಃಖಿತನಾಗಿದ್ದೇನೆ, ನೊಂದಿದ್ದೇನೆ ಮತ್ತು ಕೋಪಗೊಂಡಿದ್ದೇನೆ ಎಂದು ತಮ್ಮ ಆಘಾತ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್‌ನಲ್ಲೂ ವರ್ಣಬೇಧ ಎಂದ ಕ್ರಿಸ್ ಗೇಲ್

ಕ್ರಿಕೆಟ್‌ನಲ್ಲೂ ವರ್ಣಬೇಧ ಎಂದ ಕ್ರಿಸ್ ಗೇಲ್

ಈ ಘಟನೆ ಫುಟ್ಬಾಲ್‌ನಲ್ಲಿ ಮಾತ್ರವಲ್ಲ ಕ್ರಿಕೆಟ್‌ನಲ್ಲೂ ವರ್ಣಬೇಧ ಇದೆ ಎಂಬುದನ್ನು ಈಗ ಬಹಿರಂಗ ಪಡಿಸುತ್ತಿದೆ. ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಕ್ರಿಸ್ ಗೇಲ್ ಈ ಬಗ್ಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜಗತ್ತಿನ ಬೇರೆ ಬೇರೆ ಭಾಗಗಳಿಗೆ ನಾನು ಭೇಟಿ ನೀಡಿದ್ದೇನೆ ಈ ಸಂದರ್ಭದಲ್ಲಿ ಹಲವಾರು ಬಾರಿ ಕಪ್ಪು ವರ್ಣೀಯ ಎಂಬ ಕಾರಣಕ್ಕೆ ಅವಮಾನವನ್ನು ಎದುರಿಸಿದ್ದೇನೆ ಎಂದು ಗೇಲ್ ಬಹಿರಂಗಪಡಿಸಿದ್ದಾರೆ.

Story first published: Monday, June 1, 2020, 22:03 [IST]
Other articles published on Jun 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X