ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

'ಪಿಕಾಕ್ ಆಫ್‌ ದ ಫೇರ್‌ವೇಸ್' ಖ್ಯಾತಿಯ ಡೌಗ್ ಸ್ಯಾಂಡರ್ಸ್ ನಿಧನ

Colourful ‘Peacock of the Fairways’ Doug Sanders dies at 86

ಹೂಸ್ಟನ್, ಏಪ್ರಿಲ್ 13: ವಿಶ್ವದ ಹೆಸರಾಂತ ಗಾಲ್ಫರ್, ಪ್ರೊಫೆಶನಲ್ಸ್ ಗಾಲ್ಫರ್ಸ್ ಅಸೋಸಿಯೇಶನ್ (ಪಿಜಿಎ) ಟೂರ್‌ನಲ್ಲಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಅಮೆರಿಕಾದ ಡೌಗ್ ಸ್ಯಾಂಡರ್ಸ್ ಮೃತರಾಗಿದ್ದಾರೆ. ಸ್ಯಾಂಡರ್ಸ್ ವಯೋಸಹಜವಾಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಒಂದೇ ಒಂದು ODI ಶತಕ ಸಿಡಿಸದ 5 ಪ್ರಸಿದ್ಧ ಬ್ಯಾಟ್ಸ್‌ಮನ್‌ಗಳು: ಓರ್ವ ಭಾರತೀಯ!ಒಂದೇ ಒಂದು ODI ಶತಕ ಸಿಡಿಸದ 5 ಪ್ರಸಿದ್ಧ ಬ್ಯಾಟ್ಸ್‌ಮನ್‌ಗಳು: ಓರ್ವ ಭಾರತೀಯ!

ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಕೊನೆಯುಸಿರೆಳೆದಿರುವ ಡೌಗ್ ಸ್ಯಾಂಡರ್ಸ್, ಪಿಕಾಕ್ ಆಫ್‌ ದ ಫೇರ್‌ವೇಸ್ (ಫೇರ್‌ವೇಸ್‌ನ ನವಿಲು) ಖ್ಯಾತರಾಗಿದ್ದವರು. ಗಾಲ್ಫ್‌ನಲ್ಲಿ ಬಲು ಫೇಮಸ್ ಆಗಿದ್ದ ಸ್ಯಾಂಡರ್ಸ್ ಯುಎಸ್ ಪಿಜಿಎ ಟೂರ್‌ನಲ್ಲಿ 20 ಪ್ರಶಸ್ತಿಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ. ಇದರಲ್ಲಿ 1956ರ ಕೆನಡಿಯನ್ ಓಪನ್ ಟ್ರೋಫಿಯೂ ಸೇರಿದೆ.

ಡೇಲ್ ಸ್ಟೇನ್ ಬೆಸ್ಟ್ ಬ್ಯಾಟ್ಸ್‌ಮನ್‌ಗಳ ಲಿಸ್ಟ್‌ನಲ್ಲಿ ಇಬ್ಬರು ಭಾರತೀಯರ ಹೆಸರುಡೇಲ್ ಸ್ಟೇನ್ ಬೆಸ್ಟ್ ಬ್ಯಾಟ್ಸ್‌ಮನ್‌ಗಳ ಲಿಸ್ಟ್‌ನಲ್ಲಿ ಇಬ್ಬರು ಭಾರತೀಯರ ಹೆಸರು

20 ಪ್ರಶಸ್ತಿಗಳಲ್ಲದೆ ಸ್ಯಾಂಡರ್ಸ್ 1970ರ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟಿಗೆ ನಾಲ್ಕು ಬಾರಿ ರನ್ನರ್ಸ್ ಪ್ರಶಸ್ತಿ ಗೆದ್ದಿದ್ದಾರೆ. ಇದೇ ಕಾರಣಕ್ಕೆ ಗಾಲ್ಫ್‌ ಕ್ರೀಡೆಯಲ್ಲಿ ಸ್ಯಾಂಡರ್ಸ್‌ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದರು.

ಯುವಿ-ಧೋನಿ ಭಾರತ ತಂಡವನ್ನು ಹೇಗೆ ಬದಲಾಯಿಸಿದರು ಎಂದು ಹೇಳಿದ ಪಾಕ್ ಮಾಜಿ ವೇಗಿಯುವಿ-ಧೋನಿ ಭಾರತ ತಂಡವನ್ನು ಹೇಗೆ ಬದಲಾಯಿಸಿದರು ಎಂದು ಹೇಳಿದ ಪಾಕ್ ಮಾಜಿ ವೇಗಿ

1970ರಲ್ಲಿ ಬ್ರಿಟಿಷ್ ಓಪನ್ ಗಾಲ್ಫ್ ಸ್ಪರ್ಧೆಯಲ್ಲಿ ಸ್ಯಾಂಡರ್ಸ್ ಸ್ಪಲ್ಪವೇ ಸ್ವಲ್ಪದರಲ್ಲಿ ಪ್ರಶಸ್ತಿ ಕೈ ತಪ್ಪಿಸಿಕೊಂಡಿದ್ದರು. ಇದು ಸ್ಯಾಂಡರ್ಸ್ ವೃತ್ತಿ ಬದುಕಿನ ಬಲುದೊಡ್ಡ ಸೋಲಾಗಿ ಗುರುತಿಸಿಕೊಂಡಿತ್ತು. ಯಾಕೆಂದರೆ ಅಂದಿನ ಸ್ಪರ್ಧೆಯಲ್ಲಿ ಸ್ಯಾಂಡರ್ಸ್ ಗೆದ್ದರೆಂದೇ ಭಾವಿಸಲಾಗಿತ್ತು. ಆದರೆ ಸ್ಯಾಂಡರ್ಸ್ ಸೋತು ಆಘಾತ ಅನುಭವಿಸಿದ್ದರು.

Story first published: Monday, April 13, 2020, 17:41 [IST]
Other articles published on Apr 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X