ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

CWG 2022: ಮೊದಲ ದಿನದ ಮುಕ್ತಾಯಕ್ಕೆ ಯಾವ ದೇಶ ಎಷ್ಟು ಪದಕ ಗೆದ್ದಿದೆ? ಇಲ್ಲಿದೆ ಪದಕ ಪಟ್ಟಿ

Commonwealth games 2022: Medal Tally after the end of day 1

ಇಂಗ್ಲೆಂಡ್‌ನ ಬರ್ಮಿಂಗ್ ಹ್ಯಾಂ ನಗರದಲ್ಲಿ ಈ ಬಾರಿಯ ಕಾಮನ್‍ವೆಲ್ತ್ ಗೇಮ್ಸ್ ಕ್ರೀಡಾ ಕೂಟಗಳು ಜರುಗುತ್ತಿವೆ. ಜುಲೈ 28ರಂದು ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದ ಉದ್ಘಾಟನೆ ನಡೆದಿದ್ದು, ನಿನ್ನೆಯಿಂದ ( ಜುಲೈ 29 ) ಸ್ಪರ್ಧೆಗಳು ಆರಂಭಗೊಂಡಿವೆ.

ಒಂದಲ್ಲಾ ಎರಡಲ್ಲ ಕಳೆದ 12 ತಿಂಗಳಿನಲ್ಲಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದದ್ದು 9 ಜೋಡಿ!ಒಂದಲ್ಲಾ ಎರಡಲ್ಲ ಕಳೆದ 12 ತಿಂಗಳಿನಲ್ಲಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದದ್ದು 9 ಜೋಡಿ!

ಇನ್ನು ಭಾರತದ ಪರ ಈ ಪ್ರತಿಷ್ಠಿತ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ 37 ಕ್ರೀಡಾಪಟುಗಳು ಭಾಗವಹಿಸಿದ್ದು, ಈ ಬಾರಿ ಮಹಿಳಾ ಕ್ರಿಕೆಟ್ ಕೂಡ ಆಯೋಜನೆಯಾಗಿರುವುದರಿಂದ ಭಾರತೀಯ ವನಿತೆಯರ ಕ್ರಿಕೆಟ್ ತಂಡ ಕೂಡ ಈ ಸ್ಪರ್ಧೆಯಲ್ಲಿ ಕಣಕ್ಕಿಳಿದಿದೆ.

2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮಾಡಿದ್ದ ಈ 3 ತಪ್ಪನ್ನು ಈ ಬಾರಿಯೂ ಮಾಡಿದರೆ ಮತ್ತೆ ಮುಖಭಂಗ ಖಚಿತ!2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮಾಡಿದ್ದ ಈ 3 ತಪ್ಪನ್ನು ಈ ಬಾರಿಯೂ ಮಾಡಿದರೆ ಮತ್ತೆ ಮುಖಭಂಗ ಖಚಿತ!

ಜುಲೈ 29ರಂದು ಭಾರತೀಯ ವನಿತೆಯರ ತಂಡ ಹಾಗೂ ಆಸ್ಟ್ರೇಲಿಯಾ ವನಿತೆಯರ ತಂಡಗಳ ನಡುವಿನ ಪಂದ್ಯದ ಮೂಲಕ ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿ ಆರಂಭವಾಯಿತು. ಹೀಗೆ ಈ ದಿನದಂದು ಭಾರತೀಯ ವನಿತೆಯರ ತಂಡ ಸೇರಿದಂತೆ ಭಾರತದ ಹಲವಾರು ಕ್ರೀಡಾಪಟುಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದ್ದರು. ಹೀಗೆ ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ ಮೊದಲ ದಿನ ಮುಕ್ತಾಯವಾದ ನಂತರ ಪದಕ ಪಟ್ಟಿ ಹೇಗಿದೆ, ಯಾವ ದೇಶ ಎಷ್ಟು ಪದಕಗಳನ್ನು ಗೆದ್ದಿದೆ ಮತ್ತು ಈ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವವರು ಯಾರು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಪ್ರಥಮ ದಿನ ಮುಕ್ತಾಯದ ನಂತರ ಪದಕ ಪಟ್ಟಿ

ಪ್ರಥಮ ದಿನ ಮುಕ್ತಾಯದ ನಂತರ ಪದಕ ಪಟ್ಟಿ

ಕಾಮನ್ ವೆಲ್ತ್ ಗೇಮ್ಸ್ 2022ರ ಕ್ರೀಡಾಕೂಟದ ಪ್ರಥಮ ದಿನ ಮುಕ್ತಾಯವಾದ ನಂತರ ಪದಕ ಪಟ್ಟಿಯಲ್ಲಿ ಯಾವ ದೇಶಗಳು ಯಾವ ಸ್ಥಾನದಲ್ಲಿವೆ ಎಂಬುದರ ಮಾಹಿತಿ ಕೆಳಕಂಡಂತಿದೆ.

1. 8 ಚಿನ್ನ, 4 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗೆದ್ದಿರುವ ಆಸ್ಟ್ರೇಲಿಯಾ 16 ಪದಗಳನ್ನು ಪಡೆದುಕೊಂಡು ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

2. 3 ಚಿನ್ನ, 3 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ಗೆದ್ದಿರುವ ನ್ಯೂಜಿಲೆಂಡ್ ಪದಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ.

3. 2 ಚಿನ್ನ, 5 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿರುವ ಇಂಗ್ಲೆಂಡ್ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

4. 1 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ಗೆದ್ದಿರುವ ಕೆನಡಾ ದೇಶ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ

5. 1 ಚಿನ್ನ, 1 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗೆದ್ದಿರುವ ಸ್ಕಾಟ್ಲೆಂಡ್ ಪದಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

6. 1 ಚಿನ್ನದ ಪದಕವನ್ನು ಗೆದ್ದಿರುವ ಬರ್ಮುಡಾ ದೇಶ ಪದಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

7. 1 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ಗೆದ್ದಿರುವ ವೇಲ್ಸ್ ಪದಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

8. 1 ಕಂಚಿನ ಪದಕವನ್ನು ಗೆದ್ದಿರುವ ಸೈಪ್ರಸ್ ಪದಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

9. 1 ಕಂಚಿನ ಪದಕವನ್ನು ಗೆದ್ದಿರುವ ನಾರ್ದರ್ನ್ ಐರ್ಲೆಂಡ್ ಪದಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. .

ಮೊದಲ ದಿನ ಯಾವುದೇ ಪದಕ ಗಳಿಸಲಿಲ್ಲ ಭಾರತ

ಮೊದಲ ದಿನ ಯಾವುದೇ ಪದಕ ಗಳಿಸಲಿಲ್ಲ ಭಾರತ

ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ ಮೊದಲನೇ ದಿನ ಭಾರತ ಕ್ರಿಕೆಟ್, ಈಜು ಸೇರಿದಂತೆ ಹಲವಾರು ಕ್ರೀಡೆಗಳಲ್ಲಿ ಭಾಗವಹಿಸಿತ್ತು. ಆದರೆ ಈ ಯಾವುದೇ ಹಣಾಹಣಿಯಲ್ಲಿಯೂ ಸಹ ಭಾರತ ಪದಕ ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಲಿಲ್ಲ.

ಗೆಲ್ಲುವ ಭರವಸೆ ಹುಟ್ಟುಹಾಕಿ ಸೋತ ಭಾರತ

ಗೆಲ್ಲುವ ಭರವಸೆ ಹುಟ್ಟುಹಾಕಿ ಸೋತ ಭಾರತ

ಭಾರತ ವನಿತೆಯರ ತಂಡ ಹಾಗೂ ಆಸ್ಟ್ರೇಲಿಯಾ ವನಿತೆಯರ ತಂಡಗಳ ನಡುವೆ ನಡೆದ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದ ಪ್ರಥಮ ಕ್ರಿಕೆಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ ಕಲೆಹಾಕಿ ಆಸ್ಟ್ರೇಲಿಯಾಗೆ 155 ರನ್‌ಗಳ ಗುರಿಯನ್ನು ನೀಡಿತ್ತು. ಇತ್ತ ಈ ಗುರಿಯನ್ನು ಬೆನ್ನತ್ತಲು ಯತ್ನಿಸಿದ್ದ ಆಸ್ಟ್ರೇಲಿಯಾ 7.2 ಓವರ್‌ಗಳಲ್ಲಿ 49 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು ಹಾಗೂ ಟೀಮ್‌ ಇಂಡಿಯಾ ಗೆಲ್ಲುವ ಅವಕಾಶವನ್ನು ಹೆಚ್ಚಾಗಿ ಹೊಂದಿದ್ದರು. ಆದರೆ ನಂತರ ನೆಲಕಚ್ಚಿ ನಿಂತ ಗಾರ್ಡ್ನರ್ ಟೀಮ್ ಇಂಡಿಯಾದ ಕನಸಿಗೆ ತಣ್ಣೀರು ಎರಚಿದರು. ಅಜೇಯ ಅರ್ಧ ಶತಕವನ್ನು ಬಾರಿಸಿದ ಗಾರ್ಡ್ನರ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ 19 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿ 3 ವಿಕೆಟ್‍ಗಳ ಜಯ ಸಾಧಿಸಿ ಶುಭಾರಂಭವನ್ನು ಮಾಡಿತು.

Story first published: Tuesday, August 2, 2022, 12:23 [IST]
Other articles published on Aug 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X