ಕಾಮನ್‌ವೆಲ್ತ್ ಗೇಮ್ಸ್ 2022: ಪದಕ ಬೇಟೆಯಲ್ಲಿ ಮುಂಚೂಣಿ ದೇಶಗಳು; ಭಾರತಕ್ಕೆ ಎಷ್ಟನೇ ಸ್ಥಾನ?

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಕ್ರೀಡಾಕೂಟದ 7ನೇ ದಿನದಂದು ಭಾರತ ತನ್ನ ಬುಟ್ಟಿಗೆ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಸೇರಿದಂತೆ ಎರಡು ಪದಕಗಳನ್ನು ಗಳಿಸಿದೆ. ಈವರೆಗೆ ಆರು ಚಿನ್ನ, ಏಳು ಬೆಳ್ಳಿ ಮತ್ತು ಏಳು ಕಂಚಿನ ಪದಕಗಳೊಂದಿಗೆ ಭಾರತ ಪ್ರಸ್ತುತ ಪದಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದು, ಒಟ್ಟು 20 ಪದಕಗಳನ್ನು ಗೆದ್ದಿದೆ.

ಭಾರತದ ಸುಧೀರ್ ಪ್ಯಾರಾ ಪವರ್‌ಲಿಫ್ಟಿಂಗ್‌ನ ಪುರುಷರ ಹೆವಿವೇಯ್ಟ್ ಫೈನಲ್‌ನಲ್ಲಿ 7ನೇ ದಿನವನ್ನು ಚಿನ್ನದ ಪದಕದೊಂದಿಗೆ ಕೊನೆಗೊಳಿಸಿದರು. ಇನ್ನು ಪುರುಷರ ಲಾಂಗ್ ಜಂಪ್‌ನಲ್ಲಿ ಮುರಳಿ ಶ್ರೀಶಂಕರ್ 8.08 ಮೀ. ಜಿಗಿತದೊಂದಿಗೆ ಭಾರತಕ್ಕೆ ಐತಿಹಾಸಿಕ ಬೆಳ್ಳಿ ಪದಕ ಗೆದ್ದುಕೊಟ್ಟಿದ್ದರು.

CWG 2022: ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಪ್ಯಾರಾ-ಪವರ್‌ಲಿಫ್ಟರ್ ಸುಧೀರ್CWG 2022: ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಪ್ಯಾರಾ-ಪವರ್‌ಲಿಫ್ಟರ್ ಸುಧೀರ್

ಮುರಳಿ ಶ್ರೀಶಂಕರ್ ಪುರುಷರ ಲಾಂಗ್ ಜಂಪ್‌ನಲ್ಲಿ 8.08 ಮೀ. ದೂರದಲ್ಲಿ ಐತಿಹಾಸಿಕ ಬೆಳ್ಳಿ ಗೆದ್ದರು. ಲಾಂಗ್ ಜಂಪ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಪದಕ ಗೆದ್ದ ಮೊದಲ ಭಾರತೀಯ ಪುರುಷ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ಯಾರಾ-ಪವರ್‌ಲಿಫ್ಟರ್ ಸುಧೀರ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪ್ಯಾರಾ-ಪವರ್‌ಲಿಫ್ಟಿಂಗ್‌ನಲ್ಲಿ ಭಾರತದ ಮೊದಲ ಚಿನ್ನ ಗೆದ್ದರು.

ಸೆಮಿಫೈನಲ್ ಪ್ರವೇಶಿಸಿರುವ ಭಾರತ ಹಾಕಿ ತಂಡ

ಸೆಮಿಫೈನಲ್ ಪ್ರವೇಶಿಸಿರುವ ಭಾರತ ಹಾಕಿ ತಂಡ

ಸುಧೀರ್ ನೈಜೀರಿಯಾದ ಇಕೆಚುಕ್ವು ಒಬಿಚುಕ್ವು (133.6 ಅಂಕಗಳು) ಅವರನ್ನು 0.9 ಪಾಯಿಂಟ್‌ಗಳಿಂದ ಸೋಲಿಸಿದರು. ಏಕೆಂದರೆ ಸುಧೀರ್ ಅವರ ಅಂತಿಮ ಸ್ಕೋರ್ ಚಿನ್ನದ ಪದಕಕ್ಕಾಗಿ 134.5 ದಾಖಲೆ ಪಾಯಿಂಟ್‌ಗಳನ್ನು ಒಟ್ಟುಗೂಡಿಸಿದ್ದರು.

ಶುಕ್ರವಾರ ಮತ್ತು ಶನಿವಾರ ಹೆಚ್ಚಿನ ಭಾರತೀಯ ಬಾಕ್ಸರ್‌ಗಳು ಪದಕಗಳನ್ನು ಖಚಿತಪಡಿಸಿದ್ದಾರೆ. ಅಮಿತ್ ಪಂಘಲ್, ಜೈಸ್ಮಿನ್ ಲಂಬೋರಿಯಾ, ಸಾಗರ್ ಮತ್ತು ರೋಹಿತ್ ಟೋಕಾಸ್ ತಮ್ಮ ತಮ್ಮ ಸೆಮಿಫೈನಲ್‌ಗೆ ಮುನ್ನಡೆದಿದ್ದಾರೆ. ಭಾರತ ಪುರುಷರ ಹಾಕಿ ತಂಡವು ಗೆಲ್ಲಲೇಬೇಕಾದ ಪಂದ್ಯದಲ್ಲಿ ವೇಲ್ಸ್ ತಂಡವನ್ನು ಸೋಲಿಸಿ ಸೆಮಿಫೈನಲ್‌ಗೆ ಪ್ರವೇಶಿಸಿತು ಮತ್ತು ಏಸ್ ಸ್ಪ್ರಿಂಟರ್ ಹಿಮಾ ದಾಸ್ ಮಹಿಳೆಯರ 200 ಮೀ. ಸೆಮಿಸ್‌ಗೆ ಅರ್ಹತೆ ಪಡೆದಿದ್ದು, ಚಿನ್ನದ ಭರವಸೆ ಮೂಡಿಸಿದ್ದಾರೆ.

CWG 2022: ಪುರುಷರ ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಗೆದ್ದ ಮುರಳಿ ಶ್ರೀಶಂಕರ್

ಪದಕದ ಭರವಸೆ ಮೂಡಿಸಿರುವ ಪಿವಿ ಸಿಂಧು, ಕಿಡಂಬಿ ಶ್ರೀಕಾಂತ್

ಪದಕದ ಭರವಸೆ ಮೂಡಿಸಿರುವ ಪಿವಿ ಸಿಂಧು, ಕಿಡಂಬಿ ಶ್ರೀಕಾಂತ್

ಬ್ಯಾಡ್ಮಿಂಟನ್ ಭಾರತ ತಂಡದಲ್ಲಿ ಪಿವಿ ಸಿಂಧು, ಕಿಡಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್ ತಮ್ಮ ಮೊದಲ ಸಿಂಗಲ್ಸ್ ಪಂದ್ಯಗಳಲ್ಲಿ ಮುನ್ನಡೆದರು. ಹಾಲಿ ಟೇಬಲ್ ಟೆನಿಸ್ ಚಾಂಪಿಯನ್ ಮಣಿಕಾ ಬಾತ್ರಾ ಕೂಡ ಮುನ್ನಡೆದರೆ, ಸತ್ಯನ್ ಜ್ಞಾನಶೇಖರನ್ ಮತ್ತು ಏಸ್ ಪ್ಯಾಡ್ಲರ್ ಶರತ್ ಕಮಲ್ ತಮ್ಮ ಡಬಲ್ಸ್ ಪಂದ್ಯಗಳಲ್ಲಿ ಮುಂದಿನ ಸುತ್ತಿಗೆ ಮನ್ನಡೆ ಸಾಧಿಸಿದ್ದಾರೆ.

ಭಾರತದ ಅನುಭವಿ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಮೊದಲ ಬಾರಿಗೆ ಗಮನ ಸೆಳೆದರು ಮತ್ತು ಮಹಿಳೆಯರ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಪಂದ್ಯಗಳಲ್ಲಿ ವಿಜಯಶಾಲಿಯಾದರು. ಕ್ರೀಡಾಕೂಟದ 8ನೇ ದಿನದಂದು ಒಲಿಂಪಿಕ್ ಪದಕ ವಿಜೇತರಾದ ರವಿ ಕುಮಾರ್ ದಹಿಯಾ, ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ 12 ಸದಸ್ಯರ ಭಾರತೀಯ ಕುಸ್ತಿ ತಂಡವು ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ.

ಕಾಮನ್‌ವೆಲ್ತ್ ಗೇಮ್ಸ್ 2022ರ ಟಾಪ್ 10 ದೇಶಗಳ ಪದಕ ಪಟ್ಟಿ

ಕಾಮನ್‌ವೆಲ್ತ್ ಗೇಮ್ಸ್ 2022ರ ಟಾಪ್ 10 ದೇಶಗಳ ಪದಕ ಪಟ್ಟಿ

ಆಸ್ಟ್ರೇಲಿಯಾ: 50 ಚಿನ್ನ, 42 ಬೆಳ್ಳಿ, 40 ಕಂಚು, ಒಟ್ಟು 132 ಪದಕಗಳು

ಇಂಗ್ಲೆಂಡ್: 42 ಚಿನ್ನ, 44 ಬೆಳ್ಳಿ, 32 ಕಂಚು, ಒಟ್ಟು 118 ಪದಕಗಳು

ಕೆನಡಾ: 17 ಚಿನ್ನ, 20 ಬೆಳ್ಳಿ, 22 ಕಂಚು, ಒಟ್ಟು 59 ಪದಕಗಳು

ನ್ಯೂಜಿಲೆಂಡ್: 16 ಚಿನ್ನ, 10 ಬೆಳ್ಳಿ, 11 ಕಂಚು, ಒಟ್ಟು 37 ಪದಕಗಳು

ಸ್ಕಾಟ್ಲೆಂಡ್: 7 ಚಿನ್ನ, 8 ಬೆಳ್ಳಿ, 19 ಕಂಚು, ಒಟ್ಟು 34 ಪದಕಗಳು

ದಕ್ಷಿಣ ಆಫ್ರಿಕಾ: 7 ಚಿನ್ನ, 7 ಬೆಳ್ಳಿ, 8 ಕಂಚು, ಒಟ್ಟು 22 ಪದಕಗಳು

ಭಾರತ: 6 ಚಿನ್ನ, 7 ಬೆಳ್ಳಿ, 7 ಕಂಚು, ಒಟ್ಟು 20 ಪದಕಗಳು

ವೇಲ್ಸ್: 4 ಚಿನ್ನ, 4 ಬೆಳ್ಳಿ, 10 ಕಂಚು, ಒಟ್ಟು 18 ಪದಕಗಳು

ಮಲೇಷ್ಯಾ: 3 ಚಿನ್ನ, 2 ಬೆಳ್ಳಿ, 3 ಕಂಚು, ಒಟ್ಟು 8 ಪದಕಗಳು

ನೈಜೀರಿಯಾ: 3 ಚಿನ್ನ, 1 ಬೆಳ್ಳಿ, 4 ಕಂಚು, ಒಟ್ಟು 8 ಪದಕಗಳು

For Quick Alerts
ALLOW NOTIFICATIONS
For Daily Alerts
Story first published: Friday, August 5, 2022, 10:19 [IST]
Other articles published on Aug 5, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X