CWG 2022: ಟಾಪ್ 10 ದೇಶಗಳ ಪದಕ ಪಟ್ಟಿ; 9 ಚಿನ್ನ ಗೆದ್ದಿರುವ ಭಾರತದ ಸ್ಥಾನವೇನು?

ಬರ್ಮಿಂಗ್‍ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022ರ ಎಂಟನೇ ದಿನವಾದ ಶುಕ್ರವಾರದಂದು ಭಾರತದ ಕುಸ್ತಿಪಟುಗಳು ಮೂರು ಚಿನ್ನದ ಪದಕ ಸೇರಿದಂತೆ ಆರು ಪದಕ ಗೆದ್ದು ಪ್ರಮುಖ ಹಂತವನ್ನು ಪಡೆದರು.

ಕುಸ್ತಿ ಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ದೀಪಕ್ ಪುನಿಯಾ ಅವರು ತಮ್ಮ ತೂಕದ ವಿಭಾಗದಲ್ಲಿ ಚಿನ್ನ ಗೆದ್ದು ಒಂಬತ್ತು ಚಿನ್ನ ಸೇರಿದಂತೆ ಭಾರತದ ಪದಕಗಳ ಸಂಖ್ಯೆಯನ್ನು 26ಕ್ಕೆ ಕೊಂಡೊಯ್ದರು. ಇದರ ಫಲವಾಗಿ, ಸ್ಕಾಟ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾಕ್ಕಿಂತ ಮುಂದೆ ಭಾರತವು ಪದಕಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ಕಾಮನ್‌ವೆಲ್ತ್ ಗೇಮ್ಸ್ 2022; ದಿನ 9ರ ಸಂಪೂರ್ಣ ಭಾರತೀಯ ಕ್ರೀಡಾಪಟುಗಳ ವೇಳಾಪಟ್ಟಿಕಾಮನ್‌ವೆಲ್ತ್ ಗೇಮ್ಸ್ 2022; ದಿನ 9ರ ಸಂಪೂರ್ಣ ಭಾರತೀಯ ಕ್ರೀಡಾಪಟುಗಳ ವೇಳಾಪಟ್ಟಿ

ಶನಿವಾರ ಮಹಿಳಾ ಕ್ರಿಕೆಟ್ ತಂಡ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದ್ದು, ಗೆದ್ದರೆ ಭಾರತಕ್ಕೆ ಬೆಳ್ಳಿ ಪದಕ ಖಚಿತವಾದಂತಾಗುತ್ತದೆ. ಕಾಮನ್‌ವೆಲ್ತ್ ಗೇಮ್ಸ್ 2022ರ 8ನೇ ದಿನದಂದು ಭಾರತದ ಪದಕಗಳ ಬೇಟೆ ಮುಂದುವರೆದಿದ್ದು, ಕುಸ್ತಿಪಟುಗಳು 3 ಚಿನ್ನ, 1 ಬೆಳ್ಳಿ ಮತ್ತು 2 ಕಂಚು ಸೇರಿದಂತೆ 6 ಪದಕಗಳನ್ನು ಪಡೆದರು. ಈ ಮೂಲಕ ಭಾರತ ಪದಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ.

ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಚಿನ್ನ ಗೆದ್ದ ಸಾಕ್ಷಿ ಮಲಿಕ್

ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಚಿನ್ನ ಗೆದ್ದ ಸಾಕ್ಷಿ ಮಲಿಕ್

2016ರ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಚಿನ್ನದ ಪದಕದೊಂದಿಗೆ ಫಾರ್ಮ್‌ಗೆ ಮರಳಿದರೆ, ಭಾರತದ ಸ್ಟಾರ್ ಕುಸ್ತಿಪಟು ಮತ್ತು 2020ರ ಟೋಕಿಯೊ ಒಲಿಂಪಿಕ್ಸ್‌ನ ಕಂಚಿನ ವಿಜೇತ ಬಜರಂಗ್ ಪೂನಿಯಾ ಚಿನ್ನವನ್ನು ಗೆದ್ದರು. ಇದು ಅವರಿಗೆ ಸತತ ಎರಡನೇ ಚಿನ್ನವಾಗಿದೆ.

ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಮೊದಲ ಬಾರಿಗೆ ಪದಕ ಗೆದ್ದ ದೀಪಕ್ ಪುನಿಯಾ ಚಿನ್ನಕ್ಕೆ ಕೊರಳೊಡ್ಡಿದರು. ಅಂತಿಮ ಹಣಾಹಣಿಯಲ್ಲಿ ಸೋತ ನಂತರ ಅಂಶು ಮಲಿಕ್ ಬೆಳ್ಳಿ ಗೆದ್ದರೆ, ದಿವ್ಯಾ ಕಕ್ರಾನ್ ಮತ್ತು ಮೋಹಿತ್ ಗ್ರೆವಾಲ್ ತಮ್ಮ ವಿಭಾಗಗಳಲ್ಲಿ ಕಂಚಿನ ಪದಕಗಳನ್ನು ಗೆದ್ದರು.

ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಇಲ್ಲಿಯವರೆಗೆ ಭಾರತದ ಕ್ರೀಡಾಪಟುಗಳು ಒಂಬತ್ತು ಚಿನ್ನ, ಎಂಟು ಬೆಳ್ಳಿ ಮತ್ತು ಒಂಬತ್ತು ಕಂಚು ಸೇರಿದಂತೆ 26 ಪದಕಗಳನ್ನು ಗೆದ್ದಿದ್ದಾರೆ.

ಪುರುಷರ ಲಾನ್ ಬೌಲ್ಸ್ ಫೋರ್ಸ್ ತಂಡ ಫೈನಲ್‌ಗೆ

ಪುರುಷರ ಲಾನ್ ಬೌಲ್ಸ್ ಫೋರ್ಸ್ ತಂಡ ಫೈನಲ್‌ಗೆ

8ನೇ ದಿನದ ದೊಡ್ಡ ಹೈಲೈಟ್‌ಗಳಲ್ಲಿ ಒಂದಾದ ಪುರುಷರ ಲಾನ್ ಬೌಲ್ಸ್ ಫೋರ್ಸ್ ತಂಡವು ಭಾರತಕ್ಕೆ ಪದಕವನ್ನು ಖಚಿತಪಡಿಸಿದ್ದು, ಇಂಗ್ಲೆಂಡ್ ಅನ್ನು ಸೋಲಿಸಿ ಫೈನಲ್ ತಲುಪಿತು.

ಭಾರತ ಮಹಿಳಾ ಹಾಕಿ ತಂಡವು ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ ರೆಫರಿಯ ವಿವಾದಾತ್ಮಕ ನಿರ್ಧಾರದ ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ ಆಕ್ರಮಣಕಾರರಿಂದ ಕಡಿಮೆ ಪ್ರದರ್ಶನದ ನಂತರ ಸೋಲನ್ನು ಎದುರಿಸಬೇಕಾಯಿತು.

ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಸ್ಟಾರ್ ಭಾರತೀಯ ಪ್ಯಾಡ್ಲರ್ ಮಣಿಕಾ ಬಾತ್ರಾ ಅವರು ಕ್ವಾರ್ಟರ್ಫೈನಲ್ ಪಂದ್ಯಾವಳಿಯಲ್ಲಿ ಸೋತ ನಂತರ ನಿರಾಶೆಗಳು ಮುಂದುವರೆದವು.

ಭಾರತೀಯ ಮಹಿಳಾ ಕ್ರಿಕೆಟ್ ತಂಡ ಗೆದ್ದರೆ ಫೈನಲ್‌ಗೆ

ಭಾರತೀಯ ಮಹಿಳಾ ಕ್ರಿಕೆಟ್ ತಂಡ ಗೆದ್ದರೆ ಫೈನಲ್‌ಗೆ

ಕಾಮನ್‌ವೆಲ್ತ್ ಕ್ರೀಡಾಕೂಟದ 9ನೇ ದಿನವಾದ ಶನಿವಾರದಂದು ಭಾರತವು ಹೆಚ್ಚಿನ ಪದಕಗಳನ್ನು ಗುರಿಯಾಗಿರಿಸಿಕೊಳ್ಳುತ್ತದೆ ಮತ್ತು ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಫೈನಲ್‌ಗೆ ತಲುಪುವ ಮತ್ತು ಬೆಳ್ಳಿಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ ಮತ್ತು ಅದು ಕೂಡ ಐತಿಹಾಸಿಕವಾಗಲಿದೆ.

ಅವರು ಶನಿವಾರ ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಸೆಮಿಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಆಡಲಿದೆ. ಇಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸುತ್ತಿರುವ ಭಾರತ ಪುರುಷರ ಹಾಕಿ ತಂಡವು ಸೆಮಿಸ್‌ಗೆ ತೆರಳಲು ಮತ್ತು ಭಾರತಕ್ಕೆ ಪದಕವನ್ನು ಖಾತರಿಪಡಿಸುವ ಅವಕಾಶವನ್ನು ಹೊಂದಿದೆ.

ಭಾರತದ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಕೂಡ ಇಂದು ತಮ್ಮ ಕ್ವಾರ್ಟರ್-ಫೈನಲ್ ಹಣಾಹಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಅವರಿಂದ ನಿರೀಕ್ಷಿತ ಚಿನ್ನದ ಪದಕದತ್ತ ಇನ್ನೂ ಒಂದು ಹೆಜ್ಜೆ ಇಡುವ ಭರವಸೆಯಲ್ಲಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ 2022ರ ಟಾಪ್ ದೇಶಗಳ ಪದಕಗಳ ಪಟ್ಟಿ ಇಲ್ಲಿದೆ

ಕಾಮನ್‌ವೆಲ್ತ್ ಗೇಮ್ಸ್ 2022ರ ಟಾಪ್ ದೇಶಗಳ ಪದಕಗಳ ಪಟ್ಟಿ ಇಲ್ಲಿದೆ

ಆಸ್ಟ್ರೇಲಿಯಾ: 50 ಚಿನ್ನ, 44 ಬೆಳ್ಳಿ, 46 ಕಂಚು, ಒಟ್ಟು 140- ಪದಕಗಳು

ಇಂಗ್ಲೆಂಡ್: 47 ಚಿನ್ನ, 46 ಬೆಳ್ಳಿ, 38 ಕಂಚು, ಒಟ್ಟು 131 ಪದಕಗಳು

ಕೆನಡಾ: 19 ಚಿನ್ನ, 24 ಬೆಳ್ಳಿ, 24 ಕಂಚು, ಒಟ್ಟು 67 ಪದಕಗಳು

ನ್ಯೂಜಿಲೆಂಡ್: 17 ಚಿನ್ನ, 11 ಬೆಳ್ಳಿ, 13 ಕಂಚು, ಒಟ್ಟು 41 ಪದಕಗಳು

ಭಾರತ: 9 ಚಿನ್ನ, 8 ಬೆಳ್ಳಿ, 9 ಕಂಚು, ಒಟ್ಟು 26 ಪದಕಗಳು

ಸ್ಕಾಟ್ಲೆಂಡ್: 8 ಚಿನ್ನ, 8 ಬೆಳ್ಳಿ, 19 ಕಂಚು, ಒಟ್ಟು 35 ಪದಕಗಳು

ದಕ್ಷಿಣ ಆಫ್ರಿಕಾ: 7 ಚಿನ್ನ, 7 ಬೆಳ್ಳಿ, 8 ಕಂಚು, ಒಟ್ಟು 22 ಪದಕಗಳು

ನೈಜೀರಿಯಾ: 7 ಚಿನ್ನ, 3 ಬೆಳ್ಳಿ, 6 ಕಂಚು, ಒಟ್ಟು 16 ಪದಕಗಳು

ವೇಲ್ಸ್: 4 ಚಿನ್ನ, 5 ಬೆಳ್ಳಿ, 10 ಕಂಚು, ಒಟ್ಟು 19 ಪದಕಗಳು

ಮಲೇಷ್ಯಾ: 4 ಚಿನ್ನ, 4 ಬೆಳ್ಳಿ, 3 ಕಂಚು, ಒಟ್ಟು 11 ಪದಕಗಳು

For Quick Alerts
ALLOW NOTIFICATIONS
For Daily Alerts
Story first published: Saturday, August 6, 2022, 11:21 [IST]
Other articles published on Aug 6, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X