ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

CWG 2022: ಶ್ರೀಲಂಕಾದ 10 ಕ್ರೀಡಾಪಟುಗಳು ನಾಪತ್ತೆ!: ಲಂಕಾ ಕ್ರೀಡಾಪಟುಗಳ ಈ ಚಾಳಿಯ ಇತಿಹಾಸವೇ ವಿಚಿತ್ರ!

Commonwealth games 2022: Ten members of Sri Lankan contingent is missing confirms officials

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಲು ಇಂಗ್ಲೆಂಡ್‌ಗೆ ತೆರಳಿರುವ ಶ್ರೀಲಂಕಾ ತಂಡ ವಿಚಿತ್ರ ಸನ್ನಿವೇಶಕ್ಕೆ ಸಿಲುಕಿದೆ. ಶ್ರೀಲಂಕಾದ ಸುಮಾರು 10 ಕ್ರೀಡಾಪಟುಗಳು ನಾಪತ್ತೆಯಾಗಿದ್ದಾರೆ. ಶ್ರೀಲಂಕಾಗೆ ಮರಳದೆ ಬ್ರಿಟನ್‌ನಲ್ಲಿಯೇ ಉಳಿದುಕೊಳ್ಳುವ ಸಲುವಾಗಿ ಶ್ರೀಲಂಕಾದ ಕ್ರೀಡಾಪಟುಗಳು ಈ ರೀತಿ ನಾಪತ್ತೆಯಾಗಿರಬಹುದು ಎಂಬ ಅನುಮಾನಗಳನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಶ್ರೀಲಂಕಾ ಕ್ರೀಡಾಪಟುಗಳ ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು 9 ಮಂದಿ ಕ್ರೀಡಾಪಟುಗಳು ಹಾಗೂ ಓರ್ವ ಮ್ಯಾನೇಜರ್ ನಾಪತ್ತೆಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಕ್ರೀಡಾಕೂಟದಲ್ಲಿ ತಮ್ಮ ವಿಭಾಗದ ಸ್ಪರ್ಧೆಗಳು ಮುಕ್ತಾಯವಾದ ಬಳಿಕ ಕ್ರೀಡಾಪಟುಗಳು ಈ ರೀತಿ ನಾಪತ್ತೆಯಾಗಿದ್ದಾರೆ.

ಕಾಮನ್‌ವೆಲ್ತ್‌ ಗೇಮ್ಸ್‌ 2022: 10ನೇ ದಿನದಲ್ಲಿ ಭಾರತಕ್ಕೆ ಸಿಕ್ಕ ಪದಕಗಳೆಷ್ಟು? ಎಷ್ಟನೇ ಸ್ಥಾನ?ಕಾಮನ್‌ವೆಲ್ತ್‌ ಗೇಮ್ಸ್‌ 2022: 10ನೇ ದಿನದಲ್ಲಿ ಭಾರತಕ್ಕೆ ಸಿಕ್ಕ ಪದಕಗಳೆಷ್ಟು? ಎಷ್ಟನೇ ಸ್ಥಾನ?

ಇದರಲ್ಲಿ ಜೊಡುಕಾ ಚಮಿಲಾ ದಿಲಾನಿ ಹಾಗೂ ಆಕೆಯ ಮ್ಯಾನೇಜರ್ ಅಸೆಲಾ ಡಿಸಿಲ್ವಾ ಮತ್ತು ರೆಸ್ಲರ್ ಶನಿತ್ ಚತುರಂಗಾ ಕಳೆದ ವಾರವೇ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಈ ನಾಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಅಧಿಕಾರಿಗಳು ಪೊಲೀಸ್ ಪ್ರಕರಣವನ್ನು ದಾಖಲಿಸಿದ್ದರು. ಅದಾದ ಬಳಿಕ ಏಳು ಮಂದಿ ನಾಪತ್ತೆಯಾಗಿರುವುದು ಸ್ಪಷ್ಟವಾಗಿದೆ. ಅವರೆಲ್ಲಾ ಯುಕೆಯಲ್ಲಿಯೇ ಉಳಿದುಕೊಂಡು ಇಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸಬಹುದು ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಪತ್ತೆಯಾಗಿದ್ದಾರೆ ನಾಪತ್ತೆಯಾಗಿದ್ದ ಮೂವರು!: ಇನ್ನು ಹೀಗೆ ನಾಪತ್ತೆಯಾಗಿರುವ ಮೊದಲ ಮೂರು ಕ್ರೀಡಾಪಟುಗಳನ್ನು ಬ್ರಿಟಿಷ್ ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅವರು ಸ್ಥಳೀಯ ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲದ ಕಾರಣದಿಂದಾಗಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ. ಆರು ತಿಂಗಳುಗಳ ವೀಸಾ ಇರುವ ಕಾರಣ ಕಾನೂನು ಉಲ್ಲಂಘನೆಯಿಂದ ತಪ್ಪಿಸಿಕೊಂಡಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಲಂಕಾ ಸಾಧನೆ: ಇನ್ನು ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ಬಲ್ಲಿಯೂ ಶ್ರೀಲಂಕಾದ ಸಾಧನೆ ಗಮನಾರ್ಹವಾಗಿಲ್ಲ. ಭಾನುವಾರದಂತ್ಯದ ವೇಳೆಗೆ ಶ್ರೀಲಂಕಾ ಒಂದು ಬೆಳ್ಳಿ ಹಾಗೂ ಮೂರು ಕಂಚಿನ ಪದಕವನ್ನು ಗೆದ್ದುಕೊಂಡಿದೆ.

ಕಾಮನ್‌ವೆಲ್ತ್‌ ಗೇಮ್ಸ್‌ 2022: 11ನೇ ದಿನದಲ್ಲಿ ಭಾರತದ ಪ್ರಮುಖ ಸ್ಪರ್ಧೆಗಳ ವೇಳಾಪಟ್ಟಿಕಾಮನ್‌ವೆಲ್ತ್‌ ಗೇಮ್ಸ್‌ 2022: 11ನೇ ದಿನದಲ್ಲಿ ಭಾರತದ ಪ್ರಮುಖ ಸ್ಪರ್ಧೆಗಳ ವೇಳಾಪಟ್ಟಿ

ಲಂಕಾ ಕ್ರೀಡಾಪಟುಗಳ ನಾಪತ್ತೆ ಮೊದಲಲ್ಲ!: ಇನ್ನು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಶ್ರೀಲಂಕಾದ ಕ್ರೀಡಾಪಟುಗಳು ನಾಪತ್ತೆಯಾಗುವುದು ಇದೇನು ಮೊದಲಲ್ಲ. ಈ ಹಿಂದೆಯೂ ಸಾಕಷ್ಟು ಕ್ರೀಡಾಕೂಟಗಳಲ್ಲಿ ಇದೇ ರೀತಿ ನಾಪತ್ತೆಯಾಗಿರುವ ಪ್ರಕರಣಗಳು ನಡೆದಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ರೆಸ್ಲಿಂಗ್ ವಿಶ್ವ ಚಾಂಪಿಯನ್ ಟೂರ್ನಮೆಂಟ್ ಆಗಿದ್ದ ಸಂದರ್ಭದಲ್ಲಿ ಶ್ರೀಲಂಕಾದ ರೆಸ್ಲಿಂಗ್ ತಂಡದ ಮ್ಯಾನೇಜರ್ ಹಾಗೂ ರೆಸ್ಲರ್‌ಗಳು ನಾಪತ್ತೆಯಾಗಿದ್ದರು.
ಇನ್ನು 2014ರಲ್ಲಿ ದಕ್ಷಿಣ ಕೊರಿಯಾದಲ್ಲಿ ಏಷ್ಯನ್ ಗೇಮ್ಸ್ ನಡೆದಿದ್ದ ಸಂದರ್ಭದಲ್ಲಿ ಇಬ್ಬರು ಶ್ರೀಲಂಕಾದ ಕ್ರೀಡಾಪಟುಗಳು ನಾಪತ್ತೆಯಾಗಿದ್ದರು. ಬಳಿಕ ಅವರು ಪತ್ತೆಯೇ ಆಗಿರಲಿಲ್ಲ.

ಜರ್ಮನಿಯಲ್ಲಿ ನಡೆದಿದ್ದು ಅತ್ಯಂತ ವಿಚಿತ್ರ ಘಟನೆ!: ಇನ್ನು 2004ರಲ್ಲಿ ಜರ್ಮನಿಯಲ್ಲಿ ಬೇಸಿಗೆ ಒಲಿಂಪಿಕ್ಸ್ ನಡೆದಿದ್ದಾಗ ಇದಕ್ಕಿಂತಲೂ ವಿಚಿತ್ರವಾದ ಘಟನೆಯೊಂದು ನಡೆದಿತ್ತು. ಆ ಕ್ರೀಡಾಕೂಟದಲ್ಲಿ ಶ್ರೀಲಂಕಾದ ಹ್ಯಾಂಡ್‌ಬಾಲ್ ತಂಡವೇ ಭಗವಹಿಸಿಲ್ಲದಿದ್ದರೂ ರಾಷ್ಟ್ರೀಯ ತಂಡದ ಆಟಗಾರರು ಎಂಬಂತೆ ನಟಿಸಿ ಜರ್ಮನಿಯನ್ನು ಸೇರಿಕೊಂಡಿದ್ದರು. ಅದಾದ ಬಳಿಕ 23 ಜನರ ಆ ಇಡೀ ಬಳಗವೇ ನಾಪತ್ತೆಯಾಗಿತ್ತು.

Story first published: Monday, August 8, 2022, 15:12 [IST]
Other articles published on Aug 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X