ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

CWG 2022: ಭಾರತಕ್ಕೆ ಎರಡನೇ ಚಿನ್ನ ಗೆದ್ದುಕೊಟ್ಟ ವೇಟ್‌ಲಿಫ್ಟರ್ ಜೆರೆಮಿ ಲಾಲ್ರಿನ್ನುಂಗ

Commonwealth Games 2022: Weightlifter Jeremy Lalrinnunga Wins Gold For India

ಕಾಮನ್‌ವೆಲ್ತ್ ಗೇಮ್ಸ್‌ 2022ರಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು, ಪುರುಷರ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಜೆರೆಮಿ ಲಾಲ್ರಿನ್ನುಂಗಾ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಪುರುಷರ 67 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ 19 ವರ್ಷದ ಜೆರೆಮಿ ಲಾಲ್ರಿನ್ನುಂಗಾ ಮೊದಲ ಪ್ರಯತ್ನದಲ್ಲೇ 136 ಕೆಜಿ ಭಾರ ಎತ್ತುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ 2022ರಲ್ಲಿ ಭಾರತಕ್ಕೆ ಎರಡನೇ ಚಿನ್ನ ಗೆದ್ದುಕೊಟ್ಟರು.

ಎರಡನೇ ಪ್ರಯತ್ನದಲ್ಲಿ 140 ಕೆಜಿ ಭಾರ ಎತ್ತುವಲ್ಲಿ ಯಶಸ್ವಿಯಾದರು. ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 160 ಕೆಜಿ ಲಿಫ್ಟ್‌ನೊಂದಿಗೆ ಒಟ್ಟು 300 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಭಾರತದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಮೊದಲ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

Commonwealth Games 2022: Weightlifter Jeremy Lalrinnunga Wins Gold For India

ಎರಡು ಚಿನ್ನ, ಎರಡು ಬೆಳ್ಳಿ, ಒಂದು ಕಂಚು
ಈ ಮೊದಲು ಮೀರಾಬಾಯಿ ಚಾನು ಶನಿವಾರ ಭಾರತಕ್ಕೆ ಮೊದಲ ಚಿನ್ನವನ್ನು ಗೆದ್ದುಕೊಟ್ಟ ನಂತರ ಲಾಲ್ರಿನ್ನುಂಗ ಭಾರತಕ್ಕೆ ಎರಡನೇ ಚಿನ್ನದ ಪದಕ ತಂದರು ಮತ್ತು ಒಟ್ಟಾರೆಯಾಗಿ ಈವರೆಗೆ ಐದು ಪದಕಗಳನ್ನು ಗೆದ್ದಂತಾಗಿದೆ.

ಇದಕ್ಕೂ ಮುನ್ನ ವೈಟ್‌ಲಿಫ್ಟರ್ ಬಿಂದ್ಯಾರಾಣಿ ದೇವಿ 55 ಕೆಜಿ ವಿಭಾಗದಲ್ಲಿ ಶನಿವಾರ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಭಾರತದ ಮಹಿಳಾ ವೇಟ್‌ಲಿಫ್ಟರ್ ಬಿಂದ್ಯಾ ಒಟ್ಟಾರೆ 202 ಕೆಜಿ ಎತ್ತುವಲ್ಲಿ ಸಫಲರಾಗಿದ್ದು ಬೆಳ್ಳಿ ಪದಕವನ್ನ ಗೆದ್ದು ಬೀಗಿದ್ದಾರೆ. ಈ ಮೂಲಕ ಭಾರತಕ್ಕೆ ಎರಡು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದು ಬೀಗಿದೆ. ಎಲ್ಲಾ ಪದಕಗಳು ವೇಟ್‌ಲಿಫ್ಟಿಂಗ್‌ನಲ್ಲಿ ವಿಭಾಗದಿಂದ ಬಂದಿರುವುದು ವಿಶೇಷ.

ಜೆರೆಮಿ ಲಾಲ್ರಿನ್ನುಂಗ ಸ್ನ್ಯಾಚ್ ಈವೆಂಟ್‌ನಲ್ಲಿ 140 ಕೆಜಿ ಎತ್ತುವ ಮೂಲಕ ಹೊಸ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯನ್ನು ನಿರ್ಮಿಸಿದರು. ಅವರು ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ ಒಟ್ಟು 160 ಕೆಜಿ ಎತ್ತುವ ಮೂಲಕ ಒಟ್ಟು 300 ಕೆಜಿಯೊಂದಿಗೆ ಪೂರ್ಣಗೊಳಿಸಿದರು, ಇದು ಹೊಸ ಕಾಮನ್‌ವೆಲ್ತ್ ಗೇಮ್ಸ್‌ನ ದಾಖಲೆಯಾಗಿದೆ.



ಪ್ರಧಾನಿ ನರೇಂದ್ರ ಮೋದಿಯಿಂದ ಶುಭ ಹಾರೈಕೆ
"ನಮ್ಮ ಯುವ ಶಕ್ತಿ ಇತಿಹಾಸ ಸೃಷ್ಟಿಸುತ್ತಿದೆ. ಜೆರೆಮಿ ಲಾಲ್ರಿನ್ನುಂಗಗೆ ಅಭಿನಂದನೆಗಳು, ಅವರು ತಮ್ಮ ಮೊದಲ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಚಿನ್ನವನ್ನು ಗೆದ್ದಿದ್ದಾರೆ ಮತ್ತು ಅಸಾಧಾರಣ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯನ್ನು ಸಹ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ದೇಶಕ್ಕೆ ಅವರು ಅಪಾರ ಹೆಮ್ಮೆ ಮತ್ತು ವೈಭವವನ್ನು ತಂದರು. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು," ಎಂದು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಮಿಜೋರಾಂನ ಐಜ್ವಾಲ್‌ನ 19 ವರ್ಷ ವಯಸ್ಸಿನವ ಜೆರೆಮಿ ಲಾಲ್ರಿನ್ನುಂಗ 2018ರ ಯೂತ್ ಒಲಿಂಪಿಕ್ ಗೇಮ್ಸ್‌ನಲ್ಲಿ 62 ಕೆಜಿ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು ಮತ್ತು ಕಳೆದ ವರ್ಷ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ 67 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.
Commonwealth Games 2022: Weightlifter Jeremy Lalrinnunga Wins Gold For India

ಜೆರೆಮಿ ಲಾಲ್ರಿನ್ನುಂಗ ಕ್ಲೀನ್ ಅಂಡ್ ಜರ್ಕ್‌ನಲ್ಲಿ 2021ರ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ ವಿಜೇತ ಕೂಡ ಹೌದು. ಮೀರಾಬಾಯಿ ಚಾನು (ಚಿನ್ನ), ಸಂಕೇತ್ ಸರ್ಗರ್ (ಬೆಳ್ಳಿ), ಬಿದ್ಯಾರಾಣಿ ದೇವಿ (ಬೆಳ್ಳಿ) ಮತ್ತು ಗುರುರಾಜ್ ಪೂಜಾರಿ (ಕಂಚು) ಕಾಮನ್‌ವೆಲ್ತ್ ಗೇಮ್ಸ್ 2022ರ ವೇಟ್‌ಲಿಫ್ಟಿಂಗ್ ಅಖಾಡದಿಂದ ಭಾರತಕ್ಕೆ ಐದನೇ ಪದಕವಾಗಿದೆ.

ರಾಷ್ಟ್ರೀಯ ಮಟ್ಟದ ಬಾಕ್ಸರ್ ಲಾಲ್ನೀಹ್ತ್ಲುವಾಂಗಾ ಅವರ ಪುತ್ರರಾಗಿರುವ ಜೆರೆಮಿ ಲಾಲ್ರಿನ್ನುಂಗ ಅವರು ಮೊದಲ ಕೈಗವಸು ಧರಿಸಿ ಬಾಕ್ಸಿಂಗ್ ಅಖಾಡಕ್ಕೆ ಧುಮುಕಲು ಬಯಸಿದ್ದರು. ಆದರೆ ವೇಟ್‌ಲಿಫ್ಟಿಂಗ್‌ಗೆ ಬದಲಾದರು.

Story first published: Sunday, July 31, 2022, 17:17 [IST]
Other articles published on Jul 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X