ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫೋರ್ಬ್ಸ್ ಪಟ್ಟಿಯಲ್ಲಿ ಮೆಸ್ಸಿ, ರೊನಾಲ್ಡೋ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಮೆಕ್‌ಗ್ರೇಗರ್

Conor McGregor No 1 in Forbess top 10 highest-paid athletes of 2021

ಕ್ರೀಡಾಲೋಕದ ಶ್ರೀಮಂತ ಆಟಗಾರರ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆಗೊಳಿಸಿದೆ. 2020ರ ಅವಧಿಯಲ್ಲಿ ಮಿಕ್ಸ್‌ಡ್ ಮಾರ್ಷಲ್ ಆರ್ಟ್ಸ್‌ನ ಸೂಪರ್ ಸ್ಟಾರ್ ಕಾನರ್ ಮೆಕ್‌ ಗ್ರೇಗರ್ ಅತಿ ಹೆಚ್ಚು ಸಂಪಾದನೆ ಮಾಡಿದ್ದು ಫೋರ್ಬ್ಸ್‌ ಪ್ರಕಟಿಸಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಕಾನರ್ ಮೆಕ್‌ ಗ್ರೇಗರ್ 180 ಮಿಲಿಯನ್ ಡಾಲರ್ಅನ್ನು 2020ರ ಅವಧಿಯಲ್ಲಿ ಸಂಪಾದನೆ ಮಾಡಿದ್ದಾರೆ. ಜಾಹೀರಾತು ಮೂಲಗಳಿಂದ ಭಾರೀ ಪ್ರಮಾಣದಲ್ಲಿ ಗ್ಋಎಗರ್ ಹೆಚ್ಚಿಸಿಕೊಂಡಿರುವುದನ್ನು ಈ ವರದಿ ತಿಳಿಸಿದೆ. 32ರ ಹರೆಯದ ಐರಿಷ್ ಕ್ರೀಡಾಪಟು 2020ರಿಂದ ಈಚೆಗೆ ಕೇವಲ ಒಂದು ಬಾರಿ ಮಾತ್ರವೇ ಕಾದಾಡಿದ್ದು 2020ರ ಜನವರಿಯಲ್ಲಿ ಡೊನಾಲ್ಡ್ ಸೆರೋನ್ ವಿರುದ್ಧ ಸಾಧಿಸಿದ ಗೆಲುವಿನಲ್ಲಿ 22 ಮಿಲಿಯನ್ ಡಾಲರ್ ಸಂಪಾದಿಸಿದ್ದಾರೆ.

ನಮ್ಮ ತಲೆಯನ್ನು ದ್ರಾವಿಡ್ ಭಾರತಕ್ಕೆ ಬಳಸಿಕೊಂಡರು: ಗ್ರೆಗ್ ಚಾಪೆಲ್ನಮ್ಮ ತಲೆಯನ್ನು ದ್ರಾವಿಡ್ ಭಾರತಕ್ಕೆ ಬಳಸಿಕೊಂಡರು: ಗ್ರೆಗ್ ಚಾಪೆಲ್

ಫೋರ್ಬ್ಸ್ ಪ್ರಕಟಿಸಿದ ಈ ಪಟ್ಟಿಯ ಪ್ರಕಾರ ವಾರ್ಷಿಕ 100 ಮಿಲಿಯನ್‌ಗೂ ಅಧಿಕ ಸಂಪಾದನೆ ಮಾಡಿದ ಕೇವಲ ನಾಲ್ವರು ಆಟಗಾರರ ಪೈಕಿ ಗ್ರೇಗರ್ ಕೂಡ ಒಬ್ಬರಾಗಿದ್ದಾರೆ. ಈ ಪಟ್ಟಿಯಲ್ಲಿ ಬಾರ್ಸಿಲೋನಾದ ಸೂಪರ್ ಸ್ಟಾರ್ ಲಿಯೋನೆಲ್ ಮೆಸ್ಸಿ 2ನೇ ಸ್ಥಾನದಲ್ಲಿದ್ದು 130 ಮಿಲಿಯನ್ ಡಾಲರ್ ಸಂಪಾದಿಸಿದ್ದಾರೆ.

ಮೂರನೇ ಸ್ಥಾನದಲ್ಲಿ ಇನ್ನೋರ್ವ ಫುಟ್ಬಾಲ್ ಜಗತ್ತಿದ ತಾರೆ ಕ್ರಿಶ್ಚಿಯಾನೋ ರೊನಾಲ್ಡೋ 120 ಮಿಲಿಯನ್ ಡಾಲರ್ ಸಂಪಾದಿಸಿ ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಅಮೆರಿಕನ್ ಫುಟ್ಬಾಲ್ ಆಟಗಾರ ಡಾಕ್ ಪ್ರೆಸ್ಕೋಟ್ 107.5 ಮಿಲಿಯನ್ ಡಾಲರ್ ಸಂಪಾದಿಸಿ ಸ್ಥಾನ ಪಡೆದುಕೊಂಡಿದ್ದಾರೆ.

Story first published: Thursday, May 13, 2021, 13:28 [IST]
Other articles published on May 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X