ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಇಟಲಿಯಲ್ಲಿ ಖಾಲಿ ಸ್ಟೇಡಿಯಂಗಳಲ್ಲಿ ಕ್ರೀಡಾಕೂಟಗಳ ನಡೆಸಲು ನಿರ್ಧಾರ

Coronavirus: All Italian sport including England Six Nations game in empty stadiums

ರೋಮ್, ಮಾರ್ಚ್ 5: ಇಟಲಿಯಲ್ಲಿ ನಡೆಯುವ ಇಂಗ್ಲೆಂಡ್ ಪುರುಷರ ಮತ್ತು ಮಹಿಳೆಯರ 6 ರಾಷ್ಟ್ರಗಳ ರಗ್ಬೀ ಪಂದ್ಯಗಳು, ಸೀರೀ ಎ ಫುಟ್ಬಾಲ್ ಪಂದ್ಯಗಳು ಸೇರಿದಂತೆ ಎಲ್ಲಾ ಕ್ರೀಡಾಕೂಟಗಳನ್ನು ಕದ ಮುಚ್ಚಿದ ಸ್ಟೇಡಿಯಂಗಳಲ್ಲಿ ನಡೆಸಲು ಇಟಲಿ ಸರ್ಕಾರ ನಿರ್ಧರಿಸಿದೆ. ಕೊರೊನಾ ವೈರಸ್ ಹಬ್ಬದಂತೆ ತಡೆಯಲು ಇಟಲಿ ಸರ್ಕಾರ ಈ ನಿರ್ಧಾರ ತಾಳಿದೆ.

ಕೊರೊನಾ ವೈರಸ್ ಭೀತಿ: ನಿಗದಿತ ಪ್ರಕಾರವೇ ಒಲಿಂಪಿಕ್ಸ್ ನಡೆಸಲು ಜಪಾನ್ ಬದ್ಧ ಎಂದ ಜಪಾನ್ ಕ್ರೀಡಾ ಸಚಿವಕೊರೊನಾ ವೈರಸ್ ಭೀತಿ: ನಿಗದಿತ ಪ್ರಕಾರವೇ ಒಲಿಂಪಿಕ್ಸ್ ನಡೆಸಲು ಜಪಾನ್ ಬದ್ಧ ಎಂದ ಜಪಾನ್ ಕ್ರೀಡಾ ಸಚಿವ

ಕೊರೊನಾ ವೈರಸ್ ಭೀತಿಯಿಂದಾಗಿ ಏಪ್ರಿಲ್‌ 3ರ ವರೆಗೆ ಇಟಲಿಯಲ್ಲಿ ನಡೆಯುವ ಯಾವುದೇ ಕ್ರೀಡಾಕೂಟಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಮಾರಕ ಸೋಂಕು ಕೊರೊನಾ ವೈರಸ್‌ನಿಂದಾಗಿ ಇಟಲಿಯಲ್ಲಿ ಸುಮಾರು 107 ಮಂದಿ ಸಾವಿಗೀಡಾಗಿದ್ದಾರೆ. 3,090 ಪ್ರಕರಣಗಳು ಈವರೆಗೆ ಪತ್ತೆಯಾಗಿದೆ.

ಕನ್ನಡಿಗ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷನಾಗಿದ್ದಕ್ಕೆ ಆಕಾಶ್ ಚೋಪ್ರಾಗೆ ಕಣ್ಣುರಿ!ಕನ್ನಡಿಗ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷನಾಗಿದ್ದಕ್ಕೆ ಆಕಾಶ್ ಚೋಪ್ರಾಗೆ ಕಣ್ಣುರಿ!

ಮಾರಕ ಸೋಂಕಿನಿಂದಾಗಿ ಇಟಾಲಿಯನ್ ಕಪ್ ಫುಟ್ಬಾಲ್ ಟೂರ್ನಿಯ ಯುವೆಂಟಸ್ ಮತ್ತು ಎಸಿ ಮಿಲಾನ್ ನಡುವಿನ ಸೆಮಿಫೈನಲ್ ಪಂದ್ಯ ಕೂಡ ಮುಂದೂಲ್ಪಟ್ಟಿದೆ. ಆರು ರಾಷ್ಟ್ರಗಳ ಪಂದ್ಯಗಳ ಸಂಘಟಕರು ಮತ್ತು ವೈಯಕ್ತಿಕ ದೇಶಗಳು ಗುರುವಾರ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಿವೆ ಮತ್ತು ಇಟಲಿಯ ಪಂದ್ಯಗಳನ್ನು ಮುಚ್ಚಿದ ಬಾಗಿಲುಗಳ ಕ್ರೀಡಾಂಗಣದಲ್ಲಿ ನಡೆಸುವ ಬದಲು ಮುಂದೂಡುವ ನಿರೀಕ್ಷೆ ಹೆಚ್ಚಿದೆ.

ಟಿ20 ಕ್ರಿಕೆಟ್‌ ಇತಿಹಾಸಲ್ಲಿ ಯಾರೂ ಮಾಡದ ಸಾಧನೆ ಮಾಡಿದ ಕಿರಾನ್ ಪೊಲಾರ್ಡ್!ಟಿ20 ಕ್ರಿಕೆಟ್‌ ಇತಿಹಾಸಲ್ಲಿ ಯಾರೂ ಮಾಡದ ಸಾಧನೆ ಮಾಡಿದ ಕಿರಾನ್ ಪೊಲಾರ್ಡ್!

'ಸಾರ್ವಜನಿಕ ಮತ್ತು ಖಾಸಗಿ ಎರಡೂ ಸ್ಥಳಗಳಲ್ಲಿ ನಡೆಯುವ ಎಲ್ಲಾ ರೀತಿಯ ಮತ್ತು ವಿಭಾಗಗಳ ಕ್ರೀಡಾಕೂಟಗಳು ಮತ್ತು ಸ್ಪರ್ಧೆಗಳನ್ನು ಅಮಾನತುಗೊಳಿಸಲಾಗಿದೆ; ಆದಾಗ್ಯೂ, ಮೇಲೆ ತಿಳಿಸಲಾದ ಸ್ಪರ್ಧೆಗಳನ್ನು ಮುಚ್ಚಿದ ಬಾಗಿಲುಗಳ ಹಿಂದೆ ಅಥವಾ ಹೊರಾಂಗಣದಲ್ಲಿ ಸಾರ್ವಜನಿಕರ ಉಪಸ್ಥಿತಿಯಿಲ್ಲದೆ ನಡೆಸಲು ಅನುಮತಿ ಇದೆ,' ಇಟಲಿ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

Story first published: Thursday, March 5, 2020, 15:27 [IST]
Other articles published on Mar 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X