ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕೊರೊನಾ ಎಫೆಕ್ಟ್: ತೊಂದರೆಗೀಡಾದ ಪ್ರಮುಖ ಕ್ರೀಡಾ ಸ್ಪರ್ಧೆಗಳ ಪಟ್ಟಿ

Coronavirus effect: List of all cancelled sporting events

ಬೆಂಗಳೂರು, ಮಾರ್ಚ್ 13: ಕ್ರೀಡಾಕ್ಷೇತ್ರಕ್ಕೆ ವಕ್ಕರಿಸಿರುವ ಕೊರೊನಾ ವೈರಸ್ ಭೀತಿ, ನಡೆಯಬೇಕಿದ್ದ ಅನೇಕ ಪ್ರಮುಖ ಕ್ರೀಡಾಕೂಟಗಳನ್ನು ಹಾಳುಗೆಡವಿದೆ. ಕ್ರೀಡಾಕೂಟಗಳೆಂದರೆ ಅಲ್ಲಿ ಒಂದಿಷ್ಟು ಪ್ರೇಕ್ಷಕರ ವರ್ಗ ಸೇರಲೇಬೇಕು. ಅದಿಲ್ಲದಿದ್ದರೆ ಅದೊಂದು ಕ್ರೀಡಾಕೂಟವೇ ಅನ್ನಿಸಲಾರದು. ಆದರೆ ಜನ ಒಂದೆಡೆ ಒಟ್ಟು ಸೇರಿದರೆ ಮಾರಕ ಸೋಂಕು ಕೊರೊನಾ ವೈರಸ್ ಹಬ್ಬುವ ಸಾಧ್ಯತೆ ಹೆಚ್ಚು. ಇದೇ ಕಾರಣಕ್ಕಾಗಿ ವಿಶ್ವದಾದ್ಯಂತ ಕ್ರೀಡಾಕೂಟಗಳು ರದ್ದಾಗುತ್ತಿವೆ.

2020ರ ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಆಡೋದು ಅನುಮಾನ!2020ರ ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಆಡೋದು ಅನುಮಾನ!

ಭಾರತಕ್ಕೆ ಪ್ರವಾಸ ಬಂದಿರುವ ದಕ್ಷಿಣ ಆಫ್ರಿಕಾ ಕೂಡ ಆತಿಥೇಯ ಭಾರತದ ವಿರುದ್ಧ ಬಹುತೇಕ ಖಾಲಿ ಮೈದಾನದಲ್ಲಿನ ಪಂದ್ಯವನ್ನಾಡುವುದರಲ್ಲಿದೆ. ಮುಂಬರಲಿರುವ ಐಪಿಎಲ್ ಕೂಡ ಕದ ಮುಚ್ಚಿದ ಮೈದಾನದಲ್ಲಿ, ಪ್ರೇಕ್ಷಕರ ಕೇಕೆ ಚಪ್ಪಾಳೆಯಿಲ್ಲದೆ ನಡೆಯಲಿದೆ.

ಎಬಿ ಡಿ'ವಿಲಿಯರ್ಸ್ ಕಮ್‌ಬ್ಯಾಕ್ ಕೆಲ ಆಟಗಾರರಿಗೆ ಇಷ್ಟವಾಗಲಾರದು: ಜಾಂಟಿರೋಡ್ಸ್ಎಬಿ ಡಿ'ವಿಲಿಯರ್ಸ್ ಕಮ್‌ಬ್ಯಾಕ್ ಕೆಲ ಆಟಗಾರರಿಗೆ ಇಷ್ಟವಾಗಲಾರದು: ಜಾಂಟಿರೋಡ್ಸ್

ಕೊರೊನಾ ವೈರಸ್ ಭೀತಿಯಿಂದಾಗಿ ತೊಂದರೆಗೀಡಾಗಿರುವ ಪ್ರಮುಖ ಕ್ರೀಡಾ ಸ್ಪರ್ಧೆಗಳ ಪಟ್ಟಿ ಇಲ್ಲಿದೆ.

ಸ್ಪೋರ್ಟ್ಸ್‌ ಆ್ಯಂಡ್ ಗೇಮ್ಸ್

ಸ್ಪೋರ್ಟ್ಸ್‌ ಆ್ಯಂಡ್ ಗೇಮ್ಸ್

ಅರ್ಜೆಂಟೀನಾ: ಅರ್ಜೆಂಟೀನಾ ದೇಶವು ತಮ್ಮ ದೇಶದಲ್ಲಿ ಮಾರ್ಚ್‌ನಲ್ಲಿ ನಡೆಯಲಿದ್ದ ಎಲ್ಲಾ ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳನ್ನು, ಕ್ರೀಡಾ ಸ್ಪರ್ಧೆಗಳನ್ನು ರದ್ದು ಮಾಡಿದೆ.
ಒಲಿಂಪಿಕ್ಸ್: ಗ್ರೀಕ್‌ನ ಪುರಾತನ ಒಲಿಂಪಿಕ್ಸ್ ಸಾಂಪ್ರದಾಯದಂತೆ ಒಲಿಂಪಿಯಾದಲ್ಲಿ ನಡೆಯಲಿರುವ 2020ರ ಟೋಕಿಯೋ ಒಲಿಂಪಿಕ್ಸ್‌ ಜ್ಯೋತಿ ಬೆಳಗುವ ಕಾರ್ಯಕ್ರಮ ವೀಕ್ಷಕರಿಲ್ಲದೆ ನಡೆಯಲಿದೆ.
ನಾರ್ತ್ ಅಮೆರಿಕಾ: ಮೇಜರ್ ಲೀಗ್ ಬೇಸ್‌ಬಾಲ್, ಮೇಜರ್ ಲೀಗ್ ಸಾಕರ್ ಮತ್ತು ನ್ಯಾಷನಲ್ ಹಾಕಿ ಲೀಗ್‌ಗಳು ಆಟಗಾರರು ಮತ್ತು ಅಗತ್ಯ ಸಿಬ್ಬಂದಿಗೆ ಲಾಕರ್-ಕೋಣೆಯ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿವೆ.
ಎನ್‌ಬಿಎ: ಈ ವರ್ಷದ ಎನ್‌ಬಿಎ (ನ್ಯಾಷನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಷನ್-ಅಮೆರಿಕಾ) ಸೀಸನ್ ರದ್ದುಗೊಂಡಿದೆ.

ಅಥ್ಲೆಟಿಕ್ಸ್

ಅಥ್ಲೆಟಿಕ್ಸ್

*ನಂಜಿಂಗ್‌ನಲ್ಲಿ ಮಾರ್ಚ್ 13-15ರ ವರೆಗೆ ನಡೆಸಲುದ್ದೇಶಿಸಿದ್ದ ವರ್ಲ್ಡ್ ಇಂಡೋರ್ ಅಥ್ಲೆಟಿಕ್ಸ್, ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ.
*ಪೋರ್ಚುಗಲ್‌ನ ಲೀರಿಯಾದಲ್ಲಿ ಮಾರ್ಚ್ 21-22ರವರೆಗೆ ನಡೆಯಲಿದ್ದ ಯುರೋಪಿಯನ್ ಅಥ್ಲೆಟಿಕ್ಸ್ ಮುಂದೂಡಲ್ಪಟ್ಟಿದೆ.
*ಕೀನ್ಯಾ ತನ್ನ ಕ್ರೀಡಾಪಟುಗಳನ್ನು ಯಾವುದೇ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ಹೇರಿದೆ.

ಫುಟ್ಬಾಲ್ (ಸಾಕರ್)

ಫುಟ್ಬಾಲ್ (ಸಾಕರ್)

* ಮಾರ್ಚ್ ಮತ್ತು ಜೂನ್‌ನಲ್ಲಿ ನಡೆಯಲಿರುವ ಏಷ್ಯನ್ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಮುಂದೂಡಲು ಫಿಫಾ ಮತ್ತು ಏಷ್ಯನ್ ಫುಟ್‌ಬಾಲ್ ಒಕ್ಕೂಟ ಒಪ್ಪಿಕೊಂಡಿವೆ.
* ಚಾಂಪಿಯನ್ಸ್ ಲೀಗ್: ವೇಲೆನ್ಸಿಯಾ vs ಅಟಲಾಂಟಾ (ಮಾರ್ಚ್ 10) ಮತ್ತು ಪ್ಯಾರಿಸ್ ಸೇಂಟ್ ಜರ್ಮೈನ್ ವಿ ಬೊರುಸ್ಸಿಯಾ ಡಾರ್ಟ್ಮಂಡ್ (ಮಾರ್ಚ್ 11) ಖಾಲಿ ಕ್ರೀಡಾಂಗಣಗಳಲ್ಲಿ ನಡೆಯಿತು. ಬಾರ್ಸಿಲೋನಾ vs ನಾಪೋಲಿ ಮತ್ತು ಬೇಯರ್ನ್ ಮ್ಯೂನಿಚ್ ವಿ ಚೆಲ್ಸಿಯಾ (ಎರಡೂ ಮಾರ್ಚ್ 18) ಅಭಿಮಾನಿಗಳಿಲ್ಲದೆ ಆಡಲಿದೆ.
* ಯುರೋಪಾ ಲೀಗ್: ಮಾರ್ಚ್ 12ರಂದು ಮ್ಯಾಂಚೆಸ್ಟರ್ ಯುನೈಟೆಡ್ vs ಲಾಸ್ಕ್ ಮತ್ತು ವೊಲ್ವರ್‌ಹ್ಯಾಂಪ್ಟನ್ ವಾಂಡರರ್ಸ್ vs ಒಲಿಂಪಿಯಾಕೋಸ್ ಪಿರಾಯಸ್ ಎರಡೂ ಅಭಿಮಾನಿಗಳಿಲ್ಲದೆ ಆಡಲಿದ್ದಾರೆ.
* ಪ್ರೀಮಿಯರ್ ಲೀಗ್: ಮಾರ್ಚ್ 11 ರಂದು ಆರ್ಸೆನಲ್ ವಿರುದ್ಧದ ಮ್ಯಾಂಚೆಸ್ಟರ್ ಸಿಟಿಯ ಪಂದ್ಯವನ್ನು ಮುಂದೂಡಲಾಯಿತು. ಏಕೆಂದರೆ ಲಂಡನ್ ಕ್ಲಬ್‌ನ ಆಟಗಾರರು ಗ್ರೀಕ್ ತಂಡದ ಒಲಿಂಪಿಯಾಕೋಸ್ ಮಾಲೀಕರೊಂದಿಗೆ ಸಂಪರ್ಕ ಹೊಂದಿದ್ದು, ಅವರು ವೈರಸ್‌ಗೆ ತುತ್ತಾಗಿದ್ದರು.
* ಲಾ ಲಿಗಾ: ಕನಿಷ್ಠ ಎರಡು ಸುತ್ತುಗಳವರೆಗೆ ಅಭಿಮಾನಿಗಳಿಲ್ಲದೆ ಪಂದ್ಯಗಳನ್ನು ಆಡಲಾಗುವುದು ಎಂದು ಮಾರ್ಚ್ 10 ರಂದು ಲೀಗ್ ತಿಳಿಸಿದೆ.
* ಬುಂಡೆಸ್ಲಿಗಾ: ಬೊರುಸ್ಸಿಯಾ ಮೊಯೆನ್‌ಚೆಂಗ್ಲಾಡ್‌ಬಾಚ್ vs ಕಲೋನ್ (ಮಾರ್ಚ್ 11) ಅನ್ನು ಅಭಿಮಾನಿಗಳಿಲ್ಲದೆ ಆಡಲಾಯಿತು. ಆರ್ಬಿ ಲೀಪ್ಜಿಗ್ vs ಎಸ್ಸಿ ಫ್ರೀಬರ್ಗ್ ಮತ್ತು ಬೊರುಸ್ಸಿಯಾ ಡಾರ್ಟ್ಮಂಡ್ vs ಸ್ಚಾಲ್ಕೆ 04 (ಎರಡೂ ಮಾರ್ಚ್ 14) ಪಂದ್ಯ ಕೂಡ ಪ್ರೇಕ್ಷಕರಿಲ್ಲದೆ ಆಡಲಾಗುವುದು.
* ಲಿಗ್ 1: ಆರ್ಸಿ ಸ್ಟ್ರಾಸ್‌ಬರ್ಗ್ vs ಪಿಎಸ್‌ಜಿಯನ್ನು ಮುಂದೂಡಲಾಯಿತು. ಏಪ್ರಿಲ್ 15 ರವರೆಗೆ ಎಲ್ಲಾ ಲಿಗ್ 1 ​​ಮತ್ತು ಲಿಗ್ 2 ಆಟಗಳನ್ನು ಅಭಿಮಾನಿಗಳಿಲ್ಲದೆ ಆಡಲಾಗುತ್ತದೆ.

ಫಾರ್ಮುಲಾ ಒನ್

ಫಾರ್ಮುಲಾ ಒನ್

* ಶಾಂಘೈನಲ್ಲಿನ ಚೀನೀ ಗ್ರ್ಯಾಂಡ್ ಪ್ರಿಕ್ಸ್ ಅನ್ನು ಮುಂದೂಡಲಾಗಿದೆ.
* ಮಾರ್ಚ್ 22 ರಂದು ಬಹ್ರೇನ್ ಗ್ರ್ಯಾಂಡ್ ಪ್ರಿಕ್ಸ್ ಅಭಿಮಾನಿಗಳಿಲ್ಲದೆ ಮುಂದುವರಿಯಲಿದೆ.

ಕ್ರಿಕೆಟ್ ಪಂದ್ಯಗಳು

ಕ್ರಿಕೆಟ್ ಪಂದ್ಯಗಳು

* ಭಾರತ vs ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಪಂದ್ಯಗಳ ವೇಳೆಯೂ ಕಡಿಮೆ ಸಂಖ್ಯೆಯ ಪ್ರೇಕ್ಷಕರು ಇರಲಿದ್ದಾರೆ.
* ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಇನ್ನುಳಿದ ಪಂದ್ಯಗಳು ಪ್ರೇಕ್ಷಕರಿಲಿಲ್ಲದ ಸ್ಟೇಡಿಯಂನಲ್ಲಿ ನಡೆಯಲಿದೆ.
* ಬಾಂಗ್ಲಾದಲ್ಲಿ ನಡೆಯಲಿದ್ದ ಏಷ್ಯಾ XI vs ವರ್ಲ್ಡ್ XI ಟೂರ್ನಿ ಮುಂದೂಡಲ್ಪಟ್ಟಿದೆ.
* ಐಪಿಎಲ್ 2020 ಕೂಡ ಕೊರೊನಾ ವೈರಸ್‌ನಿಂದಾಗಿ ಸಮಸ್ಯೆಯ ಸುಳಿಯಲ್ಲಿದೆ.

Story first published: Sunday, May 3, 2020, 23:33 [IST]
Other articles published on May 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X