ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮಹಾನಗರಿ ಬೆಂಗಳೂರಿನ ಟಿಸಿಎಸ್‌ ವಿಶ್ವ 10K ರೇಸ್‌ಗೆ ಕ್ಷಣಗಣನೆ

Count down started for Indian Elite athletes at TCS World 10K 2019

ಬೆಂಗಳೂರು, ಮೇ 9: ಎಲೈಟ್ ಮತ್ತು ಅಮೇಚೂರ್ ದೂರದ ಓಟಕ್ಕೆ ಹೆಸರಾಗಿರುವ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ವಿಶ್ವ 10K ಓಟಕ್ಕೆ ಮಹಾನಗರಿ ಬೆಂಗಳೂರು ಸಜ್ಜಾಗುತ್ತಿದೆ. ಮೇ 19ರ ಭಾನುವಾರ ನಡೆಯಲಿರುವ ಈ ಆಕರ್ಷಣೀಯ ಓಟದ ಸ್ಪರ್ಧೆಗೆ ಕ್ಷಣಗಣನೆ ಶುರುವಾಗಿದೆ.

ಕ್ರಿಕೆಟ್‌: ಶಾಹಿದ್‌ ಅಫ್ರಿದಿ ಪರ ಶೊಯೇಬ್‌ ಅಖ್ತರ್‌ ಬ್ಯಾಟಿಂಗ್‌ಕ್ರಿಕೆಟ್‌: ಶಾಹಿದ್‌ ಅಫ್ರಿದಿ ಪರ ಶೊಯೇಬ್‌ ಅಖ್ತರ್‌ ಬ್ಯಾಟಿಂಗ್‌

ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿರುವ 12ನೇ ಆವೃತ್ತಿಯ ಈ ಓಟದ ಸ್ಪರ್ಧೆಯಲ್ಲಿ ದೇಶದಾದ್ಯಂತ ಸುಮಾರು 24,570 ಓಟಗಾರರು ಪಾಲ್ಗೊಳ್ಳುವುದನ್ನು ನಿರೀಕ್ಷಿಸಲಾಗಿದೆ. ವಯೋಮಾನಗಳಿಗನುಗುಣವಾಗಿ ಬೇರೆ ಬೇರೆ ವಿಭಾಗಗಳಲ್ಲೂ ಸ್ಪರ್ಧೆಗಳು ನಡೆಯಲಿವೆ.

ಐಪಿಎಲ್: ನಾಟಕೀಯ ಆಟಕ್ಕಾಗಿ ಅನಗತ್ಯ ಪಟ್ಟಿ ಸೇರಿದ ಅಮಿತ್ ಮಿಶ್ರಾಐಪಿಎಲ್: ನಾಟಕೀಯ ಆಟಕ್ಕಾಗಿ ಅನಗತ್ಯ ಪಟ್ಟಿ ಸೇರಿದ ಅಮಿತ್ ಮಿಶ್ರಾ

ಸ್ಪರ್ಧೆಯ ಪ್ರಮುಖಾಕರ್ಷಣೆಯಾಗಿರುವ 10K ರೇಸ್‌ಗಾಗಿ ಸುಮಾರು 16,046 ಓಟಗಾರರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಈ ವಿಭಾಗದ ಸ್ಪರ್ಧೆಗಾಗಿ ಕಳೆದ ವರ್ಷಕ್ಕಿಂತ ಈ ವರ್ಷ ಸುಮಾರು 800 ಹೆಚ್ಚುವರಿ ಹೆಸರುಗಳು ನೋಂದಾಯಿಸಲ್ಪಟ್ಟಿವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಅಥ್ಲೀಟ್‌ಗಳು ಪಾಲ್ಗೊಳ್ಳುತ್ತಿರುವುದು ಕೂಟದ ವಿಶೇಷ.

ಇನ್ನು ಸಮುದಾಯ ಓಟವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿರುವ 'ಮಜ್ಜಾ ರನ್' ವಿಭಾಗಕ್ಕಾಗಿ 6,595 ಸ್ಪರ್ಧಿಗಳು, ಹಿರಿಯ ನಾಗರಿಕರ ವಿಭಾಗದಲ್ಲಿ 873 ಸ್ಪರ್ಧಿಗಳು ಮತ್ತು ಅಂಗವಿಕಲರ ವಿಭಾಗದಲ್ಲಿ 720 ಸ್ಪರ್ಧಿಗಳು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಈ ಸಂಖ್ಯೆಗಳೂ ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟಾಗಿವೆ ಎಂದು ಆಯೋಜಕರು ತಿಳಿಸಿದ್ದಾರೆ.

2019ರ ಐಪಿಎಲ್‌ ಫೈನಲ್ ಪಂದ್ಯದ ಟಿಕೆಟ್‌ಗಳು ಏನಾಯ್ತು ಗೊತ್ತಾ?2019ರ ಐಪಿಎಲ್‌ ಫೈನಲ್ ಪಂದ್ಯದ ಟಿಕೆಟ್‌ಗಳು ಏನಾಯ್ತು ಗೊತ್ತಾ?

ಓಟದ ಸ್ಪರ್ಧೆಗಳು ಮೇ 19ರ ಭಾನುವಾರ ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ಮುಂಜಾನೆ 5ರಿಂದ ಆರಂಭಗೊಳ್ಳಲಿವೆ. ನೋಂದಾವಣೆ, ಸ್ಪರ್ಧಾ ವಿಭಾಗಗಳು, ನಗದು ಪುರಸ್ಕಾರ ಇತ್ಯಾದಿ ಹೆಚ್ಚಿನ ಮಾಹಿತಿಗಳಿಗಾಗಿ https://tcsworld10k.procamrunning.in/ ಜಾಲತಾಣಕ್ಕೆ ಭೇಟಿ ನೀಡಬಹುದು.

Story first published: Thursday, May 9, 2019, 20:42 [IST]
Other articles published on May 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X