ಕಾಮನ್‌ವೆಲ್ತ್‌ ಗೇಮ್ಸ್‌ 2022: 10ನೇ ದಿನದಲ್ಲಿ ಭಾರತಕ್ಕೆ ಸಿಕ್ಕ ಪದಕಗಳೆಷ್ಟು? ಎಷ್ಟನೇ ಸ್ಥಾನ?

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್ 2022ರ ಕ್ರೀಡಾಕೂಟ ಅಂತಿಮ ಘಟ್ಟದತ್ತ ಬಂದು ತಲುಪಿದೆ. ಪದಕಗಳ ಬೇಟೆಯಲ್ಲಿ ಭಾರತವು ತನ್ನ ಪ್ರಾಬಲ್ಯ ಮುಂದುವರಿಸಿದ್ದು, 10ನೇ ದಿನದ ಸ್ಪರ್ಧೆಗಳಲ್ಲೂ ಪದಕಗಳ ಸುರಿಮಳೆಯಾಗಿದೆ.

ಬಾಕ್ಸಿಂಗ್‌ನಲ್ಲಿ ಪಾರುಪತ್ಯ ಮೆರೆದ ಭಾರತದ ಸ್ಪರ್ಧಿಗಳು 10ನೇ ದಿನದಲ್ಲಿ ಮೂರು ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತವು ಪದಕಗಳ ಸಂಖ್ಯೆಯನ್ನ ಮತ್ತಷ್ಟು ಹೆಚ್ಚಿಸಿಕೊಂಡಿದ್ದು, ನ್ಯೂಜಿಲೆಂಡ್‌ ದೇಶದ ಪದಕಗಳ ಪಟ್ಟಿಯಲ್ಲಿ ಪ್ರಬಲ ಸ್ಪರ್ಧೆ ಒಡ್ಡಿದೆ.

10ನೇ ದಿನದಲ್ಲಿ ಭಾರತವು ಎಷ್ಟು ಪದಕ ಗೆದ್ದಿದೆ, ಎಷ್ಟು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳು ಭಾರತಕ್ಕೆ ದಕ್ಕಿವೆ ಎಂಬುದನ್ನ ಈ ಕೆಳಗೆ ಕಾಣಬಹುದು.

10ನೇ ದಿನದಲ್ಲಿ ಭಾರತದ ಮಡಿಲಿಗೆ 15 ಪದಕಗಳು

10ನೇ ದಿನದಲ್ಲಿ ಭಾರತಕ್ಕೆ ಬಾಕ್ಸಿಂಗ್ ಸೇರಿದಂತೆ ಪ್ರಮುಖ ಸ್ಪರ್ಧೆಗಳಲ್ಲಿ ಒಟ್ಟು 15 ಪದಕಗಳು ಸಂದಿವೆ. ಈ ಮೂಲಕ ಪದಕಗಳ ಸಂಖ್ಯೆಯನ್ನು ಒಟ್ಟು 55ಕ್ಕೆ ಏರಿಕೆಯಾಗಿದೆ. 10ನೇ ದಿನದ ಸ್ಪರ್ಧೆಯ ಕೊನೆಯಲ್ಲಿ ಪುರುಷರ ಬಾಕ್ಸಿಂಗ್‌ನ 92 ಕೆಜಿ (ಸೂಪರ್ ಹೆವಿವೇಟ್) ಫೈನಲ್ನಲ್ಲಿ ಭಾರತದ ಸಾಗರ್, ಇಂಗ್ಲೆಂಡ್‌ನ ಡೆಲಿಶಿಯಸ್ ಓರಿ ವಿರುದ್ಧ 0-5 ರಿಂದ ಸೋತ ನಂತರ ಬೆಳ್ಳಿಗೆ ತೃಪ್ತಿಪಟ್ಟರು.

ಭಾರತಕ್ಕೆ 10ನೇ ದಿನದ 15 ನೇ ಪದಕ ಇದಾಗಿದ್ದು, ಇದು ಬರ್ಮಿಂಗ್‌ಹ್ಯಾಮ್‌ನಲ್ಲಿ ಉತ್ತಮ ದಿನವಾಗಿದೆ. ವಾಸ್ತವವಾಗಿ, ಕಳೆದ ಎರಡು ದಿನಗಳಲ್ಲಿ ಭಾರತ 29 ಪದಕಗಳನ್ನು ಸೇರಿಸಿದೆ. ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಭಾರತವು ಒಟ್ಟಾರೆ 7 ಪದಕಗಳನ್ನ ಗೆದ್ದಿದ್ದು, ಇದರಲ್ಲಿ ಮೂರು ಚಿನ್ನ ಪದಕಗಳು ಸೇರಿವೆ.

ಟೇಬಲ್ ಟೆನಿಸ್ ಮಿಕ್ಸೆಡ್ ಡಬಲ್ಸ್‌ನಲ್ಲಿ ಚಿನ್ನದ ಪದಕ

10ನೇ ದಿನದ ಸ್ಪರ್ಧೆಯಲ್ಲಿ ಒಟ್ಟು ಐದು ಚಿನ್ನದ ಪದಕಗಳನ್ನ ಬಾಚಿದ ಭಾರತದ ಪರ ಟೇಬಲ್ ಟೆನಿಸ್ ಮಿಶ್ರ ಡಬಲ್ಸ್‌ನಲ್ಲಿ ಸ್ವರ್ಣ ಪದಕ ಲಭಿಸಿದೆ. ಭಾನುವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ದೇಶದ ಟೇಬಲ್ ಟೆನಿಸ್ ಲೆಜೆಂಡ್ ಅಚಂತಾ ಶರತ್ ಕಮಲ್ ಅವರು ಯುವ ಆಟಗಾರ್ತಿ ಶ್ರೀಜಾ ಅಕುಲಾ ಅವರೊಂದಿಗೆ ಮಿಶ್ರ ಡಬಲ್ಸ್ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾದರು.

ಎರಡನೇ ಗೇಮ್‌ನಲ್ಲಿ ಎಡವಟ್ಟನ್ನು ಹೊರತುಪಡಿಸಿ, ಶರತ್ ಮತ್ತು ಅಕುಲಾ ಜೋಡಿಯು ಚಿನ್ನದ ಪದಕ ಸ್ಪರ್ಧೆಯಲ್ಲಿ ಮಲೇಷ್ಯಾದ ಜಾವೆನ್ ಚೂಂಗ್ ಮತ್ತು ಕರೆನ್ ಲೈನ್ ಅವರನ್ನು 11-4, 9-11, 11-5, 11-6 ಅಂತರದಲ್ಲಿ ಸೋಲಿಸಿ ಟೈ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದರು. ಶರತ್ ಪುರುಷರ ಸಿಂಗಲ್ಸ್ ಫೈನಲ್ ಕೂಡ ತಲುಪಿದ್ದಾರೆ.

ಇದಕ್ಕೂ ಮೊದಲು ನಡೆದ ಮಹಿಳೆಯರ ಟೇಬಲ್ ಟೆನಿಸ್ ಡಬಲ್ಸ್‌ನಲ್ಲಿ ಭಾರತದ ಗಾಯತ್ರಿ ಪುಲ್ಲೇಲ ಮತ್ತು ತ್ರೀಶಾ ಜೊಲ್ಲಿ ಜೋಡಿ ಕಂಚಿನ ಪದಕಕ್ಕೆ ಕೊರಳೊಡ್ಡಿತು. ಇದಲ್ಲದೆ ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಟ್ರೀಸಾ ಜಾಲಿ/ಗಾಯತ್ರಿ ಗೋಪಿಚಂದ್ ವಿರುದ್ಧ ಆಸ್ಟ್ರೇಲಿಯಾದ ಹ್ಸುವಾನ್-ಯು ವೆಂಡಿ ಚೆನ್/ಗ್ರೊನ್ಯಾ ಸೊಮರ್‌ವಿಲ್ಲೆ ವಿರುದ್ಧ 21-15, 21-18 ಸೆಟ್‌ಗಳಿಂದ ಕಂಚಿನ ಪದಕ ಗೆದ್ದರು.

CWG 2022 ಮಹಿಳಾ ಕ್ರಿಕೆಟ್: ಹರ್ಮನ್ ಹೋರಾಟ ವ್ಯರ್ಥ: ರೋಚಕ ಪಂದ್ಯದಲ್ಲಿ ಮಣಿದ ಭಾರತಕ್ಕೆ ಬೆಳ್ಳಿ

ಫೈನಲ್‌ನಲ್ಲಿ ಸೋಲು, ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ಭಾರತದ ಮಹಿಳಾ ಕ್ರಿಕೆಟ್ ತಂಡ

ಫೈನಲ್‌ನಲ್ಲಿ ಸೋಲು, ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ಭಾರತದ ಮಹಿಳಾ ಕ್ರಿಕೆಟ್ ತಂಡ

ಸ್ವರ್ಣ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಬಲಿಷ್ಠ ಆಸ್ಟ್ರೇಲಿಯಾ ವನಿತೆಯರು 9ರನ್‌ಗಳಿಂದ ಗೆಲ್ಲುವ ಮೂಲಕ ಚಿನ್ನದ ಪದಕ ಗೆದ್ದುಕೊಂಡರು. ಈ ಮೂಲಕ ಹರ್ಮನ್‌ಪ್ರೀತ್ ನಾಯಕತ್ವದ ಭಾರತ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿತು.

ಮೊದಲು ಬ್ಯಾಟಿಂಗ್ ಮಾಡಿದ 8 ವಿಕೆಟ್ ನಷ್ಟಕ್ಕೆ 161ರನ್ ಕಲೆಹಾಕಿದ್ದ ಆಸ್ಟ್ರೇಲಿಯಾ ವನಿತೆಯರು, ಭಾರತಕ್ಕೆ 162ರನ್ ಟಾರ್ಗೆಟ್ ನೀಡಿದ್ದರು. ಈ ಗುರಿ ಬೆನ್ನತ್ತಿದ ಭಾರತದ ಪರ ನಾಯಕಿ ಹರ್ಮನ್‌ಪ್ರೀತ್ ಕೌರ್ ಏಕಾಂಗಿ ಹೋರಾಟ ವ್ಯರ್ಥವಾಯಿತು. 43 ಎಸೆತಗಳಲ್ಲಿ ಹರ್ಮನ್ 65 ರನ್ ಸಿಡಿಸಿದ್ರೆ, ಜೆಮಿಮಾ ರೋಡ್ರಿಗಸ್ 33ರನ್‌ಗಳನ್ನ ಕಲೆಹಾಕಿದ್ದೇ ಹೆಚ್ಚು. ಭಾರತ ಇನ್ನೂ ಮೂರು ಎಸೆತ ಬಾಕಿ ಇರುವಂತೆಯೇ 152ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಆಸಿಸ್ 9ರನ್‌ಗಳಿಂದ ಗೆದ್ದು ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.

ವೆಸ್ಟ್ ಇಂಡೀಸ್ ವಿರುದ್ಧ 5ನೇ ಪಂದ್ಯದಲ್ಲೂ ಜಯಭೇರಿ: 4-1 ಅಂತರದಿಂದ ಸರಣಿ ಕೈವಶ

ಪದಕಗಳ ಪಟ್ಟಿಯಲ್ಲಿ ಭಾರತಕ್ಕೆ ಐದನೇ ಸ್ಥಾನ!

ಪದಕಗಳ ಪಟ್ಟಿಯಲ್ಲಿ ಭಾರತಕ್ಕೆ ಐದನೇ ಸ್ಥಾನ!

ಕಾಮನ್‌ವೆಲ್ತ್‌ ಗೇಮ್ಸ್‌ 2022ರ ಪದಕಗಳ ಪಟ್ಟಿಯಲ್ಲಿ ಭಾರತವು ಐದನೇ ಸ್ಥಾನದಲ್ಲಿಯೇ ಮುಂದುವರಿದಿದೆ. ದಿನದಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದ ಭಾರತವನ್ನ ದಿನದ ಕೊನೆಯಲ್ಲಿ ನ್ಯೂಜಿಲೆಂಡ್ ಒಂದು ಹೆಚ್ಚುವರಿ ಚಿನ್ನದ ಪದಕದೊಂದಿಗೆ ಹಿಮ್ಮೆಟ್ಟಿಸಿತು.

ಐದನೇ ಸ್ಥಾನದಲ್ಲಿರುವ ಭಾರತ 18 ಚಿನ್ನ, 15 ಬೆಳ್ಳಿ, 22 ಕಂಚಿನ ಪದಕಗಳೊಂದಿಗೆ ಒಟ್ಟಾರೆ 55 ಪದಕಗಳನ್ನ ಗೆದ್ದುಕೊಂಡಿದೆ. ನ್ಯೂಜಿಲೆಂಡ್ 19 ಚಿನ್ನ, 12 ಬೆಳ್ಳಿ, 17 ಕಂಚಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಮೂರು ಸ್ಥಾನದಲ್ಲಿ ಆಸ್ಟ್ರೇಲಿಯಾ 172, ಇಂಗ್ಲೆಂಡ್ 166, ಕೆನಡಾ 89 ಪದಕಗಳೊಂದಿಗೆ ಅಗ್ರ ಮೂರರಲ್ಲಿವೆ.

For Quick Alerts
ALLOW NOTIFICATIONS
For Daily Alerts
Story first published: Monday, August 8, 2022, 8:06 [IST]
Other articles published on Aug 8, 2022

Latest Videos

    + More
    POLLS
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Yes No
    Settings X