ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಪ್ರದರ್ಶನ ಸಾಕಷ್ಟು ಸುಧಾರಿಸಿದೆ: ಅನುರಾಗ್ ಠಾಕೂರ್

ಇತ್ತೀಚೆಗಷ್ಟೇ ಬರ್ಮಿಂಗ್‌ಹ್ಯಾಮ್‌ನಲ್ಲಿ ಮುಕ್ತಾಯಗೊಂಡ ಕಾಮನ್‌ವೆಲ್ತ್‌ ಗೇಮ್ಸ್‌ 2022ರಲ್ಲಿ ಭಾರತದ ಪ್ರದರ್ಶನವು ಸಾಕಷ್ಟು ಸುಧಾರಿಸಿದ್ದು, ನಾವು ಹೊಸ ಭಾರತದತ್ತ ಹೆಜ್ಜೆ ಹಾಕುತ್ತಿದ್ದೇವೆ ಎಂದು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

'ಹರ್ ಘರ್ ತಿರಂಗ ಅಭಿಯಾನ'ದ ಭಾಗವಾಗಿ ಪೀಟರ್‌ಹೋಫ್‌ನಲ್ಲಿ ನೆಹರು ಯುವ ಕೇಂದ್ರ ಸಘಥಾನ್ (ಎನ್‌ವೈಕೆಎಸ್) ಮತ್ತು ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಸ್ವಯಂಸೇವಕರೊಂದಿಗೆ ಮಾತನಾಡಿದ ಠಾಕೂರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ ಎಂದು ಹೇಳಿದರು.

ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾಗೆ ಸವಾಲೊಡ್ಡುವ 3 ಪಾಕಿಸ್ತಾನದ ಕ್ರಿಕೆಟಿಗರುಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾಗೆ ಸವಾಲೊಡ್ಡುವ 3 ಪಾಕಿಸ್ತಾನದ ಕ್ರಿಕೆಟಿಗರು

ನಮ್ಮ ವೇಟ್ ಲಿಫ್ಟರ್ ಗಳು ಹಿಂದೆಂದೂ ಕಾಣದಷ್ಟು ವೇಟ್ ಲಿಫ್ಟಿಂಗ್ ನಲ್ಲಿ ಮಿಂಚಿದ್ದಾರೆ. ಒಟ್ಟಾರೆ ಭಾರತದ ಪ್ರದರ್ಶನ ಸಾಕಷ್ಟು ಸುಧಾರಿಸಿದೆ. ಒಟ್ಟು 61 ಪದಕಗಳನ್ನು ಗೆದ್ದಿದ್ದಾರೆ. ಓಟದ ಸ್ಪರ್ಧೆಗಳಲ್ಲಿ ಕೀನ್ಯಾ ಮೇಲೆ ಪ್ರಾಬಲ್ಯ ಸಾಧಿಸುವ ಮಟ್ಟಿಗೆ ನಮ್ಮ ಕ್ರೀಡಾಪಟುಗಳು ಭಾಗವಹಿಸಿದ್ದರು ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

''ಭಾರತ ಸದೃಢವಾಗಿ ಮತ್ತು ಉತ್ತಮವಾಗಿ ಬೆಳೆಯುತ್ತಿದೆ. ನಾಲ್ಕು ವರ್ಷಗಳ ಹಿಂದೆ ಗೋಲ್ಡ್ ಕೋಸ್ಟ್‌ನಲ್ಲಿ ಗೆದ್ದ ಪದಕಗಳಿಗಿಂತ ಕೇವಲ ಐದು ಕಡಿಮೆ. ಈ ಬಾರಿ ಕೆಲವು ಕಾರ್ಯಕ್ರಮಗಳು ಮಿಸ್ ಆಗಿರುವುದನ್ನು ಮರೆಯಬಾರದು'' ಎಂದು ಅನುರಾಗ್ ಠಾಕೂರ್ ಹೇಳಿದರು.

NYKS ಮತ್ತು NSS ಸ್ವಯಂಸೇವಕರೊಂದಿಗೆ ಮಾತನಾಡಿ ಅನೇಕ ಮೌಲ್ಯಯುತ ಒಳನೋಟಗಳನ್ನು ಪಡೆದರು. ಯುವ ವಿನಿಮಯ ಕಾರ್ಯಕ್ರಮ, ಏಕ್ ಭಾರತ್ ಶ್ರೇಷ್ಠ ಭಾರತ್ ಕಾರ್ಯಕ್ರಮ, NYKS NSS ಹೀಗೆ ಯುವಜನತೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಕರೆ ನೀಡಲಾಗಿದೆ.

ಭವಿಷ್ಯದಲ್ಲಿಯೂ ಯುವಜನರ ಅಭಿಪ್ರಾಯಗಳು ಸರ್ಕಾರಕ್ಕೆ ತಲುಪುವಂತೆ ದೇಶಾದ್ಯಂತ ಇಂತಹ ಯುವ ವಿನಿಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರಯತ್ನಿಸಲಾಗುವುದು ಎಂದರು. ಮನೆ ಮನೆಗೆ ತ್ರಿವರ್ಣ ಧ್ವಜ ಅಭಿಯಾನ ನಡೆಸುವಂತೆ ಕರೆ ನೀಡಿದರು. ಯುವಕರು ಆಜಾದಿ ಕಾ ಅಮೃತ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕು ಮತ್ತು ಎಲ್ಲಾ ನಾಗರಿಕರು ಆಗಸ್ಟ್ 13 ರಿಂದ 15 ರವರೆಗೆ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬೇಕೆಂದು ಅವರು ಕರೆ ನೀಡಿದರು.

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ 22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚಿನ ಪದಕಗಳೊಂದಿಗೆ ಒಟ್ಟಾರೆ 61 ಪದಕಗಳನ್ನ ತನ್ನ ಮಡಿಲಿಗೆ ಹಾಕಿಕೊಂಡಿದೆ. ಜೊತೆಗೆ ಪದಕಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್‌ ಅನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನ ಪಡೆದಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, August 11, 2022, 10:25 [IST]
Other articles published on Aug 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X