ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

CWG 2022: ಬಾಕ್ಸಿಂಗ್‌ನಲ್ಲಿ ಪದಕ ಖಚಿತಪಡಿಸಿದ ನಿಖತ್ ಜರೀನ್

CWG 2022: Nikhat Zareen enters semifinals of boxing 50 kg category assured a medal

ವಿಶ್ವ ಚಾಂಪಿಯನ್ ಕಿಖತ್ ಜರೀನ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಪದಕವನ್ನು ಖಚಿತಪಡಿಸಿದ್ದಾರೆ. ಮಹಿಳೆಯರ 50 ಕೆಜಿ ವಿಭಾಗದ ಬಾಕ್ಸಿಂಗ್‌ನಲ್ಲಿ ನಿಖತ್ ಜರೀತ್ ಗೆಲುವು ಸಾಧಿಸಿದ್ದು ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ವೇಲ್ಸ್‌ಮ ಹೆಲೆನ್ ಜೋನ್ಸ್ ವಿರುದ್ಧ 5-0 ಅಂತರದಿಂದ ಗೆಲ್ಲುವ ಮೂಲಕ ಭಾರತಕ್ಕೆ ಪದಕವನ್ನು ಖಚಿತಪಡಿಸಿದ್ದಾರೆ.

ನಿಖತ್ ಎದುರಾಳಿಯ ಬ್ಲಾಕ್‌ಗಳಿಂದ ಶೀಘ್ರವಾಗಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮೊದಲ ಸುತ್ತಿನಲ್ಲಿ ಜೋನ್ಸ್‌ಗೆ ಕೆಲವು ಭರ್ಜರಿ ಹೊಡೆತಗಳನ್ನು ನೀಡಿದರು. ವೆಲ್ಸ್‌ನ ಬಾಕ್ಸರ್‌ನ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಜರೀನ್ ನಿಭಾಯಿಸಲು ಯಶಸ್ವಿಯಾಗಿದ್ದರು. ಎಲ್ಲಾ ತೀರ್ಪುಗಾರರು 10-9 ಅಂಕಗಳನ್ನು ಭಾರತೀಯ ಬಾಕ್ಸರ್‌ಗೆ ಸರ್ವಾನುಮತದಿಂದ ನೀಡಿದರು.

ಇನ್ನು ಮತ್ತೊಂದೆಡೆ ಸ್ಕಾಷ್ ಪುರುಷರ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ಅನುಭವಿ ಆಟಗಾರ ಸೌರವ್ ಘೋಸಲ್ ಅದ್ಭುತ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಘೋಷಸ್ ತಮ್ಮ ಮೊದಲ ವೈಯಕ್ತಿಕ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಜೇಮ್ಸ್ ವಿಲ್‌ಸ್ಟರೋಪ್ ವಿರುದ್ಧದ ಪಂದ್ಯದಲ್ಲಿ 11-6, 11-1, 11-4 ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಘೋಸಾಲ್ ಪಂದ್ಯದ ಮೊದಲ ಗೇಮ್‌ನಲ್ಲಿ 11-6 ಅಂತರದ ಜಯದೊಂದಿಗೆ ಆಟವನ್ನು ಪ್ರಾರಂಭಿಸಿದರು. ಪಂದ್ಯದ ಉದ್ದಕ್ಕೂ ತಮ್ಮ ಎದುರಾಳಿಯನ್ನು ಚೆನ್ನಾಗಿ ಅರ್ಥೈಸಿಕೊಂಡರು ಘೋಸಲ್. ಸದ್ಯಕ್ಕೆ ವಿಶ್ವದ 25ನೇ ಶ್ರೇಯಾಂಕದಲ್ಲಿರುವ ವಿಲ್‌ಸ್ಟ್ರೋಪ್ ಭಾರತೀಯ ಆಟಗಾರನ ಚುರುಕುತನ ಮತ್ತು ಫಿಟ್‌ನೆಸ್ ಎದುರು ಮಂಕಾದರು. ಎರಡನೇ ಗೇಮ್ ಇಂಗ್ಲೆಂಡ್ ಆಟಗಾರನಿಗೆ ಮತ್ತಷ್ಟು ಕಠಿಣವಾಗಿತ್ತು. ಘೋಸಲ್ ವಿರುದ್ಧ 1-11 ಅಂತರದಿಂದ ಸೋಲು ಅನುಭವಿಸಿದರು. ಸಾಧ್ಯವಾದಷ್ಟು ವೇಗವಾಗಿ ಪಂದ್ಯವನ್ನು ಮುಗಿಸುವತ್ತ ಘೋಸಲ್ ಚಿತ್ತ ನೆಟ್ಟಿದ್ದರು.

ಕ್ರೀಡಾಕೂಟದ ಐದನೇ ದಿನದ ಮುಕ್ತಾಯದವರೆಗೂ ಭಾರತದ ಪರ ಚಿನ್ನ ಗೆದ್ದ ಎಲ್ಲಾ ಕ್ರೀಡಾಪಟುಗಳ ಪಟ್ಟಿ *ಮೀರಾಬಾಯಿ ಚಾನು - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ * ಜೆರೆಮಿ ಲಾಲ್ರಿನುಂಗ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ * ಅಚಿಂತಾ ಶೆಯುಲಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ * ಭಾರತೀಯ ವನಿತೆಯರ ತಂಡ - ಲಾನ್ ಬೌಲ್ಸ್ ವಿಭಾಗದಲ್ಲಿ ಚಿನ್ನದ ಪದಕ *ಭಾರತ ಪುರುಷರ ತಂಡ - ಟೇಬಲ್ ಟೆನಿಸ್ ವಿಭಾಗದಲ್ಲಿ ಚಿನ್ನದ ಪದಕ

ಇತರೆ ಪದಕ ಗೆದ್ದವರು: ಸಂಕೇತ್ ಮಹದೇವ್ ಸರ್ಗರ್ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ • ಗುರುರಾಜ್ ಪೂಜಾರಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ • ವಿಜಯ್ ಕುಮಾರ್ ಯಾದವ್ - ಪುರುಷರ ವಿಭಾಗದಲ್ಲಿ ಕಂಚಿನ ಪದಕ • ಹರ್ ಜಿಂದರ್ ಕೌರ್ - ಮಹಿಳಾ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ • ಬಿಂದ್ಯಾ ರಾಣಿ ದೇವಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ • ಸುಶೀಲಾದೇವಿ - ಜುಡೋ ವಿಭಾಗದಲ್ಲಿ ಬೆಳ್ಳಿ ಪದಕ • ವಿಕಾಸ್ ಠಾಕೂರ್ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ • ಭಾರತ ಮಿಶ್ರ ತಂಡ - ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿ ಪದಕ

Story first published: Thursday, August 4, 2022, 9:35 [IST]
Other articles published on Aug 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X