ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಗಣರಾಜ್ಯೋತ್ಸವ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಸೈಕಲ್ ರೇಸ್ ಸ್ಪರ್ಧೆ

By ಚಿಕ್ಕಮಗಳೂರು ಪ್ರತಿನಿಧಿ
Cycle race conducted in chikamagaluru district

ಚಿಕ್ಕಮಗಳೂರು, ಜನವರಿ 26: 71ನೇ ಗಣರಾಜ್ಯೋತ್ಸವದ ಅಂಗವಾಗಿ ಚಿಕ್ಕಮಗಳೂರು ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅರಣ್ಯ ಇಲಾಖೆ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸೈಕಲ್ ರೇಸ್‌ ಸ್ಪರ್ಧೆ ನಡೆಸಲಾಯಿತು.

ಸುಭಾಶ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದ ಮುಂಬಾಗದಿಂದ ಸೈಕಲ್ ಸ್ಪರ್ಧೆ ಪ್ರಾರಂಭವಾಗಿ, ಕೋರ್ಟ್ ಎದುರಿನಿಂದ ಎಸ್ಪಿ ಕಚೇರಿ, ಅರಣ್ಯ ಇಲಾಖೆ ಮುಂಭಾಗದಿಂದ ಸುಮಾರು ಒಂದೂವರೆ ಕಿ.ಮೀ ಸೈಕಲ್ ರೇಸ್ ಸ್ಪರ್ಧೆಯನ್ನು ವಯಸ್ಸಿನ ಆಧಾರದ ಮೇಲೆ ನಡೆಸಲಾಯಿತು.

ಬೆಳಗ್ಗೆ ಆರು ಗಂಟೆಗೆ ಪ್ರಾರಂಭವಾದ ಸೈಕಲ್ ರೇಟ್‌ ಸ್ಪರ್ಧೆಯಲ್ಲಿ 17 ವರ್ಷದ ಕೆಳಗಿನ ಬಾಲಕರಿಗೆ ವಿತ್ ಗೇರ್ ಆರು ಸುತ್ತು, ವಿತ್ ಔಟ್ ಗೇರ್ ಐದು ಸುತ್ತು ಹಾಗೂ 17 ವರ್ಷ ಮೇಲ್ಪಟ್ಟ ಬಾಲಕರಿಗೆ ವಿತ್ ಗೇರ್ ಆರು ಸುತ್ತು, ರೋಡ್ ಬೈಕ್-ಸೈಕಲ್ ಹತ್ತು ಸುತ್ತು ಹಾಗೂ ಎಲ್ಲಾ ವರ್ಗದ ಮಹಿಳೆಯರಿಗೆ ನಾಲ್ಕು ಸುತ್ತಿನ ಸೈಕಲ್ ಸ್ಪರ್ಧೆಯಲ್ಲಿ ನೂರಾರು ಜನ ಸ್ಪರ್ಧಾಳುಗಳು ಭಾಗಿಯಾಗಿದರು.

Cycle race conducted in chikamagaluru district

ಕಾರ್ಯಕ್ರಮಕ್ಕೆ ಜಿಲ್ಲಾ ವರಿಷ್ಟಾಧಿಕಾರಿ ಹರೀಶ್ ಪಾಂಡೆ ಚಾಲನೆ ನೀಡಿದರು. ಇನ್ನು ರೋಡ್ ಬೈಕ್-ಸೈಕಲ್ ಸ್ಪರ್ಧೆಯಲ್ಲಿ ಡಾ. ಕೌಶಿಕ್ ಸಾರಗೋಡು ಪ್ರಥಮ ಸ್ಥಾನಗಳಿಸಿದರೆ, ನವೀನ್ ದ್ವಿತೀಯ ಹಾಗೂ ನಂದನ್ ತೃತೀಯ ಸ್ಥಾನಗಳಿಸಿದರು.

17 ವರ್ಷ ಮೇಲ್ಪಟ್ಟ ಪುರುಷರ ಮೌಂಟೇನ್ ಟೇರೈನ್ ಬೈಕ್ (ಎಂಟಿಬಿ) ವಿಭಾಗದಲ್ಲಿ ಶರತ್ ಪ್ರಥಮ ಸ್ಥಾನಗಳಿಸಿದರೆ, ವಿನಯ್ ದ್ವಿತೀಯ ಸ್ಥಾನ, ರಘು ಬಿ ಶ್ರೀನಿವಾಸ್ ದ್ವಿತೀಯ ಸ್ಥಾನಗಳಿಸಿದ್ರು. ಮಹಿಳೆಯರ ವಿಭಾಗದಲ್ಲಿ ತೀರ್ಥ ಶ್ರೀ, ಸಿಂಚನ, ಸ್ನೇಹ ಶೆಟ್ಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ್ರು. ಇನ್ನು 17 ವರ್ಷ ವಯೋಮಿತಿಯ ಕೆಳಗಿನ ಬಾಲಕರ ವಿತೌಟ್ ಗೇರ್ ವಿಭಾಗದಲ್ಲಿ ಹರ್ಷಿತ, ಪೃಥ್ವಿ, ಮನೋಜ್ ಪ್ರಶಸ್ತಿಗಳಿಸಿದ್ರೆ ವಿತ್ ಗೇರ್ ವಿಭಾಗದಲ್ಲಿ ಆಯುಷ್ ಗೌಡ, ಮನೋಜ್, ಸುನಾಗ್ ಸುಧೀರ್ ಪ್ರಶಸ್ತಿಗೆ ಭಾಜನರಾದ್ರು.

Story first published: Sunday, January 26, 2020, 15:01 [IST]
Other articles published on Jan 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X