ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

16 ವರ್ಷಗಳ ಹಿಂದಿನ 400 ಮೀ. ಹರ್ಡಲ್ಸ್ ದಾಖಲೆ ಮುರಿದ ದಲೈಲಾ: ವಿಡಿಯೋ

Dalilah Muhammad breaks 16-year-old 400m hurdles record

ವಾಷಿಂಗ್ಟನ್, ಜುಲೈ 29: ಒಲಿಂಪಿಕ್ ಚಾಂಪಿಯನ್ ಅಮೆರಿಕಾದ ದಲೈಲಾ ಮುಹಮ್ಮದ್ ಅವರು ಭಾನುವಾರ (ಜುಲೈ 28) ನಡೆದ ಯುಎಸ್ ಚಾಂಪಿಯನ್‌ಷಿಪ್ಸ್‌ನ 400 ಮೀ. ಹರ್ಡಲ್ಸ್‌ನಲ್ಲಿ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡಿದ್ದಾರೆ. ಮಹಿಳಾ ವಿಭಾಗದಲ್ಲಿ ದಲೈಲಾ, ಸುಮಾರು 16 ವರ್ಷಗಳ ಹಿಂದಿನ 400 ಮೀ. ಹರ್ಡಲ್ಸ್ ದಾಖಲೆ ಮುರಿದಿದ್ದಾರೆ.

ಟೆಸ್ಟ್‌ ಕ್ರಿಕೆಟ್‌: ಲಂಕಾ ಪ್ರವಾಸಕ್ಕೆ ಬ್ರಹ್ಮಾಸ್ತ್ರ ಸಿದ್ಧ ಪಡಿಸಿದ ನ್ಯೂಜಿಲೆಂಡ್‌ಟೆಸ್ಟ್‌ ಕ್ರಿಕೆಟ್‌: ಲಂಕಾ ಪ್ರವಾಸಕ್ಕೆ ಬ್ರಹ್ಮಾಸ್ತ್ರ ಸಿದ್ಧ ಪಡಿಸಿದ ನ್ಯೂಜಿಲೆಂಡ್‌

ಡ್ರೇಕ್ ಸ್ಟೇಡಿಯಂನಲ್ಲಿ ನಡೆದ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 29ರ ಹರೆಯದ ದಲೈಲಾ, 400 ಮೀ. ಹರ್ಡಲ್ಸ್ (ಅಡೆತಡೆ) ಓಟವನ್ನು 52.20 ಸೆಕೆಂಡ್‌ನಲ್ಲಿ ಕ್ರಮಿಸಿ ಚಿನ್ನಕ್ಕೆ ಕೊರಳೊಡ್ಡಿದರು. ಈ ವಿಭಾಗದ ಹಿಂದಿನ ದಾಖಲೆ ರಷ್ಯಾದ ಯುಲಿಯಾ ಪೆಚೊಂಕಿನಾ ಹೆಸರಿನಲ್ಲಿತ್ತು.

ಪೆಚೊಂಕಿನಾ ಅವರು 2003ರಲ್ಲಿ 400 ಮೀ. ಹರ್ಡಲ್ಸ್ ಸ್ಪರ್ಧೆಯನ್ನು 52.34 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸುವ ಮೂಲಕ ನೂತನ ಕೂಟ ದಾಖಲೆ ನಿರ್ಮಿಸಿದ್ದರು. ಇದಾಗಿ ಸುಮಾರು 16 ವರ್ಷಗಳ ಬಳಿಕ ದಲೈಲಾ ಈ ದಾಖಲೆ ಸರಿಗಟ್ಟಿದ್ದಾರೆ. 2016ರ ರಿಯೋ ಒಲಿಂಪಿಕ್‌ನಲ್ಲಿ ಅಮೆರಿಕಾಕ್ಕೆ ಮೊದಲ ಬಂಗಾರ ಗೆದ್ದ ಹೆಗ್ಗಳಿಕೆ ದಲೈಲಾ ಅವರದ್ದು.

ಎಂಎಸ್ ಧೋನಿಗೆ ಸೆಲ್ಯೂಟ್ ಹೊಡೆದ ವಿಂಡೀಸ್ ಕ್ರಿಕೆಟರ್ ಶೆಲ್ಡನ್ ಕಾಟ್ರೆಲ್!ಎಂಎಸ್ ಧೋನಿಗೆ ಸೆಲ್ಯೂಟ್ ಹೊಡೆದ ವಿಂಡೀಸ್ ಕ್ರಿಕೆಟರ್ ಶೆಲ್ಡನ್ ಕಾಟ್ರೆಲ್!

'ನಾನು ನಿಜಕ್ಕೂ ಅಚ್ಚರಿಗೊಳಗಾಗಿದ್ದೇನೆ. ಈ ವಿಭಾಗದಲ್ಲಿ ದಾಖಲೆಯೊಂದಿದೆ ಅಂತ ನನ್ನ ಕೋಚ್ ಆಗಾಗ ನನ್ನಲ್ಲಿ ಹೇಳುತ್ತಿದ್ದರು. ಆ ದಾಖಲೆ ನನ್ನ ಹೆಸರಿಗೆ ಬಂದ ಮೇಲೆ ಈಗ ನಾನಿದನ್ನು ನಂಬುವಂತಾಗಿದೆ,' ಎಂದು ಸ್ಪರ್ಧೆಯ ಬಳಿಕ ದಲೈಲಾ ಖುಷಿ ಹಂಚಿಕೊಂಡರು.

Story first published: Monday, July 29, 2019, 15:20 [IST]
Other articles published on Jul 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X