ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಜಿಮ್ನಾಸ್ಟಿಕ್ ವರ್ಲ್ಡ್ ಚಾಲೆಂಜ್ ಕಪ್: ಚಿನ್ನದೊಂದಿಗೆ ಹೊಳೆದ ದೀಪಾ

ಜಿಮ್ನಾಸ್ಟಿಕ್ ವರ್ಲ್ಡ್ ಚಾಲೆಂಜ್ ನಲ್ಲಿ ಚಿನ್ನ ಗೆದ್ದ ದೀಪಾ ಭಾರತಕ್ಕೆ ವಾಪಾಸಾಗಿ ಹೇಳಿದ್ದೇನು ? |Oneindia Kannada
Deepa Karmakar wins gold in Artistic Gymnastics World Challenge Cup

ಮರ್ಸಿನ್, ಜು. 9: ವಿಶ್ವ ಮಟ್ಟದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ವನಿತಾ ಜಿಮ್ನಾಸ್ಟ್ ಕೀರ್ತಿಗೆ ದೀಪಾ ಕರ್ಮಾಕರ್ ಪಾತ್ರರಾಗಿದ್ದಾರೆ. 24ರ ಹರೆಯದ ದೀಪಾ, ಟರ್ಕಿಯ ಮರ್ಸಿನ್ ನಲ್ಲಿ ನಡೆದ ಫಿಗ್ (ಎಫ್ಐಜಿ) ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ವರ್ಲ್ಡ್ ಚಾಲೆಂಜ್ ಕಪ್ ಕೂಟದ ವನಿತಾ ವಾಲ್ಟ್ ವಿಭಾಗದಲ್ಲಿ ಚಿನ್ನ ಜಯಿಸಿದ್ದಾರೆ.

ಆಂಗ್ಲರ ನೆಲದಲ್ಲಿ ಭಾರತಕ್ಕೆ ಗೆಲುವು: ಟ್ವಿಟರ್ ಪ್ರತಿಕ್ರಿಯೆಗಳುಆಂಗ್ಲರ ನೆಲದಲ್ಲಿ ಭಾರತಕ್ಕೆ ಗೆಲುವು: ಟ್ವಿಟರ್ ಪ್ರತಿಕ್ರಿಯೆಗಳು

ಮುಂದಿನ ತಿಂಗಳು ಇಂಡೋನೇಷ್ಯಾದ ಜಕರ್ತಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಜಿಮ್ನಾಸ್ಟ್ ತಂಡದಲ್ಲಿ ಮುಂಚೂಣಿಯಲ್ಲಿ ಇರುವ ಕರ್ಮಾಕರ್, ಟರ್ಕಿ ಕೂಟದಲ್ಲಿ ಒಟ್ಟು 14.150 ಪಾಯಿಂಟ್ ಕಲೆ ಹಾಕುವ ಮೂಲಕ ಸ್ಥಳೀಯ ಎದುರಾಳಿ ಗೊಕ್ಸು ಉಕ್ಟಾಸ್ ಸಾನಿಲಿ (13.200 ಪಾಯಿಂಟ್ಸ್) ವಿರುದ್ಧ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ಸ್ಪರ್ಧೆಯ ಬಳಿಕ ಮಾತನಾಡಿದ ದೀಪಾ, 'ಚಿನ್ನಕ್ಕಿಂತ ಮಿಗಿಲಾಗಿ ನನಗೆ ಈ ಕೂಟದಲ್ಲಿ ಉನ್ನತ ಸಾಮಾರ್ಥ್ಯ ಮೆರೆದಿದ್ದಕ್ಕಾಗಿ ಖುಷಿಯಾಗುತ್ತಿದೆ. ಈ ವರ್ಷಾರಂಭದಲ್ಲಿ ನಾನು ಯೋಜನೆ ಹಾಕಿಕೊಂಡಿದ್ದಂತೆ ಮಾಡಲಾಯಿತೆನ್ನುವ ಬಗ್ಗೆ ಖುಷಿಯಾಗಿದೆ. ನಾನು ಫಿಟ್ನೆಸ್ ಗೆ ಹಿಂದಿರುಗಿದ್ದೇನೆ' ಎಂದು ಸಂಭ್ರಮ ಹಂಚಿಕೊಂಡರು.

ಟಿ20 ಸರಣಿ ಗೆದ್ದ ಬಳಿಕ ಭಾರತ, ರೋಹಿತ್, ಧೋನಿ ಬರೆದ ದಾಖಲೆಗಳು!ಟಿ20 ಸರಣಿ ಗೆದ್ದ ಬಳಿಕ ಭಾರತ, ರೋಹಿತ್, ಧೋನಿ ಬರೆದ ದಾಖಲೆಗಳು!

'ಇಲ್ಲಿ ಉನ್ನತ ಸಾಮರ್ಥ್ಯ ತೋರಿಸಲು ಸಾಧ್ಯವಾಗಿರುವುದರಿಂದ ನನ್ನ ಮೊಣಕಾಲು ನೋವಿನ ಸಮಸ್ಯೆ ಸಂಪೂರ್ಣ ಕಡಿಮೆಯಾಗಿರುವುದಾಗಿ ಭಾವಿಸಿದ್ದೇನೆ. ಜೊತೆಗೆ ಈ ಸಾಧನೆ ಮೂಲಕ ಮುಂಬರಲಿರುವ ಏಷ್ಯನ್ ಗೇಮ್ಸ್ ನಲ್ಲಿ ನಾನು ನನ್ನೆಲ್ಲಾ ಶಕ್ತಿಗೂಡಿಸಿ ಉತ್ತಮ ಫಲಿತಾಂಶ ತೆಗೆಯಲು ಸಾಧ್ಯ ಎಂಬ ವಿಶ್ವಾಸವೂ ಮೂಡಿದೆ' ಎಂದು ದೀಪಾ ತಿಳಿಸಿದರು.

2016ರ ರಿಯೋ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಸ್ವಲ್ಪದರಲ್ಲಿ ಪದಕ ವಂಚಿತರಾಗಿದ್ದ ದೀಪಾ ಅನಂತರ ಮೊಣಕಾಲು ಗಾಯದ ಕಾರಣ ಪ್ರತಿಷ್ಠಿತ ಕ್ರೀಡಾಕೂಟಗಳಿಂದ ದೂರ ಉಳಿಯುವಂತಾಗಿತ್ತು. ಅದಾಗಿ ಇದು ಎರಡನೇ ಬಾರಿ ದೀಪಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.

Story first published: Monday, July 23, 2018, 12:18 [IST]
Other articles published on Jul 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X