ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ದೀಪಕ್ ಪೂನಿಯಾ ಸೇರಿ ಇನ್ನಿಬ್ಬರು ರಸ್ಲರ್‌ಗಳಿಗೆ ಕೊರೊನಾ ಪಾಸಿಟಿವ್

Deepak Punia, two other wrestlers test positive for Coronavirus

ನವದೆಹಲಿ: ವರ್ಲ್ಡ್ ಚಾಂಪಿಯನ್ ಬೆಳ್ಳಿ ಪದಕ ವಿಜೇತ ರಸ್ಲರ್ ದೀಪಕ್ ಪೂನಿಯಾ ಸೇರಿ ಮೂವರು ಅನುಭವಿ ರಸ್ಲರ್‌ಗಳಿಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಸಾಯ್) ಗುರುವಾರ (ಸೆಪ್ಟೆಂಬರ್ 3) ಈ ವಿಚಾರ ತಿಳಿಸಿದೆ.

48ರ ಹರೆಯ ಪಕ್ಕಕ್ಕಿಟ್ಟು ಅದ್ಭುತ ಕ್ಯಾಚ್ ಪಡೆದ ಪ್ರವೀಣ್ ತಾಂಬೆ: ವೀಡಿಯೊ48ರ ಹರೆಯ ಪಕ್ಕಕ್ಕಿಟ್ಟು ಅದ್ಭುತ ಕ್ಯಾಚ್ ಪಡೆದ ಪ್ರವೀಣ್ ತಾಂಬೆ: ವೀಡಿಯೊ

ಒಲಿಂಪಿಕ್ಸ್‌ಗಾಗಿ ಅಭ್ಯಾಸ ನಡೆಸುತ್ತಿರುವ 86 ಕೆಜಿ ವಿಭಾಗದ ದೀಪಕ್ ಪೂನಿಯಾ, 65 ಕೆಜಿ ವಿಭಾಗದ ನವೀನ್ ಮತ್ತು 125 ಕೆಜಿ ವಿಭಾಗದ ಕೃಷನ್ ಕೋವಿಡ್ 19ಗೆ ತುತ್ತಾಗಿರುವ ರಸ್ಲರ್‌ಗಳು. ಮೂರೂ ರಸ್ಲರ್‌ಗಳು ಸೋನೆಪತ್‌ನಲ್ಲಿರುವ ಸಾಯ್ ಕೇಂದ್ರದಲ್ಲಿ ರಾಷ್ಟ್ರೀಯ ಕ್ಯಾಂಪ್‌ನಲ್ಲಿದ್ದವರು.

ನಾನ್ಯಾಕೆ ಕೊಹ್ಲಿ, ಶರ್ಮಾರನ್ನು ಹೊಗಳಬಾರದು? ತೀಕ್ಷ್ಣ ಪ್ರಶ್ನೆಗಳಲ್ಲಿ ಟೀಕಾಕಾರರ ತಿವಿದ ಅಖ್ತರ್!ನಾನ್ಯಾಕೆ ಕೊಹ್ಲಿ, ಶರ್ಮಾರನ್ನು ಹೊಗಳಬಾರದು? ತೀಕ್ಷ್ಣ ಪ್ರಶ್ನೆಗಳಲ್ಲಿ ಟೀಕಾಕಾರರ ತಿವಿದ ಅಖ್ತರ್!

ಪಾಸಿಟಿವ್ ಬಂದಿರುವ ಮೂರೂ ರಸ್ಲರ್‌ಗಳನ್ನು ಸದ್ಯ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಈ ಮೊದಲು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಹೆಸರಿಸಲ್ಪಟ್ಟಿದ್ದ ಮಹಿಳಾ ರಸ್ಲರ್ ವಿನೇಶ್ ಪೋಗಟ್‌ಗೆ ಕೊರೊನಾ ತಗುಲಿತ್ತು. ಈಗವರು ಚೇತರಿಸಿಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಾಟ್ಸ್‌ಆಪ್ ಗ್ರೂಪ್‌ನಿಂದ ಸುರೇಶ್ ರೈನಾ ರಿಮೂವ್ಚೆನ್ನೈ ಸೂಪರ್ ಕಿಂಗ್ಸ್ ವಾಟ್ಸ್‌ಆಪ್ ಗ್ರೂಪ್‌ನಿಂದ ಸುರೇಶ್ ರೈನಾ ರಿಮೂವ್

'ಸೋನೇಪತ್‌ನ ಸಾಯ್ ಸೆಂಟರ್‌ನಲ್ಲಿ ರಾಷ್ಟ್ರೀಯ ಕ್ಯಾಂಪ್‌ನಲ್ಲಿದ್ದ ಮೂವರು ಅನುಭವಿ ಪುರುಷ ರಸ್ಲರ್‌ಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ,' ಎಂದು ಕ್ರೀಡಾ ಇಲಾಖೆ ಮಾಹಿತಿ ನೀಡಿದೆ.

Story first published: Friday, September 4, 2020, 9:55 [IST]
Other articles published on Sep 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X