ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಆರ್ಚರಿ ವಿಶ್ವಕಪ್: ಮಿಶ್ರ ಡಬಲ್ಸ್‌ನಲ್ಲಿ ಚಿನ್ನಕ್ಕೆ ಗುರಿಯಿಟ್ಟ ದೀಪಿಕಾ ಕುಮಾರಿ, ಅತನು ದಾಸ್ ಜೋಡಿ

Deepika Kumari and Atanu Das won gold in the mixed team recurve event at the Archery World Cup

ಪ್ಯಾರಿಸ್, ಜೂನ್ 27: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ನಲ್ಲಿ ಭಾರತದ ಸ್ಟಾರ್ ದಂಪತಿಗಳಾದ ಅತನು ದಾಸ್ ಹಾಗೂ ದೀಪಿಕಾ ಕುಮಾರಿ ಜೋಡಿ ಚಿನ್ನಕ್ಕೆ ಗುರಿಯಿಟ್ಟಿದ್ದಾರೆ. ಭಾನುವಾರ ನಡೆದ ಸ್ಟೇಜ್ 3 ಹಂತದಲ್ಲಿ ನೆದರ್ಲ್ಯಾಂಡ್ ವಿರುದ್ಧ 5-3 ಅಂತರದಿಂದ ಗೆಲುವು ಸಾಧಿಸಿತು.

ದೀಪಿಕಾ ಅತನು ಜೋಡಿ ಆರಂಭದಲ್ಲಿ 0-2 ಅಂತರದಿಂದ ಹಿನ್ನಡೆಯಲ್ಲಿತ್ತು. ಆದರೆ ನಂತರ ತಿರುಗಿಬೀಳುವಲ್ಲಿ ಅದು ಯಶಸ್ವಿಯಾಯ್ತು. ಅಂತಿಮವಾಗಿ ನೆದರ್ಲೆಂಡ್‌ನ ಸ್ಜೆಫ್ ವ್ಯಾನ್ ಡೆನ್ ಬರ್ಗ್ ಮತ್ತು ಗೇಬ್ರಿಯೆಲಾ ಷ್ಲೋಸರ್ ಜೋಡಿಯನ್ನು 5-3 ಅಂತರದಿಂದ ಮಣಸಲು ಯಶಸ್ವಿಯಾದರು. ಈ ಮೂಲಕ ಈ ಸ್ಪರ್ಧೆಯಲ್ಲಿ ಭಾರತ ಮೂರನೇ ಚಿನ್ನವನ್ನು ಮುಡುಗೇರಿಸಿಕೊಂಡಿದೆ.

ಒಲಿಂಪಿಕ್ಸ್‌ಗೆ ಆಯ್ಕೆಯಾಗುವ ಕರ್ನಾಟಕದ ಕ್ರೀಡಾಪಟುಗಳಿಗೆ 10 ಲಕ್ಷ ರೂ. ಸಹಾಯ ಧನಒಲಿಂಪಿಕ್ಸ್‌ಗೆ ಆಯ್ಕೆಯಾಗುವ ಕರ್ನಾಟಕದ ಕ್ರೀಡಾಪಟುಗಳಿಗೆ 10 ಲಕ್ಷ ರೂ. ಸಹಾಯ ಧನ

ಈ ಗೆಲುವಿನ ಬಳಿಕ ಮಾತನಾಡಿದ ಅತನು ದಾಸ್ "ಇದೊಂದು ಅದ್ಭುತವಾದ ಅನುಭವ. ಮೊದಲ ಬಾರಿಗೆ ನಾವು ಫೈನಲ್‌ನಲ್ಲಿ ಜೊತೆಯಾಗಿ ಆಡಿದ್ದೇವೆ ಹಾಗೂ ಗೆಲುವು ಸಾಧಿಸಿದ್ದೇವೆ. ತುಂಬಾ ಅದ್ಭುತವಾದ ಅನುಭವ" ಎಂದಿದ್ದಾರೆ. ಎರಡು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಈ ಜೋಡಿ ಕಳೆದ ವರ್ಷ ಮದುವೆಯಾಗಿದ್ದರು. ಜೂನ್ 30ರಂದು ಈ ಜೋಡಿ ತಮ್ಮ ಮದುವೆಯ ಮೊದಲ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದ್ದಾರೆ.

Tokyo Olympics 2021 ವಿಚಾರವಾಗಿ ಸರ್ಕಾರ ತಗೊಂಡಿರೊ ದೊಡ್ಡ ನಿರ್ಧಾರ | Oneindia Kannada

ಇದಕ್ಕೂ ಮುನ್ನ ಮಹಿಳಾ ವಿಭಾಗದಲ್ಲಿ ದೀಪಿಕಾ ಕುಮಾರಿ, ಅಂಕಿತಾ ಭಕಾತ್ ಮತ್ತು ಕೋಮಲಿಕಾ ಬ್ಯಾರಿ ಅವರ ತಂಡ ಮೆಕ್ಸಿಕೋ ತಂಡವನ್ನು ಮಣಿಸಿ ಚಿನ್ನವನ್ನು ಗೆದ್ದುಕೊಂಡಿತು. ಶನಿವಾರ ನಡೆದ ಪಂದ್ಯದಲ್ಲಿ ಅಭಿಶೇಕ್ ವರ್ಮಾ ವೈಯಕ್ತಿಕ ವಿಭಾಗದಲ್ಲಿ ಗೆಲುವು ಸಾಧಿಸಿ ಭಾರತದ ಚಿನ್ನದ ಪದಕದ ಖಾತೆ ತೆರೆದಿದ್ದರು.

Story first published: Sunday, June 27, 2021, 16:53 [IST]
Other articles published on Jun 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X