ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ರಸ್ಲರ್ ಸುಶೀಲ್ ಕುಮಾರ್‌ಗೆ ಜೂನ್ 25ರ ವರೆಗೆ ನ್ಯಾಯಾಂಗ ಬಂಧನ

Delhi court extends judicial custody of Sushil Kumar till June 25

ನವದೆಹಲಿ: ಒಲಿಂಪಿಕ್ಸ್ ಪದಕ ವಿಜೇತ ರಸ್ಲರ್ ಸುಶೀಲ್ ಕುಮಾರ್‌ಗೆ ದೆಹಲಿ ಕೋರ್ಟ್ ಜೂನ್ 25ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದೆ. ದೆಹಲಿ ಸ್ಟೇಡಿಯಂನಲ್ಲಿ ನಡೆದ ಗಲಾಟೆಯೊಂದರಲ್ಲಿ ಯುವ ರಸ್ಲರ್ ಒಬ್ಬ ಸಾವನ್ನಪ್ಪಿದ್ದ ಪ್ರಕರಣದಲ್ಲಿ ಸುಶೀಲ್ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಸುಶೀಲ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ತನ್ನ ಎಲ್ಲೆ ಮೀರಿದ ವರ್ತನೆಗೆ ಕ್ಷಮೆಯಾಚಿಸಿದ ಶಕೀಬ್ ಅಲ್ ಹಸನ್ತನ್ನ ಎಲ್ಲೆ ಮೀರಿದ ವರ್ತನೆಗೆ ಕ್ಷಮೆಯಾಚಿಸಿದ ಶಕೀಬ್ ಅಲ್ ಹಸನ್

9 ದಿನಗಳ ನ್ಯಾಯಾಂಗ ಬಂಧನದ ಬಳಿಕ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಿತಿಕಾ ಜೈನ್ ಮುಂದೆ ಸುಶೀಲ್ ಕುಮಾರ್ ಅವರನ್ನು ಹಾಜರುಪಡಿಸಲಾಗಿತ್ತು. ಸುಶೀಲ್ ಮೇಲೀಗ ಕೊಲೆ, ಅಪರಾಧಿ ನರಹತ್ಯೆ ಮತ್ತು ಅಪಹರಣದ ದೂರುಗಳಿವೆ. ಸಾಗರ್ ಧಂಕಾರ್ ಎಂಬ ರಸ್ಲರ್ ಹಲ್ಲೆಗೊಳಗಾಗಿ ಅಸುನೀಗಿದ್ದರಿಂದ ಸುಶೀಲ್‌ ತನಿಖೆಗೆ ಒಳಪಟ್ಟಿದ್ದಾರೆ.

ದೆಹಲಿ ಸ್ಟೇಡಿಯಂನಲ್ಲಿ ರಸ್ಲರ್‌ಗಳ ನಡುವೆ ನಡೆದ ಜಗಳದಲ್ಲಿ ಸಾಗರ್ ಧಂಕಾರ್ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದ. ಈ ಸಾವಿನಲ್ಲಿ ಸುಶೀಲ್ ಕುಮಾರ್ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು. ಇದೇ ವೇಳೆ ಸುಶೀಲ್ ಕೂಡ ತಲೆ ಮರೆಸಿಕೊಂಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು ಚಹಾಲ್ ಪತ್ನಿ ಧನಶ್ರೀ ಹೊಸ ವಿಡಿಯೋಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು ಚಹಾಲ್ ಪತ್ನಿ ಧನಶ್ರೀ ಹೊಸ ವಿಡಿಯೋ

ಪೊಲೀಸ್ ಕಸ್ಟಡಿಯಲ್ಲಿದ್ದ ಸುಶೀಲ್ ಇತ್ತೀಚೆಗಷ್ಟೇ, ತನಗೆ ವಿಶೇಷ ಆಹಾರ, ಸಪ್ಲಿಮೆಂಟ್ಸ್‌, ದೈಹಿಕ ಅಭ್ಯಾಸದ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸೌಲಭ್ಯಗಳನ್ನು ಕೊಡದಿದ್ದರೆ ಆರೋಗ್ಯ ಹಾಳಾಗಿ ತನ್ನ ವೃತ್ತಿ ಜೀವನಕ್ಕೆ ತೊಂದರೆಯಾಗಲಿದೆ ಎಂದಿದ್ದರು. ಆದರೆ ಸುಶೀಲ್ ಮನವಿಯನ್ನು ಕೋರ್ಟ್ ತಿರಸ್ಕರಿಸಿತ್ತು.

Story first published: Friday, June 11, 2021, 21:53 [IST]
Other articles published on Jun 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X