ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್ ಪದಕ ಗೆಲ್ಲದ್ದಕ್ಕೆ ನನಗೇನೂ ವಿಷಾದವಿಲ್ಲ: ಕನ್ನಡತಿ ಅದಿತಿ ಅಶೋಕ್

Dont have any regrets because I gave my 100%, says Aditi Ashok

ಬೆಂಗಳೂರು: ಭಾರತದ ಸ್ಟಾರ್ ಗಾಲ್ಫರ್, ಮೂಲತಃ ಬೆಂಗಳೂರಿನವರಾದ ಅದಿತಿ ಅಶೋಕ್ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ್ದರು. ಮಹಿಳಾ ಗಾಲ್ಫ್‌ ಸ್ಪರ್ಧೆಯಲ್ಲಿ ಅದಿಗೆ 4ನೇ ಸ್ಥಾನ ಲಭಿಸಿ ನಿರಾಸೆಯಾಗಿತ್ತು. ಈ ಬಗ್ಗೆ ಅದಿತಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಸಿಗದಿರುವುದಕ್ಕೆ ನನಗೇನೂ ಬೇಜಾರಿಲ್ಲ. ಯಾಕೆಂದರೆ ನಾನು ನನ್ನ 100 ಶೇಕಡಾ ಪ್ರಯತ್ನ ನೀಡಿದ್ದೇನೆ ಎಂದು ಅದಿತಿ ಹೇಳಿದ್ದಾರೆ.

ಈ ಆಟಗಾರನಿಂದ ಪೂರ್ಣ ಸಾಮರ್ಥ್ಯದ ಪ್ರದರ್ಶನ ಇನ್ನಷ್ಟೇ ಬರಬೇಕಿದೆ ಎಂದ ಸೆಹ್ವಾಗ್ಈ ಆಟಗಾರನಿಂದ ಪೂರ್ಣ ಸಾಮರ್ಥ್ಯದ ಪ್ರದರ್ಶನ ಇನ್ನಷ್ಟೇ ಬರಬೇಕಿದೆ ಎಂದ ಸೆಹ್ವಾಗ್

ಆಗಿನ್ನೂ 18ರ ಹರಯದವರಾಗಿದ್ದ ಅದಿತಿ ಅಶೋಕ್ 2016ರಲ್ಲಿ ನಡೆದಿದ್ದ ರಿಯೋ ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಬಾರಿಗೆ ಪಾಲ್ಗೊಂಡು 41ನೇ ಸ್ಥಾನ ಪಡೆದುಕೊಂಡಿದ್ದರು. ಆದರೆ ಈಗ 23ರ ಹರೆಯದವರಾಗಿರುವ ಅದಿತಿ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದರು. ಅದಿತಿಗೆ ಪದಕ ಸಿಕ್ಕಿಲ್ಲವಾದರೂ ಒಲಿಂಪಿಕ್ಸ್‌ನಲ್ಲಿ ಅದಿತಿ ತೋರಿದ ಅತ್ಯುತ್ತಮ ಸಾಧನೆಯಾಗಿ ಈ 4ನೇ ಸ್ಥಾನದ ಸಾಧನೆ ಗುರುತಿಸಿಕೊಂಡಿದೆ.

ನಾಲ್ಕನೇ ಸ್ಥಾನ ಯಾವತ್ತಿಗೂ ಆಘಾತ ನೀಡುತ್ತದೆ
ಟೋಕಿಯೋದಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಕ್ಕೆ ವಿಷಾದ ಅನ್ನಿಸುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅದಿತಿ, "ಒಲಿಂಪಿಕ್ಸ್‌ನಂತ ದೊಡ್ಡ ಕ್ರೀಡಾಕೂಟಗಳಲ್ಲಿ ನಾಲ್ಕನೇ ಸ್ಥಾನ ಒಳ್ಳೆ ಸ್ಥಾನವಲ್ಲ. ನಾಲ್ಕನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸುವಾಗ ಪ್ರತೀ ಸಾರಿಯೂ ಮನಸ್ಸಿಗೆ ನೋವಾಗುತ್ತದೆ. ಹಾಗಂತ ನನಗೆ ಯಾವುದೇ ರೀತಿಯ ವಿಷಾದವಿಲ್ಲ. ಯಾಕೆಂದರೆ ನಾನು ನನ್ನ ಎಲ್ಲಾ ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಹೌದು ನಾನು ಸ್ಪರ್ಧೆಯ ವೇಳೆ ತಪ್ಪುಗಳನ್ನು ಮಾಡಿದ್ದೆ ನಿಜ. ಆದರೆ ಬಹಳ ತಪ್ಪುಗಳೇನೂ ಮಾಡಿರಲಿಲ್ಲ. ನಾನು ಆಡಿದ ರೀತಿಗೆ ನನಗೆ ನಿಜಕ್ಕೂ ಖುಷಿಯಿದೆ. ನಾನು ಇದೇ ಪರಿಶ್ರಮದೊಂದಿಗೆ ಮುಂದುವರೆಯುತ್ತೇನೆ. ಆಟವನ್ನು ಸುಧಾರಿಸಿಕೊಳ್ಳುತ್ತೇನೆ. ಬಹುಷ ಮುಂದೊಮ್ಮೆ ಖಂಡಿತಾ ನಾನು ಪದಕದ ಸ್ಪರ್ಧೆಗಳ ಸಾಲಿನಲ್ಲಿರುತ್ತೇನೆ," ಎಂದಿದ್ದಾರೆ.

ಚಿನ್ನ ವಿಜೇತ ನೀರಜ್‌ಗೆ ಕೋಚಿಂಗ್ ನೀಡಿದ್ದ ಕರ್ನಾಟಕದ ಕಾಶೀನಾಥ್ ಕುರಿತು ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ಸಂಗತಿಗಳು!ಚಿನ್ನ ವಿಜೇತ ನೀರಜ್‌ಗೆ ಕೋಚಿಂಗ್ ನೀಡಿದ್ದ ಕರ್ನಾಟಕದ ಕಾಶೀನಾಥ್ ಕುರಿತು ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ಸಂಗತಿಗಳು!

ಪದಕ ಸಮೀಪದಲ್ಲಿದ್ದ ಅದಿತಿ ಅಶೋಕ್
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅದಿತಿ ಅಶೋಕ್ ಪದಕದ ಅತೀ ಸಮೀಪದಲ್ಲಿದ್ದರು. ಕಸುಮಿಗಾಸೆಕಿ ಕಂಟ್ರಿ ಕ್ಲಬ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟಾರೆಯಾಗಿ 15-ಅಂಡರ್ 269 ರನ್ನು ಬಿಟ್ಟು ಅಂತಿಮ ಸುತ್ತಿನಲ್ಲಿ ಮೂರು-ಅಂಡರ್ 68 ಅಂಕಗಳೊಂದಿಗೆ ಅದಿತಿ ನಾಲ್ಕನೇ ಸ್ಥಾನ ಪಡೆದರು. ಸ್ಪರ್ಧೆಯ ಆರಂಭದಿಂದಲೂ ಅದಿತಿ ಟಾಪ್ ಎರಡರಲ್ಲಿ ಸ್ಥಾನ ಪಡೆದುಕೊಂಡಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಅದಿತಿ ನಾಲ್ಕನೇ ಸ್ಥಾನ ಪಡೆದುಕೊಳ್ಳಬೇಕಾಯ್ತು. ಕಾರಣ ದ್ವಿತೀಯ ಸ್ಥಾನದಲ್ಲಿದ್ದ ಜಪಾನ್‌ನ ಮೋನ್ ಮತ್ತು ನ್ಯೂಜಿಲೆಂಡ್‌ನ ಲಿಡಿಯಾ ಕೊ 268 ಸಮಾನ ಅಂಕ ಗಳಿಸಿದ್ದರಿಂದ ತೃತೀಯ ಸ್ಥಾನ ಲಿಡಿಯಾ ಅವರದ್ದಾಗಿತು. ಹೀಗಾಗಿ ದ್ವಿತೀಯ ಸ್ಥಾನದಲ್ಲಿದ್ದ ಅದಿತಿ ನಾಲ್ಕನೇ ಸ್ಥಾನಕ್ಕೆ ಕುಸಿದರು. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಅದಿತಿ 4ನೇ ಸ್ಥಾನದಲ್ಲಿ ನಿರಾಶೆ ಅನುಭವಿಸಿದ್ದಾರಾದರೂ ಮುಂದಿನ ಒಲಿಂಪಿಕ್ಸ್‌ನಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

200ನೇ ಶ್ರೇಯಾಂಕಿತೆಗೆ ನಾಲ್ಕನೇ ಸ್ಥಾನ
ವಿಶೇಷವೆಂದರೆ ಮಹಿಳಾ ವೈಯಕ್ತಿಕ ಗಾಲ್ಫ್ ಸ್ಪರ್ಧೆಯ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅದಿತಿ 200ನೇ ಶ್ರೇಯಾಂಕದಲ್ಲಿದ್ದರು. ಆದರೆ ಒಲಿಂಪಿಕ್ಸ್‌ನಲ್ಲಿ ಅದಿತಿ 4ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿರುವುದು ಉತ್ತಮ ಸಾಧನೆಯೆನಿದೆ. ಈ ವಿಭಾಗದಲ್ಲಿ ಚಿನ್ನದ ಪದಕ ಯುನೈಟೆಡ್ ಸ್ಟೇಟ್ಸ್‌ ಅಮೆರಿಕಾದ ನೆಲ್ಲಿ ಕೊರ್ಡಾ ಪಾಲಾಯಿತು. ಕೊರ್ಡಾ 267 ಅಂಕ ಗಳಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡರು. ನಾಲ್ಕನೇ ಸುತ್ತಿನ ಸ್ಪರ್ಧೆ ನಡೆದ ಶನಿವಾರ ಮಳೆಯಿಂದಾಗಿ ಆಟ ಕೊಂಚ ನಿಲುಗಡೆಯಾಗಿದ್ದೂ ಕಾಣಿಸಿತು. ಕರ್ನಾಟಕದಿಂದ ಒಟ್ಟು ನಾಲ್ಕು ಸ್ಪರ್ಧಿಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಅವರೆಂದರೆ ಈಕ್ವೆಸ್ಟ್ರಿಯನ್ ನಲ್ಲಿ ಫೌವಾದ್ ಮಿರ್ಜಾ, ಮಹಿಳೆಯರ ಗಾಲ್ಫ್ ನಲ್ಲಿ ಅದಿತಿ ಅಶೋಕ್, ಪುರುಷರ ಗಾಲ್ಫ್ ನಲ್ಲಿ ಅನಿರ್ಬನ್ ಲಹಿರಿ ಮತ್ತು ಈಜು ಸ್ಪರ್ಧೆಯ 100 ಮೀ. ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ಶ್ರೀಹರಿ ನಟರಾಜ್. ಇವರಲ್ಲಿ ಯಾರಿಗೂ ಪದಕ ಸಿಕ್ಕಿಲ್ಲ. ಪದಕದಾಸೆ ಮೂಡಿಸಿದ್ದ ಅದಿತಿ ಉತ್ತಮ ಪೈಪೋಟಿಯೊಂದಿಗೆ ಗಮನ ಸೆಳೆದಿದ್ದರು.

ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ರೀಡಾ ಜ್ಯೋತಿ ಹಿಡಿದಿದ್ದ ಪಿಂಕಿ ಕರ್ಮಾಕರ್ ಈಗ ದಿನಗೂಲಿ ನೌಕರೆ!ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ರೀಡಾ ಜ್ಯೋತಿ ಹಿಡಿದಿದ್ದ ಪಿಂಕಿ ಕರ್ಮಾಕರ್ ಈಗ ದಿನಗೂಲಿ ನೌಕರೆ!

ಒಲಿಂಪಿಕ್ಸ್‌ ಇತಿಹಾಸದಲ್ಲೇ ಭಾರತ ತಂಡದಿಂದ ದಾಖಲೆ
ಆಗಸ್ಟ್ 8ರ ಭಾನುವಾರವಷ್ಟೇ ಮುಕ್ತಾಯಗೊಂಡ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ತಂಡ ಈ ಬಾರಿ ಅತೀ ಹೆಚ್ಚಿನ ಪದಕ ಗೆದ್ದು ಗಮನ ಸೆಳೆದಿದೆ. ಒಟ್ಟು 7 ಪದಕಗಳನ್ನು ಭಾರತ ಗೆದ್ದಿದ್ದು, ಇದರಲ್ಲಿ 1 ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳು ಸೇರಿವೆ. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು 49 ಕೆಜಿ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕವನ್ನು ಮೊದಲ ಪದಕವಾಗಿ ಗೆದ್ದಿದ್ದರು. ಆ ಬಳಿಕ ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಕಂಚು ಗೆದ್ದರು. ಮಹಿಳಾ 69 ಕೆಜಿ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೊರ್ಹೊಹೈನ್ ಮತ್ತೊಂದು ಕಂಚು ಸೇರಿಸಿದ್ದರು. ಆ ಬಳಿಕ ಪುರುಷರ ಹಾಕಿಯಲ್ಲೂ ಭಾರತಕ್ಕೆ ಕಂಚಿನ ಪದಕ ಒಲಿದಿತ್ತು. ಬಳಿಕ ನಡೆದ ಪುರುಷರ ರಸ್ಲಿಂಗ್ 57 ಕೆಜಿ ವಿಭಾಗದಲ್ಲಿ ಭಾರತದ ರವಿಕುಮಾರ್ ದಾಹಿಯಾ ಬೆಳ್ಳಿ ಜಯಿಸಿದ್ದರು. ಮತ್ತೊಂದು ಪಂದ್ಯದಲ್ಲಿ ಭಜರಂಗ್ ಪೂನಿಯಾ ಕೂಡ ಕಂಚು ಗೆದ್ದರು. ಕೊನೇಯದಾಗಿ ಭಾರತದ ಅಥ್ಲೀಟ್ ನೀರಜ್ ಚೋಪ್ರಾಗೆ ಜಾವೆಲಿನ್ ಥ್ರೋನಲ್ಲಿ ಬಂಗಾರ ಲಭಿಸಿತ್ತು. ಒಲಿಂಪಿಕ್ಸ್‌ನಲ್ಲಿ ಭಾರತ 7 ಪದಕ ಗೆದ್ದಿದ್ದು ಇದೇ ಮೊದಲು. ಇದಕ್ಕೂ ಮುನ್ನ ಭಾರತ 6 ಪದಕ ಗೆದ್ದಿದ್ದೇ ದೊಡ್ಡ ಸಾಧನೆಯೆನಿಸಿತ್ತು.

 ಕ್ರಿಕೆಟ್ ಆಡಲು ಶ್ರೇಯಸ್ ಫಿಟ್: ಎನ್‌ಸಿಎಯಿಂದ ದೊರೆಯಿತು ಐಯ್ಯರ್‌ಗೆ ಗ್ರೀನ್‌ ಸಿಗ್ನಲ್ ಕ್ರಿಕೆಟ್ ಆಡಲು ಶ್ರೇಯಸ್ ಫಿಟ್: ಎನ್‌ಸಿಎಯಿಂದ ದೊರೆಯಿತು ಐಯ್ಯರ್‌ಗೆ ಗ್ರೀನ್‌ ಸಿಗ್ನಲ್

ಟೋಕಿಯೋದಲ್ಲಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಭಾರತೀಯ ತಂಡದ ಬಗ್ಗೆ ಸಂಕ್ಷಿಪ್ತ ಮಾಹಿತಿ
ಈ ಬಾರಿ ಜಪಾನ್‌ನ ಟೋಕಿಯೋದಲ್ಲಿ ನಡೆದಿದ್ದ ಒಲಿಂಪಿಕ್ಸ್‌ಗಾಗಿ ಭಾರತದಿಂದ ಒಟ್ಟು 127 ಅಥ್ಲೀಟ್‌ಗಳು ತೆರಳಿದ್ದರು. ಇದರಲ್ಲಿ ಅಧಿಕಾರಿಗಳು, ಸಿಬ್ಬಂದಿಗಳೂ ಸೇರಿ ಒಟ್ಟಾರೆ 228 ಮಂದಿಯ ಬೃಹತ್ ತಂಡ ಪ್ರತಿಷ್ಠಿತ ಕ್ರೀಡಾಕೂಟಕ್ಕಾಗಿ ಟೋಕಿಯೋಗೆ ತೆರಳಿತ್ತು. ಒಲಿಂಪಿಕ್ಸ್ ಇತಿಹಾಸದಲ್ಲಿ ಪಾಲ್ಗೊಂಡಿದ್ದ ಅತೀ ದೊಡ್ಡ ಭಾರತೀಯ ತಂಡವಿದು. ಒಟ್ಟು 17 ಕ್ರೀಡಾಸ್ಪರ್ಧೆಗಳಲ್ಲಿ ಭಾರತೀಯರು ಸ್ಪರ್ಧಿಸಿದ್ದರು. ಹಿಂದಿನ ರಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 117 ಅಥ್ಲೀಟ್‌ಗಳು ಸ್ಪರ್ಧಿಸಿದ್ದರು. ಇದರಲ್ಲಿ 63 ಪುರುಷರು, 54 ಮಹಿಳಾ ಸ್ಪರ್ಧಿಗಳಿದ್ದರು.

Story first published: Wednesday, August 11, 2021, 17:57 [IST]
Other articles published on Aug 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X