ಬಡವರಿಗೆ ಆಹಾರದ ಪ್ಯಾಕೆಟ್‌ಗಳ ವಿತರಿಸಿದ ಅಥ್ಲೀಟ್ ದ್ಯುತೀ ಚಂದ್

ಭುವನೇಶ್ವರ್, ಮೇ 11: ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿರುವ ಭಾರತದ ಅಥ್ಲೀಟ್ (ಸ್ಪ್ರಿಂಟರ್) ದ್ಯುತೀ ಚಂದ್, ಬಡ ಜನರಿಗೆ ಆಹಾರದ ಪ್ಯಾಕೆಟ್‌ಗಳನ್ನು ವಿತರಿಸುವುದಕ್ಕಾಗಿ ಭುವನೇಶ್ವರದಲ್ಲಿ ತಾನಿರು ಹಳ್ಳಿಯಿಂದ ಸುಮಾರು 70 ಕಿ.ಮೀ. ಓಡಾಡಿದ್ದಾರೆ.

ಕೊಹ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳನ್ನು ಉರಿಸುತ್ತಿದ್ದರು ಎಂದ ಬಾಂಗ್ಲಾ ಕ್ರಿಕೆಟಿಗ!ಕೊಹ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳನ್ನು ಉರಿಸುತ್ತಿದ್ದರು ಎಂದ ಬಾಂಗ್ಲಾ ಕ್ರಿಕೆಟಿಗ!

ತನ್ನ ಒಡಿಶಾ ರಾಜ್ಯದಿಂದ ವಿಶೇಷ ಪಾಸ್ ಪಡೆದುಕೊಂಡಿರುವ ದ್ಯುತೀ, ತನ್ನ ಮಹೀಂದ್ರ XUV ವಾಹನದ ಮೂಲಕ ತಾನಿರುವ ಹಳ್ಳಿ ಜೈಪುರದಲ್ಲಿರುವ ಚಕಾ ಗೂಪಲ್ಪುರ್‌ನಿಂದ ಸುತ್ತಮುತ್ತಲಿನ ಊರುಗಳಿಗೆ ತೆರಳಿ ಸುಮಾರು 1000 ಆಹಾರದ ಪ್ಯಾಕೆಟ್‌ಗಳನ್ನು ವಿತರಿಸಿದ್ದಾರೆ.

ಗಂಗೂಲಿ or ಧೋನಿ; ಕೊಹ್ಲಿ or ಸಚಿನ್: ಕೈಫ್ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿಗಳುಗಂಗೂಲಿ or ಧೋನಿ; ಕೊಹ್ಲಿ or ಸಚಿನ್: ಕೈಫ್ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿಗಳು

'ನಾನಿರುವ ಹಳ್ಳಿಯಲ್ಲಿ ಲಾಕ್‌ಡೌನ್‌ನಿಂದ ಜನರಿಗೆ ಬಹಳ ತೊಂದರೆಯಾಗಿದೆ. ಹೀಗಾಗಿ ಜನರಿಗೆ ನನ್ನ ಕೈಲಾದಷ್ಟು ಮಟ್ಟಿಗೆ ಏನಾದರೂ ಸಹಾಯ ಮಾಡಬೇಕೆಂದು ನಾನು ನಿರ್ಧರಿಸಿದೆ. ವಿಶೇಷ ಪಾಸ್‌ ಪಡೆದು ಆ ಬಳಿಕ ಸುತ್ತಮುತ್ತಲಿನ ಸುಮಾರು 1000 ಮಂದಿಗೆ ಆಹಾರದ ಪ್ಯಾಕೆಟ್‌ಗಳನ್ನು ವಿತರಿಸಿದ್ದೇನೆ,' ಎಂದು ಪಿಟಿಐ ಜೊತೆ ಮಾತನಾಡಿದ ದ್ಯುತೀ ವಿವರಿಸಿದರು.

ಸಿಎಸ್‌ಕೆ-ಎಂಐ ಗೆಲುವು, ಆರ್‌ಸಿಬಿ ಸೋಲಿಗೆ ಕಾರಣ ಹೇಳಿದ ಆಶಿಷ್ ನೆಹ್ರಾ!ಸಿಎಸ್‌ಕೆ-ಎಂಐ ಗೆಲುವು, ಆರ್‌ಸಿಬಿ ಸೋಲಿಗೆ ಕಾರಣ ಹೇಳಿದ ಆಶಿಷ್ ನೆಹ್ರಾ!

'ನಾನು ಮತ್ತು ನನ್ನ ಕುಟುಂಬಸ್ಥರು ನಾವು ಹಳ್ಳಿಗಳಿಗೆ ಭೇಟಿ ನೀಡುವ ಬಗ್ಗೆ ಮೊದಲೇ ಮಾಹಿತಿ ನೀಡಿದ್ದೆವು. ಹೀಗಾಗಿ ಕೆಲವರು ನನ್ನ ಮನೆಗೇ ಬಂದರು, ಅವರಿಗೆಲ್ಲ ಆಹಾರದ ಪೊಟ್ಟಣಗಳನ್ನು ವಿತರಿಸಿದ್ದೇವೆ,' ಎಂದು 24ರ ಹರೆಯದ ದ್ಯುತಿ ಮಾಹಿತಿ ನೀಡಿದ್ದಾರೆ. ಭುವನೇಶ್ವರ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯಲ್ಲಿ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ಡಿಗ್ರೀ ಮುಗಿಸಿರುವ ದ್ಯುತಿ, ಸದ್ಯ ಅದೇ ಸಂಸ್ಥೆಯ ಅಡಿಯಲ್ಲಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, May 11, 2020, 15:23 [IST]
Other articles published on May 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X