ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲೋದೇ ಗುರಿ: ದ್ಯುತೀ ಚಂದ್

Dutee Chand focussed on the way ahead Tokyo Olympics

ಬೆಂಗಳೂರು, ಸೆಪ್ಟೆಂಬರ್ 13: ಮುಂಬರುವ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ಗೆಲ್ಲೋದೆ ನನ್ನ ಗುರಿ. ಆ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ದೇಶಕ್ಕೆ ಪದಕ ತರುವತ್ತ ಸಂಪೂರ್ಣ ಚಿತ್ತ ಹರಿಸಿ ಕಠಿಣ ಅಭ್ಯಾಸ ಮಾಡುತ್ತಿದ್ದೇನೆ ಎಂದು ಏಷ್ಯನ್ ಗೇಮ್ಸ್ ನಲ್ಲಿ ಎರಡು ಬೆಳ್ಳಿ ಪದಕ ಗೆದ್ದಿದ್ದ ಅಥ್ಲೀಟ್ ದ್ಯುತೀ ಚಂದ್ ಹೇಳಿದರು.

ಸಾಫ್ ಚಾಂಪಿಯನ್ ಶಿಪ್: 3-1ರಿಂದ ಪಾಕ್ ಸೋಲಿಸಿದ ಭಾರತ ಫೈನಲ್ ಗೆಸಾಫ್ ಚಾಂಪಿಯನ್ ಶಿಪ್: 3-1ರಿಂದ ಪಾಕ್ ಸೋಲಿಸಿದ ಭಾರತ ಫೈನಲ್ ಗೆ

ಬೆಂಗಳೂರು ಪತ್ರಕರ್ತರ ಸಂಘದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತ, 'ಇಂಡೋನೇಷ್ಯಾ ಗೇಮ್ಸ್ ನಲ್ಲಿ ಪದಕ ಗೆದ್ದಿದ್ದು ನನಗೆ ಹೆಚ್ಚು ಆತ್ಮವಿಶ್ವಾಸವನ್ನು ನೀಡಿದೆ. ಮುಂದಿನ ಒಲಿಂಪಿಕ್ಸ್ ನಲ್ಲೂ ಪದಕ ಜಯಿಸುವತ್ತ ಗಮನ ಹರಿಸುತ್ತಿದ್ದೇನೆ. ಪದಕ ಗೆಲ್ಲುವ ವಿಶ್ವಾಸವೂ ನನಗಿದೆ' ಎಂದರು.

ಸೆಪ್ಟೆಂಬರ್ 2ರಂದು ಇಂಡೋನೇಷ್ಯಾದ ಜಕಾರ್ತಾದಲ್ಲಿ ಮುಕ್ತಾಯಗೊಂಡ 18ನೇ ಏಷ್ಯನ್ ಗೇಮ್ಸ್ ನಲ್ಲಿ ದ್ಯುತೀ ಚಂದ್ 100 ಮೀ. ಮತ್ತು 200 ಮೀ. ಓಟದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದಿದ್ದರು. 100 ಮೀ. ನಲ್ಲಿ ಈ ಹಿಂದೆ ಭಾರತ ಪದಕ ಗೆದ್ದಿದ್ದು 1986ರಲ್ಲಿ. ಅವತ್ತು ಪಿಟಿ ಉಷಾ ಈ ಸಾಧನೆ ಮೆರೆದಿದ್ದರು.

100 ಮೀ.ಯನ್ನು 11 ಸೆ. ಒಳಗೆ ಮುಗಿಸುವ ಗುರಿ

100 ಮೀ.ಯನ್ನು 11 ಸೆ. ಒಳಗೆ ಮುಗಿಸುವ ಗುರಿ

ಒಲಿಂಪಿಕ್ಸ್ ತಯಾರಿ ಬಗ್ಗೆ ಮಾತನಾಡುತ್ತ 22ರ ಹರೆಯದ ದ್ಯುತಿ, '100 ಮೀ. ಓಟವನ್ನು 11 ಸೆಕೆಂಡ್ ಕಾಲಾವಧಿಯಲ್ಲಿ ಮುಗಿಸುವತ್ತ ದೃಷ್ಟಿ ಹರಿಸಿ ಅತ್ತ ಶ್ರಮಿಸುತ್ತಿದ್ದೇನೆ. ಇದು 2020ರ ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಗಿಟ್ಟಿಕೊಳ್ಳುವುದಕ್ಕಷ್ಟೇ ಅಲ್ಲ, ಅಲ್ಲಿ ಫೈನಲ್ ಗೆ ಪ್ರವೇಶಿಸಲು ಈ ಕಾಲಾವಧಿ ನನಗೆ ಸಹಾಯಕ್ಕೆ ಬರುತ್ತದೆ. ಅದಕ್ಕಾಗೇ ಶ್ರಮಪಡುತ್ತಿದ್ದೇನೆ' ಎಂದರು.

ಕಾಡಿದ ಹೈಪರ್ ಆ್ಯಂಡ್ರೋಜೆನಿಸಮ್

ಕಾಡಿದ ಹೈಪರ್ ಆ್ಯಂಡ್ರೋಜೆನಿಸಮ್

ದ್ಯುತೀ ಅವರು ಒಡಿಶಾದ ಬಡ ಕುಟುಂಬದಿಂದ ಬಂದವರು. ಹೆತ್ತವರ ಏಳು ಮಕ್ಕಳಲ್ಲಿ ದ್ಯುತೀ ಮೂರನೆಯವಳು. ಮೊದಲೇ ಕಷ್ಟದ ಜೀವನ ಸಾಗಿಸುತ್ತಿದ್ದ ದ್ಯುತೀ ಕುಟುಂಬಕ್ಕೆ ಮತ್ತೊಂದು ಸಂಕಷ್ಟ ಎದುರಾಗಿತ್ತು. ದ್ಯುತಿ ಹೈಪರ್ ಆ್ಯಂಡ್ರೋಜೆನಿಸಮ್ (ಸ್ತ್ರೀ ದೇಹದಲ್ಲಿ ಪುರುಷ ಹಾರ್ಮೋನು ಹೆಚ್ಚಳದ ತೊಂದರೆ)ಗೆ ತುತ್ತಾದಾಗಂತೂ ಕುಟುಂಬ ಸಾಕಷ್ಟು ಕಷ್ಟ ಅನುಭವಿಸಿತ್ತು.

ಕೆಐಐಟಿ ನೆರವು

ಕೆಐಐಟಿ ನೆರವು

ಬಡತನದಲ್ಲಿದ್ದರೂ ಪ್ರತಿಭೆ ವಿಚಾರದಲ್ಲಿ ಶ್ರೀಮಂತೆಯಾಗಿದ್ದ ಬಾಲಕಿ ದ್ಯುತಿಯನ್ನು ಗುರುತಿಸಿದ ಕಾಳಿಂಗ್ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ(ಕೆಐಐಟಿ)ಯ ಸಂಸ್ಥಾಪಕ ಡಾ. ಅಚ್ಯುತ ಸಮಂತ ಅವರು ದ್ಯುತಿ ಪ್ರತಿಭೆಗೆ ಬೆಂಗಾವಲಾಗಿ ನಿಂತರು. ತಮ್ಮ ಸಂಸ್ಥೆಯ ಮೂಲಕ ಶಿಕ್ಷಣ ಕೊಡಿಸಿದರಲ್ಲದೆ ದ್ಯುತೀ ಕ್ರೀಡಾರಂಗದಲ್ಲಿ ಗುರುತಿಸಿಕೊಳ್ಳುವಲ್ಲಿ ನೆರವು ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ದ್ಯುತೀ ಅವರು ತನ್ನ ಕನಸಿಗೆ ಬಣ್ಣನ ಹಚ್ಚಿದ ಅತ್ಯುತ ಅವರಿಗೆ, ಬ್ಯಾಡ್ಮಿಂಟನ್ ಕೋಚ್ ಗೋಪಿ ಚಂದ್ ಗೆ ಮನಸಾರೆ ಕೃತಜ್ಞತೆ ಸಲ್ಲಿಸುವುದನ್ನು ಮರೆಯಲಿಲ್ಲ.

ಒಲಿಂಪಿಕ್ಸ್ ಕನಸಿಗೆ ರೆಕ್ಕೆ

ಒಲಿಂಪಿಕ್ಸ್ ಕನಸಿಗೆ ರೆಕ್ಕೆ

ಭುವನೇಶ್ವರ್ ನ ಕೆಐಐಟಿ ಡೀಮ್ಡ್ ಟು ಬಿ ಯೂನಿವರ್ಸಿಟಿ ವಿದ್ಯಾರ್ಥಿನಿಯಾಗಿರುವ ದ್ಯುತೀ ಕ್ರೀಡಾಕೂಟಗಳ ಸಂದರ್ಭ ತನ್ನ ದೇಹದಲ್ಲಿನ ಹಾರ್ಮೋನು ವೈಪರೀತ್ಯ ಸಮಸ್ಯೆಯಿಂದಾಗಿ ಸಾಕಷ್ಟ ಸಮಸ್ಯೆ ಎದುರಿಸಿದ್ದಿದೆ. ಲಿಂಗವಿವಾದಕ್ಕೀಡಾಗಿ ದ್ಯುತಿ ನಿಷೇಧಕ್ಕೆ ಒಳಗಾಗಿದ್ದೂ ನಡೆದಿದೆ. ಆದರೆ ಇತ್ತೀಚೆಗೆ ಪ್ರಕಟಿಸಲಾದ ಹೈಪರ್ ಆ್ಯಂಡ್ರೋಜೆನಿಸಮ್ ಹೊಸ ನೀತಿಯಲ್ಲಿ ದ್ಯುತಿ ಒಳಪಡುತ್ತಿಲ್ಲ. ಹೀಗಾಗಿ ಆಕೆಯ ಮೇಲಿನ ನಿರ್ಬಂಧ ತೆರವಾಗಿದೆ. ದ್ಯುತಿಯ ಒಲಿಂಪಿಕ್ಸ್ ಪದಕದ ಕನಸಿಗೆ ರೆಕ್ಕೆ ಬಂದಿದೆ.

Story first published: Thursday, September 13, 2018, 0:57 [IST]
Other articles published on Sep 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X