ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ದೂತೀ ಚಾಂದ್‌ ರಾಷ್ಟ್ರೀಯ ದಾಖಲೆ, ಗಾಯಗೊಂಡ ಹಿಮಾ ದಾಸ್‌

Dutee Chand smashes own national record

ದೋಹಾ, ಏಪ್ರಿಲ್‌ 22: ಮಿಂಚಿನ ಓಟ ಪ್ರದರ್ಶಿಸಿದ ದೂತೀ ಚಾಂದ್‌ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ಮೂಲಕ ಇಲ್ಲಿ ನಡೆಯುತ್ತಿರುವ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ 100 ಮೀ. ಓಟದಲ್ಲಿ ಸೆಮಿಫೈನಲ್ಸ್‌ ತಲುಪಿದ್ದಾರೆ.

ಆದರೆ, ಬೆನ್ನು ನೋವಿನ ಸಮಸ್ಯೆಗೆ ತುತ್ತಾದ ಭಾರತದ ಭವಿಷ್ಯದ ತಾರೆ ಹಿಮಾ ದಾಸ್‌ ಮಹಿಳೆಯ 400 ಮೀ. ಓಟದ ಸ್ಪರ್ಧೆಯಿಂದ ನಿರ್ಗಮಿಸಿದ್ದಾರೆ.

 ಯೂತ್ ವರ್ಲ್ಡ್ ರೆಕಾರ್ಡ್, ಏಷ್ಯನ್ ರೆಕಾರ್ಡ್ ಬರೆದ ಭಾರತದ ಲಿಫ್ಟರ್ ಜೆರೆಮಿ ಯೂತ್ ವರ್ಲ್ಡ್ ರೆಕಾರ್ಡ್, ಏಷ್ಯನ್ ರೆಕಾರ್ಡ್ ಬರೆದ ಭಾರತದ ಲಿಫ್ಟರ್ ಜೆರೆಮಿ

ಲಿಂಗ ಪರೀಕ್ಷೆಯಂತಹ ಜಂಜಾಟಗಳಿಂದ ಹೊರಬಂದಿರುವ 23 ವರ್ಷದ ಚಾಂಪಿಯನ್‌ ಸ್ಪ್ರಿಂಟರ್‌ ದೂತಿ, ನಾಲ್ಕನೇ ಹೀಟ್‌ ಓಟದಲ್ಲಿ 11.28 ಸೆಕೆಂಡ್‌ಗಳಲ್ಲಿಗುರಿ ಮುಟ್ಟಿ ಅಂತಿಮ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆದರು. ಕಳೆದ ವರ್ಷ ಗುವಾಹಟಿಯಲ್ಲಿ 11.29 ಸೆಕೆಂಡ್‌ಗಳಲ್ಲಿ ಓಟ ಪೂರೈಸುವ ಮೂಲಕ ರಾಷ್ಟ್ರೀಯ ದಾಖಲೆ ಬರೆದಿದ್ದ ದೂತೀ ಚಾಂದ್‌, ಇದೀಗ ತಮ್ಮದೇ ದಾಖಲೆಯನ್ನು ಮತ್ತಷ್ಟು ಉತ್ತಮ ಪಡಿಸಿಕೊಂಡಿದ್ದಾರೆ.

ಆದರೆ, ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯಲು ಭಾರತೀಯ ಸ್ಪ್ರಿಂಟರ್‌ 11.24 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಬೇಕಿದೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಶ್ವಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯಲು ಸೆಮಿಫೈನಲ್ಸ್‌ನಲ್ಲಿ ದೂತೀ ತಮ್ಮ ಮತ್ತೊಂದು ಶ್ರೇಷ್ಠ ಪ್ರದರ್ಶನ ಹೊರತರಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಅಥ್ಲೆಟಿಕ್ಸ್‌ನಲ್ಲಿ ಭಾರತೀಯರಾದ ಜಿನ್ಸನ್‌ ಜಾನ್ಸನ್‌ (800 ಮೀ. ಓಟ), ಮೊಹಮ್ಮದ್‌ ಅನಾಸ್‌ ಮತ್ತು ಅರೋಕಿಯಾ ರಾಜೀವ್‌ (400 ಮೀ. ಓಟ), ಪ್ರವೀಣ್‌ ಚಿತ್ರವೇಲ್‌(ಟ್ರಿಪಲ್‌ ಜಂಪ್‌), ಗೋಮತಿ ಮಾರಿಮುತ್ತು (ಮಹಿಳಾ 1500 ಮೀ. ಓಟ) ನಿರೀಕ್ಷೆಯಂತೆ ಮುಂದಿನ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಸಫಲರಾಗಿದ್ದಾರೆ.

ನಿರಾಸೆ ಅನುಭವಿಸಿದ ಹಿಮಾ ದಾಸ್‌
ಜೂನಿಯರ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದು ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದುಕೊಡಬಲ್ಲ ಬರವಸೆಯ ಓಟಗಾರ್ತಿ ಎನಿಸಿರುವ 19 ವರ್ಷದ ಹಿಮಾ ದಾಸ್‌ ನಿರಾಸೆ ಅನುಭವಿಸುವಂತಾಗಿದೆ. ಮಹಿಳೆಯರ 400 ಮೀ. ಓಟದ ವೇಳೆ ಬೆನ್ನು ನೋವಿನ ಸಮಸ್ಯೆಗೆ ತುತ್ತಾದ ದಾಸ್‌ ಓಟ ಪೂರೈಸುವಲ್ಲಿ ವಿಫಲರಾದರು.

ಇದೇ ವಿಭಾಗದ ಓಟದಲ್ಲಿ ಭಾರತದ ಅನುಭವಿ ಓಟಗಾರ್ತಿ ಹಾಗೂ ಕನ್ನಡತಿ ಎಂ.ಆರ್‌ ಪೂವಮ್ಮ (52.46 ಸೆ.) ದ್ವಿತೀಯ ಸ್ಥಾನಿಯಾಗಿ ಗುರಿ ಮುಟ್ಟಿದರು. ಬಹರೇನ್‌ನ ರನ್ನರ್‌ ಸಲ್ವಾ ನಾಸೆರ್‌ ಮೊದಲಿಗರಾಗಿ ಓಟ ಪೂರೈಸಿದರು.

Story first published: Sunday, April 21, 2019, 19:41 [IST]
Other articles published on Apr 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X