2021ನೇ ಸಾಲಿನ ಏಕಲವ್ಯ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪ್ರಕಟ; ವಿಜೇತರ ಪಟ್ಟಿ ಇಲ್ಲಿದೆ

ಕ್ರೀಡಾ ಸಾಧಕರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ 2021ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಹಾಗೂ 2022ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟ ಮಾಡಲಾಗಿದೆ.

ಕರ್ನಾಟಕದ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕೊಡಮಾಡುವ ಈ ಪ್ರಶಸ್ತಿಗೆ ರಾಜ್ಯದ ಹಲವು ಕ್ರೀಡಾ ಸಾಧಕರು ಆಯ್ಕೆಯಾಗಿದ್ದು, ಕ್ರೀಡಾ ಸಚಿವ ಡಾ. ಕೆಸಿ ನಾರಾಯಣಗೌಡ ಪ್ರಕಟಿಸಿದ್ದಾರೆ.

2021ನೇ ಸಾಲಿನ ಏಕಲವ್ಯ ಮತ್ತು ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಸೇರಿದಂತೆ ಉಳಿದ ಪ್ರಶಸ್ತಿಗಳನ್ನು ಮಂಗಳವಾರ, ಡಿಸೆಂಬರ್ 6ರಂದು ರಾಜಭವನದ ಗಾಜಿನಮನೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

IND vs BAN: ರಿಷಭ್ ಪಂತ್ ಬೆಂಬಲಕ್ಕೆ ನಿಂತ ದಿನೇಶ್ ಕಾರ್ತಿಕ್ ಹೇಳಿದ್ದೇನು?

ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ಕೆಸಿ ನಾರಾಯಣಗೌಡ ಸೇರಿದಂತೆ ಹಲವು ಗಣ್ಯರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಕ್ರೀಡಾರತ್ನ ಪ್ರಶಸ್ತಿ
1. ಕವನ ಎಂ.ಎಂ- ಬಾಲ್ ಬ್ಯಾಡ್ಮಿಂಟನ್
2. ಬಿ. ಗಜೇಂದ್ರ - ಗುಂಡು ಎತ್ತುವುದು
3. ಶ್ರೀಧರ್ - ಕಂಬಳ
4. ರಮೇಶ್ ಮಳವಾಡ್- ಖೋಖೋ
5. ವೀರಭದ್ರ ಮುಧೋಳ್- ಮಲ್ಲಕಂಬ
6. ಖುಷಿ ಹೆಚ್ - ಯೋಗ
7. ಲೀನಾ ಅಂತೋಣಿ ಸಿದ್ದಿ- ಮಟ್ಟಿ ಕುಸ್ತಿ
8. ದರ್ಶನ್- ಕಬಡ್ಡಿ

ಏಕಲವ್ಯ ಪ್ರಶಸ್ತಿ
1. ಚೇತನ್ ಬಿ- ಅಥ್ಲೆಟಿಕ್ಸ್
2. ಶಿಖಾ ಗೌತಮ್- ಬ್ಯಾಡ್ಮಿಂಟನ್
3. ಕೀರ್ತಿ ರಂಗಸ್ವಾಮಿ- ಸೈಕ್ಲಿಂಗ್
4. ಅದಿತ್ರಿ ವಿಕ್ರಾಂತ್ ಪಾಟೀಲ್- ಫೆನ್ಸಿಂಗ್
5. ಅಮೃತ್ ಮುದ್ರಾಬೆಟ್- ಜಿಮ್ನಾಸ್ಟಿಕ್
6. ಶೇಷೇಗೌಡ- ಹಾಕಿ
7. ರೇಷ್ಮಾ ಮರೂರಿ- ಲಾನ್ ಟೆನ್ನಿಸ್
8. ಟಿಜೆ ಶ್ರೀಜಯ್- ಶೂಟಿಂಗ್
9. ತನೀಷ್ ಜಾರ್ಜ್ ಮ್ಯಾಥ್ಯೂ- ಈಜು
10. ಯಶಸ್ವಿನಿ ಘೋರ್ಪಡೆ- ಟೇಬಲ್ ಟೆನ್ನಿಸ್
11. ಹರಿಪ್ರಸಾದ್‌- ವಾಲಿಬಾಲ್
12. ಸೂರಜ್ ಸಂಜು ಅಣ್ಣಿಕೇರಿ- ಕುಸ್ತಿ
13. ಹೆಚ್ ಎಸ್ ಸಾಕ್ಷತ್- ನೆಟ್ ಬಾಲ್
14. ಮನೋಜ್ ಬಿಎಂ- ಬಾಸ್ಕೆಟ್‌ಬಾಲ್
15. ರಾಘವೇಂದ್ರ ಎಂ- ಪ್ಯಾರಾ ಅಥ್ಲೆಟಿಕ್ಸ್

IPL 2023: ಐಪಿಎಲ್‌ನಲ್ಲಿ ಕ್ಯಾಮರೂನ್ ಗ್ರೀನ್ ಆಡುವುದು ಡೌಟ್; ಆಸೀಸ್ ಕೋಚ್ ಹೇಳಿದ್ದೇನು?

ಜೀವಮಾನ ಸಾಧನೆ ಪ್ರಶಸ್ತಿ
1. ಅಲ್ಕಾ ಎನ್ ಪಡುತಾರೆ- ಸೈಕ್ಲಿಂಗ್
2. ಬಿ ಆನಂದ್ ಕುಮಾರ್- ಪ್ಯಾರಾ ಬ್ಯಾಡ್ಮಿಂಟನ್
3. ಶೇಖರಪ್ಪ- ಯೋಗ
4. ಅಶೋಕ್ ಕೆಸಿ - ವಾಲಿಬಾಲ್
5. ರವೀಂದ್ರ ಶೆಟ್ಟಿ- ಕಬಡ್ಡಿ
6. ಬಿಜೆ ಅಮರನಾಥ್- ಯೋಗ

2022ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ
01. ಬಿ.ಎಂ.ಎಸ್. ಮಹಿಳಾ ಕಾಲೇಜು- ಬೆಂಗಳೂರು ನಗರ ಜಿಲ್ಲೆ
02. ಮಂಗಳ ಫ್ರೆಂಡ್ಸ್ ಸರ್ಕಲ್- ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
03. ನಿಟ್ಟೆ ಎಜುಕೇಷನ್ ಟ್ರಸ್ಟ್- ಉಡುಪಿ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, December 5, 2022, 22:05 [IST]
Other articles published on Dec 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X